Site icon Vistara News

Vistara Top 10 News : ವಿಧಾನಸೌಧದೊಳಗೇ ಕಾಂಗ್ರೆಸ್‌ ಬೆಂಬಲಿಗರಿಂದ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಮತ್ತಿತರ ಪ್ರಮುಖ ಸುದ್ದಿಗಳು

Top 10 news

1.ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ
ಬೆಂಗಳೂರು: ರಾಜ್ಯಸಭಾ ಚುನಾವಣೆಯ (Rajya Sabha Election) ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್‌ ಕಾರ್ಯಕರ್ತರ ಸಂತಸ ಮುಗಿಲು ಮುಟ್ಟಿತ್ತು. ಗೆಲುವು ಸಾಧಿಸಿದ ಕಾಂಗ್ರೆಸ್‌ನ ಮೂವರು ಸದಸ್ಯರ ಪೈಕಿ ನಾಸಿರ್ ಹುಸೇನ್ ಬೆಂಬಲಿಗರು ಶತ್ರು ರಾಷ್ಟ್ರ ಪಾಕಿಸ್ತಾನ ಪರ ಜೈಕಾರ ಕೂಗಿ ಉದ್ಧಟತನ ಮೆರೆದಿದ್ದಾರೆ. ನಮ್ಮ ಭಾರತದ ಸೌರ್ವಭೌಮತ್ವವನ್ನು ಧಿಕ್ಕರಿಸಿ ಪಾಕ್‌ ಪರ ಘೋಷಣೆ ಕೂಗಿರುವ ಬಗ್ಗೆ ರಾಜ್ಯ ಸೇರಿ ದೇಶಾದ್ಯಂತ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇಂಥದ್ದೊಂದು ಪಾಪಿ ಕೃತ್ಯ, ಅಕ್ಷಮ್ಯ ಅಪರಾಧವನ್ನು ವಿಧಾನಸೌಧದೊಳಗೆ ಮಾಡಿರುವುದು ಮತ್ತೊಂದು ದುರಂತವಾಗಿದೆ. ಪೂರ್ಣ ಸುದ್ದಿಯ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

2. Rajya Sabha Election: ರಾಜ್ಯಸಭೆಯಲ್ಲಿ 3 ಸೀಟು ಗೆದ್ದು ಬೀಗಿದ ಕಾಂಗ್ರೆಸ್‌; 1 ಸ್ಥಾನ ಬಿಜೆಪಿಗೆ; ಮೈತ್ರಿಗೆ ಮುಖಭಂಗ!
ಬೆಂಗಳೂರು: ರಾಜ್ಯಸಭಾ ಚುನಾವಣೆಗೆ (Rajya Sabha Election) ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ. ಒಟ್ಟು ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೂವರು ಹಾಗೂ ಬಿಜೆಪಿಯ ಒಬ್ಬರು ಜಯಗಳಿಸಿದ್ದಾರೆ. ಬಿಜೆಪಿ – ಜೆಡಿಎಸ್‌ ಮೈತ್ರಿಯಿಂದ (BJP JDS Alliance) ಐದನೇ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಕುಪೇಂದ್ರ ರೆಡ್ಡಿ (Kupendra Reddy) ಸೋಲು ಕಂಡಿದ್ದಾರೆ. ಈ ಮೂಲಕ ಮೈತ್ರಿಗೆ ಮುಖಭಂಗವಾದಂತೆ ಆಗಿದೆ. ಒಟ್ಟು 222 ಶಾಸಕರಿಂದ ಮತದಾನ ಮಾಡಿದ್ದಾರೆ. ಪೂರ್ಣ ಸುದ್ದಿಯ ಓದಲು ಈ ಲಿಂಕ್ ಕ್ಲಿಕ್​ ಮಾಡಿ.
ಈ ಸುದ್ದಿಯನ್ನೂ ಓದಿ : Rajya sabha Election: ಎಸ್‌.ಟಿ. ಸೋಮಶೇಖರ್‌ ಅಡ್ಡಮತ; ಬಿಜೆಪಿಯಿಂದ ಏನು ಕ್ರಮ? ಶಾಸಕತ್ವ ಉಳಿಯುತ್ತಾ?
ಈ ಸುದ್ದಿಯನ್ನೂ ಓದಿ : Rajyasabha Election : ದ್ರೋಹ ಎಸಗಿದ ಸೋಮಶೇಖರ್‌ ವಿರುದ್ಧ ಸಿಡಿದ ಬಿಜೆಪಿ; ಪ್ರತಿಕೃತಿಗೆ ಬೆಂಕಿ, ಚಪ್ಪಲಿ ಏಟು

3. 7ನೇ ವೇತನ ಆಯೋಗದ ವರದಿ ಬಂದ ನಂತರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌: ಸಿಎಂ ಭರವಸೆ
ಬೆಂಗಳೂರು: ಪಂಚ ಗ್ಯಾರಂಟಿಗಳ ಜಾರಿಯಿಂದ ಉಂಟಾದ ಆರ್ಥಿಕ ಹೊರೆಯ ನಡುವೆಯೂ 7ನೇ ವೇತನ ಆಯೋಗದ ಅಂತಿಮ ವರದಿ ಬಂದ ನಂತರ ಸರ್ಕಾರಿ ನೌಕರರ ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರ ಸಕಾರಾತ್ಮಕ ತೀರ್ಮಾನ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಭರವಸೆ ನೀಡಿದ್ದಾರೆ. ಪೂರ್ಣ ಸುದ್ದಿಯ ಓದಲು ಈ ಲಿಂಕ್ ಕ್ಲಿಕ್​ ಮಾಡಿ.
ಈ ಸುದ್ದಿಯನ್ನೂ ಓದಿ : ರಾಜ್ಯ ಸರ್ಕಾರಿ ನೌಕರರಿಗೆ ಜುಲೈನಿಂದ ಶೇ.23 ವೇತನ ಹೆಚ್ಚಳ ಮಾಡಿ: ಸಿ.ಎಸ್‌.ಷಡಾಕ್ಷರಿ ಒತ್ತಾಯ

4. ಗಗನಯಾನ ಯಾತ್ರಿಗಳ ಹೆಸರು ರಿವೀಲ್‌ ಮಾಡಿದ ಮೋದಿ; ಇವರೇ ಸಾರಥಿಗಳು
ತಿರುವನಂತಪುರಂ: ಭಾರತದ ಮಹತ್ವಾಕಾಂಕ್ಷೆಯ, ಮೊದಲ ಮಾನವಸಹಿತ ಗಗನಯಾತ್ರೆಯಾದ ‘ಗಗನಯಾನ’ಕ್ಕೆ (Gaganyaan Mission) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO) ಸಕಲ ಸಿದ್ಧತೆ ಕೈಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾನವ ಸಹಿತ ಗಗನಯಾನ ಕೈಗೊಳ್ಳುವ ಗಗನಯಾತ್ರಿಗಳ ಹೆಸರುಗಳನ್ನು ಘೋಷಿಸಿದ್ದಾರೆ. ಇದರೊಂದಿಗೆ ಮುಂದಿನ ವರ್ಷ ಕೈಗೊಳ್ಳುವ ಇಸ್ರೋ ಮಿಷನ್‌ಗೆ ಗಗನಯಾತ್ರಿಗಳನ್ನು ಅಂತಿಮಗೊಳಿಸಿದಂತಾಗಿದೆ. ಪೂರ್ಣ ಸುದ್ದಿಯ ಓದಲು ಈ ಲಿಂಕ್ ಕ್ಲಿಕ್​ ಮಾಡಿ.
ಈ ಸುದ್ದಿಯನ್ನೂ ಓದಿ : ವಿಸ್ತಾರ Explainer: Gaganyaan: ನಾಲ್ವರು ಗಗನಯಾನಿಗಳಲ್ಲಿ ಮಹಿಳೆ ಏಕಿಲ್ಲ?

5. Money Guide: ಗುಡ್‌ನ್ಯೂಸ್‌: ಕಿಸಾನ್‌ ಸಮ್ಮಾನ್‌ ನಿಧಿಯ 16ನೇ ಕಂತು ಬಿಡುಗಡೆಗೆ ದಿನಗಣನೆ; ನಗದು ಯಾವಾಗ ಸಿಗಲಿದೆ?
ನವದೆಹಲಿ: ದೇಶದ ಕೃಷಿಕರಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನ್‌ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ (PM Kisan Samman Nidhi Yojana)ಯನ್ನು 2೦19ರಲ್ಲಿ ಜಾರಿಗೆ ತಂದಿದೆ. ಈ ಯೋಜನೆ ಮೂಲಕ ಪ್ರತಿ ವರ್ಷ ರೈತರ ಖಾತೆಗೆ 6,000 ರೂ. ಜಮೆ ಮಾಡಲಾಗುತ್ತದೆ. ಸದ್ಯ ಈ ಯೋಜನೆಯ 16ನೇ ಕಂತು ಬಿಡುಗಡೆ ದಿನ ನಿಗದಿ ಪಡಿಸಲಾಗಿದೆ. ಹಾಗಾದರೆ ಯಾವಾಗ ಹಣ ಜಮೆ ಆಗಲಿದೆ ಎನ್ನುವ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ. ಪೂರ್ಣ ಸುದ್ದಿಯ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

6. IPL 2024 : ಐಪಿಎಲ್​ ಟಿಕೆಟ್​ ಖರೀದಿ ಹೇಗೆ ಮತ್ತು ಎಲ್ಲಿ? ಇಲ್ಲಿದೆ ಸಂಪೂರ್ಣ ವಿವರ
ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ರ 17 ನೇ ಆವೃತ್ತಿಯ ಭಾಗಶಃ ವೇಳಾಪಟ್ಟಿ ಬಿಸಿಸಿಐ ಫೆಬ್ರವರಿ 22 ರಂದು ಬಹಿರಂಗಪಡಿಸಿದೆ. ಮುಂಬರುವ ಆವೃತ್ತಿಯು ಮಾರ್ಚ್ 22 ರಿಂದ ಪ್ರಾರಂಭವಾಗಲಿದ್ದು, ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಏಪ್ರಿಲ್ 7 ರವರೆಗಿನ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಪೂರ್ಣ ಸುದ್ದಿಯ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

7. RBI Fine: ಎಸ್‌ಬಿಐ ಸೇರಿ 3 ಬ್ಯಾಂಕ್‌ಗಳಿಗೆ 3 ಕೋಟಿ ರೂ. ದಂಡ ವಿಧಿಸಿದ ಆರ್‌ಬಿಐ; ಕಾರಣ ಇದು
ಮುಂಬೈ: ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮಾರ್ಚ್‌ 15ರಿಂದ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ವಹಿವಾಟು ಸ್ಥಗಿತಗೊಳಿಸಿ ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ, ದೇಶದ 3 ಬ್ಯಾಂಕ್‌ಗಳಿಗೆ ಆರ್‌ಬಿಐ ಸುಮಾರು 3 ಕೋಟಿ ರೂ. ದಂಡ ವಿಧಿಸಿದೆ. ಭಾರತೀಯ ಸ್ಟೇಟ್‌ ಬ್ಯಾಂಕ್‌ (SBI), ಕೆನರಾ ಬ್ಯಾಂಕ್‌ ಹಾಗೂ ಸಿಟಿ ಯೂನಿಯನ್‌ ಬ್ಯಾಂಕ್‌ಗಳಿಗೆ (City Union Bank) ಸುಮಾರು 3 ಕೋಟಿ ರೂ. ದಂಡ ವಿಧಿಸಲಾಗಿದೆ. ಆರ್‌ಬಿಐ ನಿಬಂಧನೆಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಪೂರ್ಣ ಸುದ್ದಿಯ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

8. Actor Rajinikanth: ಬಾಲಿವುಡ್‌ ಖ್ಯಾತ ನಿರ್ಮಾಪಕರೊಂದಿಗೆ ಕೈ ಜೋಡಿಸಿದ ರಜನಿಕಾಂತ್‌; ತಲೈವಾ ಹೊಸ ಚಿತ್ರ ಯಾವಾಗ?
ಮುಂಬೈ: ದಕ್ಷಿಣ ಭಾರತದ ಸೂಪರ್‌ ಸ್ಟಾರ್‌ ರಜನಿಕಾಂತ್‌ (Rajinikanth) ಈ ಇಳಿವಯಸ್ಸಿನಲ್ಲಿಯೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಒಂದರ ಹಿಂದೆ ಒಂದರಂತೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಇನ್ನೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ ಎನ್ನುವ ಸುದ್ದಿ ಜೋರಾಗಿ ಹಬ್ಬಿದೆ. ಬಾಲಿವುಡ್‌ ನಿರ್ಮಾಪಕ ಸಾಜಿದ್‌ ನಾಡಿಯಾವಾಲ (Sajid Nadiadwala) ಅವರೊಂದಿಗೆ ತಲೈವಾ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸ್ವತಃ ಸಾಜಿದ್‌ ನಾಡಿಯಾವಾಲ ಮಾಹಿತಿ ನೀಡಿದ್ದಾರೆ. ಆದರೆ ಯಾವ ಚಿತ್ರ, ಯಾವಾಗ ಸೆಟ್ಟೇರಲಿದೆ ಮುಂತಾದ ವಿವರ ಇನ್ನೂ ಬಹಿರಂಗವಾಗಿಲ್ಲ. ಪೂರ್ಣ ಸುದ್ದಿಯ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

9 .PM Narendra Modi: ಕೇರಳದಲ್ಲಿ ಲಾಠಿ ಚಾರ್ಜ್‌, ದಿಲ್ಲಿಯಲ್ಲಿ ಚಾಯ್-‌ ಸಮೋಸಾ: ಮೋದಿ ಹೀಗೆ ಹೇಳಿದ್ದೇಕೆ?
ತಿರುವನಂತಪುರಂ: ಕಾಂಗ್ರೆಸ್ (congress) ಮತ್ತು ಎಡಪಕ್ಷಗಳು (left parties) ಇತರ ರಾಜ್ಯಗಳಲ್ಲಿ ಬಿಎಫ್‌ಎಫ್ (Best friends forever- ಬೆಸ್ಟ್‌ ಫ್ರೆಂಡ್ಸ್‌ ಫಾರೆವರ್-‌ ಶಾಶ್ವತ ಸ್ನೇಹಿತರು) ಆಗಿದ್ದಾರೆ. ಆದರೆ ಕೇರಳದಲ್ಲಿ ಬದ್ಧ ವೈರಿಗಳು (enemies) ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಂಗಳವಾರ ವ್ಯಂಗ್ಯವಾಡಿದ್ದಾರೆ. ಪೂರ್ಣ ಸುದ್ದಿಯ ಓದಲು ಈ ಲಿಂಕ್ ಕ್ಲಿಕ್​ ಮಾಡಿ.

10. ವಿಮೆ ದುಡ್ಡಿನ ಆಸೆಗೆ ತನ್ನ ಕಾಲನ್ನೇ ಕತ್ತರಿಸಿಕೊಂಡ; ಈಗ ಕಾಸೂ ಸಿಗಲಿಲ್ಲ, ಕಾಲೂ ಇಲ್ಲ!
ಮಿಸ್ಸೌರಿ: ಅಮೆರಿಕದ ವ್ಯಕ್ತಿಯೊಬ್ಬರು ವಿಮೆಯ ದುಡ್ಡಿಗಾಗಿ ತನ್ನ ಕಾಲನ್ನೇ ಕತ್ತರಿಸಿಕೊಂಡ ಪ್ರಸಂಗ (Shocking News) ಬೆಳಕಿಗೆ ಬಂದಿದೆ. ಆತನ ಮೋಸ ಬಯಲಿಗೆ ಬಂದ ಬಳಿಕ ದುಡ್ಡೂ ಸಿಗಲಿಲ್ಲ, ಕೈಕಾಲು ಕೂಡ ಇಲ್ಲ ಎಂಬ ಪರಿಸ್ಥಿತಿ ಎದುರಾಗಿದೆ. ವಿಲ್ಲೋ ಸ್ಪ್ರಿಂಗ್ಸ್​ ಎಂಬ 60 ವರ್ಷದ ವ್ಯಕ್ತಿ ಮೋಸ ಮಾಡಲು ಹೋಗಿ ಅಂಗಾಂಗಗಳನ್ನೇ ಕಳೆದುಕೊಂಡಿದ್ದಾನೆ. ಆತ ತನ್ನ ಕಾಲುಗಳನ್ನು ಬೇರೆಯವರಿಂದ ಕತ್ತರಿಸಿಕೊಂಡು ಬಕೆಟ್​ ಒಂದರಲ್ಲಿ ಅಡಗಿಸಿಟ್ಟಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ. ಪೂರ್ಣ ಸುದ್ದಿಯ ಓದಲು ಈ ಲಿಂಕ್ ಕ್ಲಿಕ್​ ಮಾಡಿ.
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Exit mobile version