ನವದೆಹಲಿ: ಪ್ರತಿ ನಿತ್ಯ ಮುಂಜಾನೆ 3:30ಕ್ಕೆ ಎದ್ದು ಕಠಿಣ ಯೋಗ ಮಾಡಿ ಮತ್ತು ಸಸ್ಯ ಜನ್ಯ ಆಹಾರವನ್ನೇ ಸೇವಿಸಿ. ಇದರಿಂದ ಕಾರ್ಯದೊತ್ತಡ ನಿರ್ವಹಿಸಬಹುದು. ಹೀಗೆಂದವರು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ (C J Chandrachud). ತಮ್ಮ ಸಹೋದ್ಯೋಗಿಗಳು ಸೇರಿದಂತೆ ದೇಶದೆಲ್ಲೆಡೆ ಜನರು ಎದುರಿಸುತ್ತಿರುವ ಕೆಲಸ ಸಂಬಂಧಿತ ಒತ್ತಡವನ್ನು ನಿಭಾಯಿಸಲು ಸಮಗ್ರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಅವರು ಕರೆ ಕೊಟ್ಟಿದ್ದಾರೆ. ಅದಕ್ಕವರು ತಮ್ಮದೇ ಉದಾಹಣೆಯನ್ನು ತೆಗೆದುಕೊಂಡಿದ್ದಾರೆ.
ಇಂದು ಸುಪ್ರೀಂ ಕೋರ್ಟ್ನಲ್ಲಿ ಆಯುಷ್ ಸಮಗ್ರ ಕ್ಷೇಮ ಕೇಂದ್ರವನ್ನು ಉದ್ಘಾಟಿಸಿದ ಮುಖ್ಯ ನ್ಯಾಯಮೂರ್ತಿಗಳು, ಇಂತಹ ಅಭ್ಯಾಸಗಳ ಮಹತ್ವವು ನ್ಯಾಯಾಧೀಶರು ಮತ್ತು ಅವರ ಕುಟುಂಬಗಳಿಗೆ ಮಾತ್ರವಲ್ಲ, ಇಡೀ ಸುಪ್ರೀಂ ಕೋರ್ಟ್ ಸಿಬ್ಬಂದಿಯ ಯೋಗಕ್ಷೇಮಕ್ಕೂ ಒಳ್ಳೆಯದು ಎಂದು ಹೇಳಿದ್ದಾರೆ.
ನಾನು ನಿತ್ಯ ಯೋಗಾಭ್ಯಾಸ ಮಾಡುತ್ತೇನೆ. ಯೋಗ ಮಾಡಲು ಇಂದು ಮುಂಜಾನೆ 3: 30 ಕ್ಕೆ ಏಳುತ್ತೇನೆ. ಹೆಚ್ಚುವರಿಯಾಗಿ ನಾನು ಕಳೆದ 5 ತಿಂಗಳುಗಳಿಂದ ಸಸ್ಯಾಹಾರವನ್ನು ಮಾತ್ರ ಸೇವಿಸುತ್ತಿದ್ದೇನೆ. ನಾನು ಜೀವನ ಶೈಲಿಯ ಸಮಗ್ರ ಮಾದರಿಯನ್ನು ನಿಯಂತ್ರಿಸಲು ಯತ್ನಿಸುತ್ತಿದ್ದೇನೆ. ಅದು ನೀವು ಏನು ತಿನ್ನುತ್ತೀರಿ ಮತ್ತು ನಿಮ್ಮ ಜೀವನ ಶೈಲಿ ಹೇಗಿದೆ ಎಂಬುದರ ಮೇಲೆ ನಿಮ್ಮ ಕೆಲಸದೊತ್ತಡ ನಿರ್ವಹಿಸಬಹುದು ” ಎಂದು ಸಿಜೆಐ ಚಂದ್ರಚೂಡ್ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.
ಕೆಲಸದ ಹೊರೆ
ಕಡತಗಳ ಗಣನೀಯ ಪ್ರಮಾಣ ಹೆಚ್ಚಳದಿಂದಾಗಿ ಕೆಲಸದ ಹೊರೆಯನ್ನು ನಿರ್ವಹಿಸಲು 34 ನ್ಯಾಯಾಧೀಶರು ಸೇರಿದಂತೆ ಸುಪ್ರೀಂ ಕೋರ್ಟ್ ಸಿಬ್ಬಂದಿ ಎದುರಿಸುತ್ತಿರುವ ಒತ್ತಡವನ್ನು ಮುಖ್ಯ ನ್ಯಾಯಮೂರ್ತಿ ಚಂದ್ರ ಚೂಡ್ ಅವರು ಈ ವೇಳೆ ಎತ್ತಿ ತೋರಿದರು. ತಮ್ಮ ವೈಯಕ್ತಿಕ ಅನುಭವದಿಂದ ಮಾತನಾಡಿದ ಸಿಜೆಐ ಚಂದ್ರಚೂಡ್, “ನಾನು ಸುಮಾರು ಒಂದು ವರ್ಷದ ಹಿಂದೆ ಪಂಚಕರ್ಮಕ್ಕೆ ಒಳಗಾಗಿದ್ದೆ. ಈಗ ಅದನ್ನು ಮತ್ತೆ ಮಾಡಲು ಮುಂದಾಗಿದ್ದೇನೆ. , ನಮ್ಮ ಸಹೋದ್ಯೋಗಿ 34 ನ್ಯಾಯಾಧೀಶರು ಸೇರಿದಂತೆ ಸುಪ್ರೀಂ ಕೋರ್ಟ್ನಲ್ಲಿ 2000 ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ, ಅವರು ತಮ್ಮ ದೈನಂದಿನ ಕೆಲಸದಲ್ಲಿ ತೀವ್ರ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಇದು ಕಡತಗಳ ನಿರ್ವಹಣೆಯ ಕೆಲಸದ ಹೊರೆಗೆ ಕಾರಣವಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ : Kannada Name Board : ಕನ್ನಡ ನಾಮಫಲಕ ನಿಯಮ ಜಾರಿ ಆಗ್ಲೇಬೇಕು; ಸಚಿವ ತಂಗಡಗಿ ಆದೇಶ
ನ್ಯಾಯಾಧೀಶರು ಮತ್ತು ಅವರ ಕುಟುಂಬಗಳು ಮಾತ್ರವಲ್ಲ ಸಿಬ್ಬಂದಿ ಸದಸ್ಯರೂ ಸಮಗ್ರ ಜೀವನಶೈಲಿಯನ್ನು ಪರಿಗಣಿಸುವುದು ಮುಖ್ಯ ಎಂದು ನಾನು ನಂಬುತ್ತೇನೆ. ಅವರೆಲ್ಲರ ಮೂಲಕ ಮೂಲಕ ನಾವು ಈ ಸಂದೇಶವನ್ನು ದೇಶದ ಉಳಿರೆಲ್ಲರಿಗೂ ತಲುಪಿಸಬಹುದು ಎಂದು ಅವರು ಹೇಳಿದರು.
ಕಾನೂನು ಕ್ಷೇತ್ರದಲ್ಲಿ ದುಡಿಯುವವರ ಯೋಗಕ್ಷೇಮಕ್ಕಾಗಿ ಸಿದ್ಧಪರಿಸಿರುವ ಆಯುಷ್ ಸಮಗ್ರ ಸ್ವಾಸ್ಥ್ಯ ಕೇಂದ್ರವು ಆಯುರ್ವೇದ ಮತ್ತು ಯೋಗ ಸೇರಿದಂತೆ ಸಮಗ್ರ ಅಭ್ಯಾಸಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ವಿಶೇಷವಾಗಿ ನ್ಯಾಯಾಧೀಶರು ಮತ್ತು ಅವರ ಕುಟುಂಬಗಳು ಮತ್ತು ಸುಪ್ರೀಂ ಕೋರ್ಟ್ನ ಸಿಬ್ಬಂದಿಗೆ ಜೀವನ ಶೈಲಿಯನ್ನು ಹೇಳಿಕೊಡುವ ಗುರಿಯಿದೆ.