ವಿಸ್ತಾರ Explainer: Uniform Civil Code: ಏಕರೂಪ ನಾಗರಿಕ ಸಂಹಿತೆ: ಏನು, ಯಾಕೆ, ಹೇಗೆ? - Vistara News

ಪ್ರಮುಖ ಸುದ್ದಿ

ವಿಸ್ತಾರ Explainer: Uniform Civil Code: ಏಕರೂಪ ನಾಗರಿಕ ಸಂಹಿತೆ: ಏನು, ಯಾಕೆ, ಹೇಗೆ?

ಉತ್ತರಾಖಂಡ ಸರ್ಕಾರ ಏಕರೂಪ ನಾಗರಿಕ ಸಂಹಿತೆಯ (Uniform civil code) ಜಾರಿಗೆ ಮುಂದಾಗಿದೆ. ವಿಧೇಯಕದ ಅಂತಿಮ ಕರಡನ್ನು ವಿಧಾನಸಭೆಯಲ್ಲಿ ಮಂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಾಗರಿಕ ಸಂಹಿತೆಯ ಬಗ್ಗೆ ವಿವರ ಇಲ್ಲಿದೆ.

VISTARANEWS.COM


on

indian people
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಪುಷ್ಕರ್‌ ಸಿಂಗ್‌ ಧಾಮಿ ನೇತೃತ್ವದ ಉತ್ತರಾಖಂಡ ರಾಜ್ಯ ಸರ್ಕಾರ ಸಚಿವ ಸಂಪುಟ ಏಕರೂಪ ನಾಗರಿಕ ಸಂಹಿತೆಯ (Uniform Civil Code- ಯುಸಿಸಿ) ಕರಡನ್ನು ಅಂತಿಮಗೊಳಿಸಿದ್ದು, ವಿಧಾನಸಭೆಯಲ್ಲಿ ವಿಧೇಯಕವಾಗಿ ಮಂಡಿಸುತ್ತಿದೆ. ಇದು ಅಂಗೀಕಾರಗೊಂಡರೆ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದ ಮೊದಲ ರಾಜ್ಯ ಎನಿಸಲಿದೆ.

ಏಕರೂಪ ಅಥವಾ ಸಮಾನ ನಾಗರಿಕ ಸಂಹಿತೆ ಜಾರಿಗೆ ತರುವ ಕುರಿತ ಮಾತು ನಮ್ಮ ದೇಶದಲ್ಲಿ ಆಗಾಗ ಕೇಳಿಬರುತ್ತದೆ. ಕೇಂದ್ರ ಸರ್ಕಾರ ಈ ಬಗ್ಗೆ ಗಂಭೀರ ಹೆಜ್ಜೆಯಿಡುವ ಸೂಚನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಏಕರೂಪ ನಾಗರಿಕ ಸಂಹಿತೆ ಜಾರಿ ಪರವಾಗಿ ಬ್ಯಾಟ್ ಬೀಸಿದ್ದರು. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವಂತೆ ಸುಪ್ರೀಂ ಕೋರ್ಟ್ ಕೂಡ ಹೇಳಿತ್ತು.

ಹಾಗಿದ್ದರೆ ಏನಿದು ಏಕರೂಪ ಅಥವಾ ಸಮಾನ ನಾಗರಿಕ ಸಂಹಿತೆ? ಇದರ ಅಗತ್ಯವೇನು? ಇದು ಇಲ್ಲದಿದ್ದರೆ ಏನು ತೊಂದರೆ? ಯಾರು ಇದನ್ನು ಪ್ರತಿಪಾದಿಸಿದವರು?

ಏಕರೂಪ ನಾಗರಿಕ ಸಂಹಿತೆ ಎಂದರೇನು?

ಮದುವೆ, ವಿಚ್ಛೇದನ, ದತ್ತು ಸ್ವೀಕಾರ ಮತ್ತು ಉತ್ತರಾಧಿಕಾರ ಸೇರಿದಂತೆ ಭಾರತದ ಎಲ್ಲಾ ನಾಗರಿಕರಿಗೆ ಅನ್ವಯವಾಗುವ, ಅವರ ಧರ್ಮವನ್ನು ಲೆಕ್ಕಿಸದೆ ವೈಯಕ್ತಿಕ ವಿಷಯಗಳನ್ನು ನಿಯಂತ್ರಿಸುವ ಕಾನೂನುಗಳ ಒಂದು ಗುಂಪಾಗಿ ಏಕರೂಪ ನಾಗರಿಕ ಸಂಹಿತೆಯನ್ನು ಪರಿಕಲ್ಪಿಸಲಾಗಿದೆ. ಈಗ ಅಸ್ತಿತ್ವದಲ್ಲಿರುವ ವೈವಿಧ್ಯಮಯ ವೈಯಕ್ತಿಕ ಕಾನೂನುಗಳನ್ನು ಬದಲಿಸುವ ಗುರಿ ಇದರದು.

ವೈಯಕ್ತಿಕ ಕಾನೂನಿನ ಭಿನ್ನತೆ

ಭಾರತದಲ್ಲಿ ಮತದ ಆಧಾರದ ಹಲವು ವೈಯಕ್ತಿಕ ಅಧಿಕಾರ, ಸ್ವಾಮ್ಯ ಇತ್ಯಾದಿಗಳು ಭಿನ್ನವಾಗಿವೆ. ಮುಖ್ಯವಾಗಿ ಮಹಿಳೆಯರ ಉತ್ತರಾಧಿಕಾರದ ಹಕ್ಕು. 1956ರ ಹಿಂದೂ ಉತ್ತರಾಧಿಕಾರ ಕಾಯಿದೆಯಡಿಯಲ್ಲಿ, (ಇದು ಹಿಂದೂಗಳು, ಬೌದ್ಧರು, ಜೈನರು ಮತ್ತು ಸಿಖ್ಖರ ಹಕ್ಕುಗಳನ್ನು ನಿಯಂತ್ರಿಸುತ್ತದೆ) ಹಿಂದೂ ಮಹಿಳೆಯರು ತಮ್ಮ ಪೋಷಕರ ಆಸ್ತಿಗೆ ಗಂಡು ಮಕ್ಕಳಷ್ಟೇ ಸಮಾನ ಹಕ್ಕುದಾರರು. ವಿವಾಹಿತ ಮತ್ತು ಅವಿವಾಹಿತ ಹೆಣ್ಣುಮಕ್ಕಳ ಹಕ್ಕುಗಳು ಸಮಾನವಾಗಿರುತ್ತವೆ. ಪೂರ್ವಜರ ಆಸ್ತಿ ವಿಭಜನೆ ಸಂದರ್ಭ ಮಹಿಳೆಯರನ್ನು ಸಮಾನ ಉತ್ತರಾಧಿಕಾರಿಯಗಿಯೇ ಪರಿಗಣಿಸಲಾಗುತ್ತದೆ.

ಆದರೆ ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ, ಮುಸ್ಲಿಂ ಮಹಿಳೆಯರು ತಮ್ಮ ಗಂಡನ ಆಸ್ತಿಯಲ್ಲಿ 1/8ನೇ ಅಥವಾ 1/4 ಭಾಗದಷ್ಟು ಪಾಲು ಪಡೆಯಲು ಮಾತ್ರ ಅರ್ಹರಾಗಿರುತ್ತಾರೆ. ಇದು ಕೂಡ ಮಕ್ಕಳ ಉಪಸ್ಥಿತಿಯನ್ನು ಅವಲಂಬಿಸಿರುತ್ತದೆ. ಆದರೆ, ಇದರಲ್ಲೂ ಪುತ್ರಿಯರ ಪಾಲು ಪುತ್ರರ ಪಾಲಿನ ಅರ್ಧದಷ್ಟು.

ಕ್ರಿಶ್ಚಿಯನ್ನರು, ಪಾರ್ಸಿಗಳು ಮತ್ತು ಯಹೂದಿಗಳಿಗೆ 1925ರ ಭಾರತೀಯ ಉತ್ತರಾಧಿಕಾರ ಕಾಯಿದೆ ಅನ್ವಯಿಸುತ್ತದೆ. ಮಕ್ಕಳು ಅಥವಾ ಇತರ ಸಂಬಂಧಿಕರ ಉಪಸ್ಥಿತಿಯ ಆಧಾರದ ಮೇಲೆ ಕ್ರಿಶ್ಚಿಯನ್ ಮಹಿಳೆಯರು ಪಾಲನ್ನು ಪಡೆಯುತ್ತಾರೆ. ಪಾರ್ಸಿ ವಿಧವೆಯರು ತಮ್ಮ ಮಕ್ಕಳಂತೆ ಸಮಾನ ಪಾಲನ್ನು ಪಡೆಯುತ್ತಾರೆ. ಮೃತರ ಪೋಷಕರು ಜೀವಂತವಾಗಿದ್ದರೆ, ಮೃತರ ಮಗು ಪಡೆಯುವ ಆಸ್ತಿಯ ಅರ್ಧದಷ್ಟು ಪಾಲು ಸತ್ತವರ ಪೋಷಕರಿಗೆ ಹೋಗುತ್ತದೆ.

ಇವೆಲ್ಲವೂ ಭಾರತದಲ್ಲಿ ಗೊಂದಲ- ಗೋಜಲು ಸೃಷ್ಟಿಸಿವೆ. ಅಂತರ್‌ಮತೀಯ- ಅಂತರ್‌ಜಾತೀಯ ಮದುವೆಗಳಾದಾಗ ಆಸ್ತಿ ಹಕ್ಕಿನ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಭಾರತೀಯ ಸಂವಿಧಾನ ʼಎಲ್ಲರಿಗೂ ಸಮಾನʼ ಹಕ್ಕು ಹಾಗೂ ಸ್ವಾತಂತ್ರ್ಯಗಳನ್ನು ನೀಡಿದೆಯಾದರೂ, ಆಸ್ತಿ ವಿಚಾರದಲ್ಲಿ ಬೇರೆ ಬೇರೆ ಧರ್ಮಗಳು ಬೇರೆ ಬೇರೆ ಕಾನೂನುಗಳನ್ನು ಹೊಂದಿರುವುದರಿಂದ ಸಮಾನತೆ ಸಾಧಿಸಲು ಸಾಧ್ಯವಾಗಿಲ್ಲ. ಇದನ್ನು ತೊಡೆಯುವ ಉದ್ದೇಶ ಯುಸಿಸಿಯದು.

ಮುಸ್ಲಿಮ್‌ ಕಾನೂನುಗಳು ಷರಿಯಾ ಆಧರಿತವಾಗಿವೆ. ಹೀಗಾಗಿ ವಿವಾಹ, ಉತ್ತರಾಧಿಕಾರ, ಆಸ್ತಿ ಹಂಚಿಕೆ, ವಿಚ್ಛೇದನ, ಜೀವನಾಂಶ ಮುಂತಾದ ವಿಚಾರಗಳಲ್ಲಿ ಗಣನೀಯವಾದ ಭೇದಗಳಿವೆ. ಇದು ಒಂದೇ ದೇಶದ ಪ್ರಜೆಗಳಲ್ಲಿ ಭೇದವನ್ನು ಸೃಷ್ಟಿಸಿದೆ. ʼʼಸೆಕ್ಯುಲರ್‌ ಆಗಿರುವ ಒಂದು ದೇಶದಲ್ಲಿ ಕಾನೂನುಗಳು ಬೇರೆ ಬೇರೆಯಾಗಿರಲು ಹೇಗೆ ಸಾಧ್ಯ?ʼʼ ಎಂದು ಗೃಹ ಸಚಿವರು ಹಿಂದೆ ಪ್ರಶ್ನಿಸಿದ್ದರು.

ಸಂವಿಧಾನ ಏನು ಹೇಳಿದೆ?

constitution

ಸಂವಿಧಾನದ ʼರಾಜ್ಯ ನೀತಿ ನಿರ್ದೇಶಕ ತತ್ವʼಗಳಲ್ಲಿ ಒಂದಾದ ಸಂವಿಧಾನದ 44ನೇ ವಿಧಿಯು ʼʼಭಾರತದ ಭೂಪ್ರದೇಶದಾದ್ಯಂತ ಜನರಿಗೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡಲು ಸರ್ಕಾರ ಪ್ರಯತ್ನಿಸಬೇಕುʼʼ ಎಂದು ಹೇಳಿದೆ. ಆದರೆ, ಆರ್ಟಿಕಲ್ 37 ಹೇಳುವಂತೆ, ನಿರ್ದೇಶಕ ತತ್ವಗಳು ಸರ್ಕಾರಿ ನೀತಿಗಳಿಗೆ ಮಾರ್ಗದರ್ಶಿ ತತ್ವಗಳಾಗಿವೆ ಅಷ್ಟೇ. ಇವುಗಳನ್ನು ನ್ಯಾಯಾಲಯದ ಮೂಲಕ ಪಟ್ಟು ಹಿಡಿದು ಜಾರಿಗೊಳಿಸಲಾಗುವುದಿಲ್ಲ.

ಯುಸಿಸಿ ಬೆಂಬಲಿಸುವ ವಾದಗಳು

ಭಾರತೀಯ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು, ಯುಸಿಸಿ ಜಾರಿ ಅಪೇಕ್ಷಣೀಯ ಎಂದು ಅಭಿಪ್ರಾಯಪಟ್ಟರು. ಆದರೆ ಸಂವಿಧಾನ ಸಭೆಯಲ್ಲಿ ಈ ಬಗ್ಗೆ ಒಮ್ಮತ ಮೂಡಲಿಲ್ಲ. ಹಾಗಾಗಿ ಅದು ಐಚ್ಛಿಕವಾಗಿ ಉಳಿಯಲಿ ಎಂದು ವಿಚಾರ ಪ್ರಸ್ತಾಪಿಸಿದರು.

“ಭವಿಷ್ಯದಲ್ಲಿ ಸಂಸತ್ತು ಈ ಬಗ್ಗೆ ಆರಂಭಿಕ ಹೆಜ್ಜೆ ಇಡಬಹುದು. ಹಾಗೆ ಮಾಡುವಾಗ ಮೊದಲ ಹಂತದಲ್ಲಿ ಈ ಸಂಹಿತೆಯನ್ನು ಐಚ್ಛಿಕವಾಗಿ, ಸ್ವಯಂಪ್ರೇರಿತವಾಗಿ ತೆಗೆದುಕೊಳ್ಳುವ ಅವಕಾಶ ಸೃಷ್ಟಿಸಬೇಕು” ಎಂದು ಕೂಡ ಅಂಬೇಡ್ಕರ್ ಸಂವಿಧಾನ ಸಭೆಯಲ್ಲಿ ಹೇಳಿದ್ದರು. ನಂತರ ಸಂವಿಧಾನ ಸಭೆಯು ಇದನ್ನು ನಿರ್ದೇಶಕ ತತ್ವವಾಗಿ ಹಾಕಲು ಒಪ್ಪಿಕೊಂಡಿತು.

ನ್ಯಾಯಪೀಠಗಳ ಒತ್ತು

ನಂತರದ ವರ್ಷಗಳಲ್ಲಿ ಆಗಾಗ ಶಾಸಕಾಂಗ ಹಾಗೂ ನ್ಯಾಯಾಂಗಗಳು ವೈಯಕ್ತಿಕ ಕಾನೂನುಗಳನ್ನು ತಿದ್ದುಪಡಿ ಮಾಡುವ ಅಥವಾ ಏಕರೂಪದ ನಾಗರಿಕ ಸಂಹಿತೆಯನ್ನು ತರುವ ವಿಷಯ ಪ್ರಸ್ತಾಪಿಸುತ್ತಾ ಬಂದಿವೆ. ಈ ವಿಚಾರದಲ್ಲಿ ಗಮನ ಸೆಳೆಯುವ ಟಿಪ್ಪಣಿ ಹೊಂದಿದ್ದ ಗಮನಾರ್ಹ ತೀರ್ಪುಗಳು ಶಾಬಾನೋ ಪ್ರಕರಣ, ಸರಳಾ ಮುದ್ಗಲ್‌ ಮುಂತಾದ ಪ್ರಕರಣಗಳಲ್ಲಿ ನ್ಯಾಯಪೀಠಗಳಿಂದ ಬಂದಿವೆ.

ಶಾಬಾನೊ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಪಂಚಸದಸ್ಯ ನ್ಯಾಯಪೀಠ ಈ ರೀತಿ ಟಿಪ್ಪಣಿ ನೀಡಿತು:

ʼʼನಮ್ಮ ಸಂವಿಧಾನದ 44ನೇ ವಿಧಿ ಸತ್ತಂತೆ ಆಗಿದೆ ಎಂಬುದು ವಿಷಾದಕರ. ಈ ದೇಶಕ್ಕೆ ಒಂದು ಏಕರೂಪ ನಾಗರಿಕ ಸಂಹಿತೆ ತರುವ ಬಗ್ಗೆ ಯಾವುದೇ ಅಧಿಕೃತ ಚಟುವಟಿಕೆ ಇದುವರೆಗೂ ನಡೆದಿರುವುದಕ್ಕೆ ಸಾಕ್ಷಿಯಿಲ್ಲ. ತಮ್ಮ ವೈಯಕ್ತಿಕ ಕಾನೂನುಗಳಲ್ಲಿ ಸುಧಾರಣೆ ತರಬೇಕಿರುವುದರಿಂದ, ಈ ವಿಷಯದಲ್ಲಿ ಮುಸ್ಲಿಂ ಸಮುದಾಯ ಮುಂದುವರಿಯಬೇಕಿದೆ ಎಂದು ಬಹಳ ಮಂದಿ ನಂಬಿರುವಂತೆ ಕಾಣಿಸುತ್ತಿದೆ. ಕಾನೂನುಗಳಿಗೆ ವಿಭಿನ್ನ ಪ್ರತಿಕ್ರಿಯೆ, ಗೊಂದಲಗಳು, ಸಿದ್ಧಾಂತಗಳ ತಿಕ್ಕಾಟಗಳನ್ನು ನಿವಾರಿಸುವಲ್ಲಿ ರಾಷ್ಟ್ರೀಯ ಏಕತೆಯನ್ನು ಸಾಧಿಸಲು ಏಕರೂಪ ನಾಗರಿಕ ಸಂಹಿತೆ ನೆರವಾಗಬಹುದು. ಯಾವುದೇ ಸಮುದಾಯ ಈ ವಿಷಯದಲ್ಲಿ ಬೆಕ್ಕಿಗೆ ಗಂಟೆ ಕಟ್ಟಲು ಸಿದ್ಧವಾಗುತ್ತಿರುವಂತಿಲ್ಲ. ಈ ದೇಶದ ಪ್ರಜೆಗಳ ಹಿತರಕ್ಷಣೆಗಾಗಿ ಸ್ವತಃ ಸರ್ಕಾರವೇ ಆ ಕೆಲಸಕ್ಕೆ ಬದ್ಧವಾಗಬೇಕಿದೆ. ಹಾಗೆ ಮಾಡಲು ಅದಕ್ಕೆ ಶಾಸನಾತ್ಮಕವಾದ ಅಧಿಕಾರವೂ ಇದೆ. ಇದಕ್ಕೆ ಶಾಸನಾತ್ಮಕ ಸ್ಪರ್ಧಾತ್ಮಕತೆ ಈ ವಿಷಯದಲ್ಲಿ ಎಷ್ಟು ಮುಖ್ಯವೋ, ರಾಜಕೀಯ ಧೈರ್ಯವೂ ಅಷ್ಟೇ ಮುಖ್ಯ ಎಂದು ಅಭಿಪ್ರಾಯಪಡಬೇಕಾಗುತ್ತದೆ. ವಿಭಿನ್ನ ನಂಬಿಕೆಗಳ ಸಮುದಾಯಗಳನ್ನು ವ್ಯಕ್ತಿಗಳನ್ನು ಈ ವಿಚಾರದಲ್ಲಿ ಒಟ್ಟಿಗೆ ತರುವಲ್ಲಿ ಇರುವ ಸಂಕಷ್ಟಗಳು ನಮಗೆ ಗೊತ್ತಿವೆ. ಆದರೆ ಸಂವಿಧಾನ ಅರ್ಥ ಉಳಿಸಿಕೊಳ್ಳಬೇಕಾದರೆ ಆ ನಿಟ್ಟಿನಲ್ಲಿ ಒಂದು ಹೆಜ್ಜೆ ಇಡುವುದು ಅತ್ಯಗತ್ಯ.ʼʼ

shah bano case

1995ರಲ್ಲಿನ ಸರಳಾ ಮುದ್ಗಲ್‌ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್‌ ಇನ್ನಷ್ಟು ಸ್ಪಷ್ಟವಾಗಿ ಯುಸಿಸಿ ಜಾರಿಯ ಅಗತ್ಯವನ್ನು ಪ್ರತಿಪಾದಿಸಿತು. ʼʼದೇಶದಲ್ಲಿನ 80% ನಾಗರಿಕರು ಒಂದೇ ವೈಯಕ್ತಿಕ ಕಾನೂನಿನ ಆಡಳಿತಕ್ಕೆ ಒಳಪಟ್ಟಿರುವಾಗ, ಇನ್ನೂ ಯುಸಿಸಿ ಜಾರಿಗೆ ಮೀನ ಮೇಷ ಎಣಿಸುತ್ತಿರುವುದಕ್ಕೆ ಯಾವುದೇ ಸಮರ್ಥನೆ ಇಲ್ಲʼʼ ಎಂದು ಕೋರ್ಟ್‌ ಹೇಳಿತು. 2003ರ ಜಾನ್‌ ವಲ್ಲಮೊತ್ತಮ್‌ ಪ್ರಕರಣದಲ್ಲೂ ಈ ಮಾತನ್ನು ಪುನರುಚ್ಚರಿಸಿತು.

ಆದರೆ ನಂತರ, ಯುಸಿಸಿ ಜಾರಿಗೆ ಸಂಬಂಧಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿತು. ʼʼಯುಸಿಸಿ ಜಾರಿಗೆ ಸಂಬಂಧಿಸಿ ಈ ಕೋರ್ಟ್‌ಗೆ ಆಗಮಿಸುವುದು ತಪ್ಪು ಮಾರ್ಗ. ಅದು ಸಂಸತ್ತಿನ ಕಾರ್ಯಕ್ಷೇತ್ರಕ್ಕೆ ಸೇರಿದುದು.ʼʼ ಎಂದಿತು.

ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ಉತ್ತರಾಖಂಡ ಸಂಪುಟ ಗ್ರೀನ್‌ ಸಿಗ್ನಲ್;‌ ಜಾರಿಯೊಂದೇ ಬಾಕಿ

UCC ವಿರುದ್ಧವೂ ವಾದಗಳಿವೆ

21ನೇ ಕಾನೂನು ಆಯೋಗವು 2018ರ ಆಗಸ್ಟ್‌ನಲ್ಲಿ “ಕುಟುಂಬ ಕಾನೂನಿನ ಸುಧಾರಣೆ” ಕುರಿತು ವರದಿ ಮಂಡಿಸಿತು. ಅದರಲ್ಲಿ ʼʼಯುಸಿಸಿ ಈ ಹಂತದಲ್ಲಿ ಅಗತ್ಯವೂ ಇಲ್ಲ, ಅಪೇಕ್ಷಣೀಯವೂ ಅಲ್ಲ” ಎಂದು ಹೇಳಿತು. ಆದರೆ, ವೈಯಕ್ತಿಕ ಕಾನೂನುಗಳಲ್ಲಿನ ತಾರತಮ್ಯ ಮತ್ತು ಅಸಮಾನತೆಯನ್ನು ನಿಭಾಯಿಸಲು ಈ ಕೌಟುಂಬಿಕ ಕಾನೂನುಗಳ ಸುಧಾರಣೆಗೆ ಶಿಫಾರಸು ಮಾಡಿತು. ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಬಿ.ಎಸ್ ಚೌಹಾಣ್ ನೇತೃತ್ವದ ಕಾನೂನು ಆಯೋಗ ಹೀಗೆ ಹೇಳಿತು: “ಕಾಯಿದೆಗಳ ಏಕರೂಪತೆಗೆ ನಾವು ಹಠ ಹಿಡಿದು ಅದು ದೇಶದ ಸಾಂಸ್ಕೃತಿಕ ವೈವಿಧ್ಯತೆಗೂ ರಾಷ್ಟ್ರದ ಪ್ರಾದೇಶಿಕ ಸಮಗ್ರತೆಗೂ ಬೆದರಿಕೆಗೆ ಕಾರಣವಾಗಬಾರದು.ʼʼ

ಕಾಂಗ್ರೆಸ್‌, ಮುಸ್ಲಿಂ ಲೀಗ್‌ ಮುಂತಾದ ಪಕ್ಷಗಳು ನೀತಿಸಂಹಿತೆ ಜಾರಿಯನ್ನು ವಿರೋಧಿಸಿವೆ. ಮುಸ್ಲಿಮರ ಹಕ್ಕುಗಳಿಗೆ ಇದರಿಂದ ಧಕ್ಕೆ ಒದಗುತ್ತದೆ ಎಂಬುದು ಮುಸ್ಲಿಂ ಲೀಗ್‌ ವಾದ.

ಇದನ್ನೂ ಓದಿ: Uniform Civil Code: ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕೇಂದ್ರ ಮುಹೂರ್ತ ಫಿಕ್ಸ್; ವಿಧೇಯಕ ಕೂಡ ರೆಡಿ

ಬಿಜೆಪಿ, ಆರೆಸ್ಸೆಸ್‌ ಬೆಂಬಲ

ಭಾರತೀಯ ಜನತಾ ಪಾರ್ಟಿ ಹಾಗೂ ಆರೆಸ್ಸೆಸ್‌, ದೀನ್‌ದಯಾಳ ಉಪಾಧ್ಯಾಯರ ಕಾಲದಿಂದಲೇ ಯುಸಿಸಿ ಜಾರಿಯ ಬಗ್ಗೆ ಒತ್ತಿ ಹೇಳುತ್ತ ಬಂದಿದೆ. ಜವಾಹರ್‌ಲಾಲ್‌ ನೆಹರೂ, ಡಾ.ಬಿ.ಆರ್‌.ಅಂಬೇಡ್ಕರ್‌ರಂಥ ದೊಡ್ಡ ನಾಯಕರು ಕೂಡ ಇದನ್ನು ಬೆಂಬಲಿಸಿದ್ದರು.

ಯುಸಿಸಿ ಜಾರಿಯ ಲಾಭವೇನು?

Uniform Civil Code Bill In Monsoon Session
Uniform Civil Code bill to be tabled in Parliament monsoon session: Sources Say

ಸಮಾನ ನಾಗರಿಕ ಸಂಹಿತೆಯಿಂದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದಿಲ್ಲ. ಈ ಕಾನೂನು ಎಲ್ಲ ಪ್ರಜೆಗಳನ್ನು ಸಮಾನವಾಗಿ ಕಾಣುತ್ತದೆ. ಅನೇಕ ವೈಯಕ್ತಿಕ ಕಾನೂನುಗಳು ಮಹಿಳೆಯರ ಹಕ್ಕುಗಳು, ವೈವಾಹಿಕ ನಿರ್ಬಂಧಗಳು, ಆಸ್ತಿ ಹಕ್ಕುಗಳಲ್ಲಿ ತಾರತಮ್ಯಪೂರಿತವಾಗಿವೆ. ಅಂತರ್‌ಧರ್ಮೀಯ ವಿವಾಹ ಮುಂತಾದ ಪ್ರಗತಿಪರ ವಿಚಾರಗಳನ್ನು ಇವು ಪ್ರೋತ್ಸಾಹಿಸುವುದಿಲ್ಲ. ಹಿಂದೂ ವಿವಾಹ ಕಾಯ್ದೆ ಹೊರತುಪಡಿಸಿ, ಉಳಿದ ವಿವಾಹ ಕಾಯ್ದೆಗಳಲ್ಲಿ ಗಂಡನಿಂದ ಹೆಂಡತಿಗೆ ಜೀವನಾಂಶ ಸಂಬಂಧ ಸ್ಪಷ್ಟತೆ ಇಲ್ಲ. ಯುಸಿಸಿಯ ಮೂಲಕ ಇದೆಲ್ಲದಕ್ಕೂ ಒಂದು ಸಮಾನ ಪಾತಳಿ ಕಲ್ಪಿತವಾಗಲಿದೆ. ದೇಶದ ಎಲ್ಲ ಪ್ರಜೆಗಳು ಒಂದೇ ಕಾನೂನಿನಡಿಯಲ್ಲಿ ಬರುವುದರಿಂದ ವ್ಯಾಜ್ಯಗಳನ್ನು ತ್ವರಿತವಾಗಿ ಬಗೆಹರಿಸಲು ನ್ಯಾಯಾಲಯಗಳಿಗೆ ಸಾಧ್ಯವಾಗುತ್ತದೆ.

ಗೋವಾದಲ್ಲಿರುವ ನಾಗರಿಕ ಸಂಹಿತೆ ಏನು?

ಏಕರೂಪ ನಾಗರಿಕ ಸಂಹಿತೆಯನ್ನು ಪ್ರತಿಪಾದಿಸುವವರು ಗೋವಾದಲ್ಲಿ ಈಗ ಜಾರಿಯಲ್ಲಿರುವ ಏಕರೂಪ ಸಂಹಿತೆಯನ್ನು ತೋರಿಸುತ್ತಾರೆ. ಇದೊಂದು ಗಮನಾರ್ಹ ನೀತಿಸಂಹಿತೆ. 1867ರಲ್ಲಿ ಇದು ಪೋರ್ಚುಗಲ್‌ನಲ್ಲಿ ನಂತರ 1869ರಲ್ಲಿ ಗೋವಾವನ್ನೂ ಸೇರಿ ಪೋರ್ಚುಗೀಸರು ಆಡಳಿತದಲ್ಲಿದ್ದ ಎಲ್ಲ ಪ್ರಾಂತ್ಯಗಳಲ್ಲಿ ಇದು ಜಾರಿಗೆ ಬಂತು.

ಈ ಕಾನೂನಿನ ಪ್ರಕಾರ ಯಾವುದೇ ಧರ್ಮದವರ ವಿವಾಹ ನಾಗರಿಕ ಪ್ರಾಧಿಕಾರದ ಮುಂದೆ ಕಡ್ಡಾಯವಾಗಿ ನೋಂದಾವಣೆಯಾಗಬೇಕು. ಹೆಂಡತಿಯು ಗಂಡನ ಆಸ್ತಿಗೆ ಸಮಾನ ಉತ್ತರಾಧಿಕಾರಿಯಾಗಿರುತ್ತಾಳೆ. ವಿಚ್ಛೇದನದ ಸಂದರ್ಭದಲ್ಲಿ ಆಕೆ ತನ್ನ ಪತಿ ಆನುವಂಶಿಕವಾಗಿ ಪಡೆಯುವ ಸಾಮಾನ್ಯ ಸ್ವತ್ತುಗಳ ಅರ್ಧ ಪಾಲಿಗೆ ಅರ್ಹಳಾಗಿರುತ್ತಾಳೆ. ಪೋಷಕರು ಕಡ್ಡಾಯವಾಗಿ ತಮ್ಮ ಆಸ್ತಿಯಲ್ಲಿ ಅರ್ಧ ಭಾಗವನ್ನು ಹೆಣ್ಣುಮಕ್ಕಳಿಗೂ ಸೇರಿಸಿ ಹಂಚಿಕೊಳ್ಳಬೇಕು. ಆಸ್ತಿ ಹಕ್ಕುಗಳಿಗೆ ಸಂಬಂಧಿಸಿ ಈ ನೀತಿಸಂಹಿತೆ ತುಂಬಾ ಆಧುನಿಕವಾಗಿದೆ. ಆದರೆ ವಿವಾಹ ಮತ್ತು ದತ್ತು ಕಾಯಿದೆಗಳು ಇನ್ನಷ್ಟು ಸುಧಾರಿತಗೊಳ್ಳಬೇಕಿವೆ.

ಗೋವಾ ಸ್ವತಂತ್ರಗೊಂಡ ಮೇಲೂ ಈ ಕಾಯಿದೆ ಹೇಗೆ ಉಳಿಯಿತು? ʼಗೋವಾ, ದಮನ್ ಮತ್ತು ದಿಯು ಆಡಳಿತ ಕಾಯಿದೆ- 1962ʼರ ಸೆಕ್ಷನ್ 5(1) ರ ಪ್ರಕಾರ ಭಾರತ ಸರ್ಕಾರದ ಬದ್ಧತೆಯಂತೆ, ಇವು ಭಾರತೀಯ ಒಕ್ಕೂಟದಲ್ಲಿ ವಿಲೀನಗೊಳ್ಳುವ ಮುನ್ನ ಹೊಂದಿದ್ದ ಎಲ್ಲಾ ಕಾನೂನುಗಳು ಹಾಗೇ ಮುಂದುವರಿದವು. ಇಲ್ಲಿ ಶಾಸಕಾಂಗವು ಹಳೆಯ ಕಾನೂನು ರದ್ದುಪಡಿಸುವವರೆಗೆ ಅಥವಾ ನೂತನ ಕಾಯಿದೆ ಜಾರಿಗೆ ತರುವವರೆಗೆ ಅದು ಹಾಗೇ ಮುಂದುವರಿಯುತ್ತದೆ.

ಇದನ್ನೂ ಓದಿ: ವಿಸ್ತಾರ Explainer: Uniform Civil Code: ಏಕರೂಪ ನಾಗರಿಕ ಸಂಹಿತೆ ಚರ್ಚೆಯ ಕಿಡಿ ಹಾರಿಸಿದ್ದೇ ಆ ಕೇಸ್!‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

Latest

ಎಕ್ಸಿಟ್‌ ಪೋಲ್‌: ಅಸ್ಸಾಂ, ಪುದುಚೇರಿ ಪ.ಬಂಗಾಳದಲ್ಲಿ ಬಿಜೆಪಿ, ತ.ನಾಡಲ್ಲಿ ಡಿಎಂಕೆ, ಕೇರಳಂನಲ್ಲಿ ಯುಡಿಎಫ್‌

VISTARANEWS.COM


on

ಎಕ್ಸಿಟ್‌ ಪೋಲ್‌: ಅಸ್ಸಾಂ, ಪುದುಚೇರಿ ಪ.ಬಂಗಾಳದಲ್ಲಿ ಬಿಜೆಪಿ, ತ.ನಾಡಲ್ಲಿ ಡಿಎಂಕೆ, ಕೇರಳಂನಲ್ಲಿ ಯುಡಿಎಫ್‌
ಐದು ರಾಜ್ಯಗಳ ಎಕ್ಸಿಟ್‌ ಪೋಲ್‌ ಫಲಿತಾಂಶ ಹೊರಬಿದ್ದಿದೆ. ಅಸ್ಸಾಂನಲ್ಲಿ ಬಿಜೆಪಿ, ಕೇರಳದಲ್ಲಿ ಯುಡಿಎಫ್‌, ಪುದುಚೇರಿಯಲ್ಲಿ ಎನ್‌ಡಿಎ ಜಯಭೇರಿ ಬಾರಿಸಲಿದೆ ಎಂದು ಎಲ್ಲಾ ಎಕ್ಸಿಟ್‌ ಪೋಲ್‌ಗಳು ಹೇಳಿವೆ. ಆದರೆ, ಪ.ಬಂಗಾಳ ಮತ್ತು ತಮಿಳುನಾಡು ಮತದಾನೋತ್ತರ ಸಮೀಕ್ಷೆಗಳು ಮಾತ್ರ ಭಿನ್ನ ಫಲಿತಾಂಶ ನೀಡಿವೆ.
ಅಸ್ಸಾಂನಲ್ಲಿ ಕಮಲ ಕಿಲಕಿಲ:
126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ಸಾಧ್ಯತೆಯನ್ನು ಎಲ್ಲಾ ಎಕ್ಸಿಟ್‌ ಪೋಲ್‌ಗಳು ಹೇಳಿವೆ. ಹಿಮಂತ ಬಿಸ್ವ ಶರ್ಮಾ ಎರಡನೇ ಅವಧಿಗೆ ಸಿಎಂ ಆಗುವ ಸಾಧ್ಯತೆ ಹೆಚ್ಚಿವೆ. ಆಕ್ಸಿಸ್‌ ಮೈ ಇಂಡಿಯಾ, ಪಿ-ಮಾರ್ಕ್‌, ಮಾಟ್ರಿಜ್‌, ಜೆವಿಸಿ ಮತ್ತು ಚಾಣಕ್ಯ ಸ್ಟ್ರಾಟಜಿಸ್‌ ಬಿಜೆಪಿ ಭಾರೀ ಬಹುಮತ ದಾಖಲಿಸಲಿದೆ ಎಂದು ಭವಿಷ್ಯ ನುಡಿದಿವೆ. ಕಾಂಗ್ರೆಸ್‌ ಪ್ರತಿಪಕ್ಷಕ್ಕೆ ಸೀಮಿತಗೊಳ್ಳಲಿದೆ.
ಕೇರಳಂನಲ್ಲಿ ಯುಡಿಎಫ್‌ಗೆ ಅಧಿಕಾರ?:
ಕೇರಳಂ ವಿಧಾನಸಭೆಯ ಬಲ 140. ಬಹುಮತಕ್ಕೆ 71 ಸೀಟುಗಳು ಬೇಕು. ಕೇರಳಂನಲ್ಲಿ ಹ್ಯಾಟ್ರಿಕ್‌ ದಾಖಲಿಸುವ ಎಲ್‌ಡಿಎಫ್‌ ಕನಸು ನುಚ್ಚುನೂರಾಗುವ ಸಾಧ್ಯತೆಗಳಿವೆ. ಈ ಸಲ ಕಾಂಗ್ರೆಸ್‌ ನೇತೃತ್ವದ ಯುನೈಟೆಡ್‌ ಡೆಮಾಕ್ರಾಟಿಕ್‌ ಫ್ರಂಟ್‌ – ಯುಡಿಎಫ್‌, ಜಯಭೇರಿ ಬಾರಿಸಲಿದೆ ಎಂದು ಆಕ್ಸಿಸ್‌ ಮೈ ಇಂಡಿಯಾ, ಪಿ-ಮಾರ್ಕ್‌, ಮಾಟ್ರಿಜ್‌, ಮನೋರಮಾ ನ್ಯೂಸ್‌ ಸಿವೋಟರ್ಸ್‌ ಮತ್ತು ಜೆವಿಸಿ ಸಮೀಕ್ಷೆಗಳು ಹೇಳಿವೆ. ಬಿಜೆಪಿ ಕೇರಳಂನಲ್ಲಿ ಮೂರರಿಂದ ಏಳು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿವೆ.
ಪುದುಚೇರಿಯಲ್ಲಿ ಎನ್‌ಡಿಎ?:
ಪುದುಚೇರಿ ವಿಚಾರದಲ್ಲಿ ಎಕ್ಸಿಟ್‌ ಪೋಲ್‌ ಏಜೆನ್ಸಿಗಳಿಗೆ ಯಾವುದೇ ಅನುಮಾನ ಇಲ್ಲ. 30 ಸದಸ್ಯಬಲದ ಪುದುಚೇರಿ ಅಸೆಂಬ್ಲಿಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ದಿಗ್ವಿಜಯ ಬಾರಿಸಲಿದೆ ಎಂದು ಎಲ್ಲಾ ಚುನಾವಣೋತ್ತರ ಭವಿಷ್ಯ ನುಡಿದಿವೆ.
ಪ. ಬಂಗಾಳದಲ್ಲಿ ದೀದಿಯೋ, ಮೋದಿಯೋ?
ಪಶ್ಚಿಮ ಬಂಗಾಳದ ಎಕ್ಸಿಟ್‌ ಪೋಲ್‌ನಲ್ಲಿ ಏಕಮತ ಇಲ್ಲ. 6 ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, 4 ಸಮೀಕ್ಷೆಗಳು ಬಿಜೆಪಿ ಗೆಲುವಿನ ಭವಿಷ್ಯ ನುಡಿದಿವೆ. 2 ಸಮೀಕ್ಷೆಗಳು ಟಿಎಂಸಿಯೇ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಿವೆ. ಪಿ-ಮಾರ್ಕ್‌, ಮಾಟ್ರಿಜ್‌, ಜೆವಿಸಿ, ಚಾಣಕ್ಯ ಈ ನಾಲ್ಕು ಸಮೀಕ್ಷೆಗಳಲ್ಲಿ ಬಿಜೆಪಿ ಸರಿಸುಮಾರು 150ಕ್ಕೂ ಅಧಿಕ ಸೀಟು ಗಳಿಸುವ ಸಾಧ್ಯತೆಗಳಿವೆ ಎಂದು ಹೇಳಿವೆ. ಪೀಪಲ್ಸ್‌ ಪಲ್ಸ್‌, ಜನಮತ ಪೋಲ್ಸ್‌ ಈ ಎರಡೂ ಸಮೀಕ್ಷೆಗಳ ಪ್ರಕಾರ ಟಿಎಂಸಿ 170ರಿಂದ 200 ಸೀಟು ಗೆದ್ದು ಅಧಿಕಾರದಲ್ಲಿ ಮುಂದುವರಿಯಲಿದೆ. ಅಂದ ಹಾಗೆ, 294 ಸದಸ್ಯ ಬಲದ ಪ.ಬಂಗಾಳ ಅಸೆಂಬ್ಲಿಯಲ್ಲಿ ಅಧಿಕಾರಕ್ಕೇರಲು 147 ಸೀಟುಗಳನ್ನು ಗೆಲ್ಲಲೇ ಬೇಕು.
ದ್ರಾವಿಡ ದಂಗಲ್‌ನಲ್ಲಿ ಅಚ್ಚರಿ ಫಲಿತಾಂಶ?:
ತಮಿಳುನಾಡಿನಲ್ಲಿ ಬಹುತೇಕ ಎಲ್ಲಾ ಎಕ್ಸಿಟ್‌ ಪೋಲ್‌ಗಳು ಡಿಎಂಕೆ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಭವಿಷ್ಯ ನುಡಿದಿವೆ. ಎಐಎಡಿಎಂಕೆ ನೇತೃತ್ವದ ಎನ್‌ಡಿಎ 50 ರಿಂದ 80 ಸ್ಥಾನಗಳನ್ನು ಗಳಿಸುವ ಸಾಧ್ಯತೆಗಳಿವೆ. ಆದರೆ, ಇಲ್ಲೊಂದು ಟ್ವಿಸ್ಟ್‌ ಇದೆ. ಆಕ್ಸಿಸ್‌ ಮೈ ಇಂಡಿಯಾ ಮಾತ್ರ ವಿಜಯ್‌ ನೇತೃತ್ವದ ಟಿವಿಕೆಗೆ ಬಹುಮತ ಸಿಗಲಿದೆ ಎಂದು ಹೇಳಿದೆ. ದಳಪತಿ ವಿಜಯ್‌ ನೇತೃತ್ವದ ಟಿವಿಕೆ ತನ್ನ ಚೊಚ್ಚಲ ಯತ್ನದಲ್ಲೇ 98ರಿಂದ 120 ಸ್ಥಾನ ಗಳಿಸುವ ಸಾಧ್ಯತೆಗಳಿವೆ ಎಂದು ಆಕ್ಸಿಸ್‌ ಮೈ ಇಂಡಿಯಾ ಹೇಳಿವೆ. 234 ಸದಸ್ಯಬಲದ ತಮಿಳುನಾಡು ಅಸೆಂಬ್ಲಿಯಲ್ಲಿ ಅಧಿಕಾರಕ್ಕೇರಲು 117 ಸೀಟುಗಳು ಬೇಕು.

Continue Reading

Latest

ತಮಿಳುನಾಡಿನಲ್ಲಿ ದಳಪತಿಯೇ ಅಧಿಪತಿ? ಎಂಜಿಆರ್‌ ಆಗ್ತಾರಾ ವಿಜಯ್‌?

VISTARANEWS.COM


on

ದ್ರಾವಿಡ ದಂಗಲ್‌ನಲ್ಲಿ ಅಚ್ಚರಿಯ ಫಲಿತಾಂಶದ ಸಾಧ್ಯತೆಯೊಂದನ್ನು ಎಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಟಿಸಿದೆ. ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಟಿವಿಕೆ ನಾಯಕ ವಿಜಯ್‌ ಮೊದಲ ಪ್ರಯತ್ನದಲ್ಲೇ ಅಭೂತಪೂರ್ವ ಯಶಸ್ಸು ಗಳಿಸಿದ್ದಾರೆ. ತಮಿಳುನಾಡಿನ ಎಲ್ಲಾ ಸಮೀಕ್ಷೆಗಳು ಡಿಎಂಕೆ ಅಧಿಕಾರಕ್ಕೇರಲಿದೆ ಎಂದು ಹೇಳುತ್ತಿರುವಾಗಲೇ, ಆಕ್ಸಿಸ್‌ ಮೈ ಇಂಡಿಯಾ ಮಾತ್ರ ಈ ಸಲ ವಿಜಯ್‌ ನಿಜವಾದ ಜನನಾಯಗನ್‌ ಎಂದಿದೆ.
ತಮಿಳುನಾಡಿನ ಸಾರಥ್ಯ ವಿಜಯ್‌ಗೆ?
ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಟಿವಿಕೆಗೆ 98 ರಿಂದ 120 ಸೀಟುಗಳು ಸಿಗಲಿವೆ. ಡಿಎಂಕೆ-ಕಾಂಗ್ರೆಸ್‌ ಮೈತ್ರಿಕೂಟಕ್ಕೆ 92ರಿಂದ 110 ಹಾಗೂ 22ರಿಂದ 32 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲ್ಲುವ ಸಾಧ್ಯತೆಗಳಿವೆ. 234 ಸದಸ್ಯಬಲದ ತಮಿಳುನಾಡು ಅಸೆಂಬ್ಲಿಯಲ್ಲಿ 117 ಸೀಟು ಗೆಲ್ಲುವ ಪಕ್ಷದ ನಾಯಕ ಮುಖ್ಯಮಂತ್ರಿ ಆಗ್ತಾರೆ. ಸಮೀಕ್ಷೆ ಪ್ರಕಾರ ಟಿವಿಕೆ ಗರಿಷ್ಠ 120 ಸೀಟು ಗೆಲ್ಲುವ ಸಾಧ್ಯತೆಗಳಿವೆ.̇̇̇
ವೋಟ್‌ ಶೇರ್‌ನಲ್ಲೂ ಟಿವಿಕೆ ದಿಗ್ವಿಜಯ?
ಆಕ್ಸಿಸ್‌ ಮೈ ಇಂಡಿಯಾ ವೋಟ್‌ ಶೇರ್‌ ಸಮೀಕ್ಷೆಯನ್ನೂ ಪ್ರಕಟಿಸಿದೆ. ಅದರ ಪ್ರಕಾರ ಟಿವಿಕೆಗೆ ಶೇಕಡಾ 35ರಷ್ಟು ಮತ ಸಿಗಲಿದೆ. ಸ್ಟಾಲಿನ್‌ ನೇತೃತ್ವದ ಡಿಎಂಕೆ-ಕಾಂಗ್ರೆಸ್‌ ಮೈತ್ರಿಕೂಟಕ್ಕೂ ಶೇ. 35ರಷ್ಟು ವೋಟ್‌ ಶೇರ್‌ ಸಿಗಲಿದೆ. ಎನ್‌ಡಿಎಗೆ 23 ಶೇಕಡಾ ಮತ ಸಿಗುವ ಸಾಧ್ಯತೆಗಳಿವೆ.
ಸಿಎಂ ಸ್ಥಾನಕ್ಕೆ ವಿಜಯ್‌ ಬೆಸ್ಟ್‌?
ಮುಖ್ಯಮಂತ್ರಿ ಸ್ಥಾನಕ್ಕೆ ಯಾರು ಉತ್ತಮ ಅಭ್ಯರ್ಥಿ ಎಂಬ ಪ್ರಶ್ನೆಯನ್ನೂ ಆಕ್ಸಿಸ್‌ ಮೈ ಇಂಡಿಯಾ ಜನರ ಮುಂದಿಟ್ಟಿದೆ. ಅದರ ಪ್ರಕಾರ ಶೇ. 37ರಷ್ಟು ಮತದಾರರು ವಿಜಯ್‌ ಪರ ಒಲವು ತೋರಿದ್ದಾರೆ. ಶೇ. 35ರಷ್ಟು ಮಂದಿ ಮಾತ್ರ ಸ್ಟಾಲಿನ್‌ ಬೆಸ್ಟ್‌ ಅಂದಿದ್ದಾರೆ.
ವಿಜಯ್‌ಗೆ ಯುವ ಸಮೂಹದ ಬೆಂಬಲ
ಸರ್ವೇ ಪ್ರಕಾರ ಶೇ. 68ರಷ್ಟು ಹೊಸ ವೋಟರ್ಸ್‌ ವಿಜಯ್‌ಗೆ ಬೆಂಬಲ ನೀಡಿದ್ದಾರೆ. 20ರಿಂದ 29 ವಯೋಮಾನದ ಶೇ. 59ರಷ್ಟು ಯುವಕರು ಟಿವಿಕೆಗೆ ಜೈ ಎಂದಿದ್ದಾರೆ. 30-39 ವಯೋಮಾನದ ಶೇ. 45 ಮಂದಿ ದಳಪತಿಯನ್ನು ದಡಮುಟ್ಟಿಸಿದ್ದಾರೆ ಎನ್ನುತ್ತಿದೆ ಸಮೀಕ್ಷೆ.

Continue Reading

Latest

ರಾಜ್ಯದಲ್ಲಿ ನಾಯಕತ್ವ ಗೊಂದಲ: “ಸದ್ಯಕ್ಕೆ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ” – ಖರ್ಗೆ ಸ್ಪಷ್ಟನೆ

VISTARANEWS.COM


on

ಸದ್ಯಕ್ಕೆ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳುವ ಮೂಲಕ ನಾಯಕತ್ವ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಕಲಬುರಗಿಯಲ್ಲಿ ಇಂದು ಮಾತನಾಡಿದ ಅವರು ಈಗಾಗಲೇ ರಾಜ್ಯದಲ್ಲಿ ಸಿಎಂ ಇದ್ದಾರೆ. ಹೀಗಾಗಿ ಸದ್ಯಕ್ಕೆ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಭವಿಷ್ಯದಲ್ಲಿ ಅಂಥ ಪರಿಸ್ಥಿತಿ ಬಂದರೆ ನಾವು ಎಲ್ಲರೂ ಕೂಡಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಸಿಎಂ ಸ್ಥಾನಕ್ಕೆ ಸಂಬಂಧಿಸಿದಂತೆ ವಿವಿಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರು ಏನು ಹೇಳುತ್ತಾರೆ ಎನ್ನುವುದಕ್ಕಿಂತ ಪಕ್ಷದ ಐಡಿಯಾಲಜಿ ಮತ್ತು ಹಲವು ವರ್ಷಗಳ ಪರಿಶ್ರಮ ಮುಖ್ಯ ಎಂದು ಹೇಳಿಕೆ ನೀಡಿದ್ದಾರೆ. ಪಕ್ಷದ ಮಹತ್ವದ ನಿರ್ಧಾರಗಳನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

Continue Reading

Latest

ಬೌರಿಂಗ್‌ ಆಸ್ಪತ್ರೆ ಕಾಂಪೌಂಡ್‌ ಕುಸಿದು 7 ಮಂದಿ ಬಲಿ

VISTARANEWS.COM


on

ಬೆಂಗಳೂರು: ಇಂದು ಸಂಜೆ ನಗರದಲ್ಲಿ ಸುರಿದ ಭಾರಿ ಮಳೆಗೆ ಶಿವಾಜಿನಗರ ಬಸ್‌ ನಿಲ್ದಾಣದ ಸಮೀಪವಿರುವ ಬೌರಿಂಗ್‌ ಆಸ್ಪತ್ರೆಯ ಕಾಂಪೌಂಡ್‌ ಗೋಡೆ ಕುಸಿದು 7 ಜನ ಸಾವನ್ನಪ್ಪಿದ್ದಾರೆ. ಮೃತರು ಬೀದಿಬದಿ ವ್ಯಾಪಾರಿಗಳು ಎಂದು ತಿಳಿದುಬಂದಿದೆ. 11 ಜನ ಗಾಯಾಳುಗಳನ್ನು ಆಸ್ಪತ್ರೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಅವಶೇಷಗಳಡಿ ಮತ್ತಷ್ಟು ಜನ ಸಿಲುಕಿರುವ ಶಂಕೆಯಿದ್ದು, ರಕ್ಷಣಾಕಾರ್ಯ ಮುಂದುವರೆಸಲಾಗಿದೆ. ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Continue Reading
Advertisement
Latest8 hours ago

ಜನಪ್ರಿಯತೆಯಲ್ಲಿ ಪ್ರಧಾನಿ ಮೋದಿ ಈಗಲೂ ನಂ.1

Latest8 hours ago

ಕುರ್ಚಿ ಕದನಕ್ಕೆ ಹೊಸ ಟ್ವಿಸ್ಟ್ : ದಲಿತ ಸಿಎಂ ಕೂಗು ಜೋರು

Latest8 hours ago

ಟಿವಿಕೆ-ಎನ್‌ಡಿಎ ಮೈತ್ರಿ?, ತಮಿಳುನಾಡಿನಲ್ಲಿ ಸಂಚಲನ, ಸ್ಟಾಲಿನ್‌ ಸಭೆ

Latest11 hours ago

ಎಕ್ಸಿಟ್‌ ಪೋಲ್‌: ಅಸ್ಸಾಂ, ಪುದುಚೇರಿ ಪ.ಬಂಗಾಳದಲ್ಲಿ ಬಿಜೆಪಿ, ತ.ನಾಡಲ್ಲಿ ಡಿಎಂಕೆ, ಕೇರಳಂನಲ್ಲಿ ಯುಡಿಎಫ್‌

Latest11 hours ago

ತಮಿಳುನಾಡಿನಲ್ಲಿ ದಳಪತಿಯೇ ಅಧಿಪತಿ? ಎಂಜಿಆರ್‌ ಆಗ್ತಾರಾ ವಿಜಯ್‌?

Latest13 hours ago

ಪಂಚರಾಜ್ಯ ಚುನಾವಣಾ ಫಲಿತಾಂಶ: “ಎಕ್ಸಿಟ್ ಪೋಲ್‌ಗಿಂತ ಉತ್ತಮ ಪ್ರದರ್ಶನ ನಿರೀಕ್ಷೆ” – ಖರ್ಗೆ

Latest13 hours ago

ರಾಜ್ಯದಲ್ಲಿ ನಾಯಕತ್ವ ಗೊಂದಲ: “ಸದ್ಯಕ್ಕೆ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ” – ಖರ್ಗೆ ಸ್ಪಷ್ಟನೆ

Latest14 hours ago

ಬೆಂಗಳೂರು ಸೇರಿದಂತೆ 18 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್: ಇಂದು ಮತ್ತು ನಾಳೆ ಆಲಿಕಲ್ಲು ಮಳೆ ಸಾಧ್ಯತೆ

Latest1 day ago

ಬೌರಿಂಗ್‌ ಆಸ್ಪತ್ರೆ ಕಾಂಪೌಂಡ್‌ ಕುಸಿದು 7 ಮಂದಿ ಬಲಿ

Latest1 day ago

ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌