ನವದೆಹಲಿ: ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ(Sexual Assault) ವೈದ್ಯನಿಗೆ ಗೂಸಾ ಬಿದ್ದಿರುವ ಘಟನೆ ವರದಿಯಾಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇನ್ನು ಈ ಘಟನೆ ನಡೆದಿರುವ ಸ್ಥಳದ ಬಗ್ಗೆ ನಿಖರ ಮಾಹಿತಿ ಇಲ್ಲ. ಸ್ಥಳೀಯ ಕ್ಲಿನಿಕ್‌ವೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ(Viral Video).
ವೈದ್ಯ ಮತ್ತು ಮಹಿಳೆ ನಡುವೆ ಮಾರಾಮಾರಿ ನಡೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಕ್ಲಿನಿಕ್‌ನಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಕಾರಣ ಸಂತ್ರಸ್ತೆಯ ಕುಟುಂಬಸ್ಥರು ವೈದ್ಯರನ್ನು ಥಳಿಸಿದ್ದಾರೆ. ಇದೀಗ ವೈರಲ್ ಆಗಿರುವ ದೃಶ್ಯಾವಳಿಗಳು, ಸಂತ್ರಸ್ತ ಕುಟುಂಬದ ಸದಸ್ಯರಾಗಿರುವ ಮಹಿಳೆಯೊಬ್ಬರು ವೈದ್ಯರಿಗೆ ಪದೇ ಪದೇ ಕಪಾಳಮೋಕ್ಷ ಮಾಡುವುದನ್ನು ಮತ್ತು ಹೊಡೆಯುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
A video of a doctor being beaten up came to light, the doctor was beaten up by the victim's family due to indecent behaviour with a female employee working in the clinic
— Ghar Ke Kalesh (@gharkekalesh) August 25, 2024
pic.twitter.com/u9rDdPc9ee
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಲವರು ವೈದ್ಯರ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ಇನ್ನು ಕೆಲವು ವಿಡಿಯೋದಲ್ಲಿ ಮಹಿಳೆಯನ್ನು ಬೆಂಬಲಿಸಿದ್ದಾರೆ. ನಾನು ಅವರಲ್ಲಿ ಯಾರನ್ನೂ ಸರಿ ತಪ್ಪು ಎಂದು ಹೇಳುತ್ತಿಲ್ಲ. ಆದರೆ ಅವರು ಮೊದಲು ಪೊಲೀಸರಿಗೆ ತಿಳಿಸಬೇಕಿತ್ತು. ಹುಡುಗಿಯರೂ ಕೆಲವೊಮ್ಮೆ ತಮ್ಮ ವೈಯಕ್ತಿಕ ಲಾಭಕ್ಕಾಗಿ ಇಂತಹ ಆರೋಪ ಮಾಡುತ್ತಾರೆ ಎಂದು ಒಬ್ಬ ಎಕ್ಸ್ ಬಳಕೆದಾರ ಬರೆದುಕೊಂಡಿದ್ದರೆ, ಇನ್ನೊಬ್ಬ ಬಳಕೆದಾರರು, “ಒಳ್ಳೆಯ ಕೆಲಸ ಮಹಿಳೆ, ಪೊಲೀಸರು ಮತ್ತು ನ್ಯಾಯಾಲಯವು ತ್ವರಿತ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ವೈದ್ಯಕೀಯ ಕಾಲೇಜೊಂದರ ವಿಭಾಗದ ಮುಖ್ಯಸ್ಥರಾಗಿರುವ ವೈದ್ಯೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಆರೋಪ ಕೇಳಿ ಬಂದಿದೆ. ಈ ಕೃತ್ಯ ಎಸಗಿರುವ ಆರೋಪದಡಿ ಅದೇ ಕಾಲೇಜಿನ ವೈದ್ಯರೊಬ್ಬರ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜನವರಿ 19ರಿಂದ 24ರವರೆಗಿನ ಅವಧಿಯಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಕುರಿತು 51 ವರ್ಷದ ವೈದ್ಯೆ ದೂರು ನೀಡಿದ್ದಾರೆ. ಅವರದ್ದೇ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ವೈದ್ಯನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದು ಬನಶಂಕರಿ ಠಾಣೆ ಪೊಲೀಸರು ಹೇಳಿದ್ದಾರೆ.
ಕಾಲೇಜಿನ ವಿಭಾಗದ ಜೇಷ್ಠತಾ ಪಟ್ಟಿ ಸಿದ್ಧಪಡಿಸುವ ವಿಚಾರವಾಗಿ ಗೊಂದಲ ಉಂಟಾಗಿತ್ತು. ಅದನ್ನು ವೈದ್ಯೆ ಪ್ರಶ್ನಿಸಿದ್ದರು. ಅಷ್ಟಕ್ಕೇ ಸಿಟ್ಟಾಗಿದ್ದ ಆರೋಪಿ ವೈದ್ಯ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ತಮ್ಮ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ನೊಂದಿದ್ದ ವೈದ್ಯೆ , ಆರೋಪಿ ವೈದ್ಯನ ವಿರುದ್ದ ಪ್ರಾಂಶುಪಾಲರಿಗೆ ದೂರು ನೀಡಿದ್ದರು.
ದೂರು ನೀಡಿದ್ದಕ್ಕೆ ಮತ್ತಷ್ಟು ಕೋಪಗೊಂಡಿದ್ದ ಆರೋಪಿ ವೈದ್ಯ, ಸಂತ್ರಸ್ತೆಯ ಕೊಠಡಿಗೆ ನುಗ್ಗಿ ಕೈ ಹಿಡಿದು ಎಳೆದಾಡಿದ್ದ. ಎದೆ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗುವ ಪ್ರಯತ್ನ ನಡೆಸಿದ್ದ ಎಂದು ದೂರಿನಲ್ಲಿ ಹೇಳಿದ್ದಾರೆ. ನನ್ನ ವಿರುದ್ಧ ದೂರು ನೀಡಲು ಧೈರ್ಯ ಇದೆಯೇ? ನೀನು ಎಂತಹ ಹೆಂಗಸು ಎಂದು ಎಲ್ಲರಿಗೂ ಗೊತ್ತಿದೆ. ದೂರು ಹಿಂಪಡೆಯಬೇಕು. ಇಲ್ಲದಿದ್ದರೆ, ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂದು ಆರೋಪಿ ವೈದ್ಯ ಕೊಲೆ ಬೆದರಿಕೆಯೊಡ್ಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Sexual assault: ಶಾಲೆಗಳಲ್ಲಿ ಫೇಕ್ NCC ಕ್ಯಾಂಪ್ ಆಯೋಜಿಸಿ ಅತ್ಯಾಚಾರ; ಪ್ರಮುಖ ಆರೋಪಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ