Site icon Vistara News

5G Services Launch | ಇಂಟರ್‌ನೆಟ್‌ ಮಹಾ ಕ್ರಾಂತಿ: ಭಾರತದಲ್ಲಿ 5G ಸೇವೆಗೆ ಪಿಎಂ ಮೋದಿ ಚಾಲನೆ

modi

ನವ ದೆಹಲಿ: ಇಲ್ಲಿನ ಪ್ರಗತಿ ಮೈದಾನದಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ದೇಶದಲ್ಲಿ 5G ಸೇವೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು. ರಿಮೋಟ್‌ ಬಟನ್‌ ಒತ್ತುವ ಮೂಲಕ ಅವರು ಸೇವೆಗಳನ್ನು ಉದ್ಘಾಟಿಸಿದರು. ಇದರ ಬಳಿಕ 5G ಬಳಕೆಯ ವಿವಿಧ ಸೇವೆಗಳನ್ನು ಪ್ರದರ್ಶಿಸಲಾಯಿತು. ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್, ರಿಲಯನ್ಸ್‌ ಜಿಯೊದ ಮುಕೇಶ್‌ ಅಂಬಾನಿ, ಏರ್‌ಟೆಲ್‌ನ ಸುನೀಲ್‌ಕುಮಾರ್‌, ವೊಡಾಫೋನ್‌ನ ಕುಮಾರಮಂಗಲಂ ಬಿರ್ಲಾ ಹಾಜರಿದ್ದರು.

ಈ ಸಂದರ್ಭದಲ್ಲಿ ಅವರು 5G ತಂತ್ರಜ್ಞಾನದ ಹಲವು ಸೇವೆಗಳನ್ನು ವೀಕ್ಷಿಸಿದರು. ವರ್ಚುಯಲ್‌ ರಿಯಾಲಿಟಿಯ ಮೂಲಕ ಸ್ವೀಡನ್‌ನಲ್ಲಿರುವ ಕಾರನ್ನು ತಾವಿದ್ದಲ್ಲಿಂದಲೇ ಚಲಾಯಿಸಿದರು. ಈ ಸಂದರ್ಭದಲ್ಲಿ ಮೂರು ಪ್ರಮುಖ ಟೆಲಿಕಾಂ ಆಪರೇಟರ್‌ಗಳು- Jio, Airtel ಮತ್ತು Vodafone Idea- ಪ್ರಧಾನ ಮಂತ್ರಿಗಳ ಮುಂದೆ ತಮ್ಮ ಸೇವೆಯ ಮಾದರಿಗಳನ್ನು, ಭಾರತದಲ್ಲಿ 5G ತಂತ್ರಜ್ಞಾನದ ಸಾಮರ್ಥ್ಯವನ್ನು ತೋರಿಸುವ ಯೋಜನೆಗಳನ್ನು ಪ್ರದರ್ಶಿಸಿದರು.

Exit mobile version