Monsoon Prediction: ಈ ವರ್ಷ ಸಾಮಾನ್ಯ ಮಾನ್ಸೂನ್; ಕರ್ನಾಟಕದಲ್ಲಿ ಅಧಿಕ ಮುಂಗಾರು - Vistara News

ಪ್ರಮುಖ ಸುದ್ದಿ

Monsoon Prediction: ಈ ವರ್ಷ ಸಾಮಾನ್ಯ ಮಾನ್ಸೂನ್; ಕರ್ನಾಟಕದಲ್ಲಿ ಅಧಿಕ ಮುಂಗಾರು

ಭಾರತೀಯ ಮಾನ್ಸೂನ್‌ನ (monsoon) ನಾಲ್ಕು ತಿಂಗಳ ಅವಧಿಯ ದೀರ್ಘಾವಧಿ ಸರಾಸರಿ 868.6 ಎಎಂ ಇದೆ. ಜೂನ್‌ನಿಂದ ಸೆಪ್ಟೆಂಬರ್ ವರೆಗೆ, ಮಧ್ಯ ಮತ್ತು ಪಶ್ಚಿಮ ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ. ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಸಾಮಾನ್ಯ ಮಳೆಯಾಗಲಿದೆ. ಈಶಾನ್ಯ ಭಾರತ ಮತ್ತು ಪೂರ್ವ ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಮುನ್ಸೂಚಕರು ತಿಳಿಸಿದ್ದಾರೆ.

VISTARANEWS.COM


on

Weather Update and Monsoon starts withdrawing from India
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ಈ ವರ್ಷ ಜೂನ್ ಮತ್ತು ಸೆಪ್ಟೆಂಬರ್ ನಡುವೆ ಭಾರತವು ʼಸಾಮಾನ್ಯ’ ಮಾನ್ಸೂನ್ (Monsoon) ಅನ್ನು ಅನುಭವಿಸುವ ನಿರೀಕ್ಷೆ ಇದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್ (Skymet) ಮಂಗಳವಾರ ತಿಳಿಸಿದೆ. ಮುಂಗಾರು ಮಳೆ ಶೇಕಡಾ 102ರಷ್ಟು ಆಗುವ ನಿರೀಕ್ಷೆಯಿದೆ (Monsoon prediction) ಎಂದು ಮಂಗಳವಾರ ಹೇಳಿದೆ.

ಭಾರತೀಯ ಮಾನ್ಸೂನ್‌ನ (monsoon) ನಾಲ್ಕು ತಿಂಗಳ ಅವಧಿಯ ದೀರ್ಘಾವಧಿ ಸರಾಸರಿ 868.6 ಎಎಂ ಇದೆ. ಜೂನ್‌ನಿಂದ ಸೆಪ್ಟೆಂಬರ್ ವರೆಗೆ, ಮಧ್ಯ ಮತ್ತು ಪಶ್ಚಿಮ ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ. ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಸಾಮಾನ್ಯ ಮಳೆಯಾಗಲಿದೆ. ಈಶಾನ್ಯ ಭಾರತ ಮತ್ತು ಪೂರ್ವ ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಮುನ್ಸೂಚಕರು ತಿಳಿಸಿದ್ದಾರೆ.

ʼಮಾನ್ಸೂನ್ ಮುನ್ಸೂಚನೆ 2024′ ವರದಿಯು ದೇಶದ ದಕ್ಷಿಣ, ಪಶ್ಚಿಮ ಮತ್ತು ವಾಯುವ್ಯ ಪ್ರದೇಶಗಳಲ್ಲಿ ಅನುಕೂಲಕರವಾದ ಮಳೆಯಾಗಲಿದೆ ಎಂದು ಸೂಚಿಸಿದೆ. ಮಳೆಯಾಶ್ರಿತ ಪ್ರದೇಶಗಳಾದ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಸಾಕಷ್ಟು ಮಳೆಯಾಗುವ ನಿರೀಕ್ಷೆಯಿದೆ.

ಆದರೆ ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಪೂರ್ವ ರಾಜ್ಯಗಳು ಗರಿಷ್ಠ ಮಾನ್ಸೂನ್ ತಿಂಗಳುಗಳಲ್ಲಿ ಮಳೆ ಕೊರತೆ ಅಪಾಯ ಎದುರಿಸಲಿವೆ. ಈಶಾನ್ಯ ಭಾರತವು ಋತುವಿನ ಮೊದಲಾರ್ಧದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯನ್ನು ಅನುಭವಿಸಬಹುದು. ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಗೋವಾದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಮತ್ತು ಕೇಂದ್ರ ಭಾಗಗಳಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದು ಸ್ಕೈಮೆಟ್ ತಿಳಿಸಿದೆ.

“ಸೂಪರ್ ಎಲ್ ನಿನೋದಿಂದ ಬಲವಾದ ಲಾ ನಿನಾಕ್ಕೆ ಗಮನಾರ್ಹ ಪರಿವರ್ತನೆಯಾಗಲಿದ್ದು, ಐತಿಹಾಸಿಕವಾಗಿ ಹೆಚ್ಚಿನ ಮಾನ್ಸೂನ್ ಅನ್ನು ಉಂಟಾಗಿಸಲಿದೆ” ಎಂದು ಸ್ಕೈಮೆಟ್‌ನ MD ಜತಿನ್ ಸಿಂಗ್ ಹೇಳಿದ್ದಾರೆ. “ಆದರೆ ಮಾನ್ಸೂನ್ ಅವಧಿಯು ದುರ್ಬಲವಾಗಿ ಪ್ರಾರಂಭವಾಗಬಹುದು. ಇದು ಎಲ್ ನಿನೊದ ಪಶ್ಚಾತ್‌ ಪರಿಣಾಮ. ಮಾನ್ಸೂನ್‌ ಋತುವಿನ ದ್ವಿತೀಯಾರ್ಧವು ಪ್ರಾಥಮಿಕ ಹಂತಕ್ಕಿಂತ ವಿಪರೀತವಾಗಿ ಇರಬಹುದು.”

ಎಲ್ ನಿನೊದ ದಕ್ಷಿಣ ಕಂಪನ, ಹಿಂದೂ ಮಹಾಸಾಗರದ ಡೈಪೋಲ್‌ನಂತಹ ಇತರ ಅಂಶಗಳು ಮಾನ್ಸೂನ್ ಮೇಲೆ ಪ್ರಭಾವ ಬೀರುತ್ತವೆ ಎಂದು ಸ್ಕೈಮೆಟ್ ವರದಿಯು ತಿಳಿಸಿದೆ. ದ್ವಿಧ್ರುವಿ ಅಥವಾ ಡೈಪೋಲ್‌ ಧನಾತ್ಮಕವಾಗಿದ್ದು, ಇದು ಲಾ ನಿನಾಗೆ ಪೂರಕವಾಗಿದೆ ಎಂದು ನಿರೀಕ್ಷಿಸಲಾಗಿದೆ. ಇದು ಉತ್ತಮ ಮಾನ್ಸೂನ್ ಭವಿಷ್ಯವನ್ನು ಹೆಚ್ಚಿಸಲಿದೆ. ಎಲ್ ನಿನೊದಿಂದ ಲಾ ನಿನಾಗೆ ತ್ವರಿತ ಪರಿವರ್ತನೆಯು ಋತುವಿನ ಆರಂಭದಲ್ಲಿ ಸ್ವಲ್ಪ ಅಡ್ಡಿಪಡಿಸಲಿದೆ. ಹೀಗಾಗಿ ಋತುವಿನ ಉದ್ದಕ್ಕೂ ಮಳೆಯ ವಿತರಣೆಯು ಅಸಮವಾಗಿರಬಹುದು.

ಭೌಗೋಳಿಕವಾಗಿ ವರದಿಯು ಭಾರತದ ದಕ್ಷಿಣ, ಪಶ್ಚಿಮ ಮತ್ತು ವಾಯುವ್ಯ ಪ್ರದೇಶಗಳಲ್ಲಿ ಅನುಕೂಲಕರವಾದ ಮಳೆಯನ್ನು ಅಂದಾಜಿಸಿದೆ. ಕೋರ್ ಮಾನ್ಸೂನ್ ಮಳೆಯಾಶ್ರಿತ ಪ್ರದೇಶಗಳಾದ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಸಾಕಷ್ಟು ಮಳೆಯಾಗುವ ನಿರೀಕ್ಷೆಯಿದೆ. ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಪೂರ್ವ ರಾಜ್ಯಗಳು ಗರಿಷ್ಠ ಮಾನ್ಸೂನ್ ತಿಂಗಳುಗಳಲ್ಲಿ ಮಳೆ ಕೊರತೆ ಅಪಾಯವನ್ನು ಎದುರಿಸಲಿವೆ. ಈಶಾನ್ಯ ಭಾರತವು ಋತುವಿನ ಮೊದಲಾರ್ಧದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯನ್ನು ಅನುಭವಿಸಬಹುದು.

ವರದಿಯ ಪ್ರಕಾರ, ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಮಾನ್ಸೂನ್ ಸಂಭವನೀಯತೆಯು ಅಧಿಕ ಮಳೆಯಾಗುವ ಸಾಧ್ಯತೆಯನ್ನು 10 ಪ್ರತಿಶತ, ಸಾಮಾನ್ಯ ಮಳೆಯ 45 ಪ್ರತಿಶತ ಸಾಧ್ಯತೆಯನ್ನು ಸೂಚಿಸಿದೆ. ಜೊತೆಗೆ 20 ಪ್ರತಿಶತದಷ್ಟು ಸಾಮಾನ್ಯ-ಹೆಚ್ಚು ಮಳೆ, 15 ಪ್ರತಿಶತ ಕಡಿಮೆ- ಸಾಮಾನ್ಯ ಮಳೆ, ಮತ್ತು ಶೇ.10 ರಷ್ಟು ಬರ ಪರಿಸ್ಥಿತಿಯ ಸಾಧ್ಯತೆ ಊಹಿಸಿದೆ.

ಮಾಸಿಕ ಪ್ರಮಾಣದಲ್ಲಿ, ಜೂನ್ 95%, ಜುಲೈ 105%, ಆಗಸ್ಟ್ 98% ಮತ್ತು ಸೆಪ್ಟೆಂಬರ್ 110 ಸರಾಸರಿ ಮಳೆಯನ್ನು ಪಡೆಯುವ ಮುನ್ಸೂಚನೆ ಇದೆ. ಹವಾಮಾನ ಸವಾಲುಗಳ ಹೊರತಾಗಿಯೂ, ವರದಿಯು ಈ ವರ್ಷ ಸಾಮಾನ್ಯ ಮಾನ್ಸೂನ್ ಋತುವನ್ನು ಊಹಿಸಿದೆ.

ಇದನ್ನೂ ಓದಿ: Monsoon Celebrity Tips: ಮಾನ್ಸೂನ್‌ನಲ್ಲಿ ಲೇಯರ್‌ ಲುಕ್‌ಗೆ ಸೈ ಎನ್ನುವ ನಟಿ ಭೂಮಿಕಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

KSET Exam 2023: ಉಪನ್ಯಾಸಕರ ಅರ್ಹತಾ ಪರೀಕ್ಷೆ ಕೆಸೆಟ್‌- 2023ರ ತಾತ್ಕಾಲಿಕ ಅಂಕಪಟ್ಟಿ ಪ್ರಕಟ

KSET Exam 2023: ಕೆಸೆಟ್‌-2023 ಪರೀಕ್ಷೆಯ ತಾತ್ಕಾಲಿಕ ಅಂಕಪಟ್ಟಿಯನ್ನು ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಬಿಡುಗಡೆ ಮಾಡಿದೆ. ಈ ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ವಿಷಯವಾರು ಲಿಂಕ್‌ ಕ್ಲಿಕ್ ಮಾಡುವ ಮೂಲಕ ತಾತ್ಕಾಲಿಕ ಅಂಕಪಟ್ಟಿಯನ್ನು ಚೆಕ್‌ ಮಾಡಿಕೊಳ್ಳಬಹುದು.

VISTARANEWS.COM


on

KSET Exam 2023 provisional score list
Koo

ಬೆಂಗಳೂರು: ಕೆಸೆಟ್‌ ಪರೀಕ್ಷೆ- 2023ರ (KSET Exam 2023) ತಾತ್ಕಾಲಿಕ ಸ್ಕೋರ್‌ (provisional score list) ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪದವಿ ಕಾಲೇಜು ಉಪನ್ಯಾಸಕರ (College lecturer) ಅರ್ಹತಾ ಪರೀಕ್ಷೆಯಾದ ʼಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ – ಕೆಸೆಟ್‌ʼ (KSET – Karnataka State Eligibility Test) ಇದರ 2023ನೇ ಸಾಲಿನ ಪರೀಕ್ಷೆಯನ್ನು ಕಳೆದ ಜನವರಿ ತಿಂಗಳಲ್ಲಿ ನಡೆಸಲಾಗಿತ್ತು. ಪರೀಕ್ಷೆಗೆ ಬರೆದವರು ಈಗ ತಮ್ಮ ತಾತ್ಕಾಲಿಕ ಸ್ಕೋರ್‌ ಪಟ್ಟಿಯನ್ನು ಚೆಕ್‌ ಮಾಡಿಕೊಳ್ಳಬಹುದು.

ಕೆಸೆಟ್‌-2023 ಪರೀಕ್ಷೆಯ ತಾತ್ಕಾಲಿಕ ಅಂಕಪಟ್ಟಿಯನ್ನು ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಬಿಡುಗಡೆ ಮಾಡಿದೆ. ಈ ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ವಿಷಯವಾರು ಲಿಂಕ್‌ ಕ್ಲಿಕ್ ಮಾಡುವ ಮೂಲಕ ತಾತ್ಕಾಲಿಕ ಅಂಕಪಟ್ಟಿಯನ್ನು ಚೆಕ್‌ ಮಾಡಿಕೊಳ್ಳಬಹುದು. ಕರ್ನಾಟಕ ಎಕ್ಸಾಮಿನೇಷನ್‌ ಅಥಾರಿಟಿಯು 2024ರ ಜನವರಿ 13ರಂದು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯನ್ನು ರಾಜ್ಯದಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಸಿತ್ತು.

ನಂತರ ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಿ ಅಭ್ಯರ್ಥಿಗಳು ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಿ ದಿನಾಂಕ 04-04-2024ರಂದು ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಲಾಗಿತ್ತು. ಪ್ರಸ್ತುತ ಕೆಸೆಟ್ ಪರೀಕ್ಷೆಯ ಪತ್ರಿಕೆ-1 ಮತ್ತು 41 ವಿಷಯಗಳ (ಪತ್ರಿಕೆ-2) ವಿಷಯವಾರು ತಾತ್ಕಾಲಿಕ ಅಂಕಪಟ್ಟಿಯನ್ನು ಪ್ರಾಧಿಕಾರವು ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.

ಆಕ್ಷೇಪಣೆಗಳಿಗೆ ಆಹ್ವಾನ

ಪ್ರಸ್ತುತ ಕೆಇಎ ಬಿಡುಗಡೆ ಮಾಡಿರುವ ಕೆಸೆಟ್‌ ತಾತ್ಕಾಲಿಕ ಅಂಕಪಟ್ಟಿಗೆ ಆಕ್ಷೇಪಣೆಗಳು ಇದ್ದಲ್ಲಿ ವಿವರವಾದ ಮಾಹಿತಿಗಳೊಂದಿಗೆ ಸಲ್ಲಿಸಲು ಮೇ 10, 2024 ರವರೆಗೆ ಅವಕಾಶ ನೀಡಿದೆ. ಆಕ್ಷೇಪಣೆಯನ್ನು ಇಮೇಲ್‌ ವಿಳಾಸ -keakset2023@gmail.com ಗೆ ಕಳುಹಿಸಬಹುದು.

ವಿಶೇಷ ಸೂಚನೆ : ಈಗ ಬಿಡುಗಡೆ ಮಾಡಿರುವ ತಾತ್ಕಾಲಿಕ ಅಂಕಪಟ್ಟಿಯ ಆಧಾರದ ಮೇಲೆ ಅಭ್ಯರ್ಥಿಯು ಕೆಸೆಟ್-2023ರಲ್ಲಿ ಅರ್ಹತೆ ಪಡೆದಿದ್ದಾರೆಂದು ಭಾವಿಸಬಾರದು ಎಂದು ಕೆಇಎ ಸೂಚನೆ ನೀಡಿದೆ.

ತಾತ್ಕಾಲಿಕ ಅಂಕಪಟ್ಟಿ ಚೆಕ್‌ ಮಾಡುವ ವಿಧಾನ

ಕೆಇಎ ವೆಬ್‌ಸೈಟ್‌ https://cetonline.karnataka.gov.in/kea/ ಗೆ ಭೇಟಿ ನೀಡಿ.
ತೆರೆದ ಮುಖಪುಟದಲ್ಲಿ ಇತ್ತೀಚಿನ ಪ್ರಕಟಣೆಗಳು ಎಂಬಲ್ಲಿ ಗಮನಿಸಿ.
ಮೇ 02ರಂದು ಕೆಸೆಟ್‌ ತಾತ್ಕಾಲಿಕ ಅಂಕಪಟ್ಟಿಗಳನ್ನು ವಿಷಯವಾರು ಬಿಡುಗಡೆ ಮಾಡಲಾಗಿದೆ.
ನೀವು ಪರೀಕ್ಷೆ ಬರೆದ ವಿಷಯವನ್ನು ಆಯ್ಕೆ ಮಾಡಿ ಕ್ಲಿಕ್ ಮಾಡಿ.
ಪಿಡಿಎಫ್‌ ಫೈಲ್‌ ಓಪನ್ ಆಗುತ್ತದೆ.
ಹೆಸರು, ರಿಜಿಸ್ಟರ್ ನಂಬರ್ ಪ್ರಕಾರ ನಿಮ್ಮ ಅಂಕಗಳನ್ನು ಚೆಕ್‌ ಮಾಡಿಕೊಳ್ಳಿ.
ಆಕ್ಷೇಪಣೆಗಳು ಇದ್ದಲ್ಲಿ ಮೇಲೆ ತಿಳಿಸಿದಂತೆ ಸವಿವರ ಮಾಹಿತಿಗಳೊಂದಿಗೆ ಇ-ಮೇಲ್ ವಿಳಾಸಕ್ಕೆ ಕಳುಹಿಸಿ.

ಇದನ್ನೂ ಓದಿ: Money Guide: ಮನೆ ಪೂರ್ತಿಯಾಗುವ ಮುನ್ನವೇ ಸಾಲದ ಹಣ ಖರ್ಚಾಯ್ತೆ? ಚಿಂತೆ ಬೇಡ; ಟಾಪ್‌ ಅಪ್‌ ಲೋನ್‌ಗೆ ಅಪ್ಲೈ ಮಾಡಿ

Continue Reading

ಪ್ರಮುಖ ಸುದ್ದಿ

Prajwal Revanna Case: ಪ್ರಜ್ವಲ್ ರೇವಣ್ಣ ಮೇಲೆ ಮತ್ತೊಂದು ಟೈಟ್‌ ಎಫ್‌ಐಆರ್‌, ಇದರಲ್ಲಿ ಬಂಧನ ಖಚಿತ!

Prajwal Revanna Case: IPC 376(2)N, 506 ,354a1, 354b, 354c ಸೆಕ್ಷನ್‌ಗಳು ಹಾಗೂ ಐಟಿ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಲಾಗಿವೆ. 376(2)n ಸೆಕ್ಷನ್‌ ಮಹಿಳೆ ಮೇಲೆ‌ ಬೆದರಿಸಿ ನಿರಂತರ ಅತ್ಯಾಚಾರ ನಡೆಸುವುದನ್ನು ದಾಖಲಿಸುತ್ತಿದ್ದು, ಇದು ಸಾಬೀತಾದರೆ ಕನಿಷ್ಠ ಹತ್ತು ವರ್ಷ ಜೈಲು ಅಥವಾ ಗರಿಷ್ಠ ಜೀವಾವಧಿ ಶಿಕ್ಷೆಯಾಗಲಿದೆ.

VISTARANEWS.COM


on

prajwal revanna case arrest
Koo

ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್‌ ರೇವಣ್ಣ (Prajwal Revanna Case) ಅವರ ಲೈಂಗಿಕ ದೌರ್ಜನ್ಯ (Physical abuse) ಹಗರಣದಲ್ಲಿ ಮತ್ತೊಂದು ದೂರು ದಾಖಲಾಗಿದೆ. ಈ ದೂರಿನಲ್ಲಿ ಬಿಗಿಯಾದ ದಂಡ ಸಂಹಿತೆ ಸೆಕ್ಷನ್‌ಗಳನ್ನು (IPC) ದಾಖಲಿಸಲಾಗಿದ್ದು, ಇದರಡಿ ಪ್ರಜ್ವಲ್‌ ಅವರ ಬಂಧನ ಖಚಿತವಾಗಿದೆ. ಮೈಸೂರಿನಲ್ಲೂ (Mysore news) ಇನ್ನೊಂದು ಲೈಂಗಿಕ ಕಿರುಕುಳ ಹಾಗೂ ಅಪಹರಣ (kidnap) ಪ್ರಕರಣ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದೆ. ಇಲ್ಲಿಗೆ ಒಟ್ಟು ಮೂರು ದೂರುಗಳಾಗಿವೆ.

ಪ್ರಜ್ವಲ್ ರೇವಣ್ಣ ಮೇಲೆ ದಾಖಲಾಗಿರುವ ಎರಡನೇ ಎಫ್ಐಆರ್ ಸಿಐಡಿ ಸೈಬರ್ ಠಾಣೆಯಲ್ಲಿ (CID cyber station) ದಾಖಲಾಗಿದೆ. ಎರಡನೇ ಎಫ್ಐಆರ್‌ನಲ್ಲಿ ದಾಖಲಿಸಿರುವ ಸೆಕ್ಷನ್‌ಗಳು ಹೆಚ್ಚು ಬಿಗಿಯಾಗಿದ್ದು, ತನಿಖೆಗೆ ಹಾಸನ ಸಂಸದರ ಬಂಧನವನ್ನು ಅನಿವಾರ್ಯವಾಗಿಸಿವೆ.

IPC 376(2)N, 506 ,354a1, 354b, 354c ಸೆಕ್ಷನ್‌ಗಳು ಹಾಗೂ ಐಟಿ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಲಾಗಿವೆ. 376(2)n ಸೆಕ್ಷನ್‌ ಮಹಿಳೆ ಮೇಲೆ‌ ಬೆದರಿಸಿ ನಿರಂತರ ಅತ್ಯಾಚಾರ ನಡೆಸುವುದನ್ನು ದಾಖಲಿಸುತ್ತಿದ್ದು, ಇದು ಸಾಬೀತಾದರೆ ಕನಿಷ್ಠ ಹತ್ತು ವರ್ಷ ಜೈಲು ಅಥವಾ ಗರಿಷ್ಠ ಜೀವಾವಧಿ ಶಿಕ್ಷೆಯಾಗಲಿದೆ.

ಸೆಕ್ಷನ್‌ 506 ಅಪರಾಧಿಕ ಉದ್ದೇಶದಿಂದ ಬೆದರಿಸುವುದು, 354a1 ಲೈಂಗಿಕ ಬೇಡಿಕೆಗೆ ಒತ್ತಾಯಿಸುವುದು- ಇದಕ್ಕೆ ಗರಿಷ್ಠ ಮೂರು ವರ್ಷಗಳ ಶಿಕ್ಷೆ, 354b ಅಪರಾಧಿಕ ಉದ್ದೇಶಕ್ಕೆ ಮಹಿಳೆ ಮೇಲೆ ಹಲ್ಲೆ ಮಾಡುವುದು- ಗರಿಷ್ಠ ಮೂರು ವರ್ಷ ಶಿಕ್ಷೆ, 354c ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಆಕೆಯ ಖಾಸಗಿ ವಿಷಯವನ್ನು ರೆಕಾರ್ಡ್ ಮಾಡುವುದು ಮತ್ತು ನೋಡುವುದು- ಗರಿಷ್ಠ ಏಳು ವರ್ಷ ಶಿಕ್ಷೆ ಇವುಗಳಿವೆ.

ಎರಡನೇ ಎಫ್ಐಆರ್‌ನಲ್ಲಿ ಪ್ರಜ್ವಲ್ ರೇವಣ್ಣ ಮಾತ್ರ ಆರೋಪಿಯಾಗಿದ್ದಾರೆ. ಮೊದಲ ದೂರಿನಲ್ಲಿ ಎಚ್‌ಡಿ ರೇವಣ್ಣ ಕೂಡ ಆರೋಪಿಯಾಗಿದ್ದರು. ಎಚ್‌ಡಿ ರೇವಣ್ಣ ಜಾಮೀನಿಗಾಗಿ ಪ್ರಯತ್ನಿಸುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಭಾರತಕ್ಕೆ ಬಂದ ಕೂಡಲೇ ಬಂಧನ ಮಾಡಲು ಎಸ್‌ಐಟಿ ಸಜ್ಜಾಗಿದೆ. ಈಗಾಗಲೇ ಆರೋಪಿಗೆ ಲುಕ್‌ಔಟ್ ನೊಟೀಸ್ ಹೊರಡಿಸಲಾಗಿದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಬಂಧನ ಬಹುತೇಕ ಖಚಿತವಾಗಿದೆ.

ಮೈಸೂರಿನಲ್ಲೂ ದೂರು

ಪ್ರಜ್ವಲ್‌ ರೇವಣ್ಣ (Prajwal Revanna Case) ಮೇಲೆ ಮೈಸೂರಿನಲ್ಲೂ ಒಂದು ಲೈಂಗಿಕ ಕಿರುಕುಳ ಹಾಗೂ ಅಪಹರಣ (kidnap) ಪ್ರಕರಣ ದಾಖಲಾಗಿದೆ. ತಾಯಿಯನ್ನು ಅಪಹರಣ ಮಾಡಲಾಗಿದೆ ಎಂದು ಆರೋಪಿಸಿ ಪುತ್ರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಕೆ.ಆರ್.ನಗರ ತಾಲೂಕಿನಲ್ಲಿ ಘಟನೆ ನಡೆದಿದೆ. “ಪ್ರಜ್ವಲ್ ರೇವಣ್ಣ ಅವರಿಂದ ನನ್ನ ತಾಯಿಯೂ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಿದ್ದರು.‌ ಈ ಸಂಬಂಧ ಫೋಟೋಗಳು ಬಹಿರಂಗ ಆಗಿದ್ದವು. ಬಳಿಕ ನನ್ನ ತಾಯಿ ನಾಪತ್ತೆ ಆಗಿದ್ದಾರೆ. ಶಾಸಕ ಎಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ (Bhavani Revanna) ಅಪಹರಣ ಮಾಡಿಸಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನ ಬಗ್ಗೆ ಪೊಲೀಸರು ಪ್ರಾಥಮಿಕ ಮಾಹಿತಿ ಕಲೆಹಾಕುತ್ತಿದ್ದಾರೆ. ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಹಾಗೂ ಎಚ್‌.ಡಿ ರೇವಣ್ಣ (HD Revanna) ವಿರುದ್ಧ ದಾಖಲಾಗಿರುವ ದೂರಿನ ತನಿಖೆಗೆ ಎಸ್‌ಐಟಿ ರಚನೆ ಮಾಡಿರುವಂತೆ ಈ ದೂರು ಕೂಡ ಹೊರಬಂದಿದೆ.

ರೇವಣ್ಣ ಜಾಮೀನು ಅರ್ಜಿ ವಿಚಾರಣೆ

ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಇನ್ನೊಬ್ಬ ಪ್ರಮುಖ ಆರೋಪಿ ಎಚ್.ಡಿ. ರೇವಣ್ಣ ಅವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಸ್‌ಐಟಿಗೆ ಸೂಚಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.

ಎಚ್.ಡಿ. ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌, ಎಫ್ಐಆರ್‌ನಲ್ಲಿ ಎಲ್ಲವೂ ಜಾಮೀನು ನೀಡಬಹುದಾದ ಆರೋಪಗಳಿವೆ. ಹೀಗಿದ್ದರೂ ನಿರೀಕ್ಷಣಾ ಜಾಮೀನಿಗೆ ಏಕೆ ಅರ್ಜಿ ಸಲ್ಲಿಸಿದ್ದೀರಿ? ಈ ಅರ್ಜಿ ಹೇಗೆ ಊರ್ಜಿತವಾಗುತ್ತದೆ? ನೀವು ವಿಚಾರಣಾ ನ್ಯಾಯಾಲಯದಲ್ಲಿ ನೇರವಾಗಿ ಹಾಜರಾಗಬಹುದಿತ್ತಲ್ಲವೇ ಎಂದು ರೇವಣ್ಣ ಪರ ಹಿರಿಯ ವಕೀಲರಿಗೆ ಕೋರ್ಟ್ ಪ್ರಶ್ನೆ ಮಾಡಿದೆ.

ಇದಕ್ಕೆ ವಾದ ಮಂಡಿಸಿದ ಎಚ್.ಡಿ. ರೇವಣ್ಣ ಪರ ವಕೀಲರು, ಎಸ್ಐಟಿ ಸಲ್ಲಿಸಿದ ಅರ್ಜಿಯ ವಿವರ ಇನ್ನೂ ಲಭ್ಯವಿಲ್ಲ. ಹೀಗಾಗಿ ಮಧ್ಯಂತರ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದಾರೆ. ಎಫ್ಐಆರ್‌ನಲ್ಲಿ ಜಾಮೀನು ನೀಡಬೇಕಾದ ಆರೋಪಗಳಿವೆ. ಆದರೆ, ಮ್ಯಾಜಿಸ್ಟ್ರೇಟ್‌ಗೆ ಅತ್ಯಾಚಾರ ಆರೋಪ ಸೇರಿಸಲು ಅರ್ಜಿ ನೀಡಲಾಗಿದೆ. ಇದಕ್ಕೆ ಪೂರಕವಾಗಿ ಎಚ್.ಡಿ. ರೇವಣ್ಣ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ವಕೀಲ ಮೂರ್ತಿ ಡಿ. ನಾಯ್ಕ್ ತಿಳಿಸಿದರು.

ಇದನ್ನೂ ಓದಿ: Prajwal Revanna Case: ರೇವಣ್ಣಗೆ ಇಂದು ಸಿಗಲಿಲ್ಲ ನಿರೀಕ್ಷಣಾ ಜಾಮೀನು; ಆಕ್ಷೇಪಣೆ ಸಲ್ಲಿಸಲು ಎಸ್‌ಐಟಿಗೆ ಸೂಚಿಸಿದ ಕೋರ್ಟ್!

Continue Reading

ಪ್ರಮುಖ ಸುದ್ದಿ

Prajwal Revanna Case: ಪ್ರಜ್ವಲ್‌ ರೇವಣ್ಣ ಮೇಲೆ ಮೈಸೂರಿನಲ್ಲೂ ಒಂದು ಕೇಸ್‌; ತಾಯಿ ಮೇಲೆ ಲೈಂಗಿಕ ಕಿರುಕುಳ, ಅಪಹರಣ ಎಂದು ದೂರು ನೀಡಿದ ಮಗ

Prajwal Revanna Case: “ಪ್ರಜ್ವಲ್ ರೇವಣ್ಣ ಅವರಿಂದ ನನ್ನ ತಾಯಿಯೂ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಿದ್ದರು.‌ ಈ ಸಂಬಂಧ ಫೋಟೋಗಳು ಬಹಿರಂಗ ಆಗಿದ್ದವು. ಬಳಿಕ ನನ್ನ ತಾಯಿ ನಾಪತ್ತೆ ಆಗಿದ್ದಾರೆ. ಶಾಸಕ ಎಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ (Bhavani Revanna) ಅಪಹರಣ ಮಾಡಿಸಿದ್ದಾರೆ” ಎಂದು ದೂರಿನಲ್ಲಿ ಮಗ ಉಲ್ಲೇಖಿಸಿದ್ದಾರೆ.

VISTARANEWS.COM


on

Hassan Pen Drive case Prajwal Revanna case
Koo

ಮೈಸೂರು: ಹಾಸನ ಸಂಸದ (Hassan MP) ಪ್ರಜ್ವಲ್‌ ರೇವಣ್ಣ (Prajwal Revanna Case) ಅವರ ಲೈಂಗಿಕ ದೌರ್ಜನ್ಯ (Physical abuse) ಹಗರಣ ಇದೀಗ ಮೈಸೂರಿಗೂ (Mysore news) ವ್ಯಾಪಿಸಿದೆ. ಮೈಸೂರಿನಲ್ಲೂ ಒಂದು ಲೈಂಗಿಕ ಕಿರುಕುಳ ಹಾಗೂ ಅಪಹರಣ (kidnap) ಪ್ರಕರಣ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದೆ.

ತಾಯಿಯನ್ನು ಅಪಹರಣ ಮಾಡಲಾಗಿದೆ ಎಂದು ಆರೋಪಿಸಿ ಪುತ್ರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಕೆ.ಆರ್.ನಗರ ತಾಲೂಕಿನಲ್ಲಿ ಘಟನೆ ನಡೆದಿದೆ. “ಪ್ರಜ್ವಲ್ ರೇವಣ್ಣ ಅವರಿಂದ ನನ್ನ ತಾಯಿಯೂ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಿದ್ದರು.‌ ಈ ಸಂಬಂಧ ಫೋಟೋಗಳು ಬಹಿರಂಗ ಆಗಿದ್ದವು. ಬಳಿಕ ನನ್ನ ತಾಯಿ ನಾಪತ್ತೆ ಆಗಿದ್ದಾರೆ. ಶಾಸಕ ಎಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ (Bhavani Revanna) ಅಪಹರಣ ಮಾಡಿಸಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನ ಬಗ್ಗೆ ಪೊಲೀಸರು ಪ್ರಾಥಮಿಕ ಮಾಹಿತಿ ಕಲೆಹಾಕುತ್ತಿದ್ದಾರೆ. ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಹಾಗೂ ಎಚ್‌.ಡಿ ರೇವಣ್ಣ (HD Revanna) ವಿರುದ್ಧ ದಾಖಲಾಗಿರುವ ದೂರಿನ ತನಿಖೆಗೆ ಎಸ್‌ಐಟಿ ರಚನೆ ಮಾಡಿರುವಂತೆ ಈ ದೂರು ಕೂಡ ಹೊರಬಂದಿದೆ.

ರೇವಣ್ಣ ಜಾಮೀನು ಅರ್ಜಿ ವಿಚಾರಣೆ

ಬೆಂಗಳೂರು: ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಇನ್ನೊಬ್ಬ ಪ್ರಮುಖ ಆರೋಪಿ ಎಚ್.ಡಿ. ರೇವಣ್ಣ ಅವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಸ್‌ಐಟಿಗೆ ಸೂಚಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.

ಎಚ್.ಡಿ. ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌, ಎಫ್ಐಆರ್‌ನಲ್ಲಿ ಎಲ್ಲವೂ ಜಾಮೀನು ನೀಡಬಹುದಾದ ಆರೋಪಗಳಿವೆ. ಹೀಗಿದ್ದರೂ ನಿರೀಕ್ಷಣಾ ಜಾಮೀನಿಗೆ ಏಕೆ ಅರ್ಜಿ ಸಲ್ಲಿಸಿದ್ದೀರಿ? ಈ ಅರ್ಜಿ ಹೇಗೆ ಊರ್ಜಿತವಾಗುತ್ತದೆ? ನೀವು ವಿಚಾರಣಾ ನ್ಯಾಯಾಲಯದಲ್ಲಿ ನೇರವಾಗಿ ಹಾಜರಾಗಬಹುದಿತ್ತಲ್ಲವೇ ಎಂದು ರೇವಣ್ಣ ಪರ ಹಿರಿಯ ವಕೀಲರಿಗೆ ಕೋರ್ಟ್ ಪ್ರಶ್ನೆ ಮಾಡಿದೆ.

ಇದಕ್ಕೆ ವಾದ ಮಂಡಿಸಿದ ಎಚ್.ಡಿ. ರೇವಣ್ಣ ಪರ ವಕೀಲರು, ಎಸ್ಐಟಿ ಸಲ್ಲಿಸಿದ ಅರ್ಜಿಯ ವಿವರ ಇನ್ನೂ ಲಭ್ಯವಿಲ್ಲ. ಹೀಗಾಗಿ ಮಧ್ಯಂತರ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದಾರೆ. ಎಫ್ಐಆರ್‌ನಲ್ಲಿ ಜಾಮೀನು ನೀಡಬೇಕಾದ ಆರೋಪಗಳಿವೆ. ಆದರೆ, ಮ್ಯಾಜಿಸ್ಟ್ರೇಟ್‌ಗೆ ಅತ್ಯಾಚಾರ ಆರೋಪ ಸೇರಿಸಲು ಅರ್ಜಿ ನೀಡಲಾಗಿದೆ. ಇದಕ್ಕೆ ಪೂರಕವಾಗಿ ಎಚ್.ಡಿ. ರೇವಣ್ಣ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ವಕೀಲ ಮೂರ್ತಿ ಡಿ. ನಾಯ್ಕ್ ತಿಳಿಸಿದರು.

ಎಸ್‌ಐಟಿಗೆ ವಿಶೇಷ ಕೋರ್ಟ್‌ ನೋಟಿಸ್‌

ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ನ್ಯಾಯಾದೀಶರಾದ ಸಂತೋಷ್ ಗಜಾನನ ಭಟ್, ಎಸ್ಐಟಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ (ಮೇ 3) ಮುಂದೂಡಿದ್ದಾರೆ. ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಪ್ರಜ್ವಲ್‌ಗೆ ಎಸ್‌ಐಟಿ ಏನು ಕೇಳಲಿದೆ?

ಪ್ರಜ್ವಲ್‌ ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾದಲ್ಲಿ ಇಲ್ಲವೇ ಅವರನ್ನು ಬಂಧಿಸಿ ಕರೆತಂದಲ್ಲಿ ಅವರಿಗೆ ಸರಣಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈಗಾಗಲೇ ಹಲವು ಪ್ರಶ್ನೆಗಳನ್ನು ಎಸ್‌ಐಟಿ ಸಿದ್ಧಪಡಿಸಿಟ್ಟುಕೊಂಡಿದೆ ಎನ್ನಲಾಗಿದೆ. ಪ್ರಕರಣ ಸಂಬಂಧ ಸಣ್ಣ ಸಣ್ಣ ಪ್ರಶ್ನೆಗಳನ್ನೂ ಕೇಳಿ ಪ್ರಜ್ವಲ್‌ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಪ್ರಜ್ವಲ್‌ ಅವರ ವಯಸ್ಸಿನಿಂದ ಹಿಡಿದು ಹಲವು ಪ್ರಶ್ನೆಗಳನ್ನು ಕೇಳಲಿದ್ದಾರೆ. ಆರೋಪಗಳ ಬಗ್ಗೆ ಏನು ಹೇಳುತ್ತೀರಿ? ನೀವೇ ರೆಕಾರ್ಡ್‌ ಮಾಡಿಕೊಂಡಿದ್ದೀರಿ ಎಂಬ ಆರೋಪ ಇದೆ. ರೆಕಾರ್ಡ್‌ಗೆ ಯಾವ ಸಾಧನವನ್ನು ಬಳಸಿಕೊಂಡಿದ್ದೀರಿ. ಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಿರಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಅದೇ ರೀತಿ ಪ್ರಜ್ವಲ್‌ ರೇವಣ್ಣ ಅವರ ತಂದೆ ಎಚ್.ಡಿ. ರೇವಣ್ಣ ಅವರಿಗೂ ಹಲವು ಪ್ರಶ್ನೆಗಳನ್ನು ಕೇಳಲು ಎಸ್‌ಐಟಿ ರೆಡಿಯಾಗಿದೆ. ನಿಮ್ಮ ಪುತ್ರನ ಮೇಲೆ ಆರೋಪವಿರುವುದು ಗಮನಕ್ಕೆ ಬಂದಿತ್ತಾ? ನಿಮ್ಮ ಗಮನಕ್ಕೆ ಬಂದಿದ್ರೆ ಅದರ ಬಗ್ಗೆ ಪ್ರಜ್ವಲ್‌‌ ಜತೆ ಚರ್ಚಿಸಿದ್ದಿರಾ? ಒಂದು ವೇಳೆ ಚರ್ಚೆ ಮಾಡಿದರೆ ನಿಮ್ಮ ಪುತ್ರ ಏನು ಹೇಳಿದ್ದರು? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Prajwal Revanna Case: ರೇವಣ್ಣಗೆ ಇಂದು ಸಿಗಲಿಲ್ಲ ನಿರೀಕ್ಷಣಾ ಜಾಮೀನು; ಆಕ್ಷೇಪಣೆ ಸಲ್ಲಿಸಲು ಎಸ್‌ಐಟಿಗೆ ಸೂಚಿಸಿದ ಕೋರ್ಟ್!

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಅಮೆರಿಕದ ಬುದ್ಧಿಗೇಡಿಗಳ ವರದಿಯಲ್ಲಿ ಭಾರತದ ಬಗ್ಗೆ ಹಸಿ ಸುಳ್ಳುಗಳು

ಅಲ್ಪಸಂಖ್ಯಾತರಿಗೆ ಇಲ್ಲಿ ರಕ್ಷಣೆಯಿಲ್ಲ ಎಂದು ಹುಯಿಲೆಬ್ಬಿಸುವುದನ್ನೇ ಕಾಯಕ ಮಾಡಿಕೊಂಡ ಕೆಲವರು ಭಾರತದಲ್ಲೂ ಅಮೆರಿಕದಲ್ಲೂ ಇದ್ದಾರೆ. ಇದು ಅವರ ಹೊಟ್ಟೆಪಾಡು ಎಂದು ಸುಮ್ಮನಾಗವಂತೆಯೂ ಇಲ್ಲ. ಯಾಕೆಂದರೆ ಇವರು ಅಂತಾರಾಷ್ಟ್ರೀಯವಾಗಿ ನಮ್ಮ ಮುಖಕ್ಕೆ ಮಸಿ ಬಳಿಯಬಲ್ಲರು. ಇವರನ್ನು ತರಾಟೆಗೆ ತೆಗೆದುಕೊಳ್ಳುವುದೇ ಸರಿಯಾದ ದಾರಿ.

VISTARANEWS.COM


on

Religious Freedom
Koo

ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಸರ್ಕಾರದ ಕಮಿಷನ್‌ ಆನ್‌ ಇಂಟರ್‌ನ್ಯಾಷನಲ್‌ ರಿಲಿಜಿಯಸ್‌ ಫ್ರೀಡಂ (USCIRF Report) ವರದಿ ಬಿಡುಗಡೆ ಮಾಡಿದೆ. ಭಾರತ ಸೇರಿ 17 ದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ (Religious Freedom) ಕುರಿತು ಕಳವಳ ವ್ಯಕ್ತಪಡಿಸಿದೆ. “ಭಾರತ ಸೇರಿ 17 ದೇಶಗಳಲ್ಲಿ ಜನರು ತಮ್ಮ ಧರ್ಮವನ್ನು ಅನುಸರಿಸುವ, ಧಾರ್ಮಿಕ ವಿಚಾರಗಳ ಮೇಲೆ ನಂಬಿಕೆ ಇರಿಸುವ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತಿದೆ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಭಾರತದಲ್ಲಿ ರಾಷ್ಟ್ರೀಯವಾದಿ ನೀತಿಗಳ ಹೇರಿಕೆಯಿಂದಾಗಿ ಇತರ ಧರ್ಮಗಳಲ್ಲಿ ನಂಬಿಕೆ ಇಟ್ಟುಕೊಂಡವರಿಗೆ ಸಮಸ್ಯೆಯಾಗಿದೆ. ದ್ವೇಷ ಕಾರುವ ವಾಕ್ಚಾತುರ್ಯ, ಕೋಮುವಾದದಿಂದ ಕೂಡಿದ ಹಿಂಸಾಚಾರಗಳನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಇದು ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವುದಕ್ಕೆ ಉದಾಹರಣೆಯಾಗಿದೆ” ಎಂದು ಹೇಳಿದೆ. ಇದಕ್ಕೆ ಭಾರತ ಸರ್ಕಾರ ತಿರುಗೇಟು ನೀಡಿದ್ದು, “ಯುಎಸ್‌ಸಿಐಆರ್‌ಎಫ್‌ ವರದಿಯು ಪಕ್ಷಪಾತ ಹಾಗೂ ರಾಜಕೀಯ ಪ್ರೇರಿತವಾಗಿ ತಯಾರಿಸಿದ್ದಾಗಿದೆ” ಎಂಬುದಾಗಿ ಅಸಮಾಧಾನ ವ್ಯಕ್ತಪಡಿಸಿದೆ. “ಇದಕ್ಕೂ ಮೊದಲು ಕೂಡ ಇಂತಹ ವರದಿಗಳನ್ನು ಅದು ಪ್ರಕಟಿಸಿತ್ತು. ಭಾರತದ ಕುರಿತು ಷಡ್ಯಂತ್ರದಿಂದ ಕೂಡಿದ ವರದಿ ಬಿಡುಗಡೆ ಮಾಡುವುದು ಅದಕ್ಕೆ ರೂಢಿಯೇ ಆಗಿದೆ. ಯುಎಸ್‌ಸಿಐಆರ್‌ಎಫ್‌ ವರದಿಯಲ್ಲಿ ಯಾವುದೇ ಹುರುಳಿಲ್ಲ” ಎಂದಿದೆ ಭಾರತ.

ಈ ವರದಿ ಯಾರೋ ಅಡ್ಡಕಸಬಿಗಳು ತಯಾರಿಸಿದ ವರದಿಯಂತೆ ಕಾಣಿಸುತ್ತಿದೆ. ಬಹುಶಃ ಅವರು ಭಾರತಕೆಕ ಬಂದು ಇಲ್ಲಿನ ಧಾರ್ಮಿಕ ಸಹಿಷ್ಣುತೆ, ಸಹಬಾಳ್ವೆ ಇತ್ಯಾದಿಗಳನ್ನು ನೋಡಿದ್ದರೆ ಇಂಥ ವರದಿ ತಯಾರಿಸುತ್ತಿರಲಿಲ್ಲ. ಭಾರತದಿಂದ ಆಚೆಗೆ ಕುಳಿತು ಭಾರತದ ವಿರುದ್ಧವೇ ಯುಟ್ಯೂಬ್‌ ವಿಡಿಯೋ ಮಾಡಿ ಬಿಡುವ ʼಬುದ್ಧಿವಂತʼರ ಮಾತುಗಳನ್ನು ಕೇಳಿಕೊಂಡು ಇದನ್ನು ತಯಾರಿಸಿದಂತೆ ಇದೆ. ಈ ವರದಿಯ ಅಕ್ಷರಕ್ಷರವೂ ಸುಳ್ಳು ಎಂಬುದಕ್ಕೆ ಸಾಕ್ಷಿಗಳನ್ನು ನೀಡಬಹುದು. ಸಿಪಿಎ (ಸೆಂಟರ್ ಫಾರ್ ಪಾಲಿಸಿ ಅನಾಲಿಸಿಸ್) ಎಂಬ ಜಾಗತಿಕ ಸಂಸ್ಥೆ ಕಳೆದ ವರ್ಷ ನೀಡಿರುವ ಜಾಗತಿಕ ವರದಿಯಲ್ಲಿ, ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ, ಅಲ್ಪಸಂಖ್ಯಾತರನ್ನು ಒಳಗೊಳ್ಳುವ ಕ್ರಮಗಳಲ್ಲಿ ಭಾರತ ನಂ.1 ಸ್ಥಾನದಲ್ಲಿದೆ ಎಂದು ಹೇಳಿದೆ. ಇದೊಂದು ಸ್ವತಂತ್ರ ಅಂತಾರಾಷ್ಟ್ರೀಯ ಸಂಸ್ಥೆ. 110 ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆಸಿ ಆ ವರದಿ ನೀಡಿತ್ತು. ಭಾರತವೇ ಅಲ್ಪಸಂಖ್ಯಾತರಿಗೆ ಹೆಚ್ಚು ಸುರಕ್ಷಿತ ಜಾಗ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಯಾವುದೇ ನಿರ್ಬಂಧ ಇಲ್ಲ. ಭಾರತದ ಸಂವಿಧಾನವು ಸಂಸ್ಕೃತಿ ಮತ್ತು ಶಿಕ್ಷಣ ಎರಡರಲ್ಲೂ ಧಾರ್ಮಿಕ ಅಲ್ಪಸಂಖ್ಯಾತರನ್ನು ಪ್ರೋತ್ಸಾಹಿಸುವ ವಿಶಿಷ್ಟ, ವಿಶೇಷ ವಿಧಿಗಳನ್ನು ಹೊಂದಿದೆ ಎಂದೂ ಈ ವರದಿ ಉಲ್ಲೇಖಿಸಿದೆ. ಭಾರತದ ನಂತರದ 4 ಸ್ಥಾನಗಳಲ್ಲಿ ಪನಾಮಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ನಂತರದ ಸ್ಥಾನದಲ್ಲಿ ಅಮೆರಿಕ ದೇಶ ಇದೆ. ಯುಎಸ್‌ಸಿಐಆರ್‌ಎಫ್‌ ಇದನ್ನು ಗಮನಿಸಿದಂತಿಲ್ಲ.

ನಮ್ಮ ದೇಶದಲ್ಲಿ ಆರು ಧರ್ಮಗಳ (ಮುಸ್ಲಿಂ, ಕ್ರೈಸ್ತ, ಸಿಖ್‌, ಜೈನ, ಬೌದ್ಧ, ಪಾರ್ಸಿ) ಅಲ್ಪಸಂಖ್ಯಾತರು ಒಟ್ಟಾಗಿ ಒಟ್ಟಾರೆ ಜನಸಂಖ್ಯೆಯ 19.3%ದಷ್ಟು ಇದ್ದಾರೆ. ಅಲ್ಪಸಂಖ್ಯಾತರ ಹಿತವನ್ನೂ ಬಹುಸಂಖ್ಯಾತರಂತೆಯೇ ಕಾಯಲು ನಮ್ಮ ಸಂವಿಧಾನದಲ್ಲೂ ʼಧರ್ಮನಿರಪೇಕ್ಷತೆʼಯನ್ನು ಸೇರಿಸಲಾಗಿದೆ. ಅಲ್ಪಸಂಖ್ಯಾತ ಹಿತಚಿಂತನೆ ನೋಡಿಕೊಳ್ಳುವುದಕ್ಕಾಗಿಯೇ ಕೇಂದ್ರದಲ್ಲಿ ʼಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯʼ ಇದೆ. ಈ ದೇಶದ ಮುಖ್ಯಮಂತ್ರಿ, ರಾಜ್ಯಪಾಲ, ರಾಷ್ಟ್ರಪತಿ ಹುದ್ದೆಯನ್ನೂ ಭಾರತೀಯ ಅಲ್ಪಸಂಖ್ಯಾತರು ಜನಮತದಿಂದಲೇ ಅಲಂಕರಿಸಿದ್ದಾರೆ. ಭಾರತದ ಜನಸಂಖ್ಯೆಯ ಸುಮಾರು 14%ದಷ್ಟು, ಅಂದರೆ 20 ಕೋಟಿ ಮಂದಿ ಮುಸ್ಲಿಮರು ಇಲ್ಲಿ ಇದ್ದಾರೆ. ಇದು ದೇಶದ ಎರಡನೇ ಅತಿ ದೊಡ್ಡ ಧಾರ್ಮಿಕ ಸಮುದಾಯ. ಇಂಡೋನೇಷ್ಯಾ ಹಾಗೂ ಪಾಕಿಸ್ತಾನದ ಬಳಿಕ ಅತಿ ಹೆಚ್ಚು ಮುಸ್ಲಿಮರು ಇರುವ ದೇಶ ಎಂದರೆ ಭಾರತ. ಇನ್ನುಳಿದ ಇಸ್ಲಾಮಿಕ್‌ ದೇಶಗಳೆನಿಸಿಕೊಂಡವು ಕೂಡ ಭಾರತದಷ್ಟು ಸಂಖ್ಯೆಯ ಮುಸ್ಲಿಮರನ್ನು ಹೊಂದಿಲ್ಲ. ಭಾರತದಲ್ಲಿ ಎರಡೂ ಧರ್ಮಗಳೂ ಸಾಕಷ್ಟು ಸಾಮರಸ್ಯದಿಂದ ಬಾಳುತ್ತಿವೆ. ಪಾಕಿಸ್ತಾನ, ಇರಾನ್ ಮುಂತಾದ ಅಪ್ಪಟ ಮುಸ್ಲಿಂ ದೇಶಗಳಿಗಿಂತ ಭಾರತೀಯ ಮುಸ್ಲಿಮರು ಹೆಚ್ಚು ಸ್ವಾತಂತ್ರ್ಯ ಮತ್ತು ಸೌಕರ್ಯ ಹೊಂದಿದ್ದಾರೆ. ಹಾಗೆ ನೋಡಿದರೆ ಮುಸ್ಲಿಂ ದೇಶಗಳಲ್ಲೇ ಮುಸ್ಲಿಮರು ಸುರಕ್ಷಿತವಾಗಿಲ್ಲ. ಪಾಕಿಸ್ತಾನ, ಆಫ್ಘಾನಿಸ್ತಾನದ ಮಸೀದಿಗಳಲ್ಲೇ ಬಾಂಬ್ ಇಟ್ಟು ಸ್ಫೋಟಿಸಲಾಗುತ್ತಿದೆ. ಅಲ್ಲಿಯ ಅಲ್ಪಸಂಖ್ಯಾತರು ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ. ಈ ಸೋಗಲಾಡಿ ವರದಿ ಅದನ್ನೇನಾದರೂ ನೆನಪಿಸಿಕೊಂಡಿದೆಯೇ?

ಈ ವರದಿಯನ್ನು ಹೊರಡಿಸಿದ ಅಮೆರಿಕದ ಬುಡದಲ್ಲಿ ಏನಿದೆ ಎಂದು ಸ್ವಲ್ಪ ನೋಡೋಣ. ಅತಿ ಹಳೆಯ ಪ್ರಜಾಪ್ರಭುತ್ವ ದೇಶ ಎನಿಸಿಕೊಂಡ ಆ ದೇಶದಲ್ಲಿ ಇನ್ನೂವರೆಗೂ ಒಬ್ಬ ಮಹಿಳೆಯೂ ಅಧ್ಯಕ್ಷರಾಗಲು ಸಾಧ್ಯವಾಗಲಿಲ್ಲ. ಬರಾಕ್‌ ಒಬಾಮರಂಥ ಅಲ್ಪಸಂಖ್ಯಾತರು ಅಧ್ಯಕ್ಷರಾಗಲು ಹಲವು ಶತಮಾನಗಳೇ ಬೇಕಾಯಿತು. ಮಹಿಳೆಯರೂ ತಮ್ಮ ಮತದಾನದ ಹಕ್ಕನ್ನು ಪಡೆಯಲು ಬಡಿದಾಡಬೇಕಾಯಿತು. ಇನ್ನು ಅಲ್ಲಿನ ಆಫ್ರಿಕನ್‌ ಸಮುದಾಯ ಅನುಭವಿಸುತ್ತಿರುವ ಸಂಕಷ್ಟವನ್ನು ಹೇಳಬೇಕಾಗಿಯೇ ಇಲ್ಲ. ಇವರನ್ನು ಇಲ್ಲಿ ನೂರಾರು ವರ್ಷಗಳ ಕಾಲ ಜೀತದಾಳುಗಳಾಗಿ ದುಡಿಸಿಕೊಳ್ಳಲಾಗುತ್ತಿತ್ತು. ಇದನ್ನು ಹೋಗಲಾಡಿಸಲು ಲಿಂಕನ್‌ನಂಥ ಮುತ್ಸದ್ಧಿ ಬಲಿದಾನ ಮಾಡಬೇಕಾಯಿತು. ಈಗಲೂ ಅಲ್ಲಿ ಕರಿಯರ ಸಮುದಾಯದ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಇದನ್ನು ವಿರೋಧಿಸಿ ನಡೆಸಲಾಗುತ್ತಿರುವ ʼಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ʼ ಚಳವಳಿಯನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಇನ್ನು ಅಲ್ಲಿನ ಮೂಲವಾಸಿ ಅಮೆರಿಕನ್‌ ಸಮುದಾಯದವರನ್ನು ಯಾವ ರೀತಿ ನಿರ್ಮೂಲನ ಮಾಡಲಾಯಿತು ಎಂಬುದು ಚರಿತ್ರೆಯಲ್ಲಿ ಸೇರಿಹೋಗಿರುವ ಕರಾಳ ಅಧ್ಯಾಯಗಳಲ್ಲೊಂದು. ಇಂದು ಹುಡುಕಿದರೂ ಆ ಜನಾಂಗ ಅಲ್ಲಿ ಸಿಗುವುದಿಲ್ಲ. ಇನ್ನು ಮುಸ್ಲಿಮರ ವಿಷಯಕ್ಕೆ ಬಂದರೆ, 9/11 ಘಟನೆಯ ನಂತರ ಅಲ್ಲಿ ಪ್ರತಿಯೊಬ್ಬ ಮುಸ್ಲಿಮನನ್ನೂ ಶಂಕಿತ ಭಯೋತ್ಪಾದಕನಂತೆಯೇ ನೋಡಲಾಗುತ್ತದೆ. ಮುಸ್ಲಿಮರನ್ನು ಈ ಅನುಮಾನದಿಂದಾಗಿಯೇ ಅಲ್ಲಿನ ಸರ್ಕಾರಿ ಆಡಳಿತಾತ್ಮಕ ಹುದ್ದೆಗಳಲ್ಲಿ ಒಳಬಿಟ್ಟುಕೊಳ್ಳಲಾಗುತ್ತಿಲ್ಲ. ಇಂಥ ದೇಶ, ಭಾರತದಂಥ ʼವಸುಧೈವ ಕುಟುಂಬಕಂʼ ಮಂತ್ರವನ್ನು ಸಾರಿದ ಪುರಾತನ ಸಂಸ್ಕೃತಿಯ ದೇಶಕ್ಕೆ ಬುದ್ಧಿವಾದ ಹೇಳುವುದು ಒಂದು ಕೆಟ್ಟ ಜೋಕ್.‌

ಅಲ್ಪಸಂಖ್ಯಾತರಿಗೆ ಇಲ್ಲಿ ರಕ್ಷಣೆಯಿಲ್ಲ ಎಂದು ಹುಯಿಲೆಬ್ಬಿಸುವುದನ್ನೇ ಕಾಯಕ ಮಾಡಿಕೊಂಡ ಕೆಲವರು ಭಾರತದಲ್ಲೂ ಅಮೆರಿಕದಲ್ಲೂ ಇದ್ದಾರೆ. ಇದು ಅವರ ಹೊಟ್ಟೆಪಾಡು ಎಂದು ಸುಮ್ಮನಾಗವಂತೆಯೂ ಇಲ್ಲ. ಯಾಕೆಂದರೆ ಇವರು ಅಂತಾರಾಷ್ಟ್ರೀಯವಾಗಿ ನಮ್ಮ ಮುಖಕ್ಕೆ ಮಸಿ ಬಳಿಯಬಲ್ಲರು. ಇವರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳುವುದೇ ಸರಿಯಾದ ದಾರಿ. ಅಮೆರಿಕ ಇಂಥವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಬಾರದು.

ಇದನ್ನೂ ಓದಿ: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಕಳವಳ; ತಿರುಗೇಟು ಕೊಟ್ಟ ಕೇಂದ್ರ ಸರ್ಕಾರ

Continue Reading
Advertisement
murder case stabbing bengaluru
ಕ್ರೈಂ1 min ago

Murder Case: ಎಣ್ಣೆ ಪಾರ್ಟಿ ನಂತರ ರಿಕ್ಷಾ ಚಾಲಕನ ಇರಿದು ಕೊಂದ ರೌಡಿ ಶೀಟರ್‌

Elephant attack in Shivamogga
ಶಿವಮೊಗ್ಗ14 mins ago

Elephant attack : ನಿಲ್ಲದ ಕಾಡು ಪ್ರಾಣಿಗಳ ಹಾವಳಿ; ಶಿವಮೊಗ್ಗದಲ್ಲಿ ಆನೆ ದಾಳಿಗೆ ವ್ಯಕ್ತಿ ಬಲಿ

Lalu Prasad Yadav
ದೇಶ16 mins ago

Lalu Prasad Yadav: ಬಿಹಾರದಲ್ಲಿ ಲಾಲೂ ಪ್ರಸಾದ್‌ ಯಾದವ್‌ v/s ಲಾಲೂ ಪುತ್ರಿ

Kiccha Sudeep jailer fame kevin has composed stunt in max
ಸ್ಯಾಂಡಲ್ ವುಡ್20 mins ago

Kiccha Sudeep: ಕಿಚ್ಚ ಸುದೀಪ್ ಸಿನಿಮಾಗೆ ‘ಜೈಲರ್’ ಸ್ಟಂಟ್ ಮಾಸ್ಟರ್ ಎಂಟ್ರಿ!

prajwal revanna case hd revanna farm house
ಕ್ರೈಂ24 mins ago

Prajwal Revanna Case: ಪ್ರಜ್ವಲ್‌ ರೇವಣ್ಣ, ರೇವಣ್ಣ ಮನೆ ಇಂಚಿಂಚೂ ತಲಾಶ್, ಸಿಗ್ತಾ ಮಹತ್ವದ ಕ್ಲೂ?

Thomas Cup 2024
ಕ್ರೀಡೆ59 mins ago

Thomas Cup 2024: ಉಬೆರ್‌ ಕಪ್‌ ಬಳಿಕ ಥಾಮಸ್‌ ಕಪ್​ನಲ್ಲಿಯೂ ಮುಗ್ಗರಿಸಿದ ಭಾರತ

ACTOR DHANUSH Nagarjuna mysterious first look from Kubera
ಕಾಲಿವುಡ್1 hour ago

Actor Dhanush: ಧನುಷ್‌ ನಟನೆಯ ʻಕುಬೇರʼ ಸಿನಿಮಾದ ನಾಗಾರ್ಜುನ ಫಸ್ಟ್‌ ಲುಕ್‌ ಪೋಸ್ಟರ್‌ ಔಟ್‌!

Viral News
ವೈರಲ್ ನ್ಯೂಸ್1 hour ago

Viral News: ಶಾಕಿಂಗ್‌ ವಿಡಿಯೊ; ಹಾವು ಕಚ್ಚಿದ್ದ ಯುವಕ ಗುಣಮುಖನಾಗಲೆಂದು ಗಂಗಾ ನದಿಯಲ್ಲಿ ನೇತಾಡಿಸಿದರು!

T20 World Cup 2024
ಕ್ರಿಕೆಟ್1 hour ago

T20 World Cup 2024: ಟಿ20 ವಿಶ್ವಕಪ್​ನ ಅಧಿಕೃತ ಹಾಡು ಬಿಡುಗಡೆ; ಕುಣಿದು ಕುಪ್ಪಳಿಸಿದ ಕ್ರಿಸ್​ ಗೇಲ್​, ಉಸೇನ್‌ ಬೋಲ್ಟ್

woman assault case haveri
ಕ್ರೈಂ2 hours ago

Assault Case: ಇನ್ನೊಂದು ವಂಟಮೂರಿ ಮಾದರಿ ಕೇಸ್‌, ಮಹಿಳೆಯನ್ನು ಕಂಬಕ್ಕೆ ಕಟ್ಟಿ ಥಳಿತ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ16 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ1 day ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20245 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

ಟ್ರೆಂಡಿಂಗ್‌