Site icon Vistara News

Blast in Bengaluru: ರಾಮೇಶ್ವರಂ ಕೆಫೆ ಸ್ಫೋಟ; ಇವನೇ ನೋಡಿ ಬಾಂಬ್‌ ಇಟ್ಟವನು!

Blast in Bengaluru rameshwaram cafe culprit

ಬೆಂಗಳೂರು: ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇಟ್ಟು (Blast in Bengaluru, Rameshwaram Cafe Blast) ನಾಪತ್ತೆಯಾದ ವ್ಯಕ್ತಿಯ ಚಲನವಲನಗಳ ಎಕ್ಸ್‌ಕ್ಲೂಸಿವ್‌ ದೃಶ್ಯಗಳು (exclusive footage) ಸಿಸಿಟಿವಿ ಫೂಟೇಜ್‌ನಿಂದ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿವೆ.

ಕೆಫೆಯಿಂದ ಹೊರ ಬಂದು ವೇಗವಾಗಿ ಹೋಗುತ್ತಿರುವ ವ್ಯಕ್ತಿಯ ಓಡಾಟವನ್ನು ಸಿಸಿಟಿವಿ ಸೆರೆಹಿಡಿದಿದೆ. ಆರೋಪಿ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದು, ತಲೆಗೆ ಕ್ಯಾಪ್‌ ಧರಿಸಿದ್ದಾನೆ. ಈತನ ಅನುಮಾನಾಸ್ಪದ ಓಡಾಟ ದಾಖಲಾಗಿದೆ. ನಿನ್ನೆ 11:50ಕ್ಕೆ ಕೆಫೆಯಿಂದ ಹೊರ ಬಂದಿರುವ ಈತ ವೇಗವಾಗಿ ಹೊರಟುಹೋಗಿದ್ದಾನೆ.

ರಾಮೇಶ್ವರಂ ಕೆಫೆ‌ ಮುಂದೆಯೇ ಬಿಎಂಟಿಸಿ ಬಸ್ ನಿಲ್ದಾಣವಿದೆ. ಅಲ್ಲೇ‌ ಇರುವ ಹೋಟೆಲ್‌ನ ಹೊರ ಭಾಗದಲ್ಲಿರುವ ಸಿಸಿ ಕ್ಯಾಮರಾದಲ್ಲಿ ಶಂಕಿತನ ವಿಡಿಯೋ ಸೆರೆಯಾಗಿದೆ. ಬರುವಾಗ ಈತ ಬಸ್ಸಿನಲ್ಲಿ ಬಂದು ಇಳಿದಿದ್ದ. ಹೋಗುವಾಗ ಅವಸರದಲ್ಲಿ ನಡೆದುಕೊಂಡು ಹೋಗಿದ್ದಾನೆ.

ಆರೋಪಿ ಸೈಡ್ ಬ್ಯಾಗ್ ಹಾಕಿಕೊಂಡು ಬ್ಯಾಗ್‌ ಒಳಗೆ ಮತ್ತೊಂದು ಬ್ಯಾಗ್‌ನಲ್ಲಿ ಸ್ಫೋಟಕ ತಂದಿರುವುದು ಇನ್ನೊಂದು ಸಿಸಿಟಿವಿ ಫೂಟೇಜ್‌ನಲ್ಲಿ ಪೊಲೀಸರಿಗೆ ಲಭ್ಯವಾಗಿದೆ. ಜನರ ಕಣ್ಣಿಗೆ ಮತ್ತು ಸಿಸಿ ಕ್ಯಾಮರದಲ್ಲಿ ಸೆರೆಯಾಗದ ಜಾಗಕ್ಕೆ ಈತ ಹುಡುಕಾಟ ನಡೆಸಿದ್ದು, ಕೊನೆಗೆ ಕೈ ತೊಳೆಯುವ ಜಾಗದಲ್ಲಿದ್ದ ಡೆಸ್ಟ್ ಬಿನ್‌ನಲ್ಲಿ ಬ್ಯಾಗ್ ಬಿಸಾಡಿ ಎಸ್ಕೇಪ್ ಆಗಿದ್ದಾನೆ.

ರಾಮೇಶ್ವರ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ ಕುರಿತು ಹೆಚ್‌ಎಎಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 307, 471 ಮತ್ತು ಯುಎಪಿಎ ಕಾಯ್ದೆಯ 16, 18, 38 ಹಾಗೂ explosive substance’s act 3ಮತ್ತು 4 ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲು ಮಾಡಿಕೊಂಡಿದ್ದಾರೆ.

ನಿನ್ನೆ ಮಧ್ಯಾಹ್ನ‌ 12.55ಕ್ಕೆ ರಾಮೇಶ್ವರ ಕೆಫೆಯಲ್ಲಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಓರ್ವ ಮಹಿಳೆ ತೀವ್ರವಾಗಿ ಗಾಯಗೊಂಡು ಒಟ್ಟು ಹತ್ತು ಜನ ಗಾಯಗೊಂಡಿದ್ದರು. ಎನ್ಎಸ್‌ಜಿ ಬಾಂಬ್ ಸ್ಕ್ವಾಡ್ ವಿಂಗ್‌ನಿಂದಲೂ ಕಾರ್ಯಾಚರಣೆ ತೀವ್ರಗೊಂಡಿದ್ದು, ಸ್ಪೋಟ ನಡೆದ ಸ್ಥಳದಲ್ಲಿ ಇಂಚಿಂಚು ಪರಿಶೀಲನೆ ನಡೆಸಿದ್ದಾರೆ.

ಹೋಗುವಾಗ ಮೊಬೈಲ್ ಕೈಯಲ್ಲಿ ಹಿಡಿದು ಪರಾರಿಯಾಗಿದ್ದಾನೆ. ಆರೋಪಿ ಬಳಿ ಮೊಬೈಲ್ ಇರುವುದು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಸದ್ಯ ಆರೋಪಿ ಬಳಿ ಇರುವ ಮೊಬೈಲ್ ಜಾಡು ಹಿಡಿದು ಹೊರಟಿರುವ ಪೊಲೀಸರು ಟವರ್ ಡಂಪ್ ಮಾಡಿ ಮೊಬೈಲ್ ಡಿಟೈಲ್ಸ್ ಕಲೆ ಹಾಕಿ ಆರೋಪಿಗೆ ಬಲೆ ಬೀಸಿದ್ದಾರೆ.

ದೊಡ್ಡ ತಂಡವೇ ಇದೆ!

ಸ್ಪೋಟದ ಹಿಂದೆ ಒಂದು‌ ತಂಡವೇ ಇರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸ್ಪೋಟಕ ತಯಾರು ಮಾಡುವುದು ಹಾಗೂ ಅದಕ್ಕೆ ಬೇಕಾಗಿರುವ ‌ವಸ್ತುಗಳನ್ನು ಪಡೆಯಲು ವ್ಯವಸ್ಥಿತ ಸಂಚು ನಡೆದಿದ್ದು, ಮೇಲ್ನೋಟಕ್ಕೇ ಈ‌ ತಂಡದಲ್ಲಿ ವೆಲ್ ಟ್ರೈನ್ಡ್ ಆರೋಪಿಗಳು‌ ಭಾಗಿಯಾಗಿರುವ ಶಂಕೆ ಮೂಡಿದೆ.

ಸ್ಫೋಟದಲ್ಲಿ IED ಇಂಪ್ರೂವೈಸ್ ಎಕ್ಸಪೋಸೀವ್ ಡಿವೈಸ್ ಬಳಕೆ ಮಾಡಲಾಗಿದೆ. ಈ ಬಾಂಬನ್ನು ಸ್ಥಳೀಯವಾಗಿ ಸಿಗುವ ಕಚ್ಚಾ ವಸ್ತುಗಳನ್ನ ಬಳಸಿ ಸಿದ್ಧಪಡಿಸಲಾಗುತ್ತದೆ. ಮೊಳೆಗಳು, ಗಾಜಿನ ಚೂರು, ಗನ್ ಪೌಡರ್ ಅಥವಾ ಬೆಂಕಿ ಕಡ್ಡಿಯ ಮದ್ದುಗಳನ್ನೂ ಬಳಸಿ ಇವನ್ನು ತಯಾರಿಸಬಹುದು. ಪ್ರೆಷರ್ ಆಗುವಂತೆ ಡಿವೈಸ್‌ನ್ನು ಸೃಷ್ಟಿಸಿ ಸ್ಫೋಟಿಸಬಹುದು. ಇದು ಎಷ್ಟು ಕಚ್ಚಾ ವಸ್ತುಗಳನ್ನು ಹಾಕಬಹುದೋ ಅಷ್ಟೂ ತೀವ್ರತೆಯನ್ನು ಪಡೆದುಕೊಳ್ಳುತ್ತದೆ.

Plastic explosive ಕೂಡ ಬಳಸಿರುವ ಸಾಧ್ಯತೆ ಇದೆ. ಇದನ್ನ putty explosive ಎಂದು ಕರೆಯಲಾಗುತ್ತದೆ. ಜಿಲೇಟಿನ್‌ಗಳನ್ನು ಬಳಸಿ ಈ ಪ್ಲಾಸ್ಟಿಕ್ ಎಕ್ಸ್‌ಪ್ಲೋಸಿವ್ ತಯಾರಿಕೆ ಮಾಡಲಾಗುತ್ತದೆ. ಈ ಸಾಧನವನ್ನು ಯಾವುದೇ ಮೆಟಲ್ ಡಿಟೆಕ್ಟರ್ ಕಂಡು ಹಿಡಿಯುವುದಿಲ್ಲ. ಇದನ್ನ ಎಲ್ಲಿ ಬೇಕಾದರೂ ಭದ್ರತಾ ಸಿಬ್ಬಂದಿಗಳ ಕಣ್ಣು ತಪ್ಪಿಸಿ ತೆಗೆದುಕೊಂಡು ಹೋಗಬಹುದು ಎನ್ನಲಾಗಿದೆ.

ಆದರೆ ಸ್ಲೀಪರ್ ಸೆಲ್‌ಗಳಿಲ್ಲದೆ ಬಾಂಬ್ ತಯಾರು ಸುಲಭವಲ್ಲ. ಕಚ್ಚಾ ವಸ್ತುಗಳಿಗೆ ಸ್ಲೀಪರ್ ಸೆಲ್‌ಗಳ ಅವಶ್ಯಕತೆ ಇದೆ. ಸ್ಲೀಪರ್ ಸೆಲ್‌ಗಳು ಸಪ್ಲೈ ಮಾಡುವ ಬಿಡಿ ಬಿಡಿ ವಸ್ತುಗಳಿಂದಲೇ ಬಾಂಬ್ ತಯಾರಿಕೆ ನಡೆದಿದ್ದು, ರಾಮೇಶ್ವರಂ ಬಾಂಬ್ ಬ್ಲಾಸ್ಟ್ ಕೇಸಲ್ಲಿ ಸಾಕಷ್ಟು ದೊಡ್ಡ ಕ್ರಿಮಿನಲ್ ಸಂಚು ಇರಲೇಬೇಕಿದೆ.

ಏಕಾಏಕಿ ಬಾಂಬ್ ಇಟ್ಟು ಉಡಾಯಿಸಲು ಸಾಧ್ಯವಿಲ್ಲ. ಸಾಕಷ್ಟು ದಿನಗಳಿಂದ ಪ್ಲಾನಿಂಗ್ ಮಾಡಿರಬೇಕು. ಯಾವ ಸಮಯದಲ್ಲಿ ಜನ ಇರ್ತಾರೆ, ಯಾವ ಸ್ಥಳದಲ್ಲಿ ಹೆಚ್ಚಿನ ಗುಂಪು ಇರುತ್ತದೆ, ಎಂಬುದನ್ನು ಪರಿಶೀಲಿಸಿ ಉಗ್ರ ಕೃತ್ಯ ಎಸಗಲಾಗಿದೆ. ಜನಜಂಗುಳಿ ಇರುವ ಸ್ಥಳದಲ್ಲಿ ಬಾಂಬ್ ಇಡಲು ಪೂರ್ವ ತಯಾರಿ ಮಾಡಿಕೊಂಡಿರುವುದು ಗೊತ್ತಾಗುತ್ತಿದೆ.

ಇದನ್ನೂ ಓದಿ: Blast in Bengaluru: ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಇದೆಯಾ ಮಂಗಳೂರು ಸ್ಫೋಟದ ಲಿಂಕ್?‌

Exit mobile version