Site icon Vistara News

VISTARA TOP 10 NEWS : ದಿಲ್ಲಿಯಲ್ಲಿ ರಾಜ್ಯದ ಶಕ್ತಿ ಪ್ರದರ್ಶನಕ್ಕೆ ವೇದಿಕೆ ರೆಡಿ, ಬಡವರಿಗೆ ಮೋದಿ ಅಕ್ಕಿ ಮತ್ತು ಇತರ ಸುದ್ದಿ

Vistara Top 10 News 06022024

1.ಕೇಂದ್ರ ಸರ್ಕಾರದ ವಿರುದ್ಧ ಫೆ.7ರಂದು ಕರ್ನಾಟಕದ ಶಕ್ತಿ ಪ್ರದರ್ಶನ: ದಿಲ್ಲಿಗೆ ಹಾರಿದ ಕೈಪಡೆ
ತೆರಿಗೆ ಮರುಪಾವತಿ ವಿಚಾರದಲ್ಲಿ ಕೇಂದ್ರ ಸರ್ಕಾರ (Central Government) ನಡೆಸುತ್ತಿದೆ ಎನ್ನಲಾದ ಅನ್ಯಾಯದ ವಿರುದ್ಧ ಕರ್ನಾಟಕ ಸಿಡಿದು ನಿಂತಿದೆ (Protest by Karnataka Government). ಕೇಂದ್ರದ ವಿರುದ್ಧ ದಿಲ್ಲಿಯ ಜಂತರ್‌ಮಂತರ್‌ನಲ್ಲಿ ಬುಧವಾರ ಬೆಳಗ್ಗೆ 11 ಗಂಟೆಗೆ ಬೃಹತ್‌ ಪ್ರತಿಭಟನೆ ನಡೆಯಲಿದ್ದು, ಇದಕ್ಕೆ ಬಿಜೆಪಿ-ಜೆಡಿಎಸ್‌ ಸಂಸದರಿಗೂ ಆಹ್ವಾನ ನೀಡಲಾಗಿದೆ. ಈ ನಡುವೆ ಪ್ರತಿಭಟನೆ ಮತ್ತು ಕೇಂದ್ರದ ಅನ್ಯಾಯದ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ಭಾರಿ ವಾಗ್ಯುದ್ಧವೇ ನಡೆದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಈ ಸುದ್ದಿಯನ್ನೂ ಓದಿ: ದಯವಿಟ್ಟು ಪ್ರತಿಭಟನೆಗೆ ಬನ್ನಿ; ಬಿಜೆಪಿ ಸೇರಿ ಎಲ್ಲ ಸಂಸದರಿಗೆ ಸಿಎಂ ಪತ್ರ
ಈ ಸುದ್ದಿಯನ್ನೂ ಓದಿ: ಪ್ರೊಟೆಸ್ಟ್‌ ವಾರ್‌! ಕೇಂದ್ರದಿಂದ ಅನ್ಯಾಯ ಎಂದ ಕಾಂಗ್ರೆಸ್‌ಗೆ “ಚಾನ್ಸೇ ಇಲ್ಲʼ ಎಂದ ಬಿಜೆಪಿ
ಈ ಸುದ್ದಿಯನ್ನೂ ಓದಿ: ರಾವಣ ತಲೆಗಳ ಕಾಂಗ್ರೆಸ್‌ಗೆ ಮೈಯೆಲ್ಲ ರಾಜಕೀಯ: ಕೈ ಪ್ರತಿಭಟನೆಗೆ ಎಚ್‌ಡಿಕೆ ಕಿಡಿ
ಈ ಸುದ್ದಿಯನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಹತ್ತು ಸಾವಿರ ದಂಡ ವಿಧಿಸಿದ ಕೋರ್ಟ್‌!

2. ಆರು ತಿಂಗಳೊಳಗೆ ನೋಂದಾಯಿಸದಿದ್ದರೆ ಲಿವ್‌ ಇನ್‌ ಜೋಡಿ ಜೈಲಿಗೆ; ಉತ್ತರಾಖಂಡ ಏಕರೂಪ ಸಂಹಿತೆ
ಉತ್ತರಾಖಂಡದಲ್ಲಿ ಇನ್ನು ಮುಂದೆ ಲಿವ್-ಇನ್ ಸಂಬಂಧ (Live in relationship) ಕಷ್ಟವಾಗಲಿದೆ. ಲಿವ್‌ ಇನ್‌ನಲ್ಲಿರುವ ಜೋಡಿ ಅಥವಾ ಲಿವ್‌ ಇನ್‌ ಆಗ ಬಾಳಲು ಯೋಚಿಸುತ್ತಿರುವವರು, ತಮ್ಮ ಸಂಬಂಧವನ್ನು ನೋಂದಾಯಿಸಿಕೊಳ್ಳಬೇಕು. ಇಲ್ಲವಾದರೆ ಅಂಥ ಜೋಡಿಯನ್ನು ಜೈಲಿಗೆ ಕಳಿಸಬಹುದು. ಇದು ಪ್ರಸ್ತಾವಿತ ಏಕರೂಪ ನಾಗರಿಕ ಸಂಹಿತೆಯ (Uniform Civil Code) ಕಠಿಣ ನಿಯಮವಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: uniform civil code: ಏಕರೂಪ ನಾಗರಿಕ ಸಂಹಿತೆ: ಏನು, ಯಾಕೆ, ಹೇಗೆ?

3. ನಾಯಿ ಪ್ಲೇಟ್‌ನಿಂದ ಬಿಸ್ಕೆಟ್‌ ತೆಗೆದು ಕಾಂಗ್ರೆಸ್‌ ಕಾರ್ಯಕರ್ತನಿಗೆ ಕೊಟ್ಟ ರಾಹುಲ್‌ ಗಾಂಧಿ!
ಕಾಂಗ್ರೆಸ್‌ ಕಾರ್ಯಕರ್ತರೊಬ್ಬರಿಗೆ ರಾಹುಲ್‌ ಗಾಂಧಿ (Rahul Gandhi) ತಮ್ಮ ಭಾರತ್‌ ಜೋಡೋ ನ್ಯಾಯ ಯಾತ್ರೆಯ (Bharat Jodo Nyay Yatra) ಸಂದರ್ಭದಲ್ಲಿ ಬಿಸ್ಕೆಟ್‌ ನೀಡುತ್ತಿರುವ ವಿಡಿಯೋವನ್ನು ಬಿಜೆಪಿಗರು ಸೋಶಿಯಲ್‌ ಮೀಡಿಯಾದಲ್ಲಿ (Social media) ಶೇರ್‌ ಮಾಡಿಕೊಂಡಿದ್ದಾರೆ. ಈ ವಿಡಿಯೋ ಈಗ ವೈರಲ್‌ (Viral video) ಆಗುತ್ತಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. 7ನೇ ವೇತನ ಆಯೋಗ ಶಿಫಾರಸು ತಕ್ಷಣ ಜಾರಿ; ಫೆ.7ರಂದು ಸರ್ಕಾರಿ ನೌಕರರ ಪ್ರತಿಭಟನೆ
Employees Protest: 7ನೇ ವೇತನ ಆಯೋಗದ ಶಿಫಾರಸುಗಳ ಜಾರಿ, ರಾಜ್ಯದ ಎಲ್ಲಾ ನೌಕರರಿಗೂ PFRDA ಕಾಯ್ದೆ /NPS ಪದ್ದತಿ ರದ್ದುಪಡಿಸಿ ನಿಶ್ಚಿತ ಪಿಂಚಣಿ ಯೋಜನೆ (OPS) ಮರುಸ್ಥಾಪನೆ ಆಗ್ರಹಿಸಿ ಫೆಬ್ರವರಿ 7ರಂದು ಬೆಂಗಳೂರಿನಲ್ಲಿ ಸರ್ಕಾರಿ ನೌಕರರ ಪ್ರತಿಭಟನೆ ನಡೆಯಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಸರ್ಕಾರದ ವಿರುದ್ಧ ಸಿಡಿದೆದ್ದ ಕಾರ್ಮಿಕರು, ಬೃಹತ್‌ ಪ್ರತಿಭಟನೆ
ಈ ಸುದ್ದಿಯನ್ನೂ ಓದಿ: ಫ್ರೀಡಂ ಪಾರ್ಕ್‌ನಲ್ಲಿ ಗೋವುಗಳ ಪ್ರತಿಭಟನೆ; ಹಾಲಿನ ಸಬ್ಸಿಡಿ ದುಡ್ಡು ಕೊಡಲು ಆಗ್ರಹ!

5. ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 11 ಜನರ ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ
ಮದ್ಯಪ್ರದೇಶದ ಹರ್ದಾ ಪಟ್ಟಣದಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಾರ್ಖಾನೆಯಲ್ಲಿ ಏಕಾಏಕಿ ಸ್ಫೋಟ ಸಂಭವಿಸಿದ್ದು, ಇದುವರೆಗೆ 11 ಜನ ಮೃತಪಟ್ಟಿದ್ದಾರೆ. 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿಯೇ ಕೆಲವರ ಸ್ಥಿತಿ ಗಂಭೀರವಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ಪರೀಕ್ಷಾ ಅಕ್ರಮಕ್ಕೆ 10 ವರ್ಷ ಜೈಲು, ಕೋಟಿ ರೂ. ದಂಡ; ಮಹತ್ವದ ವಿಧೇಯಕ ಪಾಸ್‌
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಕಲು, ಅಕ್ರಮ ತಡೆಗಾಗಿ ಕೇಂದ್ರ ಸರ್ಕಾರವು (Central Government) ಲೋಕಸಭೆಯಲ್ಲಿ ಮಂಡಿಸಿದ ಸಾರ್ವಜನಿಕ ಪರೀಕ್ಷೆ (ಅಕ್ರಮಗಳ ತಡೆ) ವಿಧೇಯಕಕ್ಕೆ (Public Examinations (Prevention of Unfair Means) Bill-2024) ಅಂಗೀಕಾರ ದೊರೆತಿದೆ. ವಿಧೇಯಕಕ್ಕೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದ್ದು, ಬಳಿಕ ರಾಜ್ಯಸಭೆಯಲ್ಲಿ ಮಂಡಿಸಲಾಗುತ್ತದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಮಸೀದಿ ನಿರ್ಮಿಸಲು ಔರಂಗಜೇಬನಿಂದ ಮಥುರಾ ದೇಗುಲ ನೆಲಸಮ; ಪುರಾತತ್ವ ಇಲಾಖೆ ಮಾಹಿತಿ
ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಮಾಡಲು ನ್ಯಾಯಾಲಯವೂ ಅವಕಾಶ ನೀಡಿದೆ. ಇದರ ಬೆನ್ನಲ್ಲೇ, “ಮಸೀದಿ ನಿರ್ಮಿಸಲು ಮೊಘಲ್‌ ದೊರೆ ಔರಂಗಜೇಬನು ಮಥುರಾ ಕೃಷ್ಣಜನ್ಮಭೂಮಿ ಸಮುಚ್ಚಯವನ್ನು (Krishna Janmabhoomi Complex) ನೆಲಸಮ ಮಾಡಿದ” ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (Archaeological Survey of India) ಮಾಹಿತಿ ನೀಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಜ್ಞಾನವಾಪಿ ಮಾದರಿಯಲ್ಲಿ ಮಳಲಿ ಮಸೀದಿ ಸರ್ವೆ ಕೋರಿಕೆ: ಫೆ.8ಕ್ಕೆ ವಿಚಾರಣೆ

8. ಮೋದಿ ಸರ್ಕಾರದಿಂದ ಬಡವರಿಗೆ ಕೊಡುಗೆ, ಇಂದಿನಿಂದ ಕಿಲೋಗೆ 29 ರೂಪಾಯಿಗೆ “ಭಾರತ್‌ ಅಕ್ಕಿʼ
ಪ್ರತಿ ಕೆಜಿಗೆ 29 ರೂ.ಗಳ ಸಬ್ಸಿಡಿ (subsidised rate) ದರದಲ್ಲಿ ʻಭಾರತ್ ಅಕ್ಕಿ’ಯನ್ನು (Bharat Rice) ಮಂಗಳವಾರ ಕೇಂದ್ರ ಸರ್ಕಾರ ಇಂದು ಬಿಡುಗಡೆ ಮಾಡುತ್ತಿದೆ. ಸಬ್ಸಿಡಿ ಅಕ್ಕಿ 5 ಕೆಜಿ ಮತ್ತು 10 ಕೆಜಿ ಪ್ಯಾಕ್‌ಗಳಲ್ಲಿ ಲಭ್ಯವಿರುತ್ತದೆ.
ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಅಧಿಕಾರಕ್ಕೆ ಬಂದರೆ ಮೀಸಲಾತಿ ಮಿತಿ ರದ್ದು; ರಾಹುಲ್‌ ಗಾಂಧಿ ಘೋಷಣೆ

9. ಹೈಸ್ಕೂಲ್‌ನಲ್ಲೇ ರ‍್ಯಾಗಿಂಗ್‌; ಮಕ್ಕಳ ಗುದದ್ವಾರಕ್ಕೆ ಪೆನ್ಸಿಲ್‌ ಚುಚ್ಚಿದ ಬಾಲ ಕಿರಾತಕರು
ಸಾಮಾನ್ಯವಾಗಿ ಕಾಲೇಜುಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳನ್ನು ರ‍್ಯಾಗ್‌ ಮಾಡುತ್ತಾರೆ. ಆದರೆ, ಈಗ ಒಂದು ಹೈಸ್ಕೂಲಿನಲ್ಲಿ ರ‍್ಯಾಗಿಂಗ್‌ ಪ್ರಕರಣ (Ragging Case in High school) ನಡೆದು ದೊಡ್ಡ ಸುದ್ದಿಯಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಆನ್‌ಲೈನ್‌ ಮೂಲಕ ಬಂತು 1 ಬಿಎಚ್‌ಕೆ ರೆಡಿಮೇಡ್‌ ಮನೆ; ವಿಡಿಯೊ ಇಲ್ಲಿದೆ
ಸ್ವಂತದ್ದೊಂದು ಮನೆ ಹೊಂದಬೇಕು ಎನ್ನುವುದು ಬಹುತೇಕರ ಕನಸು. ದಿನೇ ದಿನೆ ಹೆಚ್ಚುತ್ತಿರುವ ಬೆಲೆಯಿಂದಾಗಿ ಹಲವು ಮಂದಿಯ ಈ ಕನಸು ನನಸಾಗುವುದೇ ಇಲ್ಲ. ಇದೀಗ ಈ ಸಮಸ್ಯೆಗೆ ಅಮೆರಿಕ ಟಿಕ್‌ಟಾಕರ್‌ ಪರಿಹಾರ ಕಂಡುಕೊಂಡಿದ್ದಾರೆ. ಆನ್‌ಲೈನ್‌ ಶಾಪಿಂಗ್‌ ತಾಣ ಅಮೆಜಾನ್‌ನಿಂದ (Amazon) ಖರೀದಿಸಿದ ತನ್ನ ಹೊಸ ಮನೆಯನ್ನು ಪ್ರದರ್ಶಿಸುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ:

Exit mobile version