ಭೋಪಾಲ್: ಈಗೀಗ ಪ್ರೀತಿ ಪ್ರೇಮದ ಹೆಸರಿನಲ್ಲಿ ಹಲ್ಲೆ, ಹತ್ಯೆ, ಅತ್ಯಾಚಾರ ಇವೆಲ್ಲ ಸರ್ವೇ ಸಾಮಾನ್ಯ ಎನ್ನುವಂತೆ ನಡೆಯುತ್ತಿರುತ್ತವೆ. ಇಲ್ಲೊಬ್ಬ ಭೂಪಾ ಮದುವೆ ನಿಶ್ಚಿತಾರ್ಥ(Engagement) ನಡೆಯುತ್ತಿದ್ದ ಮನೆಗೆ ನುಗ್ಗಿ ತಲ್ವಾರ್ ತೋರಿಸಿ ವಧುವನ್ನೇ ಅಪಹರಿಸಲು ಯತ್ನಿಸಿದ ಘಟನೆ ಮಧ್ಯಪ್ರದೇಶ(Madhya Pradesh)ದಲ್ಲಿ ನಡೆದಿದೆ. ಅಶೋಕ್ ನಗರದಲ್ಲಿ ಈ ಘಟನೆ ನಡೆದಿದ್ದು, ತನ್ನಿಂದ ಅತ್ಯಾಚಾರ(Rape)ಕ್ಕೊಳಗಾಗಿದ್ದ ಸಂತ್ರಸ್ತೆ ಮದುವೆ ಆಗುತ್ತಿದ್ದಾಳೆ ಎಂದು ತಿಳಿದ ಕೂಡಲೇ ಮದುವೆ ನಿಶ್ಚಿತಾರ್ಥ ಆಗುತ್ತಿದ್ದ ಮನೆಗೆ ನುಗ್ಗಿದ ಕಿಡಿಗೇಡಿ ಆಕೆ ತಂದೆ ತಾಯಿ ಮೇಲೆ ದಾರುಣವಾಗಿ ಹಲ್ಲೆ ನಡೆಸಿ ಆಕೆಯನ್ನು ಅಪಹರಿಸಲು ಯತ್ನಿಸಿದ್ದಾನೆ. ಈ ಭೀಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದೆ.
ಘಟನೆ ವಿವರ:
ಕಲ್ಲು ಅಲಿಯಾಸ್ ಸಲೀಂ ಖಾನ್ ಎಂಬಾತ ತನ್ನ ಸ್ನೇಹಿತರ ಜೊತೆಗೆ ಏಕಾಏಕಿ 22 ವರ್ಷದ ಹುಡುಗಿಯ ಮನೆಗೆ ನುಗ್ಗಿದ್ದ. ಅಲ್ಲಿ ಮತ್ತೊಂದು ಯುವಕನ ಜೊತೆ ಆಕೆ ನಿಶ್ಚಿತಾರ್ಥ ನಡೆಯುತ್ತಿರುವ ಬಗ್ಗೆ ತಿಳಿದೇ ಮನೆಗೆ ನುಗ್ಗಿದ್ದ ಸಲೀಂ ತಲ್ವಾರ್ ತೋರಿಸಿ ಎಲ್ಲರನ್ನೂ ಹೆದರಿಸಿದ್ದಾನೆ. ಅಷ್ಟೇ ಅಲ್ಲದೇ ಯುವತಿಯನ್ನು ಅಲ್ಲಿಂದ ಎಳೆದೊಯ್ಯಲು ಯತ್ನಿಸಿದ್ದ. ಆಗ ಆಕೆಯ ಮನೆಯವರು ಅಡ್ಡಿಪಡಿಸಿದ್ದಾರೆ. ಆಗ ಕೋಪಕೊಂಡ ಸಲೀಂ ಆಕೆಯ ತಂದೆಯ ಕಾಲು ಮುರಿದಿದ್ದಾನೆ. ಆಕೆ ಸಹೋದರನ ಕೈ ಮುರಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೇ ಯುವತಿಯ ತಾಯಿಯನ್ನು ಭೀಕರವಾಗಿ ಥಳಿಸಿದ್ದಾನೆ.
अशोकनगर : बदमाशों ने एक से युवती को तलवार के दम पर उठाया, बचाने आए पिता और भाई पर तलवार से किया हमला, भीड़ इकट्ठा हुई तो बदमाश युवती को छोड़कर हुए फरार, देखें वायरल VIDEO #Ashoknagar @spashoknagar_mp @MPPoliceDeptt #MPNews #PeoplesUpdate pic.twitter.com/QaJj6g0QX7
— Peoples Samachar (@psamachar1) May 31, 2024
ಇದಾದ ಬಳಿಕ ಕಿಡಿಗೇಡಿಗಳು ಕತ್ತಿ, ರಾಡ್ ತೋರಿಸಿ ಝಳಪಿಸಿ ಅಲ್ಲಿದ್ದ ಜನರನ್ನು ಹೆದರಿಸಿ, ಯುವತಿಯನ್ನು ಎಳೆದೊಯ್ಯಲು ಯತ್ನಿಸಿದ್ದಾರೆ. ಯುವತಿ ಸಹಾಯಕ್ಕಾಗಿ ಎಷ್ಟೇ ಕೂಗಿದರೂ ದುಷ್ಕರ್ಮಿಗಳ ಕೈಯಲ್ಲಿದ್ದ ಕತ್ತಿ ನೋಡಿ ಜನ ಹೆದರಿದ್ದರು. ಆದರೆ ಮತ್ತಷ್ಟು ಜನ ಸ್ಥಳದಲ್ಲಿ ಜಮಾಯಿಸಿದ್ದನ್ನು ಕಂಡು ಹೆದರಿದ ದುಷ್ಕರ್ಮಿಗಳು ಯುವತಿಯನ್ನು ಅಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಅಲ್ಲಿಂದ ಹೊರಡುವಾಗ ಯುವತಿ ಮತ್ತು ಆಕೆಯ ಕುಟುಂಬಸ್ಥರಿಗೆ ಬೆದರಿಕೆ ಒಡ್ಡಿದ್ದಾನೆ.
ಕಿಡಿಗೇಡಿಗಳು ಪೊಲೀಸ್ ಬಲೆಗೆ
ಇನ್ನು ಘಟನೆ ಬೆನ್ನಲ್ಲೇ ಪೊಲೀಸ್ ಕೇಸ್ ದಾಖಲಾಗಿದ್ದು, ಕಲ್ಲು ಅಲಿಯಾಸ್ ಸಲೀಂ ಖಾನ್, ಜೋಧಾ, ಸಮೀರ್ ಮತ್ತು ಶಾರೂಖ್‌ನನ್ನು ಅರೆಸ್ಟ್ ಮಾಡಿದ್ದಾರೆ. ಇನ್ನು ಸಲೀಂ ಈ ಹಿಂದೆ ಯುವತಿ ಮೇಲೆ ಅತ್ಯಾಚಾರ ಎಸಗಿ ಆಕೆ ಖಾಸಗಿ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಮಾಡಿ ದುಷ್ಕೃತ್ಯ ಮೆರೆದಿದ್ದ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಾನೂನು ಮೊಕದ್ದಮೆ ಎದುರಿಸುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ: Delhi Temperature: ದೆಹಲಿಯಲ್ಲಿ 52 ಡಿಗ್ರಿ ಸೆಲ್ಸಿಯಸ್ ತಾಪಮಾನ; ದೇಶದಲ್ಲೇ ಇದುವರೆಗಿನ ಗರಿಷ್ಠ ಟೆಂಪರೇಚರ್!