Site icon Vistara News

VISTARA TOP 10 NEWS: ಏಷ್ಯನ್‌ ಗೇಮ್ಸ್‌ನಲ್ಲಿ 107 ಪದಕ ಸಾಧನೆ, ಪಟಾಕಿ ಅಗ್ನಿಕುಂಡದಲ್ಲಿ ಸಾವಿನ ವೇದನೆ, ಇತರ ಸುದ್ದಿಗಳು

Vistara Top 10 News 0710

1.ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಸಾರ್ವಕಾಲಿಕ ದಾಖಲೆ; 107 ಪದಕಗಳೊಂದಿಗೆ ಮಿಂಚಿದ ಭಾರತೀಯ ಕಲಿಗಳು
ಭಾರತ ಏಷ್ಯನ್​ ಗೇಮ್ಸ್​ನ ಇತಿಹಾಸದಲ್ಲಿ ನೂತನ ದಾಖಲೆ ಬರೆದಿದೆ. ಒಟ್ಟು 107 ಪದಕಗಳೊಂದಿಗೆ ಸಾರ್ವಕಾಲಿಕ ದಾಖಲೆ ಬರೆದಿದೆ. 2018ರಲ್ಲಿ ಭಾರತ 70 ಪದಕ ಗೆದ್ದಿದ್ದೇ ಇದುವರೆಗಿನ ದಾಖಲೆ. ಭಾರತೀಯ ಕ್ರೀಡಾಕ್ಷೇತ್ರ ಹೊಸ ಹಾದಿಯಲ್ಲಿ ಸಾಗುತ್ತಿರುವುದನ್ನು ಸಾಬೀತುಪಡಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ಸುದ್ದಿ: ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಐತಿಹಾಸಿಕ ಸಾಧನೆ; ಪ್ರಧಾನಿ ಮೋದಿಯಿಂದ ಮೆಚ್ಚುಗೆ

2. ಅಗ್ನಿಕುಂಡವಾದ ಅತ್ತಿಬೆಲೆಯ ಪಟಾಕಿ ಗೋಡೌನ್; 13 ಮಂದಿ ಕಾರ್ಮಿಕರು ಸಜೀವದಹನ
ಬೆಂಗಳೂರು ಗ್ರಾಮಾಂತರವಾದ ಆನೇಕಲ್‌ ತಾಲೂಕಿನ ಅತ್ತಿಬೆಲೆ ಗಡಿಭಾಗದ ಪಟಾಕಿ ಗೋದಾಮಿನಲ್ಲಿ ನಡೆದ ಅಗ್ನಿ ದುರಂತದಲ್ಲಿ (Fire Accident) 13 ಮಂದಿ ಮೃತಪಟ್ಟಿದ್ದಾರೆ. ಶನಿವಾರ ಮಧ್ಯಾಹ್ನ ಪಟಾಕಿ ಮಳಿಗೆಯಲ್ಲಿ ಕಾಣಿಸಿಕೊಂಡ ಸಣ್ಣ ಬೆಂಕಿ ಪ್ರಳಯದ ಅಗ್ನಿಯಾಗಿ ಕೆನ್ನಾಲಿಗೆ ಹರಿಸಿ ನಾಲ್ಕು ವಾಹನಗಳನ್ನು ಸುಟ್ಟು ಹಾಕಿತು. ಅಗ್ನಿಯೊಳಗೆ ಸಿಲುಕಿದ ಕಾರ್ಮಿಕರಲ್ಲಿ ಈಗ 13 ಮಂದಿಯ ಶವ ಪತ್ತೆಯಾಗಿದೆ. 13 ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

3. Lingayat CM : ಲಿಂಗಾಯತ ಲಡಾಯಿಗೆ ಬಿಎಸ್‌ವೈ ಎಂಟ್ರಿ; ಮೊದಲ ದೂರು ಹೋಗಿದ್ದೇ ಮಾಜಿ ಸಿಎಂಗೆ!
ಇದುವರೆಗೆ ಕಾಂಗ್ರೆಸ್‌ನೊಳಗೆ ನಡೆಯುತ್ತಿದ್ದ ಲಿಂಗಾಯತ ಅಧಿಕಾರಿಗಳ ಕಡೆಗಣನೆ ವಿವಾದಕ್ಕೆ ಈಗ ಮಾಜಿ ಸಿಎಂ, ರಾಜ್ಯದ ಪ್ರಬಲ ಲಿಂಗಾಯತ ನಾಯಕ ಬಿ.ಎಸ್‌. ಯಡಿಯೂರಪ್ಪ (BS Yediyurappa) ಎಂಟ್ರಿ ಕೊಟ್ಟಿದ್ದಾರೆ. ಅಧಿಕಾರಿ ವರ್ಗ ಶಾಮನೂರು ಶಿವಶಂಕರಪ್ಪ ಅವರ ಬಳಿ ದೂರುವ ಮುನ್ನವೇ ಮಾಜಿ ಸಿಎಂ ಯಡಿಯೂರಪ್ಪ ಅವರ ಮುಂದೆ ದೂರು ಹೇಳಿಕೊಂಡಿದೆ ಎಂದು ಹೇಳಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ನಡುವೆ ಮತ್ತೆ ಸಮರ ಘೋಷಣೆ; ನೂರಾರು ಸಾವು
ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ (Israel-Palestine tension) ನಡುವೆ ಸಮರ ಘೋಷಣೆಯಾಗಿದೆ. ಪ್ಯಾಲೆಸ್ತೀನಿಯನ್ನರು ನೂರಾರು ರಾಕೆಟ್‌ಗಳನ್ನು ಇಸ್ರೇಲ್‌ ಕಡೆಗೆ ಹಾರಿಬಿಟ್ಟಿದ್ದರಿಂದ ಇಸ್ರೇಲ್‌ನಲ್ಲಿ ಭಾರಿ ಜೀವ ಹಾನಿಯಾಗಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ ಕೂಡಾ ದೊಡ್ಡ ಘಾತವನ್ನು ನೀಡಿದ್ದು, 200ಕ್ಕೂ ಅಧಿಕ ಹಮಸ್‌ ಉಗ್ರರನ್ನು ಬಲಿಪಡೆದಿದೆ. ಪರಿಸ್ಥಿತಿ ಭಾರಿ ಗಂಭೀರವಾಗಿದೆ ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ಸುದ್ದಿ: ಹಮಾಸ್‌ ಉಗ್ರರ ದಾಳಿ; ಇಸ್ರೇಲ್‌ಗೆ ವಿಮಾನ ಸಂಚಾರ ರದ್ದುಗೊಳಿಸಿದ ಏರ್‌ ಇಂಡಿಯಾ!
ಪೂರಕ ಸುದ್ದಿ : ಸೇರಿಗೆ ಸವ್ವಾಸೇರು; ಗಾಜಾದಲ್ಲಿ 200 ಜನರನ್ನು ಕೊಂದ ಇಸ್ರೇಲ್‌ ಸೇನೆ

5.Bill Politics : ಬೆಂಗಳೂರಿನ ಕಾಮಗಾರಿಗಳ ಬಾಕಿ ಬಿಲ್‌ ಬಿಡುಗಡೆ, ಮುನಿರತ್ನ ಕ್ಷೇತ್ರದ ಹಣಕ್ಕೆ ಕೊಕ್ಕೆ
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಭಾರಕ್ಕೆ ಅಭಿವೃದ್ಧಿ ಕಾಮಗಾರಿಗಳು ಕುಸಿದಿವೆ ಎಂಬ ಆರೋಪಗಳು ಜೋರಾಗಿ ಕೇಳಿಬರುತ್ತಿದ್ದಂತೆಯೇ ಸರ್ಕಾರ ಸ್ವಲ್ಪ ಮಟ್ಟಿಗೆ ಎಚ್ಚೆತ್ತಿದೆ. ಬೆಂಗಳೂರಿನಲ್ಲಿ ಕಾಮಗಾರಿ ಮಾಡಿದವರಿಗೆ ಜ್ಯೇಷ್ಠತೆಯ ಆಧಾರದಲ್ಲಿ ಹಣ ಬಿಡುಗಡೆ ಮಾಡಿದೆ. ಆದರೆ, ಶಾಸಕ ಮುನಿರತ್ನ ಪ್ರತಿನಿಧಿಸುವ ರಾಜರಾಜೇಶ್ವರಿ ಕ್ಷೇತ್ರದ (Rajarajeshwari zone) ಹಣ ಬಿಡುಗಡೆ ಮಾಡದಂತೆ ಸೂಚನೆ ನೀಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ವಿಸ್ತಾರ ಅಂಕಣ: ಚೆನ್ನಮ್ಮ ಬೇಕೊ? ಔರಂಗಜೇಬ ಬೇಕೊ? ನೀವೇ ನಿರ್ಧರಿಸಿ
ಒಂದು ರಾಜಕೀಯ ಪಕ್ಷವಾಗಿ ಕಾಂಗ್ರೆಸ್ ಇದರಲ್ಲಿ ಸ್ಪಷ್ಟತೆಯನ್ನು ತಳೆಯಲೇಬೇಕು. ಮುಸ್ಲಿಂ ಸಮಾಜವನ್ನು ನಿಜವಾಗಲೂ ಉದ್ಧಾರ ಮಾಡಲೇಬೇಕು ಎಂಬ ಪ್ರಾಮಾಣಿಕ ಕಳಕಳಿ ಇದ್ದರೆ ಕೋಲಾರ, ಶಿವಮೊಗ್ಗದಲ್ಲಿ ನಡೆದಂಥ ಕೃತ್ಯಗಳನ್ನು ಖಂಡಿಸಬೇಕು, ಅದನ್ನು ಸದೆಬಡಿಯಬೇಕು. ಅದನ್ನು ಬಿಟ್ಟು, ಇದು ಸಣ್ಣ ಘಟನೆ, ಎಲ್ಲಾ ಸಮಯದಲ್ಲೂ ಆಗುತ್ತದೆ ಎನ್ನುವುದು ಉಡಾಫೆ ಹೇಳಿಕೆ. ನಿಮಗೆ ದಾಳಿಕೋರ ಔರಂಗಜೇಬನಂಥವರು ಬೇಕೆ ಅಥವಾ ಕೆಳದಿಯ ಚೆನ್ನಮ್ಮನಂಥವರು ಬೇಕೆ? ನಿರ್ಧಾರ ತೆಗೆದುಕೊಳ್ಳಲೇಬೇಕಾದ ಅವಶ್ಯಕತೆ ಇದೆ ಎನ್ನುತ್ತಾರೆ ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ತಮ್ಮ ವಿಸ್ತಾರ ಅಂಕಣದಲ್ಲಿ. ಪೂರ್ಣ ಲೇಖನಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ

7.GST Council Meeting: ರೈತರಿಗೆ ಶುಭಸುದ್ದಿ; ಸಿರಿಧಾನ್ಯ ಹಿಟ್ಟು, ಕಾಕಂಬಿ ಜಿಎಸ್‌ಟಿ 5%ಕ್ಕೆ ಇಳಿಕೆ
ಸಿರಿಧಾನ್ಯಗಳ ಬಳಕೆಗೆ ಉತ್ತೇಜನ ಹಾಗೂ ರೈತರಿಗೆ ಕ್ಷಿಪ್ರವಾಗಿ ಕಬ್ಬಿನ ಬಾಕಿ ಬಿಡುಗಡೆ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಸಿರಿಧಾನ್ಯಗಳ ಹಿಟ್ಟಿನ ಜಿಎಸ್‌ಟಿ ಹಾಗೂ ಕಬ್ಬಿನ ಕಾಕಂಬಿ (Molasses) ಮೇಲಿನ ಜಿಎಸ್‌ಟಿಯನ್ನು ಶೇ.5ಕ್ಕೆ ಇಳಿಸಲು ತೀರ್ಮಾನಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8.ದೇಶ ಹಾಳು ಮಾಡ್ತಿದ್ದೀಯಾ, ನಿನಗೆ ಹ್ಯಾಂಡ್‌ಶೇಕ್ ಮಾಡಲ್ಲ! ಕೆನಡಾ ಪ್ರಧಾನಿಗೇ ವ್ಯಕ್ತಿ ಮಂಗಳಾರತಿ!
 ”ನೀನು ದೇಶವನ್ನು ನಾಶ ಮಾಡ್ತಾ ಇದ್ಯಾ… ನಾನು ನಿನಗೆ ಹ್ಯಾಂಡ್ ಶೇಕ್ ಮಾಡಲ್ಲ ಹೋಗಯ್ಯ…” ಹೀಗೆ ಕೆನಡಾದ ವ್ಯಕ್ತಿಯೊಬ್ಬರು, ತಮ್ಮದೇ ಪ್ರಧಾನಿ ಜಸ್ಟಿನ್ ಟ್ರೂಡೋ (Canada PM Justin Trudeau) ಅವರಿಗೆ ಹೇಳುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!
‘ಪುಟ್ಟಕ್ಕನ ಮಕ್ಕಳು’ (Puttakkana Makkalu Serial) ಧಾರಾವಾಹಿಯು ಟಿಆರ್​ಪಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ಒಂದಂಕಿಗೆ ಇಳಿದಿದೆ. ಈ ಬಾರಿ ಭಾಗ್ಯಲಕ್ಷ್ಮೀ ಒಳ್ಳೆಯ ಟಿಆರ್‌ಪಿ ಕಂಡಿದೆ. ಈ ವಾರದ ಟಿಆರ್‌ಪಿ ಡಿಟೇಲ್ಸ್‌ ಇಲ್ಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. Muslim Family : ಗೋಕರ್ಣದಲ್ಲಿ ಪಿತೃ ಕಾರ್ಯ, ಪಿಂಡ ಪ್ರದಾನ ನಡೆಸಿದ ಮುಸ್ಲಿಂ ಕುಟುಂಬ!
ದೇವರೊಬ್ಬನೇ ನಾಮ ಹಲವು ಎಂಬಂತೆ ಬಾಳುತ್ತಿರುವ ಈ ಮುಸ್ಲಿಂ ಕುಟುಂಬ ಇತ್ತೀಚೆಗೆ ಗೋಕರ್ಣದಲ್ಲಿ ಪಿತೃ ಕಾರ್ಯವನ್ನೂ ನಡೆಸಿದೆ. ಈ ರೀತಿ ಮುಸ್ಲಿಂ ಕುಟುಂಬವೊಂದು (Muslim Family) ಗೋಕರ್ಣಕ್ಕೆ ಬಂದು ಪಿತೃ ಕಾರ್ಯ (pitr karya) ನಡೆಸಿದ್ದು ಇದೇ ಮೊದಲು ಎನ್ನಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version