ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಐತಿಹಾಸಿಕ ಸಾಧನೆ; ಪ್ರಧಾನಿ ಮೋದಿಯಿಂದ ಮೆಚ್ಚುಗೆ - Vistara News

ಕ್ರೀಡೆ

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಐತಿಹಾಸಿಕ ಸಾಧನೆ; ಪ್ರಧಾನಿ ಮೋದಿಯಿಂದ ಮೆಚ್ಚುಗೆ

100 ಪದಕ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ ಭಾರತೀಯ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಟ್ವಿಟರ್​ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

VISTARANEWS.COM


on

Women's Kabaddi team
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಏಷ್ಯನ್ ಗೇಮ್ಸ್‌(Asian Games) ಇತಿಹಾಸದಲ್ಲಿ ಇದೇ ಮೊದಲು 100 ಪದಕ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ ಭಾರತೀಯ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಟ್ವಿಟರ್​ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ ಇವರ ಸಾಧನೆಯನ್ನು ಕೊಂಡಾಡಿದ್ದಾರೆ.

ಭಾರತೀಯರು ರೋಮಾಂಚನಗೊಂಡಿದ್ದಾರೆ

ಭಾರತ ಐತಿಹಾಸಿಕ ಪದಕದ ಶತಕ ಬಾರಿಸುತ್ತಿದ್ದಂತೆ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ “ನಾವು 100 ಪದಕಗಳ ಮೈಲಿಗಲ್ಲನ್ನು ತಲುಪಿದ್ದೇವೆ ಎಂದು ಭಾರತದ ಜನರು ರೋಮಾಂಚನಗೊಂಡಿದ್ದಾರೆ. ಭಾರತದ ಈ ಐತಿಹಾಸಿಕ ಸಾಧನೆಗೆ ಕಾರಣವಾದ ನಮ್ಮ ಎಲ್ಲ ಕ್ರೀಡಾಪಟುಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಪ್ರತಿ ವಿಸ್ಮಯಕಾರಿ ಪ್ರದರ್ಶನವು ಇತಿಹಾಸವನ್ನು ನಿರ್ಮಿಸಿದೆ. ಮತ್ತು ನಮ್ಮ ಹೃದಯ ಗೆದ್ದಿದೆ. ಅಕ್ಟೋಬರ್​ 10 ರಂದು ನಮ್ಮ ಎಲ್ಲ ಏಷ್ಯನ್ ಗೇಮ್ಸ್ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಲು ನಾನು ಎದುರು ನೋಡುತ್ತಿದ್ದೇನೆ” ಎಂದು ಟ್ವೀಟರ್​ನಲ್ಲಿ ಬರೆದಿದ್ದಾರೆ.

ಪದಕ ಸ್ಪರ್ಧೆಯ 13ನೇ ದಿನವಾದ ಶುಕ್ರವಾರ ಭಾರತ 1 ಚಿನ್ನ, 2 ಬೆಳ್ಳಿ, 6 ಕಂಚಿನ ಪದಕ ಒಲಿಸಿಕೊಂಡು ಒಟ್ಟು 95 ಪದಕಕ್ಕೆಎ ಬಂದು ನಿಂತಿತ್ತು. ಶನಿವಾರ ಬೆಳಗ್ಗೆಯೇ 5 ಪದಕ ಗೆದ್ದು 100 ಪದಕವನ್ನು ಪೂರ್ತಿಗೊಳಿಸಿತು. ಭಾರತಕ್ಕೆ ನೂರನೇ ಪದಕ ಬಂದಿದ್ದು ಮಹಿಳೆಯರ ಕಬಡ್ಡಿಯಿಂದ. ಫೈನಲ್​ನಲ್ಲಿ ಭಾರತ 26-25 ಅಂಕಗಳಿಂದ ಚೈನೀಸ್ ತೈಪೆಯನ್ನು ಸೋಲಿಸಿ ಚಿನ್ನವನ್ನು ಗೆಲ್ಲುವ ಜತೆಗೆ ಭಾರತಕ್ಕೆ ಪದಕದ ಶತಕವನ್ನು ಪೂರ್ತಿಗೊಳಿಸಿದರು.

ಈ ಹಿಂದೆ 2018ರಲ್ಲಿ ಭಾರತ 70 ಪದಕಗಳನ್ನು ಜಯಿಸಿದ್ದು ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಆದರೆ ಈ ಬಾರಿ 100 ಪದಕ ಗೆದ್ದು ಐತೊಹಾಸಿಕ ಸಾಧನೆ ಮಾಡಿದೆ. ಮುಂದಿನ ವರ್ಷ ಪ್ಯಾರಿಸ್​ ಒಲಿಂಪಿಕ್ಸ್​ಗೂ ಮುನ್ನ ಭಾರತೀಯರ ಈ ಸಾಧನೆ ಕ್ರೀಡಾ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಮೂಡಿಸಿದೆ.

ಆರ್ಚರಿಯಲ್ಲಿ ಚಿನ್ನ

ಬೆಳಗ್ಗೆ ನಡೆದ ಪುರುಷರ ಕಾಂಪೌಂಡ್ ಆರ್ಚರಿ ಸ್ಪರ್ಧೆಯಲ್ಲಿ ಓಜಸ್ ಪ್ರವೀಣ್ ಅವರು ತಮ್ಮದೇ ದೇಶದ ಅಭಿಷೇಕ್ ವರ್ಮಾ ಅವರನ್ನು ಸೋಲಿಸಿ ಚಿನ್ನ ಗೆದ್ದರು. ಸೋಲು ಕಂಡ ಅಭಿಷೇಕ್​ ಬೆಳ್ಳಿಗೆ ತೃಪ್ತಿಪಟ್ಟರು. ಇದಕ್ಕೂ ಮುನ್ನ ನಡೆದ ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಸ್ಪರ್ಧೆಯಲ್ಲಿ ಜ್ಯೋತಿ ಸುರೇಖಾ ಚಿನ್ನ, ಅದಿತಿ ಸ್ವಾಮಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಭಾರತ ಪುರುಷರ ಕ್ರಿಕೆಟ್ ತಂಡ ಮತ್ತು ಬ್ಯಾಡ್ಮಿಂಟನ್ ಡಬಲ್ಸ್ ಜೋಡಿ ಚಿನ್ನದ ಪದಕಕ್ಕಾಗಿ ಕಣಕ್ಕಿಳಿಯಲಿದೆ. ಇವರ ಮೇಲೂ ಚಿನ್ನ ನಿರೀಕ್ಷೆ ಮಾಡಲಾಗಿದೆ.

ಇದನ್ನೂ ಓದಿ Asian Games; ಪದಕದ ಶತಕ ಬಾರಿಸಿದ ಭಾರತ; ಒಂದೇ ಗಂಟೆ ಅಂತರದಲ್ಲಿ 3 ಚಿನ್ನ ಬೇಟೆ

ರೋಚಕ ಗೆಲುವು ಸಾಧಿಸಿದ ಮಹಿಳಾ ಕಬಡ್ಡಿ ತಂಡ

ಅತ್ಯಂತ ರೋಚಕವಾಗಿ ನಡೆದ ಮಹಿಳಾ ಕಬಡ್ಡಿ ಫೈನಲ್​ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿತು. ಕೊನೆಯ ಕ್ಷಣದ ವರೆಗೂ ಈ ಪಂದ್ಯ ರೋಚಕತೆ ಸೃಷ್ಟಿಸಿತು. ಆದರೆ ಅದೃಷ್ಟ ಭಾರತಕ್ಕೆ ಒಲಿಯಿತು. ಕೇವಲ ಒಂದು ಅಂಕದ ಅಂತರದಲ್ಲಿ ಭಾರತ ವನಿತೆಯರು ಗೆದ್ದು ಬೀಗಿದರು. ಗೆಲುವಿನ ಅಂತರ 26-25. ಈ ಪದಕ ಒಲಿದ ತಕ್ಷಣ ಭಾರತ ಪದಕದ ಶತಕವನ್ನು ಬಾರಿಸಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬ್ಯಾಡ್ಮಿಂಟನ್

Thailand Open 2024: ಥಾಯ್ಲೆಂಡ್‌ ಓಪನ್‌ ಗೆದ್ದ ಭಾರತದ ಚಿರಾಗ್‌-ಸಾತ್ವಿಕ್‌ ಜೋಡಿ

Thailand Open 2024: ಇಂದು (ಭಾನುವಾರ) ನಡೆದ ಥಾಯ್ಲೆಂಡ್‌ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌(Thailand Open 2024) ಫೈನಲ್​ ಪಂದ್ಯದಲ್ಲಿ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ(Satwiksairaj Rankireddy-Chirag Shetty) ಚಾಂಪಿಯನ್​ ಪಟ್ಟ ಅಲಂಕರಿಸಿದ್ದಾರೆ.

VISTARANEWS.COM


on

Thailand Open 2024
Koo

ಬ್ಯಾಂಕಾಕ್‌: ಭಾರತದ ಸ್ಟಾರ್‌ ಡಬಲ್ಸ್‌ ಬ್ಯಾಡ್ಮಿಂಟನ್​ ಆಟಗಾರರಾದ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ(Satwiksairaj Rankireddy-Chirag Shetty) ಪ್ಯಾರಿಸ್​ ಒಲಿಂಪಿಕ್ಸ್​ ಟೂರ್ನಿ ಆರಂಭಕ್ಕೂ ಮುನ್ನವೇ ಶ್ರೇಷ್ಠ ಪ್ರದರ್ಶನವೊಂದನ್ನು ನೀಡಿದ್ದಾರೆ. ಇಂದು (ಭಾನುವಾರ) ನಡೆದ ಥಾಯ್ಲೆಂಡ್‌ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌(Thailand Open 2024) ಫೈನಲ್​ ಪಂದ್ಯದಲ್ಲಿ ಗೆದ್ದು ಚಾಂಪಿಯನ್​ ಪಟ್ಟ ಅಲಂಕರಿಸಿದ್ದಾರೆ.

ಏಕಪಕ್ಷೀಯವಾಗಿ ಸಾಗಿದ ಫೈನಲ್​ ಪಂದ್ಯದಲ್ಲಿ ಏಷ್ಯಾಡ್‌ ಚಾಂಪಿಯನ್‌ ಹಾಗೂ ಕೂಟದ ಅಗ್ರ ಶ್ರೇಯಾಂಕಿ ಭಾರತೀಯ ಜೋಡಿ ಚೀನದ ಚೆನ್‌ ಬೊ ಯಾಂಗ್‌-ಲಿಯು ಯಿ(Chen Bo Yang-Liu Yi) ವಿರುದ್ಧ 21-15, 21-15 ನೇರ ಗೇಮ್​ಗಳಿಂದ ಹಿಮ್ಮೆಟಿಸಿದರು. ಶನಿವಾರ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಚಿರಾಗ್‌- ಸಾತ್ವಿಕ್‌ ಜೋಡಿ ಚೈನೀಸ್‌ ತೈಪೆಯ ಲು ಮಿಂಗ್‌ ಚೆ-ಟಾಂಗ್‌ ಕೈ ವೀ ವಿರುದ್ಧವೂ 21-11, 21-12 ಅಂತರದ ಸುಲಭ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಫೈನಲ್​ನಲ್ಲಿಯೂ ಇದೇ ಪ್ರದರ್ಶನ ತೋರಿ ಪ್ರಶಸ್ತಿಗೆ ಮುತ್ತಿಕ್ಕಿದರು.

ಕೆಲವು ವಾರಗಳ ಹಿಂದೆ ನಡೆದಿದ್ದ ಥಾಮಸ್‌ ಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫ‌ಲರಾಗಿದ್ದ ಚಿರಾಗ್​-ಸಾತ್ವಿಕ್​ ಜೋಡಿ ಇದೀಗ ಮರಳಿ ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ದೊಡ್ಡ ಪದಕವೊಂದನ್ನು ಗೆಲ್ಲುವ ನೆಚ್ಚಿನ ಜೋಡಿಯಾಗಿ ಭರವಸೆ ಮೂಡಿಸಿದೆ.

ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಕರ್ನಾಟಕ ಮೂಲದ ಚಿರಾಗ್‌ ಶೆಟ್ಟಿ ಜೋಡಿಗೆ ಇದೇ ವರ್ಷ ದೇಶದ ಪರಮೋಚ್ಚ ಕ್ರೀಡಾ ಪ್ರಶಸ್ತಿಯಾದ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಏಷ್ಯನ್​ ಗೇಮ್ಸ್​ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಸಾಧನೆ ಈ ಜೋಡಿಯದ್ದಾಗಿದೆ. 1982ರಲ್ಲಿ ಲೆರೋಯ್‌ ಫ್ರಾನ್ಸಿಸ್‌-ಪ್ರದೀಪ್‌ ಗಾಂಧಿ ಕಂಚು ಗೆದ್ದಿದ್ದು ಭಾರತಕ್ಕೆ ಪುರುಷರ ಡಬಲ್ಸ್‌ನಲ್ಲಿ ಸಿಕ್ಕ ಏಕೈಕ ಪದಕವಾಗಿತ್ತು. ಆದರೆ, ಚಿರಾಗ್‌-ಸಾತ್ವಿಕ್‌ ಚಿನ್ನ ಗೆಲ್ಲುವ ಮೂಲಕ ಐತಿಹಾಸಿಕ ದಾಖಲೆ ಬರೆದಿದ್ದರು.

ಇದನ್ನೂ ಓದಿ Thomas Cup 2024: ಉಬೆರ್‌ ಕಪ್‌ ಬಳಿಕ ಥಾಮಸ್‌ ಕಪ್​ನಲ್ಲಿಯೂ ಮುಗ್ಗರಿಸಿದ ಭಾರತ

ಬಹುನಿರೀಕ್ಷಿತ ಪ್ಯಾರಿಸ್​ ಒಲಿಂಪಿಕ್ಸ್(Paris Olympics)​ ಕ್ರೀಡಾಕೂಡಕ್ಕೆ ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಪಿ.ವಿ ಸಿಂಧು(PV Sindhu) ಸೇರಿ 7 ಭಾರತೀಯ ಶಟ್ಲರ್​ಗಳು ಈಗಾಗಲೇ ಅರ್ಹತೆ ಪಡೆದಿದ್ದಾರೆ. ಮಹಿಳಾ ಡಬಲ್ಸ್​ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಅವರಿಗೂ ಒಲಿಂಪಿಕ್ಸ್​ ಟಿಕೆಟ್​ ಲಭಿಸಿದೆ.

ಅರ್ಹತೆ ಪಡೆದ ಶಟ್ಲರ್​ಗಳು

ಪಿವಿ ಸಿಂಧು, ಲಕ್ಷ್ಯ ಸೇನ್, ಎಚ್ ಎಸ್ ಪ್ರಣಯ್, ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ, ಅಶ್ವಿನಿ ಪೊನ್ನಪ್ಪ, ತನಿಶಾ ಕ್ರಾಸ್ಟೊ.

ಜುಲೈ 26ಕ್ಕೆ ಒಲಿಂಪಿಕ್ಸ್​ ಆರಂಭ

ಮಹತ್ವದ ಕ್ರೀಡಾಕೂಡವಾದ ಪ್ಯಾರಿಸ್ ಒಲಿಂಪಿಕ್ಸ್‌ನ(Paris Olympics 2024) ಉದ್ಘಾಟನಾ ಸಮಾರಂಭಕ್ಕೆ(paris olympics 2024 opening ceremony) ದಿನಾಂಕ ನಿಗದಿಯಾಗಿದೆ. ಜುಲೈ 26ರಂದು ಸೀನ್ ನದಿಯಲ್ಲಿ ಸಂಜೆ 7.30ಕ್ಕೆ ಅದ್ಧೂರಿ ಕಾರ್ಯಕ್ರಮ ನೆರವೇರಲಿದೆ.

ಒಲಿಂಪಿಕ್ಸ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್‌ ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

Continue Reading

ಕ್ರಿಕೆಟ್

RCB vs CSK: ಧೋನಿ ವರ್ತನೆಗೆ ‘ಇಟ್‌ ಹರ್ಟ್ಸ್‌​’ ಎಂದ ಆರ್​ಸಿಬಿ ಅಭಿಮಾನಿಗಳು; ಧೋನಿ ಮಾಡಿದ ತಪ್ಪೇನು?

RCB vs CSK: ಪಂದ್ಯದ ಮುಕ್ತಾಯದ ಬಳಿಕ ವಾಡಿಕೆಯಂತೆ ಉಭಯ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡಬೇಕು. ಅದರಂತೆ ಚೆನ್ನೈ ತಂಡದ ಆಟಗಾರರೆಲ್ಲ ಸರದಿ ಸಾಲಿನಲ್ಲಿ ನಿಂತು ಸಿದ್ಧರಾಗಿದ್ದರು. ಆದರೆ ಆರ್​ಸಿಬಿ ಆಟಗಾರರು ಮೈದಾನದಲ್ಲೇ ಗೆಲುವಿನ ಸಂಭ್ರಮಾಚರಣೆ ಮಾಡುತ್ತಿದ್ದರು. ಕೆಲ ಕಾಲ ಕಾದ ಧೋನಿ ಆರ್​ಸಿಬಿ ಆಟಗಾರರು ಬರದೇ ಇದದ್ದನ್ನು ನೋಡಿ ಪೆವಿಲಿಯನ್​ನತ್ತ ಮರಳಿದ್ದಾರೆ.

VISTARANEWS.COM


on

RCB vs CSK
Koo

ಬೆಂಗಳೂರು: ಮಹೇಂದ್ರ ಸಿಂಗ್‌ ಧೋನಿ(MS Dhoni) ಕ್ರಿಕೆಟ್‌ ಮೈದಾನದಲ್ಲಿ ಶಾಂತಿಯಿಂದ ವ‌ರ್ತಿಸುತ್ತಾರೆ. ಬ್ಯಾಟಿಂಗ್‌, ವಿಕೆಟ್‌ ಕೀಪಿಂಗ್‌ ಅಥವಾ ನಾಯಕನಾಗೇ ಇರಲಿ ಶಾಂತಚಿತ್ತ ಅವರ ಮುಖ್ಯ ಗುಣ. ಎಂತಹ ಸನ್ನಿವೇಶವಿದ್ದರೂ ಧೋನಿ(MS Dhoni leaves without shaking hands) ತಾಳ್ಮೆ ಕಳೆದುಕೊಳ್ಳುವುದು ವಿರಳ. ಇದೇ ಕಾರಣಕ್ಕೆ ಅವರಿಗೆ ಕ್ಯಾಪ್ಟನ್‌ ಕೂಲ್‌ ಎಂಬ ಹೆಸರು ಕೂಡ ಇದೆ. ಆದರೆ ನಿನ್ನೆ(ಶನಿವಾರ) ನಡೆದ ಆರ್​ಸಿಬಿ(RCB vs CSK) ವಿರುದ್ಧದ ಪಂದ್ಯದಲ್ಲಿ ಧೋನಿ ತೋರಿದ ವರ್ತನೆಗೆ ಎದುರಾಳಿ ತಂಡದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 218 ರನ್​ ಬಾರಿಸಿತು. ಜವಾಬಿತ್ತ ಚೆನ್ನೈ ಈ ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಹಲವು ಏರಿಳಿತ ಕಂಡು ಕೊನೆಗೆ ತನ್ನ ಪಾಲಿನ ಆಟದಲ್ಲಿ 7 ವಿಕೆಟ್​ಗೆ 191 ರನ್​ ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಯಿತು. ಜತೆಗೆ ಟೂರ್ನಿಯಿಂದಲೂ ಹೊರಬಿದ್ದು ಮಾಜಿ ಚಾಂಪಿಯನ್​ ಎನಿಸಿಕೊಂಡಿತು.

ಇದನ್ನೂ ಓದಿ RCB vs CSK: ಚೆನ್ನೈ ಸೋಲಿಗೆ ಧೋನಿ ಬಾರಿಸಿದ ಔಟ್​ ಆಫ್​ದಿ ಸ್ಟೇಡಿಯಂ ಸಿಕ್ಸರ್​ ಕಾರಣ

ಪಂದ್ಯದ ಮುಕ್ತಾಯದ ಬಳಿಕ ವಾಡಿಕೆಯಂತೆ ಉಭಯ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡಬೇಕು. ಅದರಂತೆ ಚೆನ್ನೈ ತಂಡದ ಆಟಗಾರರೆಲ್ಲ ಸರದಿ ಸಾಲಿನಲ್ಲಿ ನಿಂತು ಸಿದ್ಧರಾಗಿದ್ದರು. ಆದರೆ ಆರ್​ಸಿಬಿ ಆಟಗಾರರು ಮೈದಾನದಲ್ಲೇ ಗೆಲುವಿನ ಸಂಭ್ರಮಾಚರಣೆ ಮಾಡುತ್ತಿದ್ದರು. ಕೆಲ ಕಾಲ ಕಾದ ಧೋನಿ ಆರ್​ಸಿಬಿ ಆಟಗಾರರು ಬರದೇ ಇದದ್ದನ್ನು ನೋಡಿ ಪೆವಿಲಿಯನ್​ನತ್ತ ಮರಳಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಆರ್​ಸಿಬಿ ಅಭಿಮಾನಿಗಳು ಚೆನ್ನೈ ವಿರೋಧಿಯಾಗಿದ್ದರೂ ಕೂಡ ನಿನ್ನೆ ಧೋನಿಗೆ ಸಂಪೂರ್ಣ ಬೆಂಬಲ ಸೂಚಿಸಿದ್ದರು. ಅಲ್ಲದೆ ಧೋನಿಯ ಜೆರ್ಸಿ ತೊಟ್ಟು, ದೊಡ್ಡ ಬ್ಯಾನರ್​ ಮೂಲಕ ನೀವು ವಿದಾಯ ಹೇಳಬೇಡಿ ಇದು ಆರ್​ಸಿಬಿ ಮತ್ತು ಕೊಹ್ಲಿ ಅಭಿಮಾನಿಗಳ ಬೇಡಿಕೆ ಎಂದು ಮನವಿ ಮಾಡಿದ್ದರು. ಈ ಮೂಲಕ ಧೋನಿಗೆ ಸಪೋರ್ಟ್​ ಮಾಡಿದ್ದರು. ಆದರೆ ಧೋನಿ ಆರ್​ಸಿಬಿ ಆಟಗಾರರಿಗೆ ಹಸ್ತಲಾಘವ ಮಾಡದೆ ತೆರಳಿದ್ದು ಮಾತ್ರ ಬೇಸರ ತಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ‘ಇಟ್‌ ಹರ್ಟ್ಸ್‌​’ ಎಂದ ಹ್ಯಾಶ್​ ಟ್ಯಾಗ್​ನೊಂದಿಗೆ ಬರೆದುಕೊಂಡಿದ್ದಾರೆ.

ಧೋನಿ ಮೈದಾನದಲ್ಲಿದ ಆರ್​ಸಿಬಿ ಆಟಗಾರರಿಗೆ ಹಸ್ತಲಾಘವ ಮಾಡದಿದ್ದರೂ ಕೂಡ ತಾವು ಪೆವಿಲಿಯನ್​ ಕಡೆಗೆ ಹೋಗುವಾಗ ಎದುರಿಗೆ ಸಿಕ್ಕ ಆರ್​ಸಿಬಿ ಸಿಬ್ಬಂದಿಗಳಿಗೆ ಹಸ್ತಲಾಘವ ನೀಡಿದ್ದಾರೆ. ಯಶ್​ ದಯಾಳ್​ ಎಸೆತ ಅಂತಿಮ ಓವರ್​ನ ಮೊದಲ ಎಸೆತವನ್ನೇ ಧೋನಿ ಔಟ್​ ಆಫ್​ದಿ ಸ್ಟೇಡಿಯಂಗೆ ಸಿಕ್ಸರ್ ಬಾರಿಸಿದರು. ಈ ಸಿಕ್ಸರ್​ 110 ಮೀ. ದೂರ ಚಿಮ್ಮಿತು. ಮುಂದಿನ ಎಸೆತದಲ್ಲಿಯೂ ಧೋನಿ ಸಿಕ್ಸರ್​ ಬಾರಿಸುವ ಪ್ರಯತ್ನದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು. ಧೋನಿ ವಿಕೆಟ್​ ಪತನಗೊಳ್ಳುತ್ತಿದ್ದಂತೆ ಚೆನ್ನೈ ಸೋಲು ಕೂಡ ಖಚಿತಗೊಂಡಿತು.

Continue Reading

ಕ್ರೀಡೆ

RCB vs CSK: ಚೆನ್ನೈ ಸೋಲಿಗೆ ಧೋನಿ ಬಾರಿಸಿದ ಔಟ್​ ಆಫ್​ದಿ ಸ್ಟೇಡಿಯಂ ಸಿಕ್ಸರ್​ ಕಾರಣ

RCB vs CSK: ಧೋನಿ ಬಾರಿಸಿದ ಸಿಕ್ಸರ್ 110 ಮೀಟರ್ ಸಾಗಿ ಸ್ಟೇಡಿಯಂನಿಂದ ಹೊರಬಿದ್ದ ಕಾರಣ ಹೊಸ ಚೆಂಡನ್ನು ನೀಡಲಾಯಿತು. ಇದು ಒದ್ದೆಯಿಲ್ಲದ ಕಾರಣ ಬೌಲರ್ ಯಶ್ ದಯಾಳ್​ಗೆ ಚೆಂಡಿನ ಮೇಲೆ ಹಿಡಿತ ಸಾಧಿಸಲು ನೆರವಾಯಿತು.ಹೀಗಾಗಿ ನಾವು ಪಂದ್ಯ ಗೆದ್ದುವು ಎಂದು ದಿನೇಶ್ ಕಾರ್ತಿಕ್​ ಹೇಳಿದ್ದಾರೆ.

VISTARANEWS.COM


on

RCB vs CSK
Koo

ಬೆಂಗಳೂರು: ಬೆಂಗಳೂರಿನ ಎಂ ಚಿನ್ನಸ್ವಾಮಿ(M.Chinnaswamy Stadium) ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್(IPL 2024) 2024ರ 68ನೇ ಪಂದ್ಯದಲ್ಲಿ ಎಂಎಸ್ ಧೋನಿ ಅವರು ಬಾರಿಸಿದ 110 ಮೀಟರ್ ಸಿಕ್ಸರ್ ಸಿಎಸ್‌ಕೆ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ಆರ್​ಸಿಬಿ ಆಟಗಾರ ದಿನೇಶ್​ ಕಾರ್ತಿಕ್​ ಅಭಿಪ್ರಾಯಪಟ್ಟಿದ್ದಾರೆ.

ಚೆನ್ನೈಗೆ(RCB vs CSK) ಪ್ಲೇ ಆಫ್​ ಪ್ರವೇಶಿಸಬೇಕಿದ್ದರೆ ಪಂದ್ಯದಲ್ಲಿ 201ರನ್​ ಗಡಿ ದಾಟಿಬೇಕಿತ್ತು. ಅಂತಿಮ ಹಂತದಲ್ಲಿ ರವೀಂದ್ರ ಜಡೇಜಾ ಮತ್ತು ಧೋನಿ ಸೇರಿಕೊಂಡು ಪಂದ್ಯ ಗೆಲ್ಲದಿದ್ದರೂ ಕೂಡ ಪ್ಲೇ ಆಫ್​ ಲೆಕ್ಕಾಚಾರದಲ್ಲಿ 201 ರನ್​ ಬಾರಿಸಲು ಶಕ್ತಿ ಮೀರಿ ಪ್ರಯತ್ನಪಟ್ಟರು. ಈ ಗುರಿ ತಲುಪಲು ಚೆನ್ನೈಗೆ ಅಂತಿಮವಾಗಿ 6 ಎಸೆತಗಳಲ್ಲಿ 17 ರನ್ ತೆಗೆಯುವ ಸವಾಲು ಎದುರಾಯಿತು. ಈ ವೇಳೆ ಯಶ್​ ದಯಾಳ್​ ಎಸೆತ ಅಂತಿಮ ಓವರ್​ನ ಮೊದಲ ಎಸೆತವನ್ನೇ ಧೋನಿ ಔಟ್​ ಆಫ್​ದಿ ಸ್ಟೇಡಿಯಂಗೆ ಸಿಕ್ಸರ್ ಬಾರಿಸಿದರು. ಈ ಸಿಕ್ಸರ್​ 110 ಮೀ. ದೂರ ಚಿಮ್ಮಿತು. ಮುಂದಿನ ಎಸೆತದಲ್ಲಿಯೂ ಧೋನಿ ಸಿಕ್ಸರ್​ ಬಾರಿಸುವ ಪ್ರಯತ್ನದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು. ಬಳಿಕ ಎಸೆತ ನಾಲ್ಕು ಎಸೆತಗಳಲ್ಲಿಯೂ ದಯಾಳ್​ ಹಿಡಿತ ಸಾಧಿಸಿ ಆರ್​ಸಿಬಿಗೆ ಅಭೂತಪೂರ್ವ ಗೆಲುವು ತಂದು ಕೊಟ್ಟರು.

ಧೋನಿ ಸಿಕ್ಸರ್​ನಿಂದ ಆರ್​ಸಿಬಿ ಲಾಭವಾಯಿತು ಎಂದು ದಿನೇಶ್​ ಕಾರ್ತಿಕ್​ ಹೇಳಿದ್ದಾರೆ. ಇದಕ್ಕೆ ಕಾರಣವನ್ನು ಕೂಡ ಅವರು ತಿಳಿಸಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ದಿನೇಶ್​ ಕಾರ್ತಿಕ್​, ‘ಧೋನಿ ಬಾರಿಸಿದ ಸಿಕ್ಸರ್ 110 ಮೀಟರ್ ಸಾಗಿ ಸ್ಟೇಡಿಯಂನಿಂದ ಹೊರಬಿದ್ದ ಕಾರಣ ಹೊಸ ಚೆಂಡನ್ನು ನೀಡಲಾಯಿತು. ಇದು ಒದ್ದೆಯಿಲ್ಲದ ಕಾರಣ ಬೌಲರ್ ಯಶ್ ದಯಾಳ್​ಗೆ ಚೆಂಡಿನ ಮೇಲೆ ಹಿಡಿತ ಸಾಧಿಸಲು ನೆರವಾಯಿತು. ಇದಕ್ಕೂ ಮುನ್ನ ಚೆಂಡು ಒದ್ದೆಯಾಗಿದ್ದ ಕಾರಣ ಬೌಲರ್​ಗಳಿಗೆ ಸರಿಯಾಗಿ ಚೆಂಡಿನ ಮೇಲೆ ಹಿಡಿತ ಸಾಧಿಸಲು ಕಷ್ಟವಾಗಿತ್ತು. ಹೀಗಾಗಿ ನೋ ಬಾಲ್​, ಫುಲ್​ಟಾಸ್​ ಸೇರಿ ವೈಡ್​ ಎಸೆತಗಳು ಕಂಡುಬಂತು. ಹೊಸ ಚೆಂಡು ಸಿಕ್ಕಿದ್ದು ಆರ್​ಸಿಬಿ ಗೆಲುವಿಗೆ ಸಹಾಯವಾಯಿತು” ಎಂದು ಹೇಳುವ ಮೂಲಕ ಧೋನಿ ಸಿಕ್ಸರ್​ ತಮ್ಮ ತಂಡಕ್ಕೆ ವರದಾನವಾಯಿತು ಎಂದರು.

ಇದನ್ನೂ ಓದಿ RCB: ಆರ್​ಸಿಬಿಯ ನಂಟು ಬಿಡದ ವಿಜಯ್​ ಮಲ್ಯ; ಟ್ವೀಟ್​ ಮೂಲಕ ಅಭಿನಂದನೆ

ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಆರ್​ಸಿಬಿ ವಿರಾಟ್​ ಕೊಹ್ಲಿ ಮತ್ತು ಫಾಫ್​ ಡುಪ್ಲೆಸಿಸ್​ ಮೊದಲ ವಿಕೆಟ್​ಗೆ ನಿರ್ಮಿಸಿದ ಭದ್ರ ಅಡಿಪಾಯದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 218 ರನ್​ ಬಾರಿಸಿತು. ಜವಾಬಿತ್ತ ಚೆನ್ನೈ ಈ ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಹಲವು ಏರಿಳಿತ ಕಂಡು ಕೊನೆಗೆ ತನ್ನ ಪಾಲಿನ ಆಟದಲ್ಲಿ 7 ವಿಕೆಟ್​ಗೆ 191 ರನ್​ ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಯಿತು. ಜತೆಗೆ ಟೂರ್ನಿಯಿಂದಲೂ ಹೊರಬಿದ್ದು ಮಾಜಿ ಚಾಂಪಿಯನ್​ ಎನಿಸಿಕೊಂಡಿತು.

Continue Reading

ಕ್ರಿಕೆಟ್

RCB: ಆರ್​ಸಿಬಿಯ ನಂಟು ಬಿಡದ ವಿಜಯ್​ ಮಲ್ಯ; ಟ್ವೀಟ್​ ಮೂಲಕ ಅಭಿನಂದನೆ

RCB: ಆರ್​ಸಿಬಿಯ ಗೆಲುವಿಗೆ ಫ್ರಾಂಚೈಸಿಯ ಮಾಜಿ ಮಾಲಿಕ ವಿಜಯ್​ ಮಲ್ಯ(Vijay Mallya) ಟ್ವೀಟ್​ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

VISTARANEWS.COM


on

RCB
Koo

ಲಂಡನ್​: ಶನಿವಾರ ತಡರಾತ್ರಿ ನಡೆದ ಐಪಿಎಲ್​ನ(IPL 2024) ರೋಚಕ ಪಂದ್ಯದಲ್ಲಿ ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(Royal Challengers Bengaluru) ತಂಡ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ತಂಡವನ್ನು ಮಣಿಸಿ ಪ್ಲೇ ಆಫ್​ಗೆ ಪ್ರವೇಶಿಸಿತು. ಆರ್​ಸಿಬಿಯ ಗೆಲುವಿಗೆ ಫ್ರಾಂಚೈಸಿಯ ಮಾಜಿ ಮಾಲಿಕ ವಿಜಯ್​ ಮಲ್ಯ(Vijay Mallya) ಟ್ವೀಟ್​ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಈ ಮೂಲಕ ಆರ್​ಸಿಬಿ ಜತೆಗಿನ ನಂಟನ್ನು ಮುಂದುವರಿಸಿದ್ದಾರೆ.

ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಆರ್​ಸಿಬಿ ವಿರಾಟ್​ ಕೊಹ್ಲಿ ಮತ್ತು ಫಾಫ್​ ಡುಪ್ಲೆಸಿಸ್​ ಮೊದಲ ವಿಕೆಟ್​ಗೆ ನಿರ್ಮಿಸಿದ ಭದ್ರ ಅಡಿಪಾಯದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 218 ರನ್​ ಬಾರಿಸಿತು. ಜವಾಬಿತ್ತ ಚೆನ್ನೈ ಈ ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಹಲವು ಏರಿಳಿತ ಕಂಡು ಕೊನೆಗೆ ತನ್ನ ಪಾಲಿನ ಆಟದಲ್ಲಿ 7 ವಿಕೆಟ್​ಗೆ 191 ರನ್​ ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಯಿತು. ಜತೆಗೆ ಟೂರ್ನಿಯಿಂದಲೂ ಹೊರಬಿದ್ದು ಮಾಜಿ ಚಾಂಪಿಯನ್​ ಎನಿಸಿಕೊಂಡಿತು.

ಇದನ್ನೂ ಓದಿ RCB vs CSK: ಇದು ಆರ್​ಸಿಬಿಯ ಹೊಸ ಅಧ್ಯಾಯ; ಹಾಲಿ ಚಾಂಪಿಯನ್​ ಚೆನ್ನೈ ಮಣಿಸಿ ಪ್ಲೇ ಆಫ್​ಗೆ ಲಗ್ಗೆ

ಆರ್​ಸಿಗೆ ಪ್ಲೇ ಆಫ್​ ಪ್ರವೇಶಿಸಬೇಕಿದ್ದರೆ 18 ರನ್​ ಅಂತರದಿಂದ ಗೆಲುವು ಬೇಕಿತ್ತು. ಅಂತಿಮ ಹಂತದಲ್ಲಿ ರವೀಂದ್ರ ಜಡೇಜಾ ಮತ್ತು ಧೋನಿ ಸೇರಿಕೊಂಡು ಪಂದ್ಯ ಗೆಲ್ಲದಿದ್ದರೂ ಕೂಡ ಪ್ಲೇ ಆಫ್​ ಲೆಕ್ಕಾಚಾರದ 201 ರನ್​ ಬಾರಿಸಲು ಶಕ್ತಿ ಮೀರಿ ಪ್ರಯತ್ನಪಟ್ಟರು. 6 ಎಸೆತಗಳಲ್ಲಿ 17 ರನ್​ ಬೇಕಿದ್ದಾಗ ಧೋನಿ ಯಶ್​ ದಯಾಳ್​ ಅವರ ಮೊದಲ ಎಸೆತವನ್ನೇ ಸ್ಟೇಡಿಯಂನಿಂದ ಹೊರಗೆಡೆ ಬಾರಿಸಿ 6 ರನ್​ ಕಲೆಹಾಕಿದರು. ಈ ಸಿಕ್ಸರ್​ 110 ಮೀಟರ್​ ದೂರಕ್ಕೆ ಸಿಡಿಯಿತು. ಆದರೆ ಮುಂದಿನ ಎಸೆತದಲ್ಲಿಯೂ ಧೋನಿ ಸಿಕ್ಸರ್​ ಬಾರಿಸುವ ಪ್ರಯತ್ನದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು. ಇಲ್ಲಿಗೆ ಚೆನ್ನೈ ಸೋಲು ಕೂಡ ಖಚಿತಗೊಂಡಿತು. ಅಂತಿಮ 2 ಎಸೆತದಲ್ಲಿ 10 ರನ್​ ಗಳಿಸುವ ಯತ್ನದಲ್ಲಿ ಜಡೇಜಾ ವಿಫಲರಾದರು. ಧೋನಿ 13 ಎಸೆತಗಳಿಂದ 25 ರನ್​ ಚಚ್ಚಿದರು. ಆರ್​ಸಿಬಿ ಗೆಲುವಿನ ನಗೆ ಬೀರಿತು.

ಆರ್​ಸಿಬಿ ಗೆಲುವು ಸಾಧಿಸುತ್ತಿದ್ದಂತೆ ವಿಜಯ್​ ಮಲ್ಯ ಟ್ವೀಟ್​ ಮಾಡಿ, “ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿ ಕೊಟ್ಟಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ತಂಡಕ್ಕೆ ಹೃದಯ ಪೂರಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸತತ ಸೋಲುಗಳಿಂದ ಗೆಲುವಿನ ಟ್ರ್ಯಾಕ್​ಗೆ ಮರಳಿರುವುದು ಅದ್ಭುತ. ಟ್ರೋಫಿ ಗೆಲ್ಲುವ ಕಡೆಗೆ ಆರ್​ಸಿಬಿ ಇನ್ನಷ್ಟು ಆಕ್ರಮಣಕಾರಿಯಾಗಿ ಆಡಬೇಕು” ಎಂದು ಮುಂದಿನ ಪಂದ್ಯಗಳಿಗೂ ಶುಭ ಹಾರೈಸಿದ್ದಾರೆ. ಇದೇ ವರ್ಷ ಆರ್​ಸಿಬಿ ಮಹಿಳಾ ತಂಡ ಡಬ್ಲ್ಯುಪಿಎಲ್​ (WPL) ಟೂರ್ನಿಯ ಕಪ್​ ಗೆದ್ದಾಗಲೂ ಕೂಡ ವಿಜಯ್ ಮಲ್ಯ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು.

ವಿಶೇಷವೆಂದರೆ ಆರ್​ಸಿಬಿಗೆ ಮೇ 18 ಎನ್ನುವುದು ಬಹಳ ಅದೃಷ್ಟದ ದಿನವಾಗಿತ್ತು. ಹೌದು, ಇದುವರೆಗಿನ ಐಪಿಎಲ್​ ಇತಿಹಾಸದಲ್ಲಿ ಆರ್​ಸಿಬಿ ಈ ದಿನದಂದು ಆಡಿದ ಎಲ್ಲ ಪಂದ್ಯಗಳನ್ನು ಗೆದ್ದಿತ್ತು. ಹೀಗಾಗಿ ಇಂದು ಕೂಡ ಆರ್​ಸಿಬಿ ಗೆಲುವು ಸಾಧಿಸಬಹುದು ಎನ್ನುವುದು ಅಭಿಮಾನಿಗಳ ಬಲವಾದ ನಂಬಿಕೆಯಾಗಿತ್ತು. ಅದರಂತೆ ಆರ್​ಸಿಬಿ ಗೆಲುವು ಸಾಧಿಸಿ ಅಭಿಮಾನಿಗಳ ನಂಬಿಕೆಯನ್ನು ಉಳಿಸಿಕೊಂಡಿದೆ.

Continue Reading
Advertisement
R Ashok
ರಾಜಕೀಯ8 mins ago

R Ashok: ರಾಜ್ಯದಲ್ಲಿ ಮಳೆಗಿಂತ ಹೆಚ್ಚಾಗಿ ಕೊಲೆಗಳೇ ನಡೆಯುತ್ತಿವೆ: ಆರ್‌.ಅಶೋಕ್‌ ಕಿಡಿ

Thailand Open 2024
ಬ್ಯಾಡ್ಮಿಂಟನ್27 mins ago

Thailand Open 2024: ಥಾಯ್ಲೆಂಡ್‌ ಓಪನ್‌ ಗೆದ್ದ ಭಾರತದ ಚಿರಾಗ್‌-ಸಾತ್ವಿಕ್‌ ಜೋಡಿ

Prajwal Revanna Case
ಕರ್ನಾಟಕ31 mins ago

Prajwal Revanna Case: ಪೆನ್‌ಡ್ರೈವ್‌ ಕೇಸ್‌ಗೆ ಟ್ವಿಸ್ಟ್;‌ ದೇವರಾಜೇಗೌಡ, ಡಿಕೆಶಿ ಆಡಿಯೊ ಬಯಲು, ಇಲ್ಲಿದೆ ಸ್ಫೋಟಕ ಮಾಹಿತಿ

Money Guide
ಮನಿ-ಗೈಡ್40 mins ago

Money Guide: ಪ್ಯಾನ್‌ ಕಾರ್ಡ್‌ ಇಲ್ಲದೆಯೂ ಸಿಬಿಲ್‌ ಸ್ಕೋರ್‌ ಪರಿಶೀಲಿಸಬೇಕೆ? ಈ ಟಿಪ್ಸ್‌ ಫಾಲೋ ಮಾಡಿ

Road Accident
ಕ್ರೈಂ44 mins ago

Road Accident: ಬೆಂಗಳೂರು, ಗದಗದಲ್ಲಿ ಸರಣಿ ಅಪಘಾತ; ಗ್ಯಾಸ್ ಟ್ಯಾಂಕರ್ ಸ್ಫೋಟಕ್ಕೆ ಮನೆಗಳೇ ಭಸ್ಮ

Janhvi Kapoor felt sexualised at the age of 12
ಬಾಲಿವುಡ್50 mins ago

Janhvi Kapoor: 12ನೇ ವಯಸ್ಸಿನಲ್ಲಿಯೇ ಅಶ್ಲೀಲ ವೆಬ್‌ಸೈಟ್‌ನಲ್ಲಿ ನನ್ನ ಫೋಟೊ ಅಪ್‌ಲೋಡ್‌ ಆಗಿತ್ತು ಎಂದ ಶ್ರೀದೇವಿ ಮಗಳು!

Kundapur News
ಕರ್ನಾಟಕ58 mins ago

Kundapur News: ಅನಾರೋಗ್ಯದಿಂದ ತಾಯಿ ಸಾವು, ಶವದ ಜತೆ 4 ದಿನ ಕಳೆದ ಬುದ್ಧಿಮಾಂದ್ಯ ಪುತ್ರಿಯೂ ಮೃತ್ಯು!

RCB vs CSK
ಕ್ರಿಕೆಟ್1 hour ago

RCB vs CSK: ಧೋನಿ ವರ್ತನೆಗೆ ‘ಇಟ್‌ ಹರ್ಟ್ಸ್‌​’ ಎಂದ ಆರ್​ಸಿಬಿ ಅಭಿಮಾನಿಗಳು; ಧೋನಿ ಮಾಡಿದ ತಪ್ಪೇನು?

Congress Manifesto
ದೇಶ1 hour ago

Congress Manifesto: ಕಾಂಗ್ರೆಸ್‌ ಪ್ರಣಾಳಿಕೆ ಬಗ್ಗೆ ಅಪಪ್ರಚಾರ; ವ್ಯಕ್ತಿ ಅರೆಸ್ಟ್‌-ಬಿಜೆಪಿ ಕಿಡಿ

Prajwal Revanna Case
ಕರ್ನಾಟಕ1 hour ago

Prajwal Revanna Case: ಡಿಕೆಶಿ 100 ಕೋಟಿ ರೂ. ಆಫರ್;‌ ಬೆಂಕಿ ಇಲ್ಲದೆ ಹೊಗೆಯಾಡಲ್ಲ ಎಂದ ಆರ್.‌ ಅಶೋಕ್

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 hour ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 hours ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 hours ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ2 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ2 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ3 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು3 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ4 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

ಟ್ರೆಂಡಿಂಗ್‌