Site icon Vistara News

Hanuman Flag : ಜಿಹಾದಿಗಳು ತಲ್ವಾರ್‌ ಹಿಡೀಬಹುದು, ಹಿಂದುಗಳು ಧ್ವಜ ಹಾಕ್ಬಾರ್ದಾ?: ಬಿಜೆಪಿ ಆಕ್ರೋಶ

Hanuman Flag Siddaramaiah BJP

ಬೆಂಗಳೂರು: ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಹಾಕಿದ್ದ ಹನುಮ ಧ್ವಜವನ್ನು (Hanuman Flag) ಕಿತ್ತು ಹಾಕಿದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ತುಘಲಕ್‌ ಎಂದು ಕರೆದಿದೆ. ಹಿಂದುಗಳ ಧಾರ್ಮಿಕ ಹಕ್ಕನ್ನೇ ಕಿತ್ತುಕೊಳ್ಳಲು ಮುಂದಾಗಿರುವ ಸಿದ್ದರಾಮಯ್ಯ ಆಡಳಿತದಲ್ಲಿ ಮುಸ್ಲಿಮರು ಏನು ಬೇಕಾದರೂ ಮಾಡಬಹುದು, ಆದರೆ, ಹಿಂದೂಗಳು ಏನೂ ಮಾಡುವಂತಿಲ್ಲ ಎಂದು ಅದು ಹೇಳಿದೆ. ಬಿಜೆಪಿ ಈ ನಿಟ್ಟಿನಲ್ಲಿ ಎಕ್ಸ್‌ ಜಾಲದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಕಟು ಟೀಕಾಪ್ರಹಾರ ನಡೆಸಿದೆ. (BJP attacks Siddaramaiah) ಜತೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರನ್ನು ಏಕವಚನದಲ್ಲಿ ಸಂಬೋಧಿಸಿದ್ದನ್ನೂ ಆಕ್ಷೇಪಿಸಿ ಇನ್ನೊಂದು ಟ್ವೀಟ್‌ ಮಾಡಿದೆ.

Hanuman Flag: ಸಿದ್ದರಾಮಯ್ಯ ತುಘಲಕ್‌ ಎಂದ ಬಿಜೆಪಿ ಟ್ವೀಟ್‌

  1. ತುಷ್ಟೀಕರಣದ ಆಧುನಿಕ ಪಿತಾಮಹ ಸಿದ್ದರಾಮಯ್ಯ ಸಾಹೇಬರು, ಒಂದು ಸಮುದಾಯದ ಓಲೈಕೆಗಾಗಿ ಸಂವಿಧಾನವನ್ನೇ ಬುಡಮೇಲು ಮಾಡುವ ಸೊಕ್ಕನ್ನು ಪ್ರದರ್ಶಿಸಿ “ನಾನೇ ತುಘಲಕ್” ಎಂದು ತೋರಿಸಿಕೊಳ್ಳಲು ಹೊರಟಿದ್ದಾರೆ.
  2. ಸಂವಿಧಾನದಲ್ಲಿ ಹಿಂದೂಗಳಿಗೆ ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನೇ ಹತ್ತಿಕ್ಕುತ್ತಿದ್ದಾರೆ ಕೋಮುವಾದಿ ಸಿದ್ದರಾಮಯ್ಯರವರು.
  3. ಸಿದ್ದರಾಮಯ್ಯರವರಿಗೆ ಹುಬ್ಬಳ್ಳಿಯ ಈದ್ಗಾ ಮೈದಾನದ ವಿಚಾರದಲ್ಲಿ ಇಲ್ಲದ ಸಂವಿಧಾನದ ಕಾಳಜಿ, ಈಗ ದಿಢೀರ್ ಅಂತ ಗುಹೆ ಒಳಗೆ ಜ್ಞಾನೋದಯವಾಗಿರುವುದಕ್ಕೆ ಕಾರಣ ರಾಮ ನಾಮ ಪಠಣೆಯ ಮಹಾತ್ಮೆ!
  4. ಮತಾಂಧ ಜಿಹಾದಿಗಳು ಬಹಿರಂಗವಾಗಿ ತಲ್ವಾರ್ ಹಿಡಿಯಬಹುದು, ಮತಾಂಧರ ಕಟೌಟ್ ಹಾಕಬಹುದು, ಆದರೆ ಹಿಂದೂಗಳು ಮಾತ್ರ ಏನೂ ಮಾಡುವಂತಿಲ್ಲ. ಅದಕ್ಕೆ ಕಾರಣ ರಾಜ್ಯದಲ್ಲಿ ಇರುವುದು ಕೆಪಿಸಿಸಿ‌ ಸರ್ಕಾರದ ಅಡಳಿತವಲ್ಲ, ಬದಲಿಗೆ ಐಸಿಸ್ ಮಾದರಿಯ ಸರ್ವಾಧಿಕಾರದ ಅಡಳಿತ!
  5. ಹಿಂದೂಗಳ ತಾಳ್ಮೆಯ ಕಟ್ಟೆ ಒಡೆಯುವ ಮುನ್ನ ನಿಮ್ಮ ಹಿಂದೂ ವಿರೋಧಿ ಆಡಳಿತವನ್ನು ನಿಲ್ಲಿಸಿ, ಇಲ್ಲವಾದಲ್ಲಿ ಮಾಡಿದ್ದನ್ನು ಅನುಭವಿಸುವ ಕಾಲ ಬಹಳ ದೂರವಿಲ್ಲ!

ಸೋನಿಯಾ ಗಾಂಧಿಯನ್ನು ಅವಳು ಅಂತಾರಾ ಸರ್ವಾಧಿಕಾರಿ ಸಿದ್ದರಾಮಯ್ಯ

ಇದೇ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ʻಅವಳುʼ ಎಂದು ಏಕವಚನದಲ್ಲಿ ಸಂಬೋಧಿಸಿದ ಸಿದ್ದರಾಮಯ್ಯ ಅವರ ಮೇಲೆ ಬಿಜೆಪಿ ವಾಗ್ದಾಳಿ ನಡೆಸಿದೆ.

  1. ದಲಿತರು, ಹಿಂದುಳಿದವರು, ಶೋಷಿತರ ಮೇಲೆ ದಬ್ಬಾಳಿಕೆ ನಡೆಸಿ, ಏಕವಚನದಲ್ಲಿ ನಿಂದಿಸುವುದು ಸರ್ವಾಧಿಕಾರಿ ಅಲಿಯಾಸ್ ಮಜವಾದಿ ಸಿದ್ದರಾಮಯ್ಯ ಅವರ ಅವರ ನಿರಂಕುಶ ಪ್ರಭುತ್ವ!
  2. ಅವರು ನಮ್ಮ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಶೋಷಣೆ ಮಾಡುವುದಕ್ಕೂ ಹೇಸುವುದಿಲ್ಲ!
  3. ಆದರೆ, ಇಟಲಿ ಮೇಡಮ್‌ ಸೋನಿಯಾ ಗಾಂಧಿ ಅವರೆಂದರೆ, ಮಜವಾದಿಯವರಿಗೆ ಇನ್ನಿಲ್ಲದ ಗೌರವ, ಅಕ್ಕರೆ, ಪ್ರಶಂಸೆಗಳ ಸುರಿಮಳೆಯನ್ನೇ ಸುರಿಸಿ ಬಿಡುತ್ತಾರೆ.
  4. ಎಲುಬಿಲ್ಲದ ನಾಲಿಗೆಯಿಂದ ಆಚಾರ ವಿಚಾರಗಳನ್ನು ನಿರೀಕ್ಷೆ ಮಾಡುವುದು ತಪ್ಪು!
  5. ಮನುಷ್ಯನ ಸೊಂಟದಲ್ಲಿ ಲುಂಗಿ, ಬಾಯಲ್ಲಿ ನಾಲಿಗೆ ನಿಲ್ಲದಿದ್ದರೆ ಅವರನ್ನು “ಕಚ್ಚೆ ಹರುಕ” ಎಂದು ಹಳೇ ಮೈಸೂರು ಭಾಗದಲ್ಲಿ ಕರೆಯುತ್ತಾರೆ ಅಲ್ಲವೇ ಮುಖ್ಯಮಂತ್ರಿಗಳೇ?

ಇದನ್ನೂ ಓದಿ: CM Siddaramaiah: ರಾಷ್ಟ್ರಪತಿಗೆ ಏಕವಚನ ಪ್ರಯೋಗ; ಸಿದ್ದರಾಮಯ್ಯ ಶಿಷ್ಟಾಚಾರಗೆಟ್ಟ ಮುಖ್ಯಮಂತ್ರಿ ಎಂದ ಎಚ್‌ಡಿಕೆ

Exit mobile version