ಬೆಂಗಳೂರು: ಕಾರ್ಕಳದಲ್ಲಿ (Karkala news) ಹಿಂದೂ ಯುವತಿಗೆ (Hindu Girl) ಮತ್ತು ಬರಿಸುವ ಔಷಧ ನೀಡಿ ಮುಸ್ಲಿಂ ಯುವಕ ಅತ್ಯಾಚಾರ ಎಸಗಿದ (Physical Abuse) ಪ್ರಕರಣವನ್ನು ವಿಪಕ್ಷ ಬಿಜೆಪಿ (BJP) ನಾಯಕರು ಖಂಡತುಂಡವಾಗಿ ಖಂಡಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ (Congress) ಸರಕಾರ ಬಂದ ಬಳಿಕ ಹಿಂದೂಗಳಿಗೆ ರಕ್ಷಣೆಯೇ ಇಲ್ಲ (Karkala Shocker) ಎಂದು ಕನಲಿದ್ದಾರೆ.
ಕಾರ್ಕಳದಲ್ಲಿ ನಡೆದ ಪ್ರಕರಣ, ಕಾಂಗ್ರೆಸ್ ಸರ್ಕಾರ ಬಂದ ನಂತರ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲ ಎಂಬುದನ್ನು ತೋರಿಸುತ್ತಿದೆ. ಅತ್ಯಾಚಾರ ಮಾಡ್ತಾರೆ, ಇಲ್ಲ ಕೇಸ್ ಮುಚ್ಚಿ ಹಾಕ್ತಾರೆ. ಹಾವೇರಿ, ಹುಬ್ಬಳ್ಳಿಯಲ್ಲಿ ನಡೆದ ಘಟನೆ ಕಾರ್ಕಳದಲ್ಲಿ ಮರುಕಳಿಸಿದೆ ಎಂದು ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ಟೀಕಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜಾನೇ ಭಾರತವನ್ನು ಬಾಂಗ್ಲಾ ದೇಶ ಮಾಡ್ತೀನಿ ಅಂತ ಹೇಳಿದ್ದಾನೆ. ಇವನ ಮೇಲೂ ಕಾಂಗ್ರೆಸ್‌ನವರು ಕ್ರಮ ತಗೊಂಡಿಲ್ಲ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಸಿದಿದೆ. ಅಧಿಕಾರ ನಡೆಸಲು ಕಾಂಗ್ರೆಸ್‌ನವರಿಗೆ ನೈತಿಕತೆ ಇಲ್ಲ. ಒಂದುವರೆ ವರ್ಷಗಳಿಂದ ಒಂದೇ ಒಂದು ರೂಪಾಯಿ ಅಭಿವೃದ್ಧಿ ಕೆಲಸಗಳು ಮಾಡಿಲ್ಲ ಎಂದು ಅಶೋಕ್ ಆರೋಪಿಸಿದ್ದಾರೆ.
ಕಾರ್ಕಳ ಶಾಸಕ ಸುನಿಲ್ ಕುಮಾರ್ (Sunil Kumar), ಅತ್ಯಾಚಾರ ಕೃತ್ಯವನ್ನು ಖಂಡಿಸಿದ್ದಾರೆ. ಇದೊಂದು ಪೂರ್ವ ಯೋಜಿತ ಕೃತ್ಯವಾಗಿದೆ. ಅಮಲು ಬರಿಸುವ ವಸ್ತುವನ್ನ ನೀಡಿ ಅತ್ಯಾಚಾರ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ ಹಾಳಾಗುವ ಜೊತೆಗೆ, ಇಂತ ಕೃತ್ಯಗಳನ್ನ ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಲವ್ ಜಿಹಾದ್‌ನಂತಹ ಪ್ರಕರಣಗಳ ಬಗ್ಗೆ ಸರ್ಕಾರ ಎಚ್ಚರ ವಹಿಸಬೇಕು ಎಂದು ಹೇಳಿದ್ದಾರೆ.
ಯುವತಿಯರು ಇಂತಹ ಘಟನೆಗಳ ಬಗ್ಗೆ ಎಚ್ಚರದಿಂದ ಇರಬೇಕು. ಸರ್ಕಾರ ಇಂತಹ ಪ್ರಕರಣಗಳ ಬಗ್ಗೆ ಗಂಭೀರವಾಗಿ ಚಿಂತಿಸಿ ಕ್ರಮ ತೆಗೆದುಕೊಳ್ಳಬೇಕು. ಹಿಂದೂ ಯುವತಿಯರೂ ಕೂಡ ಇದರಿಂದ ದೂರ ಇರಬೇಕು. ಆಸೆ, ಆಮಿಷಗಳಿಗೆ ಒಳಗಾಗಬಾರದು. ಮುಂದೆ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಸರ್ಕಾರಕ್ಕೆ ಶಾಸಕ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.
ಕಾರ್ಕಳದ ಹಿಂದೂ ಯುವತಿ ಅತ್ಯಾಚಾರ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣದ ಕುರಿತು ಮಾಹಿತಿ ಪಡೆಯಲು ಕಾರ್ಕಳ ಠಾಣೆಗೆ ಪಶ್ಚಿಮ ವಲಯ ಐಜಿ ಅಮಿತ್ ಸಿಂಗ್ ಆಗಮಿಸಿದ್ದಾರೆ. ಉಡುಪಿ ಎಸ್ಪಿ ಅರುಣ್ ಕೆ., ಡಿವೈಎಸ್ಪಿ ಅರವಿಂದ್ ಕಲಗುಜ್ಜಿ ಜೊತೆ ಮಾತುಕತೆ ನಡೆಸಿ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ಪಡೆದರು.
ಹಿಂದೂ ಯುವತಿಗೆ ಮತ್ತು ಬೆರೆಸುವ ಔಷಧ ಕುಡಿಸಿ ಮುಸ್ಲಿಂ ಯುವಕನಿಂದ ಅತ್ಯಾಚಾರ, ಕಾರ್ಕಳ ಉದ್ವಿಗ್ನ
ಉಡುಪಿ: ಕಾರ್ಕಳದಲ್ಲಿ (Karkala news) ನಿನ್ನೆ ಸಂಜೆ ಬರ್ಬರ ಅತ್ಯಾಚಾರ (Physical Abuse) ಪ್ರಕರಣ ವರದಿಯಾಗಿದೆ. ಇನ್‌ಸ್ಟಾಗ್ರಾಂನಲ್ಲಿ (Instagram) ಸ್ನೇಹ ಬೆಳೆಸಿದ ಹಿಂದೂ ಯುವತಿಯನ್ನು (Hindu girl) ಕರೆದೊಯ್ದ ಮುಸ್ಲಿಂ ಯುವಕ, ಆಕೆಗೆ ಬಿಯರ್‌ನಲ್ಲಿ ಮತ್ತು ಬರಿಸುವ ಔಷಧ ಸೇರಿಸಿ ಕುಡಿಸಿ ಅತ್ಯಾಚಾರ ಎಸಗಿದ್ದಾನೆ. ಇದಕ್ಕೆ ಆತನ ಇಬ್ಬರು ಸ್ನೇಹಿತರು ಸಹಕರಿಸಿದ್ದು, ಸಾಮೂಹಿಕ ಅತ್ಯಾಚಾರ ನಡೆದಿದೆಯೇ ಎಂಬುದು ಇನ್ನೂ ದೃಢಪಡಬೇಕಿದೆ. ಈ ಪ್ರಕರಣದಲ್ಲಿ ಕಾರ್ಕಳ ನಗರದಲ್ಲಿ ಕೋಮು ಉದ್ವಿಗ್ನತೆಗೆ ಕಾರಣವಾಗಿದೆ.
ನಿನ್ನೆ ಸಂಜೆ ನಡೆದ ಪ್ರಕರಣ ರಾತ್ರಿಯ ಹೊತ್ತಿಗೆ ಉಲ್ಬಣಿಸಿದ್ದು, ಹಿಂದೂ ಸಂಘಟನೆಗಳ ಕಾರ್ಯಕರ್ತರು ಠಾಣೆಯ ಮುಂದೆ ಜಮಾವಣೆಗೊಂದು ಯುವಕನ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಈ ಕುರಿತು ಹೇಳಿಕೆ ನೀಡಿದ್ದಾರೆ.
“ಕಾರ್ಕಳ ಠಾಣೆ ವ್ಯಾಪ್ತಿಯಲ್ಲಿ ಯುವತಿಯನ್ನು ಅಪಹರಿಸಿ ಅತ್ಯಾಚಾರ ದೂರು ಬಂದಿದೆ. ಸಂತ್ರಸ್ತೆಗೆ ಆರೋಪಿ ಜೊತೆಗೆ ಮೂರು ತಿಂಗಳಿಂದ ಪರಿಚಯವಿತ್ತು. ಇನ್ಸ್ಟಾಗ್ರಾಮ್ ಮೂಲಕ ಪರಸ್ಪರ ಪರಿಚಯ ಹೊಂದಿದ್ದರು. ಶುಕ್ರವಾರ ಆರೋಪಿ ಅಲ್ತಾಫ್ ಕರೆ ಮಾಡಿ ಸಂತ್ರಸ್ತೆಗೆ ಬರಲು ಹೇಳಿದ್ದ. ಆಕೆ ಬಂದಾಗ ಅಲ್ಲಿಂದ ಅಪಹರಿಸಿದ್ದ. ಬಿಯರ್‌ನಲ್ಲಿ ಏನನ್ನೊ ಬೆರೆಸಿ ಕುಡಿಸಿ ಮತ್ತು ಬರಿಸಿ ಅತ್ಯಾಚಾರ ಮಾಡಿದ್ದಾಗಿ ಸಂತ್ರಸ್ತೆ ತಿಳಿಸಿದ್ದಾಳೆ. ಆರೋಪಿ ಅಲ್ತಾಫ್‌ನನ್ನು ಬಂಧಿಸಲಾಗಿದೆ” ಎಂದು ಅರುಣ್ ಕುಮಾರ್ ಹೇಳಿದ್ದಾರೆ.
ಆರೋಪಿಗೆ ಬಿಯರ್ ಬಾಟಲ್ ತಂದುಕೊಟ್ಟಿದ್ದ ಇಬ್ಬರು ಆರೋಪಿಗಳ ಪೈಕಿ ಸುಬೇರ್ ಎಂಬಾತನನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ವಾಹನವನ್ನು ಸೀಜ್ ಮಾಡಲಾಗಿದೆ. ಸಂತ್ರಸ್ತೆಗೆ ಮಣಿಪಾಲ ಕೆಎಂಸಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ. ಯುವತಿ ಜೇನು ಕೃಷಿ ಇಲಾಖೆಯಲ್ಲಿ ಕೆಲಸಕ್ಕಿದ್ದಳು. ಇನ್‌ಸ್ಟಾಗ್ರಾಂನಲ್ಲಿ ಇವರಿಗೆ ಸ್ನೇಹ ಬೆಳೆದಿತ್ತು ಎಂದು ತಿಳಿದುಬಂದಿದೆ.
ಮಾದಕ ಪದಾರ್ಥ ನೀಡಿ ಹಿಂದೂ ಯುವತಿಯ ರೇಪ್ ಎಸಗಿದ ಪ್ರಕರಣದಲ್ಲಿ ಕಾರ್ಕಳ ನಗರ ಠಾಣೆಯಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಲ್ತಾಫ್ & ಇಬ್ಬರ ವಿರುದ್ಧ ಕಾರಿನಲ್ಲಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ರೇಪ್ ಮಾಡಿದ ಆರೋಪ ಪ್ರಕರಣ ದಾಖಲಾಗಿದೆ. ನಿನ್ನೆ ಮಧ್ಯಾಹ್ನ ಆಕೆಯನ್ನು ಕರೆದೊಯ್ದಿದ್ದ ಅಲ್ತಾಫ್, ಮಾದಕ ಪಾನೀಯ ಕುಡಿಸಿ ಮತ್ತು ಬರಿಸಿ ಸಂಜೆಯವರೆಗೆ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.
ಆರೋಪಿ ಅಲ್ತಾಫ್ ವಿರುದ್ಧ ಹಿಂದೂ ಯುವತಿಯ ತಾಯಿಯಿಂದ ರೇಪ್ & ಕಿಡ್ನಾಪ್ ಪ್ರಕರಣ ದಾಖಲಾಗಿದೆ. ಪ್ರಮುಖ ಆರೋಪಿ ಅಲ್ತಾಫ್ ಮತ್ತು ಸಹಕರಿಸಿದ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿಗೆ ಬಲೆ ಬೀಸಲಾಗಿದೆ.
ಶುಕ್ರವಾರ ಮಧ್ಯಾಹ್ನ ಆಕೆಯನ್ನು ಪುಸಲಾಯಿಸಿ ಕರೆದೊಯ್ದಿದ್ದ ಆರೋಪಿ, ಸಂಜೆ ಆಕೆಯನ್ನು ಮನೆ ಸಮೀಪ ಬಿಟ್ಟು ಹೋಗಿದ್ದ. ನಿನ್ನೆ ರಾತ್ರಿ ಠಾಣೆ ಎದುರು ಜಮಾಯಿಸಿದ್ದ ಹಿಂದೂ ಕಾರ್ಯಕರ್ತರು, ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: Love Jihad: ಹಿಂದೂ ಯುವತಿಯ ಕರೆದೊಯ್ದ ಮುಸ್ಲಿಂ ಯುವಕ; ಕಾರ್ಕಳ ಪ್ರಕ್ಷುಬ್ಧ