ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renuka Swamy murder case) ಈಗಾಗಲೇ ದರ್ಶನ್ ಸೇರಿ 13 ಆರೋಪಿಗಳನ್ನು (Actor Darshan) ಪೊಲೀಸರು ಅರೆಸ್ಟ್ ಮಾಡಿದ್ದು, ಮತ್ತಷ್ಟು ಆರೋಪಿಗಳು ಸೆರೆಯಾಗುವ ಸಾಧ್ಯತೆ ಇದೆ. ಈ ನಡುವೆ ಹಂತಕರಿಗೆ ನೀಡಲು ಆರೋಪಿ ವಿನಯ್ ಮಾಲೀಕತ್ವದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ಇಟ್ಟಿದ್ದ 30 ಲಕ್ಷ ರೂ.ಗಳನ್ನು ಜಪ್ತಿ ಮಾಡಲಾಗಿದೆ.
ಆರ್.ಆರ್.ನಗರದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ಆರೋಪಿಗಳ ತಂಡ ಪಾರ್ಟಿ ಮಾಡಿತ್ತು. ವಿನಯ್ ಮಾಲೀಕತ್ವದ ರೆಸ್ಟೋರೆಂಟ್‌ನಲ್ಲಿ ಪೊಲೀಸರು ಶೋಧ ನಡೆಸಿದ್ದು, ಈ ವೇಳೆ 30 ಲಕ್ಷ ಹಣ ಸೀಜ್ ಮಾಡಲಾಗಿದೆ. ಇದು ಕೊಲೆ ಆರೋಪ ಹೊರುವ ಯುವಕರಿಗೆ ನೀಡಲು ಇಟ್ಟಿದ್ದ ಹಣ ಎನ್ನಲಾಗಿದೆ. ಕೊಲೆ ನಾವೇ ಮಾಡಿದ್ದು ಎಂದು ಒಪ್ಪಿಕೊಂಡು ಬಂದಿದ್ದ ರಾಘವೇಂದ್ರ, ಕಾರ್ತಿಕ್, ನಿಖಿಲ್ ನಾಯಕ್, ಕೇಶವಮೂರ್ತಿಗೆ ತಲಾ 5 ಲಕ್ಷ ನೀಡಲು ಹಣ ಇಡಲಾಗಿತ್ತು.
ಪವಿತ್ರಾ ಗೌಡ ಕಾಲಿಗೆ ಬಿದ್ದರೂ ಕರಗಲಿಲ್ಲ ಆರೋಪಿಗಳ ಮನಸ್ಸು
ಹಲ್ಲೆ ಸಮಯದಲ್ಲಿ ಪವಿತ್ರಾ ಗೌಡ ಕಾಲಿಗೆ ರೇಣುಕಾಸ್ವಾಮಿಯನ್ನು ಬೀಳಿಸಿ ಡಿ ಗ್ಯಾಂಗ್ ಕ್ಷಮಾಪಣೆ ಕೇಳಿಸಿತ್ತು ಎನ್ನಲಾಗಿದೆ. ಅಕ್ಕನ ಕಾಲಿಗೆ ಬೀಳೋ ಎಂದು ಸೂ… ಮಗನನೇ ಎಂದು ಹಿಂಸೆ ನೀಡಲಾಗಿದೆ. ದರ್ಶನ್ ಹೊಡೆತಕ್ಕೆ ನೋವು ತಾಳಲಾರದೆ ಪವಿತ್ರಾ ಗೌಡ ಕಾಲಿಗೆ ಬಿದ್ದು ರೇಣುಕಾಸ್ವಾಮಿ ಅಂಗಲಾಚಿಕೊಂಡಿದ್ದ. ಮೆಡ್ಂ ತಪ್ಪಾಯಿತು, ಕ್ಷಮಿಸಿ ಬಿಡಿ, ನಿಮ್ಮ ಕಾಲು ಹಿಡಿದುಕೊಳ್ತೇನೆ ಎಂದು ಗೋಗರೆದಿದ್ದ. ಆಗ ತಪ್ಪಾಯಿತು ಸಾರ್ ಎಂದು ಕಾಲಿಗೆ ಬಿದ್ದಾಗ, ದರ್ಶನ್ ಎಗರಿಸಿ ಒದ್ದಿದ್ದರು. ಪೊಲೀಸರು ಸ್ಥಳ ಮಹಜರು ಮಾಡುವಾಗ ಈ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಇದನ್ನೂ ಓದಿ | Actor Darshan: ಹಲವು ವರ್ಷಗಳಿಂದ ದರ್ಶನ್ ಆಪ್ತ ʻಮಲ್ಲಿʼನಾಪತ್ತೆ; ರೇಣುಕಾ ಸ್ವಾಮಿಯ ಗತಿಯೇ ಆಯ್ತಾ?
ಎ13 ಆರೋಪಿಯ ರಕ್ಷಣೆಗೆ ಪೊಲೀಸರ ಯತ್ನ?
ಪ್ರಕರಣದಲ್ಲಿ ಎ13 ಆರೋಪಿಯ ರಕ್ಷಣೆಗೆ ಪೊಲೀಸರು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆರೋಪಿ ದೀಪಕ್ ಬಗ್ಗೆ ಮಾಹಿತಿ ಬಹಿರಂಗಪಡಿಸದಂತೆ ಒತ್ತಡ ಹೇರಲಾಗಿದೆ. ದೀಪಕ್ ಪೋಟೋ ಲೀಕ್ ಮಾಡದಂತೆಯೂ ದೊಡ್ಡ ಮೊತ್ತದ ಡೀಲ್‌ಗ ಮುಂದಾದ ಆರೋಪ ಕೇಳಿಬಂದಿದೆ. ಆದರೆ ಹಂತಕ ದೀಪಕ್ ಪೋಟೋ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ. ದೀಪಕ್, ಪ್ರಭಾವಿ ರಾಜಕಾರಣಿ ಸೋದರಿಯ ಮಗಳ ಪತಿ ಎಂದು ತಿಳಿದುಬಂದಿದೆ.