Site icon Vistara News

Modi in Karnataka: ಮಂಗಳೂರಲ್ಲಿ ಮೋದಿ ರೋಡ್ ಶೋ ಪಕ್ಕದಲ್ಲೇ ಬೆಂಕಿ ಅವಘಡ!

ಮಂಗಳೂರು: ಪ್ರಧಾನಿ ಮೋದಿ ಅವರ ರೋಡ್ ಶೋ (Modi in Karnataka) ಪಕ್ಕದಲ್ಲಿ ಬೆಂಕಿ ಅವಘಡ ನಡೆದಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ನಗರದ ಭಾರತ್ ಮಾಲ್ ಪಕ್ಕದ ಔಷಧ ಗೋಡೌನ್‌ನಲ್ಲಿ ಬೆಂಕಿ (Fire Accident) ಕಾಣಿಸಿಕೊಂಡು ಆತಂಕದ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗದ ನರಸಿಂಹ ಪ್ರಸಾದ್ ಅವರ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನರೇಂದ್ರ ಮೋದಿ ರೋಡ್ ಶೋ ನಡೆಯುತ್ತಿದ್ದ ಮಾರ್ಗದಿಂದ ಈ ಕಟ್ಟಡ ಕೇವಲ 50 ಮೀಟರ್ ಅಂತರದಲ್ಲಿದೆ. ನಾಯಕ್ ಹೆಲ್ತ್ ಕೇರ್ ಗೋಡೌನ್‌ನಲ್ಲಿ ಔಷಧ, ವೈದ್ಯಕೀಯ ಉಪಕರಣ ಸಂಗ್ರಹಿಸಲಾಗಿತ್ತು. ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳಲ್ಲಿ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ.

ಇದನ್ನೂ ಓದಿ | Modi in Karnataka: ದೇಶಾದ್ಯಂತ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಕರ್ನಾಟಕದಿಂದ ನೂರಾರು ಕೋಟಿ ರೂ. ಕಪ್ಪು ಹಣ ರವಾನೆ: ಮೋದಿ ಆರೋಪ

ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ!

ಮಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿಯ ಭದ್ರಕೋಟೆ ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೇನಿಯಾ ಕಂಡುಬಂತು. ಮೈಸೂರು ಸಮಾವೇಶ ಮುಗಿಸಿ ನೇರವಾಗಿ ಮಂಗಳೂರಿಗೆ ಬಂದಿಳಿದ ಮೋದಿಯನ್ನು (Modi in Karnataka) ನೋಡಲು ರಸ್ತೆಗಳ ಇಕ್ಕೆಲಗಳಲ್ಲೂ ಜನ ಸೇರಿದ್ದರು. ಸಾವಿರಾರು ಮಂದಿ ಮೋದಿ ರೋಡ್‌ ಶೋಗೆ ಸಾಕ್ಷಿಯಾದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ನಾರಾಯಣ ಗುರು ಸರ್ಕಲ್‌ನಿಂದ ನವಭಾರತ್‌ ಸರ್ಕಲ್‌ವರೆಗೆ ಮೋದಿ ರೋಡ್‌ ಶೋ ನಡೆಸಿದರು. ಈ ವೇಳೆ “ಮೋದಿ.. ಮೋದಿ.. ಜೈ ಜೈ ಮೋದಿ” ಎಂಬ ಘೋಷಣೆ ಮುಗಿಲು ಮುಟ್ಟಿತ್ತು. ಮಧ್ಯೆ ಮಧ್ಯೆ ಜೈ ಶ್ರೀರಾಮ್‌ ಘೋಷಣೆ ಕೇಳಿಬಂತು.

ನಾರಾಯಣ ಗುರು ಸರ್ಕಲ್‌ನಿಂದ ಲಾಲ್‌ಬಾಗ್‌ನ ಮಂಗಳೂರು ಪಾಲಿಕೆ ಕಚೇರಿ, ಬಳ್ಳಾಲ್‌ಬಾಗ್ ದಾಟಿ ಎಂ.ಜಿ. ರಸ್ತೆ ಮೂಲಕ ಸಾಗಿ ಪಿವಿಎಸ್ ಸರ್ಕಲ್ ಬಳಿ ಬಲಕ್ಕೆ ತಿರುಗಿ ನವಭಾರತ್ ಸರ್ಕಲ್‌ವರೆಗೆ ಸುಮಾರು 2 ಕಿ.ಮೀ. ದೂರದವರೆಗೆ ಮೋದಿ ರೋಡ್‌ ಶೋ ನಡೆಸಿದರು. ಹೀಗಾಗಿ ರೋಡ್‌ ಶೋ ನಡೆದ ಮಾರ್ಗವೇ ಕೇಸರಿ ಮಯವಾಗಿತ್ತು. ಎಲ್ಲಿ ನೋಡಿದರಲ್ಲಿ ಕೇಸರಿ ಬಣ್ಣವೇ ಕಣ್ಣು ಕುಕ್ಕುತ್ತಲಿತ್ತು.
ಬ್ರಿಜೇಶ್‌ ಚೌಟ, ಕೋಟ ಶ್ರೀನಿವಾಸ್‌ ಪೂಜಾರಿ ಅಕ್ಕ ಪಕ್ಕ

ನರೇಂದ್ರ ಮೋದಿ ಅವರ ರೋಡ್‌ ಪ್ರಾರಂಭವಾಗುತ್ತಿದ್ದಂತೆ ಸೇರಿದ್ದ ನಾಗರಿಕರು ಮೋದಿ ಮೋದಿ ಘೋಷಣೆಯನ್ನು ಕೂಗಿದರು. ಈ ವೇಳೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್‌ ಚೌಟ ಹಾಗೂ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕೋಟ ಶ್ರೀನಿವಾಸ್‌ ಪೂಜಾರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಅಕ್ಕ-ಪಕ್ಕ ನಿಂತಿದ್ದರು. ಮೋದಿ, ಚೌಟ ಹಾಗೂ ಪೂಜಾರಿ ಬಿಜೆಪಿಯ ಕಮಲ ಚಿಹ್ನೆಯ ಲೋಗೋವನ್ನು ಪ್ರದರ್ಶನ ಮಾಡಿದರು.

Exit mobile version