ಬೆಂಗಳೂರು: ನಟ ದರ್ಶನ್ (Actor Darshan) ಗ್ಯಾಂಗ್‌ನಿಂದ ನಡೆದ ರೇಣುಕಾಸ್ವಾಮಿ ಕೊಲೆ (Renuka Swamy Murder) ಪ್ರಕರಣದ ವಿಚಾರಣೆಗೆ ಮತ್ತೊಂದು ಟ್ವಿಸ್ಟ್ ದೊರೆತಿದೆ. ಮೃತ ರೇಣುಕಾಸ್ವಾಮಿ ಶವ ಪೋಸ್ಟ್ ಮಾರ್ಟಮ್ (Post Martem) ನಡೆಸಿದ ವೈದ್ಯ ಬೇರೆ ಯಾರೂ ಅಲ್ಲ, ಜೈಲಿನಲ್ಲಿ ದರ್ಶನ್ ಹಾಗೂ ಪವಿತ್ರ ಗೌಡ (Pavitra Gowda) ಅವರನ್ನು ಭೇಟಿಯಾಗಿದ್ದ ಪವಿತ್ರ ಆಪ್ತೆ ಸಮತ ಅವರ ಪತಿ!
ಅಂದರೆ, ಈ ಪ್ರಕರಣದ ಸಾಕ್ಷ್ಯಗಳನ್ನು ತಿರುಚುವಲ್ಲಿ ಸಮತ ಕೈವಾಡ ಇದೆಯಾ, ಇದ್ದರೆ ಎಷ್ಟು ಎನ್ನುವ ಬಗ್ಗೆ ಈಗ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ. ಆ ಶಾಕಿಂಗ್ ಸ್ಟೋರಿಯ ಕಥನಾಯಕಿಯೇ ಪವಿತ್ರಗೌಡ ಸ್ನೇಹಿತೆ ಸಮತ. ಕೊಲೆ ಕೇಸ್‌ನಲ್ಲಿ ಜೈಲುಪಾಲಾಗಿರುವ ಪವಿತ್ರ ಗೌಡಳನ್ನು ಸಮತ ಭೇಟಿ ಮಾಡಿದ್ದಳು. ಪವಿತ್ರ ಗೌಡ ಮಾತ್ರವಲ್ಲದೇ ದರ್ಶನ್ ಜೊತೆಗೂ ಮಾತುಕತೆ ನಡೆಸಿದ್ದಳು. ಸಮತಳ ಜೈಲು ಭೇಟಿಯಿಂದ ತನಿಖಾಧಿಕಾರಿಗಳ ತಲೆಯಲ್ಲಿ ಅನುಮಾನ ಮೂಡಿತ್ತು. ಡೌಟ್ ಹಿನ್ನೆಲೆಯಲ್ಲಿ, ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿ ನೋಟೀಸ್ ನೀಡಿದ್ದರು.
ಸಮತಳನ್ನು ಆಡುಗೋಡಿ ಟೆಕ್ನಿಕಲ್ ಸೆಲ್‌ನಲ್ಲಿ ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ, ಪೊಲೀಸರೇ ಒಂದು ಕ್ಷಣ ಶಾಕ್ ಆಗುವಂಥ ಸಂಗತಿ ಬೆಳಕಿಗೆ ಬಂದಿತ್ತು. ಆ ವಿಚಾರ, ರೇಣುಕ ಸ್ವಾಮಿ ದೇಹದ ಪೋಸ್ಟ್‌ಮಾರ್ಟಮ್ ಮಾಡಿದ ವೈದ್ಯರ ಮೇಲೂ ಪೊಲೀಸರಿಗೆ ಅನುಮಾನ ಮೂಡಿಸುವಂತಿತ್ತು. ಆ ಅನುಮಾನ ಮೂಡಲು ಕಾರಣವಾದದ್ದು ಸಮತಳ ಪತಿಯ ವರ್ತನೆ. ಸಮತಳಿಂದ ಪವಿತ್ರ ಗೌಡ ಹಾಗೂ ದರ್ಶನ್ ಭೇಟಿ ಬಳಿಕ ಕೇಸ್‌ನಲ್ಲಿ ಈ ಬಿಗ್ ಟ್ವಿಸ್ಟ್ ದೊರೆತಿದೆ.
ಶಾಕಿಂಗ್ ಸಂಗತಿ ಏನು ಅಂದರೆ ರೇಣುಕಾ ಸ್ವಾಮಿಯ ಶವ ಪೋಸ್ಟ್‌ಮಾರ್ಟಮ್ ಮಾಡಿದ್ದೇ ಸಮತಳ ಪತಿ! ಸಮತ ಪತಿ ಡಾ. ಸುರೇಶ್ ಅವರಿಂದ ರೇಣುಕಾ ಸ್ವಾಮಿ ಶವದ ಮರಣೋತ್ತರ ಪರೀಕ್ಷೆ ನಡೆದಿತ್ತು. ಆ ಮರಣೋತ್ತರ ಪರೀಕ್ಷೆ ಪೊಲೀಸರ ಕೈ ಸೇರುವ ಮೊದಲೇ ಜೈಲಿನಲ್ಲಿ ದರ್ಶನ್ ಹಾಗೂ ಪವಿತ್ರರನ್ನು ಸಮತ ಭೇಟಿ ಮಾಡಿದ್ದಳು. ಹಾಗಾದರೆ ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿದ್ದುವ ಯತ್ನ ನಡೆದಿತ್ತೇ? ಈ ಅನುಮಾನದಲ್ಲಿ ಸಮತಳನ್ನು ತನಿಖಾ ತಂಡ ತೀವ್ರ ವಿಚಾರಣೆಗೆ ಒಳಪಡಿಸಿತ್ತು.
ತನಿಖೆಗೊಳಪಡಿಸಿ ಸಮತ ನೀಡಿದ ಹೇಳಿಕೆಯನ್ನು ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ. ಜೊತೆಗೆ ಸಮತ ಪತಿ ಡಾ. ಸುರೇಶ್ ಅವರ ಕಾಲ್ ಡಿಟೇಲ್ಸ್, ಚಾಟಿಂಗ್ಸ್ ಪರಿಶೀಲಿಸಲಾಗಿದೆ. ರೇಣುಕಾ ಸ್ವಾಮಿ ಶವ ಮರಣೋತ್ತರ ಪರೀಕ್ಷೆ ನಡೆಸುವ ವೇಳೆ, ತಮ್ಮ ಡ್ಯೂಟಿಗೆ ರಜೆ ಇದ್ದರೂ ಸುರೇಶ್ ಕರ್ತವ್ಯಕ್ಕೆ ಹಾಜರಾಗಿದ್ದರು. ತಾನೇ ಖುದ್ದು ಮುಂದೆ ನಿಂತು ರೇಣುಕಾಸ್ವಾಮಿ ಶವ ಮರಣೋತ್ತರ ಪರೀಕ್ಷೆ ಮಾಡಿಸಿದ್ದರು.
ಪವಿತ್ರ ಗೌಡ ಕ್ಲೋಸ್ ಫ್ರೆಂಡ್ ಪತಿಯಾಗಿರುವ ಕಾರಣ ಮರಣೋತ್ತರ ಪರೀಕ್ಷೆ ವರದಿಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಲಾಗುತ್ತಿದೆ. ಪರಿಶೀಲನೆ ನಡೆಸಿ ಡಾ. ಪ್ರದೀಪ್ ಎಂಬ ವೈದ್ಯರಿಂದ ಪೊಲೀಸರಿಗೆ ಮತ್ತೆ ಮರಣೋತ್ತರ ಪರೀಕ್ಷಾ ವರದಿ ಸಲ್ಲಿಕೆ ಮಾಡಲಾಗುತ್ತಿದೆ. ಜೈಲಿಗೆ ತರಾತುರಿಯಿಂದ ಬಂದು ದರ್ಶನ್ ಹಾಗೂ ಪವಿತ್ರರನ್ನು ಭೇಟಿಯಾದದ್ದೇ ಇದೀಗ ಈ ಪ್ರಕರಣದ ಸಾಕ್ಷಿ ನಾಶದ ಪ್ರಯತ್ನದಲ್ಲಿ ಇನ್ನೊಂದು ಬಿಗ್ ಟ್ವಿಸ್ಟ್ ನೀಡಿದೆ.
ಇದನ್ನೂ ಓದಿ: Actor Darshan: ಪವಿತ್ರಾ ಗೌಡ ಆರೋಗ್ಯದಲ್ಲೂ ಏರುಪೇರು; ಚಿಕಿತ್ಸೆ ನೀಡಿದ ವೈದ್ಯರು