Site icon Vistara News

Monsoon Prediction: ಈ ವರ್ಷ ಸಾಮಾನ್ಯ ಮಾನ್ಸೂನ್; ಕರ್ನಾಟಕದಲ್ಲಿ ಅಧಿಕ ಮುಂಗಾರು

Weather Update and Monsoon starts withdrawing from India

ಹೊಸದಿಲ್ಲಿ: ಈ ವರ್ಷ ಜೂನ್ ಮತ್ತು ಸೆಪ್ಟೆಂಬರ್ ನಡುವೆ ಭಾರತವು ʼಸಾಮಾನ್ಯ’ ಮಾನ್ಸೂನ್ (Monsoon) ಅನ್ನು ಅನುಭವಿಸುವ ನಿರೀಕ್ಷೆ ಇದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್ (Skymet) ಮಂಗಳವಾರ ತಿಳಿಸಿದೆ. ಮುಂಗಾರು ಮಳೆ ಶೇಕಡಾ 102ರಷ್ಟು ಆಗುವ ನಿರೀಕ್ಷೆಯಿದೆ (Monsoon prediction) ಎಂದು ಮಂಗಳವಾರ ಹೇಳಿದೆ.

ಭಾರತೀಯ ಮಾನ್ಸೂನ್‌ನ (monsoon) ನಾಲ್ಕು ತಿಂಗಳ ಅವಧಿಯ ದೀರ್ಘಾವಧಿ ಸರಾಸರಿ 868.6 ಎಎಂ ಇದೆ. ಜೂನ್‌ನಿಂದ ಸೆಪ್ಟೆಂಬರ್ ವರೆಗೆ, ಮಧ್ಯ ಮತ್ತು ಪಶ್ಚಿಮ ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ. ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಸಾಮಾನ್ಯ ಮಳೆಯಾಗಲಿದೆ. ಈಶಾನ್ಯ ಭಾರತ ಮತ್ತು ಪೂರ್ವ ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಮುನ್ಸೂಚಕರು ತಿಳಿಸಿದ್ದಾರೆ.

ʼಮಾನ್ಸೂನ್ ಮುನ್ಸೂಚನೆ 2024′ ವರದಿಯು ದೇಶದ ದಕ್ಷಿಣ, ಪಶ್ಚಿಮ ಮತ್ತು ವಾಯುವ್ಯ ಪ್ರದೇಶಗಳಲ್ಲಿ ಅನುಕೂಲಕರವಾದ ಮಳೆಯಾಗಲಿದೆ ಎಂದು ಸೂಚಿಸಿದೆ. ಮಳೆಯಾಶ್ರಿತ ಪ್ರದೇಶಗಳಾದ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಸಾಕಷ್ಟು ಮಳೆಯಾಗುವ ನಿರೀಕ್ಷೆಯಿದೆ.

ಆದರೆ ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಪೂರ್ವ ರಾಜ್ಯಗಳು ಗರಿಷ್ಠ ಮಾನ್ಸೂನ್ ತಿಂಗಳುಗಳಲ್ಲಿ ಮಳೆ ಕೊರತೆ ಅಪಾಯ ಎದುರಿಸಲಿವೆ. ಈಶಾನ್ಯ ಭಾರತವು ಋತುವಿನ ಮೊದಲಾರ್ಧದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯನ್ನು ಅನುಭವಿಸಬಹುದು. ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಗೋವಾದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಮತ್ತು ಕೇಂದ್ರ ಭಾಗಗಳಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದು ಸ್ಕೈಮೆಟ್ ತಿಳಿಸಿದೆ.

“ಸೂಪರ್ ಎಲ್ ನಿನೋದಿಂದ ಬಲವಾದ ಲಾ ನಿನಾಕ್ಕೆ ಗಮನಾರ್ಹ ಪರಿವರ್ತನೆಯಾಗಲಿದ್ದು, ಐತಿಹಾಸಿಕವಾಗಿ ಹೆಚ್ಚಿನ ಮಾನ್ಸೂನ್ ಅನ್ನು ಉಂಟಾಗಿಸಲಿದೆ” ಎಂದು ಸ್ಕೈಮೆಟ್‌ನ MD ಜತಿನ್ ಸಿಂಗ್ ಹೇಳಿದ್ದಾರೆ. “ಆದರೆ ಮಾನ್ಸೂನ್ ಅವಧಿಯು ದುರ್ಬಲವಾಗಿ ಪ್ರಾರಂಭವಾಗಬಹುದು. ಇದು ಎಲ್ ನಿನೊದ ಪಶ್ಚಾತ್‌ ಪರಿಣಾಮ. ಮಾನ್ಸೂನ್‌ ಋತುವಿನ ದ್ವಿತೀಯಾರ್ಧವು ಪ್ರಾಥಮಿಕ ಹಂತಕ್ಕಿಂತ ವಿಪರೀತವಾಗಿ ಇರಬಹುದು.”

ಎಲ್ ನಿನೊದ ದಕ್ಷಿಣ ಕಂಪನ, ಹಿಂದೂ ಮಹಾಸಾಗರದ ಡೈಪೋಲ್‌ನಂತಹ ಇತರ ಅಂಶಗಳು ಮಾನ್ಸೂನ್ ಮೇಲೆ ಪ್ರಭಾವ ಬೀರುತ್ತವೆ ಎಂದು ಸ್ಕೈಮೆಟ್ ವರದಿಯು ತಿಳಿಸಿದೆ. ದ್ವಿಧ್ರುವಿ ಅಥವಾ ಡೈಪೋಲ್‌ ಧನಾತ್ಮಕವಾಗಿದ್ದು, ಇದು ಲಾ ನಿನಾಗೆ ಪೂರಕವಾಗಿದೆ ಎಂದು ನಿರೀಕ್ಷಿಸಲಾಗಿದೆ. ಇದು ಉತ್ತಮ ಮಾನ್ಸೂನ್ ಭವಿಷ್ಯವನ್ನು ಹೆಚ್ಚಿಸಲಿದೆ. ಎಲ್ ನಿನೊದಿಂದ ಲಾ ನಿನಾಗೆ ತ್ವರಿತ ಪರಿವರ್ತನೆಯು ಋತುವಿನ ಆರಂಭದಲ್ಲಿ ಸ್ವಲ್ಪ ಅಡ್ಡಿಪಡಿಸಲಿದೆ. ಹೀಗಾಗಿ ಋತುವಿನ ಉದ್ದಕ್ಕೂ ಮಳೆಯ ವಿತರಣೆಯು ಅಸಮವಾಗಿರಬಹುದು.

ಭೌಗೋಳಿಕವಾಗಿ ವರದಿಯು ಭಾರತದ ದಕ್ಷಿಣ, ಪಶ್ಚಿಮ ಮತ್ತು ವಾಯುವ್ಯ ಪ್ರದೇಶಗಳಲ್ಲಿ ಅನುಕೂಲಕರವಾದ ಮಳೆಯನ್ನು ಅಂದಾಜಿಸಿದೆ. ಕೋರ್ ಮಾನ್ಸೂನ್ ಮಳೆಯಾಶ್ರಿತ ಪ್ರದೇಶಗಳಾದ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಸಾಕಷ್ಟು ಮಳೆಯಾಗುವ ನಿರೀಕ್ಷೆಯಿದೆ. ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಪೂರ್ವ ರಾಜ್ಯಗಳು ಗರಿಷ್ಠ ಮಾನ್ಸೂನ್ ತಿಂಗಳುಗಳಲ್ಲಿ ಮಳೆ ಕೊರತೆ ಅಪಾಯವನ್ನು ಎದುರಿಸಲಿವೆ. ಈಶಾನ್ಯ ಭಾರತವು ಋತುವಿನ ಮೊದಲಾರ್ಧದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯನ್ನು ಅನುಭವಿಸಬಹುದು.

ವರದಿಯ ಪ್ರಕಾರ, ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಮಾನ್ಸೂನ್ ಸಂಭವನೀಯತೆಯು ಅಧಿಕ ಮಳೆಯಾಗುವ ಸಾಧ್ಯತೆಯನ್ನು 10 ಪ್ರತಿಶತ, ಸಾಮಾನ್ಯ ಮಳೆಯ 45 ಪ್ರತಿಶತ ಸಾಧ್ಯತೆಯನ್ನು ಸೂಚಿಸಿದೆ. ಜೊತೆಗೆ 20 ಪ್ರತಿಶತದಷ್ಟು ಸಾಮಾನ್ಯ-ಹೆಚ್ಚು ಮಳೆ, 15 ಪ್ರತಿಶತ ಕಡಿಮೆ- ಸಾಮಾನ್ಯ ಮಳೆ, ಮತ್ತು ಶೇ.10 ರಷ್ಟು ಬರ ಪರಿಸ್ಥಿತಿಯ ಸಾಧ್ಯತೆ ಊಹಿಸಿದೆ.

ಮಾಸಿಕ ಪ್ರಮಾಣದಲ್ಲಿ, ಜೂನ್ 95%, ಜುಲೈ 105%, ಆಗಸ್ಟ್ 98% ಮತ್ತು ಸೆಪ್ಟೆಂಬರ್ 110 ಸರಾಸರಿ ಮಳೆಯನ್ನು ಪಡೆಯುವ ಮುನ್ಸೂಚನೆ ಇದೆ. ಹವಾಮಾನ ಸವಾಲುಗಳ ಹೊರತಾಗಿಯೂ, ವರದಿಯು ಈ ವರ್ಷ ಸಾಮಾನ್ಯ ಮಾನ್ಸೂನ್ ಋತುವನ್ನು ಊಹಿಸಿದೆ.

ಇದನ್ನೂ ಓದಿ: Monsoon Celebrity Tips: ಮಾನ್ಸೂನ್‌ನಲ್ಲಿ ಲೇಯರ್‌ ಲುಕ್‌ಗೆ ಸೈ ಎನ್ನುವ ನಟಿ ಭೂಮಿಕಾ

Exit mobile version