ಹೊಸದಿಲ್ಲಿ: ಅಮೆರಿಕಕ್ಕೆ (US) ನರೇಂದ್ರ ಮೋದಿ (PM Narendra Modi) ಅವರಂಥ ದೃಢ ನಾಯಕತ್ವದ (Leadership) ಅಗತ್ಯವಿದೆ. ಅವರು ಭಾರತದಲ್ಲಿ (India) ನಾವು ಊಹಿಸಲಸಾಧ್ಯವಾದಷ್ಟು ಕೆಲಸಗಳನ್ನು ಮಾಡಿದ್ದಾರೆ” ಎಂದು ಖ್ಯಾತ ಬಹುರಾಷ್ಟ್ರೀಯ ಸಂಸ್ಥೆ ಜೆಪಿ ಮೋರ್ಗನ್‌ನ ಸಿಇಒ ಜೇಮಿ ಡೀಮನ್ (JPMorgan CEO Jamie Dimon) ಹೇಳಿದ್ದಾರೆ.
ಐಜೆಪಿ ಮೋರ್ಗಾನ್ ಚೇಸ್ ಸಿಇಒ ಜೇಮಿ ಡಿಮೊನ್ ಅವರು ಮಂಗಳವಾರ ನ್ಯೂಯಾರ್ಕ್‌ನ ಎಕನಾಮಿಕ್ ಕ್ಲಬ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, “ಮೋದಿ 40.0 ಕೋಟಿ ಜನರನ್ನು ಬಡತನದಿಂದ ಹೊರತಂದಿದ್ದಾರೆ. ಅಲ್ಲಿ ಶೌಚಾಲಯಗಳಿಲ್ಲದ 40 ಕೋಟಿ ಜನರು ಇದ್ದಾರೆ. ನಾವಿಲ್ಲಿ ಕೆಲಸಗಳನ್ನು ಹೇಗೆ ಮಾಡಬೇಕು ಎಂದು ಮೋದಿಯವರಿಗೆ ಈ ಬಗ್ಗೆ ಉಪನ್ಯಾಸ ನೀಡುತ್ತೇವೆ” ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಕಾರ್ಯಕ್ಷಮತೆಯನ್ನು ಜೇಮಿ ಶ್ಲಾಘಿಸಿದ್ದಾರೆ. “ಮೋದಿಯವರು ಭಾರತದಲ್ಲಿ ನಂಬಲಾಗದಂಥ ಶಿಕ್ಷಣ ವ್ಯವಸ್ಥೆ ಮತ್ತು ಮೂಲಸೌಕರ್ಯವನ್ನು ನೀಡುವ ಕೆಲಸ ಮಾಡುತ್ತಿದ್ದಾರೆ” ಎಂದಿದ್ದಾರೆ. “ಭಾರತದಲ್ಲಿ 70 ಕೋಟಿ ಜನರು ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ. ಅವರಿಗೆ ಪಾವತಿ ವರ್ಗಾವಣೆಗಳು ನಡೆಯುತ್ತಿವೆ. ಅವರು ಭಾರತದಲ್ಲಿ ಊಹಾತೀತ ಶಿಕ್ಷಣ ವ್ಯವಸ್ಥೆ, ಮೂಲಸೌಕರ್ಯಗಳನ್ನು ಮಾಡಿದ್ದಾರೆ. ಪಿಎಂ ಮೋದಿ ಕಠಿಣ ವ್ಯಕ್ತಿತ್ವದರಾಗಿರುವುದರಿಂದ ಹಳೆಯ ಅಧಿಕಾರಶಾಹಿ ವ್ಯವಸ್ಥೆಯನ್ನು ಮುರಿದು ಅವರು ತಮ್ಮ ಇಡೀ ದೇಶವನ್ನು ಮೇಲೆತ್ತುತ್ತಿದ್ದಾರೆ. ಅಮೆರಿಕದಲ್ಲಿ ಅಂಥವರು ಸ್ವಲ್ಪ ಬೇಕಿದೆ,” ಎಂದಿದ್ದಾರೆ ಜೇಮಿ.
“ಅಲ್ಲಿ ಪ್ರತಿಯೊಬ್ಬ ನಾಗರಿಕನನ್ನು ಬೆರಳಚ್ಚು ಅಥವಾ ಕಣ್ಣುಗುಡ್ಡೆಯಿಂದ ಗುರುತಿಸಲಾಗುತ್ತದೆ” ಎಂದು 18 ವರ್ಷಗಳಿಂದ ಯುಎಸ್‌ನ ಅತಿ ದೊಡ್ಡ ಸಾಲದಾತ ಸಂಸ್ಥೆಯ ಮುಖ್ಯಸ್ಥ ಡಿಮನ್ ಹೇಳಿದರು. ಯುಎಸ್‌ನಲ್ಲಿ ರಾಷ್ಟ್ರೀಯ ಸಾಲ, ಹಣದುಬ್ಬರ ಮತ್ತು ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಭೌಗೋಳಿಕ ರಾಜಕೀಯ ಸಂಘರ್ಷಗಳ ಬಗ್ಗೆ ಡಿಮನ್ ಎಚ್ಚರಿಕೆ ನೀಡಿದರು. ಹಣದುಬ್ಬರ ಮತ್ತು ಅದರ ಜೊತೆಗೆ ಹೆಚ್ಚಿನ ಬಡ್ಡಿದರಗಳು ನಿರೀಕ್ಷೆಗಿಂತ ಹೆಚ್ಚು ಕಾಲ ಉಳಿಯಬಹುದು ಎಂದು ತಿಳಿಸಿದರು.
ಸಾಲದಾತರು ಮತ್ತು ನಿಯಂತ್ರಕರ ನಡುವೆ ಹೆಚ್ಚು ಸಾಮರಸ್ಯದ ಸಂಬಂಧಕ್ಕೆ ಅವರು ಕರೆ ನೀಡಿದ್ದು, ಹೆಚ್ಚು ಅಂತರ್ಗತ ಆರ್ಥಿಕ ಬೆಳವಣಿಗೆಯ ಅವಶ್ಯಕತೆಯಿದೆ ಎಂದರು. ಇತರ ದೇಶಗಳಿಗೆ ಹೋಲಿಸಿದರೆ US ಮಿಲಿಟರಿ ಶಕ್ತಿ, ರಾಜಕೀಯ ಧ್ರುವೀಕರಣ ಮತ್ತು ರಾಷ್ಟ್ರದ ಆರ್ಥಿಕ ಕಾರ್ಯಕ್ಷಮತೆ ಉತ್ತಮವಾಗಿವೆ ಎಂದಿದ್ದಾರೆ.
ಇದನ್ನೂ ಓದಿ: PM Narendra Modi: ಮಕ್ಕಳಾಗಿ ವಿಶ್ವನಾಯಕರು! ಎಐ ಮೋಡಿಯಲ್ಲಿ ನರೇಂದ್ರ ಮೋದಿ ನೋಡಿ