ಚಿಕ್ಕಮಗಳೂರು: ಅಯೋಧ್ಯೆ ಶ್ರೀರಾಮ ಮಂದಿರದ (Ayodhya Ram Mandir) ಆರಾಧ್ಯ ಮೂರ್ತಿ ಬಾಲಕ ರಾಮ (Balak Ram) ನಿಗೆ ಬೆಳ್ಳಿಯ ಬಿಲ್ಲು-ಬಾಣ (Silver bow, silver Arrow) ಸಮರ್ಪಿಸಲಾಗುತ್ತಿದೆ. ಬೆಂಗಳೂರು ಮೂಲದ ಭಕ್ತರೊಬ್ಬರು ಬೆಳ್ಳಿಯ ಬಿಲ್ಲು-ಬಾಣ ಸಮರ್ಪಣೆ ಮಾಡುತ್ತಿದ್ದು, ಅದಕ್ಕೂ ಮೊದಲು ಶೃಂಗೇರಿಯ ಶಾರದಾ ಪೀಠದಲ್ಲಿ (Sringeri Sharada Peetham) ಶ್ರೀ ಗುರುಗಳ ಮುಂದೆ ಅದನ್ನು ಪ್ರದರ್ಶಿಸಿದರು.
ಅತ್ಯಂತ ಸುಂದರ ಹಾಗೂ ಮನಮೋಹಕವಾದ, ಬೆಳ್ಳಿಯಿಂದ ಮಾಡಲಾದ ಈ ಬಿಲ್ಲು-ಬಾಣವನ್ನು ಶೃಂಗೇರಿ ಹಿರಿಯ ಹಾಗೂ ಕಿರಿಯ ಶ್ರೀಗಳು ಪೂಜಿಸಿ ಕಳಿಸಿಕೊಟ್ಟರು. ಶೃಂಗೇರಿ ಹಿರಿಯ ಶ್ರೀಗಳಾದ ಜಗದ್ಗುರು ಶ್ರೀ ಭಾರತೀ ತೀರ್ಥರು ಹಾಗೂ ಕಿರಿಯ ಶ್ರೀಗಳಾದ ಶ್ರೀ ವಿಧುಶೇಖರ ಭಾರತೀ ತೀರ್ಥರು (sri vidhushekhara bharati Teertha) ಈ ಸಂದರ್ಭದಲ್ಲಿ ಹಾಜರಿದ್ದು, ಬೆಳ್ಳಿಯ ಬಿಲ್ಲು- ಬಾಣದ ಅಂದಚಂದವನ್ನು ಸವಿದರು. ನಂತರ ಅದನ್ನು ಅಯೋಧ್ಯೆಗೆ ಕೊಂಡೊಯ್ಯಲಾಯಿತು.
ರಾಮ ಮಂದಿರದ ಪ್ರತಿಷ್ಠಾಪನೆಗೆ ಶೃಂಗೇರಿ ಶ್ರೀಗಳನ್ನು ಆಹ್ವಾನಿಸಲಾಗಿತ್ತು. ಶ್ರೀಗಳು ಶುಭಹಾರೈಕೆಯ ಸಂದೇಶವನ್ನು ಕಳಿಸಿಕೊಟ್ಟಿದ್ದರಲ್ಲದೆ, ಆ ದಿನ ಮಠದಲ್ಲಿ ಹಾಗೂ ಶಾಖಾಮಠಗಳಲ್ಲಿ ಶ್ರೀರಾಮನ ಆರಾಧನೆಗೆ ನಿರ್ದೇಶನ ನೀಡಿದ್ದರು.
ಚಿನ್ನದ ಬಿಲ್ಲು ಬಾಣ
ಪ್ರಸ್ತುತ ಅಯೋಧ್ಯಾ ರಾಮನ ಕೈಯಲ್ಲಿ ಚಿನ್ನದ ಬಿಲ್ಲು ಬಾಣ ಇವೆ. ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೂ ಮುನ್ನವೇ ಹಲವು ಅಮೂಲ್ಯ ಉಡುಗೊರೆಗಳು ಅಯೋಧ್ಯೆಯನ್ನು ತಲುಪಿದ್ದವು. ದೇಶಾದ್ಯಂತ ಹಲವು ಭಕ್ತರು ಅನೇಕ ಉಡುಗೊರೆಗಳನ್ನು ಶ್ರೀರಾಮನಿಗಾಗಿ ಅಯೋಧ್ಯೆಗೆ ಕಳಿಸಿದ್ದರು. ಅತ್ತ ನೇಪಾಳದಿಂದಲೂ ಅತ್ಯಮೂಲ್ಯ ವಸ್ತುಗಳು ಅಯೋಧ್ಯೆ ಸೇರಿದ್ದವು. ಶ್ರೀರಾಮನಿಗಾಗಿ ಚಿನ್ನದ ಬಿಲ್ಲು (golden bow), ಚಿನ್ನದ ಬಾಣ (golden arrow), ಚಿನ್ನದ ಘಂಟೆ (golden bell) ಸೇರಿದಂತೆ ಹಲವು ಅಮೂಲ್ಯ ವಸ್ತುಗಳು ಬಂದಿದ್ದವು.
ಒನವಿಲ್ಲು ಸಮರ್ಪಣೆ
ಕೇರಳದ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನವು (Padmanabhaswamy Temple) ಕೂಡ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರದ (Ayodhya Ram Mandir) ಪ್ರತಿಷ್ಠಾಪನೆ ಸಮಾರಂಭದ ಸಂದರ್ಭದಲ್ಲಿ ಸಾಂಪ್ರದಾಯಿಕ ಬಿಲ್ಲು ‘ಒನವಿಲ್ಲು’ (Onavillu) ಸಮರ್ಪಿಸಿತ್ತು. ‘ಒನವಿಲ್ಲು’ ಮೂರು ಶತಮಾನಗಳ ಹಳೆಯ ಸಂಪ್ರದಾಯದ ಭಾಗವಾಗಿ ಭಗವಾನ್ ಶ್ರೀ ಪದ್ಮನಾಭನಿಗೆ ಸಮರ್ಪಿತವಾದ ವಿಧ್ಯುಕ್ತ ಅರ್ಪಣೆಯಾಗಿದೆ. ಇಲ್ಲಿನ ಸ್ಥಳೀಯರು ಇದನ್ನು ಪ್ರತಿ ವರ್ಷ ‘ತಿರು ಓಣಂ’ ಹಬ್ಬದಂದು ಪದ್ಮನಾಭ ದೇವಸ್ಥಾನಕ್ಕೆ ಅರ್ಪಿಸುತ್ತಾರೆ. ಭಕ್ತರಿಂದ ಪವಿತ್ರವೆಂದು ಪರಿಗಣಿಸಲ್ಪಟ್ಟಿರುವ ‘ವಿಲ್ಲು’ ಸಾಮಾನ್ಯವಾಗಿ ಬಿಲ್ಲಿನ ಆಕಾರದ ಮರದ ಫಲಕವಾಗಿದ್ದು, ಅನಂತಶಯನಂ ಪೌರಾಣಿಕ ಸರ್ಪ ಅನಂತ, ದಶಾವತಾರಂ ವಿಷ್ಣುವಿನ ಅವತಾರಗಳು, ಶ್ರೀರಾಮ ಪಟ್ಟಾಭಿಷೇಕ ಮುಂತಾದ ವರ್ಣಚಿತ್ರಗಳನ್ನು ಹೊಂದಿದೆ.
ಈವರೆಗೆ ಅಯೋಧ್ಯೆ ರಾಮಲಲ್ಲಾನ ದರ್ಶನ ಮಾಡಿದವರ ಸಂಖ್ಯೆ 1.5 ಕೋಟಿ!
ಭಗವಾನ್ ಶ್ರೀರಾಮನ (sriram) ಜನ್ಮ ಸ್ಥಳವಾದ ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram mandir) ರಾಮಲಲ್ಲಾನ (ram lalla) ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ಪ್ರತಿನಿತ್ಯ ಸುಮಾರು ಒಂದು ಲಕ್ಷ ಮಂದಿ ಭೇಟಿ ನೀಡುತ್ತಿದ್ದಾರೆ. ದೇವಾಲಯ ಉದ್ಘಾಟನೆಯಾದ ಬಳಿಕ ಈವರೆಗೆ ಸುಮಾರು 1.5 ಕೋಟಿ ಮಂದಿ ದೇವಸ್ಥಾನಕ್ಕೆ ಭೇಟಿ ನೀಡಿ ರಾಮಲಲ್ಲಾನ ದರ್ಶನ ಪಡೆದಿದ್ದಾರೆ ಎಂದು ದೇವಾಲಯದ ಟ್ರಸ್ಟ್ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ (Shri Ram Janmabhoomi Theertha Kshetra Trust) ಪ್ರಧಾನ ಕಾರ್ಯದರ್ಶಿ (Principal Secretary) ಚಂಪತ್ ರಾಯ್ (Champat Rai), ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮ ಜನ್ಮಭೂಮಿ ದೇವಾಲಯದಲ್ಲಿ ಜನವರಿ 22ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ಸರಿಸುಮಾರು 1.5 ಕೋಟಿ ಜನರು ರಾಮ್ ಲಲ್ಲಾನ ದರ್ಶನ ಪಡೆದಿದ್ದಾರೆ. ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಜನರು ರಾಮಲಲ್ಲಾನ ದರ್ಶನ ಪಡೆಯಲು ದೇವಾಲಯಕ್ಕೆ ಆಗಮಿಸುತ್ತಿದ್ದಾರೆ ಎಂದು ಹೇಳಿದರು.
ಹೊಸದಾಗಿ ನಿರ್ಮಿಸಲಾದ ಭವ್ಯವಾದ ರಾಮಜನ್ಮಭೂಮಿ ದೇವಾಲಯದಲ್ಲಿ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಅವರು ರಚಿಸಿರುವ 51 ಇಂಚು ಎತ್ತರದ ಭಗವಾನ್ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾ ಜನವರಿ 22ರಂದು ಎಲ್ಲಾ ಪಂಗಡಗಳಿಗೆ ಸೇರಿದ ಸುಮಾರು 8,000 ಗಣ್ಯರ ಸಮ್ಮುಖದಲ್ಲಿ ನಡುವೆ ನಡೆಯಿತು. ಪ್ರಾಣ ಪ್ರತಿಷ್ಠಾ ಸಮಾರಂಭದ ವಿಧಿವಿಧಾನಗಳ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದರು.
ಇದನ್ನೂ ಓದಿ: Narendra Modi: ರಾಮಲಲ್ಲಾನಿಗೆ ಮೋದಿ ಸಾಷ್ಟಾಂಗ ನಮಸ್ಕಾರ; ಇಲ್ಲಿವೆ ಅಯೋಧ್ಯೆ ಭೇಟಿ Photos