Site icon Vistara News

Viral Video: ಸೂರ್ಯಗ್ರಹಣದ ವೇಳೆ ಭೂಮಿ ಕಪ್ಪಾದದ್ದು ಹೀಗೆ! ಇದು ಬಾಹ್ಯಾಕಾಶದಿಂದ ಬಂದ ವಿಡಿಯೋ!

ISS viral video solar eclipse

ಹೊಸದಿಲ್ಲಿ: ಯುಗಾದಿಯ (Ugadi 2024) ಹಿಂದಿನ ದಿನ (ಏಪ್ರಿಲ್ 8) ಸಂಭವಿಸಿದ ಸೂರ್ಯಗ್ರಹಣವು (Solar Eclipse 2024) ಪ್ರಪಂಚದಾದ್ಯಂತದ ಬಾಹ್ಯಾಕಾಶ (Space) ಪ್ರೇಮಿಗಳನ್ನು ತನ್ನ ಸುಂದರ ದೃಶ್ಯದಿಂದ ಮೂಕವಿಸ್ಮಿತರನ್ನಾಗಿಸಿತು. ಅನೇಕ ಜನರು ತಮ್ಮ ಮನೆಗಳಿಂದಲೇ ಗ್ರಹಣವನ್ನು ನೋಡಿದರೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (international space station – ಐಎಸ್ಎಸ್) ಕೂಡ ಬಾಹ್ಯಾಕಾಶದಿಂದ ಕಂಡ ಗ್ರಹಣದ ನೋಟವನ್ನು ಹಂಚಿಕೊಂಡಿದೆ. ಚಂದಿರನ (moon) ನೆರಳಿನ ಪರಿಣಾಮ ಭೂಮಿಯ ಒಂದು ಭಾಗವು ಹೇಗೆ ಕಪ್ಪಾಗಿ ಕಾಣುತ್ತದೆ ಎಂಬ ಈ ಬೆರಗುಗೊಳಿಸುವ ವೀಡಿಯೊ (viral video) ನೆಟಿಜನ್‌ಗಳನ್ನು ಮಂತ್ರಮುಗ್ಧರನ್ನಾಗಿಸಿದೆ.

ವೀಡಿಯೊವನ್ನು ಹಂಚಿಕೊಂಡಿರುವ ISS, ಪೋಸ್ಟ್‌ನ ಶೀರ್ಷಿಕೆಯಲ್ಲಿ ಹೀಗೆ ಮಾಹಿತಿ ನೀಡಿದೆ: “ಸೋಮವಾರ ಮಧ್ಯಾಹ್ನ ಸೂರ್ಯಗ್ರಹಣದ ಸಮಯದಲ್ಲಿ ಎಕ್ಸ್‌ಪೆಡಿಶನ್ 71 ಸಿಬ್ಬಂದಿಯು ಚಂದ್ರನ ನೆರಳು (ಅಥವಾ ಅಂಬ್ರಾ- Umbra) ಅನ್ನು ಸೆರೆಹಿಡಿದರು. ಸಿಬ್ಬಂದಿ ಇಲ್ಲಿ ಸರಕು ವರ್ಗಾವಣೆ, ಬಾಹ್ಯಾಕಾಶ ಸೂಟ್‌ಗಳು ಮತ್ತು ವಿಜ್ಞಾನದ ಕೆಲಸದಲ್ಲಿ ತೊಡಗಿದ್ದರು. ಆಗ್ನೇಯ ಕೆನಡಾದ ಮೇಲೆ ಚಾಚಿದ್ದ ಸೂರ್ಯಗ್ರಹಣದ ನೆರಳಿನ ಹಾದಿಯಲ್ಲಿ ಬಾಹ್ಯಾಕಾಶ ನಿಲ್ದಾಣ ಸುತ್ತುತ್ತಿರುವಾಗ ಇದು ಭೂಮಿಯ ಮೇಲೆ ಗೋಚರಿಸಿತು.”

ಈ ವೀಡಿಯೊ ಭೂಮಿಯ ಮೇಲಿನ ಗ್ರಹಣದ ನೆರಳನ್ನು ತೋರಿಸಿದೆ. ಆಕಾಶದ ಘಟನೆ ನಡೆಯುವಾಗ ನಮ್ಮ ನೀಲಿ ಗ್ರಹ ಭೂಮಿಯ ಒಂದು ಭಾಗ ಕಪ್ಪು ಬಣ್ಣಕ್ಕೆ ತಿರುಗಿದೆ. ಈ ವೀಡಿಯೊವನ್ನು ಕೆಲವು ಗಂಟೆಗಳ ಹಿಂದೆ ಪೋಸ್ಟ್ ಮಾಡಲಾಗಿದೆ. ಹಂಚಿಕೊಂಡ ನಂತರ ಇದು ಸುಮಾರು ಇಪ್ಪತ್ತು ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ಸಾವಿರಾರು ಲೈಕ್ಸ್‌ಗಳು ಮತ್ತು ಕಾಮೆಂಟ್‌ಗಳನ್ನು ಗಳಿಸಿದೆ. ಅನೇಕ ಜನರು ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ.

“ಅದ್ಭುತ!” “ಬಾಹ್ಯಾಕಾಶದಿಂದ ಬಂದ ನೋಟ ಅದ್ಭುತವಾಗಿದೆ” “ಸೂರ್ಯನ ಕರೋನಾವನ್ನು ನೋಡುವುದು ಅದ್ಭುತ ದೃಶ್ಯ” “ಚಂದ್ರನ ನೆರಳು ಎಷ್ಟು ವೇಗವಾಗಿ ಚಲಿಸುತ್ತಿದೆ ಎಂದು ನೋಡಲು ಅದ್ಭುತವಾಗಿದೆ!” ಎಂದೆಲ್ಲ ವೀವರ್ಸ್‌ ಕಾಮೆಂಟ್‌ ಮಾಡಿದ್ದಾರೆ.

ಸೋಮವಾರ ಉತ್ತರ ಅಮೆರಿಕಾದಲ್ಲಿ ಸಂಪೂರ್ಣ ಸೂರ್ಯಗ್ರಹಣ ಕಾಣಿಸಿಕೊಂಡಿದ್ದು, ಮೆಕ್ಸಿಕೋ, ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ಲಕ್ಷಾಂತರ ಜನರನ್ನು ಆಕರ್ಷಿಸಿತು. ಈ ಇವೆಂಟ್ ಈ ಖಂಡಗಳ ಹೆಚ್ಚಿನ ವೀಕ್ಷಕರನ್ನು ಸೆಳೆಯಿತು. ಪ್ರಪಂಚದಾದ್ಯಂತದ ನಕ್ಷತ್ರ ವೀಕ್ಷಕರು ಈ ಬಾನಿನ ಚಮತ್ಕಾರವನ್ನು ನೋಡಲು ಜಮಾಯಿಸಿದರು.

ಇದನ್ನೂ ನೋಡಿ: Aditya L1: ಇಂದು ಸೂರ್ಯಗ್ರಹಣ; ಇಸ್ರೋದ ಆದಿತ್ಯ ಎಲ್‌ 1 ಮಿಷನ್‌ ಏನು ಮಾಡಲಿದೆ?

Exit mobile version