Site icon Vistara News

VISTARA TOP 10 NEWS : ಎಲ್ಲರ ಕಣ್ಣು ಶುಕ್ರವಾರದ ಕರ್ನಾಟಕ ಬಂದ್‌ನತ್ತ, ಇಸ್ರೋ ಚಿತ್ತ ಮಾತ್ರ ಶುಕ್ರನತ್ತ!

Vistara top 10 News 2709

1.ಕಾವೇರಿ ಉಳಿವಿಗಾಗಿ ಸಿಡಿದೆದ್ದ ಬಿಜೆಪಿ, ಜೆಡಿಎಸ್; ವಿಧಾನಸೌಧದ ಮುಂದೆ ದೋಸ್ತಿಗಳ ಪ್ರತಿಭಟನೆ
ಕಾವೇರಿ ಜಲ ವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ಬಿಜೆಪಿ – ಜೆಡಿಎಸ್‌ ನಾಯಕರು (BJP JDS leaders) ಜಂಟಿಯಾಗಿ ಬುಧವಾರ (ಸೆಪ್ಟೆಂಬರ್‌ 27) ಅಖಾಡಕ್ಕೆ ಇಳಿದಿದ್ದು, ರಾಜ್ಯ ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದಾರೆ. ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರವು ಡಿಎಂಕೆ ಏಜೆಂಟರಂತೆ ವರ್ತಿಸುತ್ತಿದೆ ಬಿ.ಎಸ್.‌ ಯಡಿಯೂರಪ್ಪ ಗುಡುಗಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

2 ಬೆಂಗಳೂರು ಬಂದ್ ಬಳಿಕ ಶುಕ್ರವಾರದ ಕರ್ನಾಟಕ ಬಂದ್‌ಗೆ ಸಿದ್ಧತೆ: ಏನಿರುತ್ತೆ? ಏನಿರಲ್ಲ?
ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಶುಕ್ರವಾರ ನಡೆಯಲಿರುವ ಕರ್ನಾಟಕ ಬಂದ್‌ಗೆ ಹಲವು ಸಂಘಟನೆಗಳು ಬೆಂಬಲ ಘೋಷಿಸಿವೆ, ಕೆಲವು ಬೆಂಬಲ ಕೊಡುವುದಿಲ್ಲ ಎಂದಿವೆ. ಹಾಗಿದ್ದರೆ ಹೇಗಿರುತ್ತದೆ ಬಂದ್‌? ಯಾರೆಲ್ಲ ಬೆಂಬಲ ನೀಡಿದ್ದಾರೆ? ಇಲ್ಲಿದೆ ವಿವರ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

3. ಕರ್ನಾಟಕ ಬಂದ್‌ ದಿನವೇ ಪ್ರಾಧಿಕಾರದ ಸಭೆ-ಕಾವೇರಿ ಹೋರಾಟಕ್ಕೆ ನಂಜಾವಧೂತ, ಸುತ್ತೂರು ಶ್ರೀ ಎಂಟ್ರಿ
ಕರ್ನಾಟಕ ಬಂದ್‌ ನಡೆಯಲಿರುವ ಸೆ. 29ರಂದೇ ಕಾವೇರಿ ಪ್ರಾಧಿಕಾರದ ಸಭೆಯೂ ನಡೆಯಲಿದೆ. ಈ ಬಾರಿ ಏನಾಗಲಿದೆ ಎಂಬ ಕುತೂಹಲವಿದೆ. ಈ ನಡುವೆ ಇಬ್ಬರು ಸ್ವಾಮೀಜಿಗಳು ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. ಬಿಜೆಪಿ ದೋಸ್ತಿಯಿಂದ ಜಾತ್ಯತೀತ ನಿಲುವು ಬದಲಾಗಲ್ಲ ಎಂದ ಎಚ್‌.ಡಿ. ದೇವೇಗೌಡ
ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಅವರು ಬಿಜೆಪಿ ಜತೆಗಿನ ಮೈತ್ರಿ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಕಾಂಗ್ರೆಸ್‌ನಿಂದ ಪಕ್ಷಕ್ಕಾದ ಅನ್ಯಾಯದ ಬಗ್ಗೆ ಹೇಳಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಿದ್ದು ಯಾರು ಎಂಬ ಬಗ್ಗೆಯೂ ಚರ್ಚೆ ಮಾಡೋಣ ಎಂದು ಸವಾಲು ಹಾಕಿದ್ದಾರೆ. ಇದೇವೇಳೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೂ ಜಾತ್ಯತೀತ ನಿಲುವು ಬದಲಾಗುವುದಿಲ್ಲ ಎಂದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಲೋಕಸಮರ ಮುನ್ನ ಬಿಜೆಪಿ ರಥಯಾತ್ರೆ; 2.5 ಲಕ್ಷ ಗ್ರಾಮಗಳಲ್ಲಿ ಪ್ರಚಾರದ ರಣತಂತ್ರ
ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ಕೈಗೊಳ್ಳಲು ಬಿಜೆಪಿಯು ರಣತಂತ್ರ ರೂಪಿಸಿದೆ. ಗ್ರಾಮೀಣ ಸಂವಾದ ಯಾತ್ರೆ ಮೂಲಕ ಗ್ರಾಮೀಣ ಭಾಗದ ಜನರನ್ನು ಸೆಳೆಯಲು ಯೋಜನೆ ರೂಪಿಸಲಾಗಿದೆ. 2.5 ಲಕ್ಷ ಗ್ರಾಮ ತಲುಪುವ ಯಾತ್ರೆ ಮಾಹಿತಿ ಇಲ್ಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ಭಾರತದಲ್ಲಿ ಶುರುವಾಯ್ತು ಆಪರೇಷನ್‌ ಖಲಿಸ್ತಾನ್‌‌‌- ಒಂದೇ ದಿನ ದೇಶದ 50 ಕಡೆ ಎನ್‌ಐಎ ದಾಳಿ
ಖಲಿಸ್ತಾನ್ ಉಗ್ರರು (Khalistani Terrorist) ಹಾಗೂ ಗ್ಯಾಂಗ್‌ಸ್ಟರ್‌ಗಳ (gangsters) ನಡುವಿನ ಲಿಂಕ್‌ಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ಆರು ರಾಜ್ಯಗಳ 50 ಸ್ಥಳಗಳಲ್ಲಿ ಬೃಹತ್‌ ಪ್ರಮಾಣದ ದಾಳಿ ನಡೆಸಿದೆ. ಇದು ಖಲಿಸ್ತಾನಿಗಳ ವಿರುದ್ಧದ ದೊಡ್ಡ ಆಪರೇಷನ್‌ ಎನ್ನಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಸತ್ತು ಹೋಯ್ತಾ ಮಾನವೀಯತೆ?; ಅತ್ಯಾಚಾರಕ್ಕೀಡಾದ ಬಾಲಕಿ ಕಣ್ಣೀರಿಟ್ಟು ಅಡ್ಡಾಡಿದ್ರೂ ಕರಗದ ಮನಸ್ಸು
ಮಧ್ಯಪ್ರದೇಶದಲ್ಲಿ (Madhya Pradesh) 12 ವರ್ಷದ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಲೈಂಗಿಕ ದೌರ್ಜನ್ಯದ ಬಳಿಕ ಬಾಲಕಿಯು ಸಹಾಯಕ್ಕಾಗಿ ಅಂಗಲಾಚಿಕೊಂಡು ಮನೆ ಮನೆಗೆ ಹೋದರೂ ಯಾರೂ ಸಹಾಯ ಮಾಡದಿರುವುದು ಜನರ ಮನಸ್ಥಿತಿಗೂ ಕನ್ನಡಿ ಹಿಡಿದಂತಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. ಇಸ್ರೋಗೆ ಶುರುವಾಯ್ತು ಶುಕ್ರದೆಸೆ- ಚಂದ್ರ, ಸೂರ್ಯನ ಬಳಿಕ ಶುಕ್ರಯಾನಕ್ಕೆ ಭಾರತ ಸಿದ್ಧತೆ
ಚಂದ್ರಯಾನ 3 ಮಿಷನ್‌ (Chandrayaan 3) ಯಶಸ್ಸಿನ ಬಳಿಕ ಜಾಗತಿಕವಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಗೌರವ ನೂರ್ಮಡಿಯಾಗಿದೆ. ಆದಿತ್ಯ ಮಿಷನ್‌ ಬೆನ್ನಲ್ಲೇ ಇಸ್ರೋ ಗಮನ ಈಗ ಶುಕ್ರನ (Venus Misssion) ಮೇಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9.- ಇರಾಕ್‌‌ ಅಗ್ನಿಅವಘಡದಲ್ಲಿ ವಧು, ವರ ಸೇರಿ 114ಕ್ಕೂ ಹೆಚ್ಚುಮಂದಿ ಸಜೀವ ದಹನ
ಇರಾಕ್‌ನ ನಿನೆವೆಹ್‌ ಪ್ರಾಂತ್ಯದ ಹಮ್ದನಿಯಾ ಪ್ರದೇಶದಲ್ಲಿರುವ ಮದುವೆ ಹಾಲ್‌ನಲ್ಲಿ (Wedding Hall) ಭೀಕರ ಅಗ್ನಿ ದುರಂತ (Iraq Fire Accident) ಸಂಭವಿಸಿದ್ದು, 114 ಜನ ಮೃತಪಟ್ಟಿದ್ದಾರೆ. ದುರಂತದಲ್ಲಿ ಮದುಮಕ್ಕಳು ಕೂಡ ಮೃತಪಟ್ಟಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. 101 ಕೋಟಿ ರೂ. ಮೌಲ್ಯದ ಷೇರು ಹೊಂದಿರುವ ಈ ವ್ಯಕ್ತಿ ಹೇಗೆ ಜೀವನ ಸಾಗಿಸುತ್ತಿದ್ದಾರೆ ನೋಡಿ!
ಒಂದು ದೊಡ್ಡ ಚಡ್ಡಿ ಧರಿಸಿ, ಮೇಲುಮೈಯಲ್ಲಿ ಇನ್ಯಾವ ದಿರಸನ್ನೂ ಧರಿಸದೆ ಅತ್ಯಂತ ಸರಳವಾಗಿ ನಗುತ್ತಿರುವ ಈ ಹಿರಿಯ ನಾಗರಿಕರ ಆಸ್ತಿ ಮೌಲ್ಯ ಎಷ್ಟು ಎಂದು ತಿಳಿದರೆ ನೀವು ನಿಜಕ್ಕೂ ಬೆಚ್ಚಿ ಬೀಳಬಹುದು. ಹೌದು, ಇವರೇ ಹೇಳಿಕೊಳ್ಳುವಂತೆ, ಇವರ ಬಳಿ 101 ಕೋಟಿ ರೂ. ಮೌಲ್ಯದ ಷೇರುಗಳಿವೆ! ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version