Site icon Vistara News

Viral video: ಬಿಜೆಪಿ ಟಿಕೆಟ್‌ ಬೇಕು ಎಂದು ಮೊಬೈಲ್‌ ಟವರ್‌ ಏರಿ ಕುಳಿತ ಭೂಪ!

mobile tower

ಚಿಕ್ಕಮಗಳೂರು: ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ಬೇಕು ಎಂದು ಹೈಕಮಾಂಡ್‌ ಕಾಲು ಹಿಡಿಯುವವರು, ಜಾತಿ ಸಮುದಾಯದ ಸಭೆ ಸೇರಿಸಿ ಶಕ್ತಿಪ್ರದರ್ಶನ ನೀಡುವವರು- ಇವರನ್ನೆಲ್ಲ ನೋಡಿದ್ದೀರಿ. ಇಲ್ಲೊಬ್ಬ ಭೂಪತಿ ತನಗೆ ಸ್ಪರ್ಧೆಗೆ ಟಿಕೆಟ್‌ ಬೇಕು ಎಂದು ಮೊಬೈಲ್‌ ಟವರ್‌ ಏರಿ ಕುಳಿತು ಹೈಡ್ರಾಮಾ ಮಾಡಿದ್ದಾನೆ.

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಶಿವನಿ RS ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ರಂಗಪ್ಪ ಎಂಬ ವ್ಯಕ್ತಿ, ನನಗೆ ಬಿಜೆಪಿ ಟಿಕೆಟ್ ಬೇಕು ಎಂದು ಆಗ್ರಹಿಸಿ ಬಿಎಸ್ಎನ್ಎಲ್ ಟವರ್ ಏರಿ ರಂಪಾಟ ಮಾಡಿದ್ದಾನೆ. ನನಗೆ ಬಿಜೆಪಿ ಟಿಕೆಟ್ ಬೇಕೇ ಬೇಕು ಎಂದು ಹುಚ್ಚಾಟ ಮಾಡಿರುವ ಇವನ ಮನವೊಲಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.

ಬೆಳಗ್ಗೆ 7 ಗಂಟೆಯಿಂದಲೂ ಟವರ್ ಏರಿರುವ ವ್ಯಕ್ತಿ, ಮಾಧ್ಯಮದವರು ಬರುವವರೆಗೂ ಕೆಳಗೆ ಇಳಿಯಲ್ಲ ಎಂದು ಹಠ ಹಿಡಿದಿದ್ದಾನೆ. ಬಿಜೆಪಿ ಟಿಕೆಟ್ ಕೊಡಲಿಲ್ಲ ಅಂದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಬೆದರಿಕೆ ಒಡ್ಡಿದ್ದಾನೆ. ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಲಾಗಿದ್ದು, ಮನವೊಲಿಸಿ ಕೆಳಗಿಳಿಸಲು ಪ್ರಯತ್ನಿಸಲಾಗುತ್ತಿದೆ.

ಇದನ್ನೂ ಓದಿ: Karnataka Elections : ಪುತ್ತೂರು ಕಣದಲ್ಲಿ ಬಿಜೆಪಿ Vs ಹಿಂದುತ್ವ; ಬಂಡುಕೋರ ಪುತ್ತಿಲ ವಿರುದ್ಧ ಜಗದೀಶ್‌ ಕಾರಂತ ಅಸ್ತ್ರ ಪ್ರಯೋಗಕ್ಕೆ ಆರೆಸ್ಸೆಸ್‌ ರೆಡಿ

Exit mobile version