ಬೆಂಗಳೂರು: ಇಂದು ಬೆಳಗ್ಗೆ ರಾಜ್ಯದ 54 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ (Lokayukta Raid) ನಡೆಸಿದ್ದು, ಈ ಸಂದರ್ಭ ಬೆಂಗಳೂರಿನಲ್ಲಿ ಅಖ್ತರ್ ಅಲಿ ಎಂಬ ಅಧಿಕಾರಿಯ ಮನೆಗೆ ಅಧಿಕಾರಿಗಳು ದಾಳಿ ನಡೆಸಿದಾಗ ಆತ ಚಿನ್ನಾಭರಣಗಳನ್ನು (Gold Jewelry) ಪಕ್ಕದ ಮನೆಗೆ (neighbour house) ಎಸೆದು ಪಾರಾಗಲು ನೋಡಿದ್ದಾರೆ! ಇದನ್ನೂ ಲೋಕಾಯುಕ್ತ ಅಧಿಕಾರಿಗಳು (Lokayukta Officers) ವಶಪಡಿಸಿಕೊಂಡಿದ್ದಾರೆ.
ಭೂಮಾಪನ ಇಲಾಖೆ ಡೆಪ್ಯೂಟಿ ಕಂಟ್ರೋಲರ್ ಅಖ್ತರ್ ಅಲಿ ಮನೆಗೆ ದಾಳಿ ನಡೆಸಿದಾಗ ಈ ಘಟನೆ ನಡೆಯಿತು. ಪಕ್ಕದ ಮನೆಯ ಕಿಟಕಿಗೆ ಅಖ್ತರ್ ಆಲಿ ಮನೆ ಗೋಡೆ ಕನೆಕ್ಟ್ ಆಗಿದ್ದು, ಅಧಿಕಾರಿಗಳು ಮನೆಗೆ ಎಂಟ್ರಿ ನೀಡುತ್ತಿದ್ದಂತೆ ಪಕ್ಕದ ಮನೆಯ ಕಿಟಕಿಯೊಳಗೆ ಚಿನ್ನ ಇದ್ದ ಬ್ಯಾಗ್ ಎಸೆದಿದ್ದ ಅಖ್ತರ್ ಆಲಿ. ಪಕ್ಕದ ಮನೆಯ ಕಿಟಕಿಗೆ ಹತ್ತಿರದಲ್ಲೇ ಅಖ್ತರ್ ಆಲಿ ಮನೆಯ ಮೊದಲ ಅಂತಸ್ತು ಇದೆ. ಅಲ್ಲಿಂದ ಪಕ್ಕದ ಮನೆ ಕಿಟಕಿ ಒಳಗೆ ಬ್ಯಾಗ್‌ಗೆ ಚಿನ್ನ ತುಂಬಿ ಅಖ್ತರ್ ಆಲಿ ಎಸೆದಿದ್ದ.
ಬ್ಯಾಗ್ ಎಸೆದದ್ದನ್ನು ನೋಡಿ ನೆರೆ ಮನೆ ನಿವಾಸಿ ಖುದ್ದು ಅಧಿಕಾರಿಗಳನ್ನು ಕರೆದು ತೋರಿಸಿದ್ದಾರೆ. ಕೂಡಲೇ ಹೋಗಿ ಪರಿಶೀಲನೆ ಮಾಡಿದಾಗ ಬ್ಯಾಗ್‌ನಲ್ಲಿ ಚಿನ್ನ ಇರುವುದು ಪತ್ತೆಯಾಗಿದೆ. ಕೂಡಲೇ ಬ್ಯಾಗನ್ನು ಲೋಕಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಬ್ಯಾಗನ್ನು ಅಖ್ತರ್ ಆಲಿ ಮನೆಗೆ ತಂದು ಪರಿಶೀಲನೆ ಮಾಡಿದಾಗ, ಒಂದು ಬ್ಯಾಗ್ ತುಂಬಾ ಚಿನ್ನದ ಒಡವೆಗಳು ಇರುವುದು ಪತ್ತೆಯಾಗಿದೆ. ಸದ್ಯ ಸಿಕ್ಕಿರುವ ಚಿನ್ನ ತೂಕ ಹಾಕಲು ಸಿಬ್ಬಂದಿಯನ್ನು ಕರೆಸಲಾಗಿದೆ. ಅಖ್ತರ್ ಅಲಿ ಅಕ್ಕಪಕ್ಕದ ಮನೆಯಲ್ಲೂ ಅಧಿಕಾರಿಗಳ ತಂಡ ತಲಾಶ್ ಮಾಡಿದೆ.
ದಾಳಿ ವೇಳೆ ಮನೆಯಲ್ಲೇ ಇದ್ದ ಅಖ್ತರ್ ಆಲಿಯ ಬಳಿಯಿಂದ ಸದ್ಯ ಕೆಲವು ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದು ತಂಡ ಪರಿಶೀಲನೆ ಮಾಡುತ್ತಿದೆ. ಕೆಲವು ದಾಖಲೆಗಳನ್ನೂ ಪಕ್ಕದ ಮನೆಯ ಕಿಟಕಿಯ ಮೂಲಕ ಅಲಿ ತಳ್ಳಿರುವ ಶಂಕೆ ಇದೆ. ಹೀಗಾಗಿ ಪಕ್ಕದ ಮನೆಯನ್ನೂ ಶೋಧ ನಡೆಸಲಾಗಿದೆ. ಇದುವರೆಗೆ ಅಖ್ತರ್ ಅಲಿ ಮನೆಯಲ್ಲಿ 25 ಲಕ್ಷ ರೂ. ನಗದು, 2.20 ಕೆಜಿ ಚಿನ್ನಾಭರಣ, 2 ಕೆಜಿ ಬೆಳ್ಳಿ ವಸ್ತುಗಳು, ಐವತ್ತಕ್ಕೂ ಹೆಚ್ಚು ದುಬಾರಿ ವಾಚ್‌ಗಳು, ಲಕ್ಷಾಂತರ ಮೌಲ್ಯದ ಡೈಮಂಡ್ ಆಭರಣಗಳು ಪತ್ತೆಯಾಗಿವೆ.
ಲೋಕಾಯುಕ್ತ ಎಸ್‌ಪಿ ವಂಶಿಕೃಷ್ಣ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ʼಇವತ್ತು ಬೆಂಗಳೂರು ಸಿಟಿ ಘಟಕದಿಂದ ಮೂರು ಆಫೀಸರ್ಸ್ ಮನೆ ದಾಳಿ ಮಾಡಲಾಗಿದೆ. ಅಖ್ತರ್ ಅವರ ಮನೆಯಲ್ಲೂ ಚಿನ್ನಾಭರಣ ಸಿಕ್ಕಿದೆ. ಈಗಾಗಲೇ 2.2 ಕೆಜಿ ಚಿನ್ನಾಭರಣ, 25 ಲಕ್ಷ ಹಣ ಸಿಕ್ಕಿದೆ. ಅವರು ಚಿನ್ನದ ಬ್ಯಾಗನ್ನು ಪಕ್ಕದ ಮನೆಗೆ ಎಸೆದಿದ್ದಾರೆ. ಅದನ್ನು ಕೂಡ ನಮ್ಮ ಟೀಂ ರಿಕವರಿ ಮಾಡಿದೆ. ಸದ್ಯ ಇನ್ನೂ ಪರಿಶೀಲನೆ ಮುಂದುವರೆದಿದೆ. ಬಿ.ಕೆ ರಾಜ ಹಾಗೂ ರಮೇಶ್ ಕುಮಾರ್ ಅವರ ಮನೆಯಲ್ಲಿ ಪರಿಶೀಲನೆ ಮುಂದುವರೆದಿದೆʼ ಎಂದಿದ್ದಾರೆ.
ಯಾವ ಅಧಿಕಾರಿಗಳ ಮೇಲೆ ದಾಳಿ?
ತುಮಕೂರು – ಮುದ್ದುಕುಮಾರ್ ಅಡಿಷನಲ್ ಡೈರೆಕ್ಟರ್ ಇಂಡಸ್ಟ್ರಿ ಆ್ಯಂಡ್ ಕಾಮರ್ಸ್ ಡಿಪಾರ್ಟ್ಮೆಂಟ್
ಯಾದಗಿರಿ – ಬಲವಂತ್ ಯೋಜನ ನಿರ್ದೇಶಕ , ಯಾದಗಿರಿ ಜಿಲ್ಲಾ ಪಂಚಾಯತ್
ಬೆಂಗಳೂರು ಗ್ರಾಮಾಂತರ – ಸಿದ್ದಪ್ಪ ಹಿರಿಯ ಪಶು ವೈದ್ಯ ದೊಡ್ಡಬಳ್ಳಾಪುರ
ಬೆಂಗಳೂರು ಗ್ರಾಮಾಂತರ ನರಸಿಂಹ ಮೂರ್ತಿ ಕೆ – ಮುನ್ಸಿಪಲ್ ಅಡ್ಮಿನಿಸ್ಟ್ರೇಷನ್ ಸರ್ವಿಸ್ ಕಮೀಷನರ್ ಹೆಬ್ಬಗೋಡಿ
ಬೆಂಗಳೂರು ಸಿಟಿ – ಬಿವಿ ರಾಜ ಎಫ್‌ಡಿಎ ಕೆಐಎಡಿಬಿ
ಬೆಂಗಳೂರು ಸಿಟಿ – ರಮೇಶ್ ಕುಮಾರ್ ಜಂಟಿ ಆಯುಕ್ತ ವಾಣಿಜ್ಯ ತೆರಿಗೆ ಇಲಾಖೆ
ಬೆಂಗಳೂರು ಸಿಟಿ- ಅಕ್ತರ್ ಅಲಿ – ಡೆಪ್ಯೂಟಿ ಕಂಟ್ರೋಲರ್ ಮಾಪನಾ ಇಲಾಖೆ
ಶಿವಮೊಗ್ಗ – ಸಿ ನಾಗೇಶ್ – ಅಂತರಗಂಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಭದ್ರಾವತಿ
ಶಿವಮೊಗ್ಗ ಪ್ರಕಾಶ್ – ಡೆಪ್ಯೂಟಿ ಡೈರೆಕ್ಟರ್ – ತೋಟಗಾರಿಕಾ ಇಲಾಖೆ
ಬೆಂಗಳೂರು ಸಿಟಿ – ಚೇತನ್ ಕುಮಾರ್ – ಕಾರ್ಮಿಕ ಇಲಾಖೆ ಅಧಿಕಾರಿ ಮಂಡ್ಯ ವಿಭಾಗ
ಬೆಂಗಳೂರು ಸಿಟಿ – ಆನಂದ್ ಸಿ ಎಲ್ – ಕಮೀಷನರ್ ಮಂಗಳೂರು ಮಹಾನಗರ ಪಾಲಿಕೆ
ಬೆಂಗಳೂರು ಸಿಟಿ – ಮಂಜುನಾಥ್ ಟಿ ಆರ್ – ಎಫ್ ಡಿಎ ಬೆಂಗಳೂರು ನಾರ್ತ್ ಸಬ್ ಡಿವಿಷನ್ ಆಫೀಸರ್
ಇದನ್ನೂ ಓದಿ: Lokayukta Raid: ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಶಾಕ್, ರಾಜ್ಯಾದ್ಯಂತ ಲೋಕಾಯುಕ್ತ ದಾಳಿ