Site icon Vistara News

Heat Stroke: ರಾಜ್ಯದಲ್ಲಿ 600 ಹೀಟ್ ಸ್ಟ್ರೋಕ್‌ ಕೇಸ್; ಏರುತ್ತಿದೆ ಶಾಖ, ಸಾವಿಗೂ ಕಾರಣವಾದೀತು, ಎಚ್ಚರಿಕೆ ವಹಿಸಿ!

heat stroke

ಬೆಂಗಳೂರು: ಈ ವರ್ಷದ ಬೇಸಿಗೆಯಲ್ಲಿ (Summer) ಕಳೆದ ಒಂದು ತಿಂಗಳಿನಲ್ಲೇ ರಾಜ್ಯಾದ್ಯಂತ 600 ಹೀಟ್ ಸ್ಟ್ರೋಕ್‌ (Heat Stroke) ಪ್ರಕರಣಗಳು ವರದಿಯಾಗಿವೆ. ಬೇಸಿಗೆ ಬಿಸಿಲಿನ ಶಾಖ ಇನ್ನಷ್ಟು ಏರುತ್ತಲೇ ಇದ್ದು, ಮತ್ತಷ್ಟು ಪ್ರಕರಣಗಳು ತಲೆದೋರುವ ಆತಂಕ ಎದುರಾಗಿದೆ.

ಇವುಗಳನ್ನು ಟ್ರೀಟ್‌ ಮಾಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಹೀಟ್ ಸ್ಟ್ರೋಕ್ ವಾರ್ಡ್‌ಗಳನ್ನು (Heat Stroke Ward) ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಹೀಟ್ ಸ್ಟ್ರೋಕ್ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.

ಕಳೆದ 8 ವರ್ಷಗಳಲ್ಲಿಯೇ ಗರಿಷ್ಠ ತಾಪಮಾನ ಹಾಗೂ ಹೀಟ್‌ ವೇವ್‌ ರಾಜ್ಯದಲ್ಲಿ ಕಂಡುಬಂದಿದೆ. ರಾಜ್ಯದಲ್ಲಿ ಇದುವರೆಗೂ ಒಟ್ಟು 600 ಹೀಟ್ ವೇವ್ ಕೇಸ್ ದಾಖಲಾಗಿದೆ. ತಾಪಮಾನದಲ್ಲಿ ಆದ ಏರಿಕೆಯಿಂದ ಮಕ್ಕಳು, ವೃದ್ಧರು ಹಾಗೂ ದುರ್ಬಲರಲ್ಲಿ ಅಸ್ವಸ್ಥತೆ ಉಂಟಾಗಿದೆ. ವಯಸ್ಸಾದವರಲ್ಲಿ ಹೀಟ್ ಸ್ಟ್ರೋಕ್‌ನಿಂದ ಕಡಿಮೆ ರಕ್ತದೊತ್ತಡ ಹಾಗೂ ನಿತ್ರಾಣ ಉಂಟಾಗುತ್ತಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಹೀಟ್ ಸ್ಟ್ರೋಕ್ ವಾರ್ಡ್ ನಿರ್ಮಾಣ ಮಾಡಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. 5ರಿಂದ 6 ಬೆಡ್ ಹೊಂದಿರುವ ಹೀಟ್ ಸ್ಟ್ರೋಕ್ ವಾರ್ಡ್ ನಿರ್ಮಾಣವಾಗುತ್ತಿದೆ. ಮಲ್ಲೇಶ್ವರಂ ಕೆಸಿ ಜನರಲ್‌ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಹೀಟ್ ಸ್ಟ್ರೋಕ್ ವಾರ್ಡ್ ನಿರ್ಮಿಸಲಾಗಿದೆ. ಅಲ್ಲಿ ಔಷಧಿಗಳು, ಆಕ್ಸಿಜನ್, ಕೂಲರ್, ಫ್ಯಾನ್ ಒದಗಿಸಲಾಗುತ್ತಿದೆ.

ಏನಿದು ಹೀಟ್‌ ಸ್ಟ್ರೋಕ್?‌ ಎಚ್ಚರಿಕೆ ಹೇಗೆ?

ಬಿಸಿಲಿನ ಶಾಖದ ಹೊಡೆತದಿಂದಾಗಿ ದೇಹ ತನ್ನ ತಾಪಮಾನವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಹೀಟ್ ಸ್ಟ್ರೋಕ್ ಉಂಟಾಗುತ್ತದೆ. ದೇಹದ ಉಷ್ಣತೆಯು ವೇಗವಾಗಿ ಹೆಚ್ಚಾಗುತ್ತದೆ. ಶಾಖ ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ. ದೇಹದ ಬೆವರುವಿಕೆಯ ಕಾರ್ಯವಿಧಾನವೂ ವಿಫಲಗೊಳ್ಳುತ್ತದೆ. ವ್ಯಕ್ತಿ ಬೆವರುವುದಿಲ್ಲ. ಹೀಟ್-ಸ್ಟ್ರೋಕ್‌ ಹೊಡೆದ ನಂತರ 10ರಿಂದ 15 ನಿಮಿಷಗಳಲ್ಲಿ ದೇಹದ ಉಷ್ಣತೆ 106°Fಗಿಂತ ಹೆಚ್ಚಾಗುತ್ತದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಅಂಗಾಂಗಗಳ ವೈಫಲ್ಯಕ್ಕೆ ಅಥವಾ ಮುಂದುವರಿದು ಸಾವಿಗೆ ಕಾರಣವಾಗಬಹುದು.

ಹೀಟ್‌ ಸ್ಟ್ರೋಕ್‌ ಲಕ್ಷಣಗಳು

ಹೀಟ್ ಸ್ಟ್ರೋಕ್ ರೋಗ ಲಕ್ಷಣಗಳನ್ನು ಬೇಗ ಗುರುತಿಸಿದರೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯ. ಆದ್ದರಿಂದ ಲಕ್ಷಣಗಳನ್ನು ಗುರುತಿಸುವುದು ತುಂಬಾ ಮುಖ್ಯ.

ಕಾರಣಗಳು ಯಾವವು?

ಹೀಟ್ ಸ್ಟ್ರೋಕ್‌ನಿಂದ ರಕ್ಷಣೆ ಹೇಗೆ?

ಇದನ್ನೂ ಓದಿ: Heat Stroke: ನೀರು ಕುಡಿದು ತಂಪಾಗಿರಿ, ಹೀಟ್‌ ಸ್ಟ್ರೋಕ್‌ ತಪ್ಪಿಸಿಕೊಳ್ಳಿ

Exit mobile version