5G Services Launch | ಇಂಟರ್‌ನೆಟ್‌ ಮಹಾ ಕ್ರಾಂತಿ: ಭಾರತದಲ್ಲಿ 5G ಸೇವೆಗೆ ಪಿಎಂ ಮೋದಿ ಚಾಲನೆ - Vistara News

5 G

5G Services Launch | ಇಂಟರ್‌ನೆಟ್‌ ಮಹಾ ಕ್ರಾಂತಿ: ಭಾರತದಲ್ಲಿ 5G ಸೇವೆಗೆ ಪಿಎಂ ಮೋದಿ ಚಾಲನೆ

ಇಲ್ಲಿನ ಪ್ರಗತಿ ಮೈದಾನದಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ದೇಶದಲ್ಲಿ 5G ಸೇವೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು. ರಿಮೋಟ್‌ ಬಟನ್‌ ಒತ್ತುವ ಮೂಲಕ ಅವರು ಸೇವೆಗಳನ್ನು ಉದ್ಘಾಟಿಸಿದರು

VISTARANEWS.COM


on

modi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಇಲ್ಲಿನ ಪ್ರಗತಿ ಮೈದಾನದಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ದೇಶದಲ್ಲಿ 5G ಸೇವೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು. ರಿಮೋಟ್‌ ಬಟನ್‌ ಒತ್ತುವ ಮೂಲಕ ಅವರು ಸೇವೆಗಳನ್ನು ಉದ್ಘಾಟಿಸಿದರು. ಇದರ ಬಳಿಕ 5G ಬಳಕೆಯ ವಿವಿಧ ಸೇವೆಗಳನ್ನು ಪ್ರದರ್ಶಿಸಲಾಯಿತು. ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್, ರಿಲಯನ್ಸ್‌ ಜಿಯೊದ ಮುಕೇಶ್‌ ಅಂಬಾನಿ, ಏರ್‌ಟೆಲ್‌ನ ಸುನೀಲ್‌ಕುಮಾರ್‌, ವೊಡಾಫೋನ್‌ನ ಕುಮಾರಮಂಗಲಂ ಬಿರ್ಲಾ ಹಾಜರಿದ್ದರು.

ಈ ಸಂದರ್ಭದಲ್ಲಿ ಅವರು 5G ತಂತ್ರಜ್ಞಾನದ ಹಲವು ಸೇವೆಗಳನ್ನು ವೀಕ್ಷಿಸಿದರು. ವರ್ಚುಯಲ್‌ ರಿಯಾಲಿಟಿಯ ಮೂಲಕ ಸ್ವೀಡನ್‌ನಲ್ಲಿರುವ ಕಾರನ್ನು ತಾವಿದ್ದಲ್ಲಿಂದಲೇ ಚಲಾಯಿಸಿದರು. ಈ ಸಂದರ್ಭದಲ್ಲಿ ಮೂರು ಪ್ರಮುಖ ಟೆಲಿಕಾಂ ಆಪರೇಟರ್‌ಗಳು- Jio, Airtel ಮತ್ತು Vodafone Idea- ಪ್ರಧಾನ ಮಂತ್ರಿಗಳ ಮುಂದೆ ತಮ್ಮ ಸೇವೆಯ ಮಾದರಿಗಳನ್ನು, ಭಾರತದಲ್ಲಿ 5G ತಂತ್ರಜ್ಞಾನದ ಸಾಮರ್ಥ್ಯವನ್ನು ತೋರಿಸುವ ಯೋಜನೆಗಳನ್ನು ಪ್ರದರ್ಶಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತಂತ್ರಜ್ಞಾನ

SmartPhone: ಆನ್‌ಲೈನ್‌ನಲ್ಲಿ ಮೊಬೈಲ್ ಖರೀದಿಸುವ ಯೋಚನೆ ಇತ್ತಾ? ನಿಮಗೊಂದು ಶಾಕಿಂಗ್ ನ್ಯೂಸ್!

ಶಿಯೋಮಿ ಮತ್ತು ರಿಯಲ್ ಮಿ ಸ್ಮಾರ್ಟ್ ಫೋನ್  ಬ್ರ್ಯಾಂಡ್ ಗಳು ಚಿಲ್ಲರೆ ವ್ಯಾಪಾರಿಗಳು ನೀಡುತ್ತಿರುವ ರಿಯಾಯಿತಿಗಳಿಗೆ ತಡೆ ಹಾಕಲು ಮುಂದಾಗಿದೆ. ಅಧಿಕೃತ ಚಾನೆಲ್‌ಗಳ ಹೊರಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ತಡೆಯುವ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡು ಎಚ್ಚರಿಕೆ ನೀಡಿವೆ.

VISTARANEWS.COM


on

SmartPhone
Koo

ಬೆಂಗಳೂರು: ಶಿಯೋಮಿ ಮತ್ತು ರಿಯಲ್ ಮಿ ಸ್ಮಾರ್ಟ್ ಫೋನ್  ಬ್ರ್ಯಾಂಡ್‌ಗಳು ಆನ್‌ ಲೈನ್ ಪ್ಲಾಟ್‌ ಫಾರ್ಮ್‌ ಗಳಲ್ಲಿ ತಮ್ಮ ಮೊಬೈಲ್ ಫೋನ್‌ಗಳಿಗೆ (Mobile phone) ಚಿಲ್ಲರೆ ವ್ಯಾಪಾರಿಗಳು ನೀಡುತ್ತಿರುವ ರಿಯಾಯಿತಿಗಳಿಗೆ ಬ್ರೇಕ್ ಹಾಕಲು ಹೊರಟಿವೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಅಂದರೆ, ಇನ್ನು ಮುಂದೆ ಪ್ರಮುಖ ಬ್ರ್ಯಾಂಡ್‌ಗಳ ಮೊಬೈಲ್‌ಗಳು ಆನ್‌ಲೈನ್‌ ಮೂಲಕ ಹೆಚ್ಚಿನ ರಿಯಾಯಿತಿ ದರದಲ್ಲಿ ಸಿಗುವುದಿಲ್ಲ.

ಭಾರತದಲ್ಲಿ ತಮ್ಮ ಉತ್ಪನ್ನಗಳ ಮಾರಾಟದ ವ್ಯಾಪ್ತಿ ಹೆಚ್ಚಿಸಲು ಕಂಪನಿಗಳು ಆಫ್‌ ಲೈನ್ ಚಾನಲ್ ಗಳಿಗೆ ಒತ್ತು ನೀಡುವ ಗುರಿಯನ್ನು ಹೊಂದಿವೆ. ಹಾಗಾಗಿ ಆನ್‌ಲೈನ್‌ ರಿಯಾಯಿತಿಗಳಿಗೆ ತಡೆ ಹಾಕಲು ಮುಂದಾಗಿವೆ. ಆನ್‌ಲೈನ್‌ ರಿಯಾಯಿತಿ ಮಾರಾಟದಿಂದಾಗಿ ತಮಗೆ ಭಾರಿ ನಷ್ಟವಾಗುತ್ತಿದೆ ಎಂದು ಚಿಲ್ಲರೆ ವ್ಯಾಪಾರಿಗಳ ಸಂಘಗಳು ದೂರಿದ್ದವು. ಈ ಹಿನ್ನೆಲೆಯಲ್ಲಿ ಶಿಯೋ ಮಿ ಮತ್ತು ರಿಯಲ್ ಮಿ ಕಂಪನಿಗಳು ರಿಯಾಯಿತಿ ದರದಲ್ಲಿನ ಆನ್‌ಲೈನ್‌ ಮಾರಾಟಕ್ಕೆ ಕಡಿವಾಣ ಹಾಕಲು ಮುಂದಾಗಿವೆ. ಮಿತಿ ಮೀರಿದ ವಿನಾಯಿತಿ ನೀಡುವವರನ್ನು ಪತ್ತೆ ಹಚ್ಚಿ ದಂಡ ವಿಧಿಸುವ ಉದ್ದೇಶದಿಂದ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಸ್ಟಾಕ್ ಗಳನ್ನು ಈ ಕಂಪನಿಗಳು ಮರುಖರೀದಿ ಮಾಡುತ್ತಿವೆ ಎಂದು ವರದಿಗಳು ತಿಳಿಸಿವೆ.

ವ್ಯಾಪಾರಿಗಳ ಮೇಲೆ ಏನು ಕ್ರಮ?

ಬ್ರ್ಯಾಂಡ್‌ ಗಳು ಸದ್ಯಕ್ಕೆ ಚಿಲ್ಲರೆ ವ್ಯಾಪಾರಿಗಳ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ. ಅಧಿಕೃತ ಚಾನೆಲ್‌ಗಳ ಹೊರಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ತಡೆಯುವ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡು ಎಚ್ಚರಿಕೆ ನೀಡುತ್ತಿವೆ. ಜಮ್ಮು, ಪಶ್ಚಿಮ ಬಂಗಾಳ, ಹರಿಯಾಣ ಮತ್ತು ತಮಿಳುನಾಡಿನ ಹಲವು ಚಿಲ್ಲರೆ ವ್ಯಾಪಾರಿಗಳಿಂದ ಈ ರೀತಿ ಸಹಿ ಹಾಕಿಸಿಕೊಳ್ಳಲಾಗಿದೆ.

ಆನ್‌ ಲೈನ್ ಮೊಬೈಲ್ ಮಾರಾಟದ ಹೆಚ್ಚಿನ ರಿಯಾಯಿತಿಗಳ ಮೇಲೆ ದೂರು

ಆಲ್ ಇಂಡಿಯಾ ಮೊಬೈಲ್  ರೀಟೇಲರ್ಸ್ ಅಸೋಸಿಯೇಷನ್ (AIMRA)ನ ರಾಜ್ಯ ಘಟಕಗಳಿಂದ ಹಲವಾರು ದೂರುಗಳು ಬಂದಿವೆ. ಅದರ ಪ್ರಕಾರ ಶಿಯೋಮಿ, ರಿಯಲ್ ಮಿ ಮತ್ತು ಸ್ಯಾಮ್ ಸಂಗ್ ನಂತಹ ಬ್ರ್ಯಾಂಡ್‌ ಗಳ ಹನ್ನೆರಡು ಉತ್ಪನ್ನಗಳನ್ನು ಆನ್‌ಲೈನ್ ಚಾನೆಲ್‌ ಗಳಲ್ಲಿ ಸುಮಾರು 1,000-2,000 ರೂ. ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ:Phone Addiction: ಸ್ಮಾರ್ಟ್‌ಫೋನ್‌ ಚಟದಿಂದ ಹೊರಬರಲು ಹೀಗೆ ಮಾಡಿ!

“ಇಕಾಮರ್ಸ್ ಪ್ಲಾಟ್‌ ಫಾರ್ಮ್‌ಗಳು ಆನ್‌ ಲೈನ್‌ನಲ್ಲಿ ಚಿಲ್ಲರೆ ವ್ಯಾಪಾರಿಗಳನ್ನು ನೋಂದಾಯಿಸಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಬ್ರ್ಯಾಂಡ್ ಅನುಮತಿಸಿದೆ. ಇದು ನಿಜವಾಗಿಯೂ ಆತಂಕಕಾರಿ ಪರಿಸ್ಥಿತಿಯಾಗಿದೆ. ಗ್ರಾಹಕರಿಗೆ ತಮ್ಮ ಅತ್ಯುತ್ತಮ ಸಾಮರ್ಥ್ಯಗಳೊಂದಿಗೆ ಉತ್ಪನ್ನವನ್ನು ಮಾರಾಟ ಮಾಡಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿರುವ ಮುಖ್ಯ ಚಿಲ್ಲರೆ ವ್ಯಾಪಾರಿಗಳ ನಂಬಿಕೆಯನ್ನು ಬ್ರ್ಯಾಂಡ್ ಕಳೆದುಕೊಳ್ಳುತ್ತಿದೆ.”  ಎಂದು ಚಿಲ್ಲರೆ ವ್ಯಾಪಾರಿಗಳ ಸಂಘವು ಮಾರ್ಚ್ 26ರಂದು ರಿಯಲ್ ಮಿಗೆ ಬರೆದ ಪತ್ರದಲ್ಲಿ ತಿಳಿಸಿತ್ತು.

ಇದೇ ರೀತಿಯ ಪತ್ರಗಳನ್ನು ಶಿಯೋಮಿಗೂ ಕಳುಹಿಸಲಾಗಿದೆ. ಅದರ ಪ್ರತಿನಿಧಿಯೊಬ್ಬರು ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ನಾವು ಈ ಸಮಸ್ಯೆಯ ಮೂಲ ಹುಡುಕಲು ಮತ್ತು ಭಾರೀ ದಂಡದೊಂದಿಗೆ ಅದನ್ನು ಸರಿಪಡಿಸಲು ಸ್ಟಾಕ್‌ ಗಳನ್ನು ಖರೀದಿಸುತ್ತಿದ್ದೇವೆ ಎಂದವರು ತಿಳಿಸಿದ್ದಾರೆ.

Continue Reading

5 G

Team India : ಭಾರತ ತಂಡ 2024ರ ಮಾರ್ಚ್​ ತನಕವೂ ಬ್ಯುಸಿ; ಇಲ್ಲಿದೆ ಟೂರ್ನಿಗಳ ವಿವರ

ಮುಂದಿನ ನಾಲ್ಕು ತಿಂಗಳಲ್ಲಿ ಭಾರತವು (Team India) ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧ ಸರಣಿಗಳನ್ನು ಆಡಲಿದೆ.

VISTARANEWS.COM


on

Cricket news
Koo

ಬೆಂಗಳೂರು: ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್​ಗಳಿಂದ ಸೋತ ನಂತರ ಬೇಸರದಲ್ಲಿದೆ. ಆದರೆ, ಹೆಚ್ಚು ದಿನ ಅದೇ ಮೂಡ್​ನಲ್ಲಿ ಇರಲು ಅವಕಾಶವಿಲ್ಲ. ಟೀಮ್ ಇಂಡಿಯಾ ಮುಂದಿನ ಮೂರು ತಿಂಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರಲಿದೆ. ನಿರಂತರ ವೇಳಾಪಟ್ಟಿಯನ್ನು ಹೊಂದಿರುವುದರಿಂದ ತ್ವರಿತವಾಗಿ ಮರು ಸಂಘಟನೆಗೊಳ್ಳಬೇಕಾಗಿಎ. ವಿಶ್ವಕಪ್ ಬಳಿಕ ಟೀಂ ಇಂಡಿಯಾ ನವೆಂಬರ್ 23ರಿಂದ ಆರಂಭವಾಗಲಿರುವ 5 ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಅದಕ್ಕೀಗ ತಂಡ ಪ್ರಕಟಗೊಂಡಿದೆ.

ರೋಹಿತ್ ಶರ್ಮಾ ನೇತೃತ್ವದ ತಂಡವು ಡಿಸೆಂಬರ್​ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಮೂರು ಟಿ 20 ಮತ್ತು ಅನೇಕ ಏಕದಿನ ಪಂದ್ಯಗಳನ್ನು ಆಡಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವರು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದ್ದಾರೆ. ಇದಲ್ಲದೆ, ಭಾರತವು ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಟಿ 20 ಐ ಸರಣಿಯೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸಲಿದೆ. ನಂತರ ಜನವರಿ ಕೊನೆಯ ವಾರದಲ್ಲಿ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಪ್ರಾರಂಭವಾಗಲಿದೆ.

ಟಿ20ಗೆ ಆದ್ಯತೆ

ಮುಂಬರುವ ಪ್ರವಾಸಗಳು ಟಿ 20 ಪಂದ್ಯಗಳಿಂದಲೇ ತುಂಬಿರುತ್ತವೆ. ಏಕೆಂದರೆ ತಂಡದ ಪ್ರಮುಖ ಗಮನವು ಯುಎಸ್ ಮತ್ತು ವೆಸ್ಟ್ ಇಂಡೀಸ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2024 ರ ಮೇಲೆ ಇರುತ್ತದೆ. ಇದಲ್ಲದೆ, ನಿರ್ಣಾಯಕ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ಸೆಣಸಲಿರುವ ಭಾರತ ಟೆಸ್ಟ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​ಶೀಪ್​ (ಡಬ್ಲ್ಯುಟಿಸಿ) ಪಾಯಿಂಟ್ಸ್ ಟೇಬಲ್​​ನಲ್ಲಿ ನಿರ್ಣಾಯಕ ಅಂಕಗಳನ್ನು ಸಂಗ್ರಹಿಸಲು ಸಜ್ಜಾಗಿದೆ.

ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್​ನಲ್ಲಿ ಟೀಮ್ ಇಂಡಿಯಾ ಪ್ರಸ್ತುತ ಎರಡು ಪಂದ್ಯಗಳಲ್ಲಿ ಒಂದು ಗೆಲುವು ಮತ್ತು ಒಂದು ಡ್ರಾದೊಂದಿಗೆ ಎರಡನೇ ಸ್ಥಾನದಲ್ಲಿದೆ. ಪಂದ್ಯಾವಳಿಯ ಹಿಂದಿನ ಎರಡು ಆವೃತ್ತಿಗಳಲ್ಲಿ ರನ್ನರ್ ಅಪ್ ಸ್ಥಾನ ಪಡೆದ ಭಾರತ ತಂಡ ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ಅಪೇಕ್ಷಿತ ಗದೆ ರೂಪದ ಟ್ರೋಫಿಗೆ ಗೆಲ್ಲಲು ಸಿದ್ಧವಾಗಬೇಕಿದೆ.

ಇದನ್ನೂ ಓದಿ: Team India : ಜನವರಿಯಲ್ಲಿ ನಡೆಯಲಿದೆ ಅಫಘಾನಿಸ್ತಾನ ವಿರುದ್ಧ ಕ್ರಿಕೆಟ್​ ಸರಣಿ

ಪಂತ್​ಗಾಗಿ ಕಾಯುವಿಕೆ

ಪ್ಯಾಕ್ ಆಗಿರುವ ವೇಳಾಪಟ್ಟಿಯ ಹೊರತಾಗಿ, 2022 ರ ಡಿಸೆಂಬರ್​ನಲ್ಲಿ ಭೀಕರ ಕಾರು ಅಪಘಾತದ ಬಳಿಕ ಸುಧಾರಿಸಿಕೊಳ್ಳುತ್ತಿರುವ ಮತ್ತು ಸುಮಾರು ಒಂದು ವರ್ಷದಿಂದ ಆಟದಿಂದ ಹೊರಗುಳಿದಿದ್ದ ರಿಷಭ್ ಪಂತ್ ಮತ್ತೆ ಭಾರತೀಯ ತಂಡಕ್ಕೆ ಮರಳಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕ ಸೌರವ್ ಗಂಗೂಲಿ ಅವರು ಪಂತ್ ಐಪಿಎಲ್ 2024 ರಲ್ಲಿ ಭಾಗವಹಿಸುತ್ತಾರೆ ಎಂದು ಖಚಿತಪಡಿಸಿದ್ದಾರೆ ಮತ್ತು ಅವರ ಅಂತಾರಾಷ್ಟ್ರೀಯ ಪುನರಾಗಮನವು ಫೆಬ್ರವರಿ 2023 ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯ ಸಮಯದಲ್ಲಿ ನಡೆಯುವ ಸಾಧ್ಯತೆಯಿದೆ.

Continue Reading

5 G

BSNL 5G : ಗ್ರಾಹಕರಿಗೆ ಸಿಹಿ ಸುದ್ದಿ, ವರ್ಷಾಂತ್ಯಕ್ಕೆ ದೇಶಾದ್ಯಂತ ಸಿಗಲಿದೆ ಬಿಎಸ್ಸೆನ್ನೆಲ್‌ 5ಜಿ

VISTARANEWS.COM


on

BSNL users data hack and sold on dark web
Koo

ನವ ದೆಹಲಿ: ಬಿಎಸ್ಸೆನ್ನೆಲ್‌ನ (BSNL 5G) 4ಜಿ ನೆಟ್‌ ವರ್ಕ್‌ 2023ರ ವರ್ಷಾಂತ್ಯದ ವೇಳೆಗೆ 5ಜಿಗೆ ಮೇಲ್ದರ್ಜೆಗೇರಲಿದೆ ಎಂದು ಕೇಂದ್ರ ದೂರಸಂಪರ್ಕ ಖಾತೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ. (BSNL 5G) ಕಂಪನಿಯು ಪಂಜಾಬ್-ಫಿರೋಜ್‌ಪುರ್‌, ಪಠಾಣ್‌ ಕೋಟ್‌ ಮತ್ತು ಅಮೃತ್‌ಸರದಲ್ಲಿ 200 ಟವರ್‌ಗಳ ಸ್ಥಳಗಳಲ್ಲಿ 4ಜಿಯನ್ನು ಪ್ರಾಯೋಗಿಕವಾಗಿ ಆರಂಭಿಸಿದ್ದು, ಮೂರು ತಿಂಗಳ ಕಾಲ ನಡೆಯಲಿದೆ. ಬಳಿಕ ದಿನಕ್ಕೆ 200 ಸೈಟ್ಸ್‌ಗಳ ಲೆಕ್ಕದಲ್ಲಿ 4ಜಿ ನೆಟ್‌ ವರ್ಕ್‌ ವಿಸ್ತರಣೆಯಾಗಲಿದೆ. ಹಾಗೂ ನವೆಂಬರ್-ಡಿಸೆಂಬರ್‌ ವೇಳೆಗೆ 5ಜಿಗೆ ಅಪ್‌ಗ್ರೇಡ್‌ ಆಗಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಬಿಎಸ್ಸೆನ್ನೆಲ್‌ ಈಗಾಗಲೇ ಟಿಸಿಎಸ್‌ ಮತ್ತು ಐಟಿಐ ಲಿಮಿಟೆಡ್‌ ಜತೆಗೆ 4ಜಿ ನೆಟ್‌ ವರ್ಕ್‌ ಅಳವಡಿಕೆಗೆ ಸಂಬಂಧಿಸಿ 19,000 ಕೋಟಿ ರೂ.ಗಳ ಖರೀದಿ ಆರ್ಡರ್‌ಗೆ ಮುಂಗಡವನ್ನು ನೀಡಿದೆ (advance purchase order) ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಬಿಎಸ್ಸೆನ್ನೆಲ್‌ ನೆಟ್‌ ವರ್ಕ್‌ ಆರಂಭದಲ್ಲಿ 4ಜಿಯಲ್ಲಿ ಇರಲಿದೆ. ಬಳಿಕ ನವೆಂಬರ್-ಡಿಸೆಂಬರ್‌ ವೇಳೆಗೆ ಸಾಫ್ಟ್‌ವೇರ್‌ನಲ್ಲಿ ಸಣ್ಣ ಬದಲಾವಣೆಯೊಂದಿಗೆ 5ಜಿಗೆ ಅಪ್‌ಡೇಟ್‌ ಆಗಲಿದೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್‌ ವಿವರಿಸಿದ್ದಾರೆ.

ಅಮೆರಿಕಕ್ಕೆ ಭಾರತದ ಟೆಲಿಕಾಂ ತಂತ್ರಜ್ಞಾನ ರಫ್ತು:

ಭಾರತದ ಟೆಲಿಕಾಂ ತಂತ್ರಜ್ಞಾನವನ್ನು ಅಮೆರಿಕಕ್ಕೂ ಈಗ ರಫ್ತು ಮಾಡಲಾಗುತ್ತಿದೆ. 18 ದೇಶಗಳು ಭಾರತದ 4ಜಿ ಮತ್ತು 5ಜಿ ತಂತ್ರಜ್ಞಾನವನ್ನು ಅಳವಡಿಸಲು ಉತ್ಸುಕವಾಗಿವೆ. ದೇಶ ದೂರಸಂಪರ್ಕ ತಂತ್ರಜ್ಞಾನದಲ್ಲಿ ಬೆಳೆಯುತ್ತಿರುವುದಕ್ಕೆ ಇದು ಸಾಕ್ಷಿ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಇದನ್ನೂ ಓದಿ: BSNL OTT : ಬಿಎಸ್ಸೆನ್ನೆಲ್‌ನಿಂದ OTT ಸೇವೆ ಸಿನಿಮಾಪ್ಲಸ್‌ ಆರಂಭ

Continue Reading

5 G

Jio True 5G | ಜಿಯೋದಿಂದ ಹೊಸ ವರ್ಷದ ಕೊಡುಗೆ; ಮೈಸೂರಿನಲ್ಲಿ ಟ್ರೂ 5ಜಿ ಸೇವೆ ಪ್ರಾರಂಭ

ದೇಶದ ವಿವಿಧ ನಗರಗಳಲ್ಲಿ 5ಜಿ ಸೇವಯನ್ನು ಒದಗಿಸುತ್ತಿರುವ ರಿಲಯನ್ಸ್ ಜಿಯೋ ಇದೀಗ ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜಿಯೋ ಟ್ರೂ 5ಜಿ (Jio True 5G) ಸೇವೆಯನ್ನು ಆರಂಭಿಸಿದೆ.

VISTARANEWS.COM


on

Jio True 5G @ Mysuru
Koo

ಮೈಸೂರು: ರಿಲಯನ್ಸ್ ಜಿಯೋ ಮೈಸೂರಿನಲ್ಲಿ ಟ್ರೂ 5ಜಿ ಸೇವೆಗಳಿಗೆ (Jio True 5G) ಚಾಲನೆ ನೀಡಿತು. ಅಷ್ಟೇ ಅಲ್ಲ, ಲಖನೌ, ತಿರುವನಂತಪುರಂ, ನಾಸಿಕ್, ಔರಂಗಾಬಾದ್, ಚಂಡೀಗಢ, ಮೊಹಾಲಿ, ಪಂಚಕುಲ, ಜಿರಾಕ್‌ಪುರ, ಖರಾರ್ ಮತ್ತು ದೇರಾಬಸ್ಸಿಗಳಲ್ಲಿ ಕೂಡ ತನ್ನ ಟ್ರೂ 5ಜಿ ಸೇವೆಗಳ ಪ್ರಾರಂಭದ ಬಗ್ಗೆ ಘೋಷಣೆ ಮಾಡಿತು. ಅಂದಹಾಗೆ, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸುವ ಮೊದಲ ಮತ್ತು ಏಕೈಕ ಆಪರೇಟರ್ ರಿಲಯನ್ಸ್ ಜಿಯೋ ಆಗಿದೆ.

ಬುಧವಾರದಿಂದಲೇ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್‌+ ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಲು ಮೈಸೂರಿನಲ್ಲಿರುವ ಜಿಯೋ ಬಳಕೆದಾರರನ್ನು ಜಿಯೋ ವೆಲ್‌ಕಮ್ ಆಫರ್‌ಗೆ ಆಹ್ವಾನಿಸಲಾಗುತ್ತದೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಜಿಯೋ ವಕ್ತಾರರು, ಮೈಸೂರು ನಗರದಲ್ಲಿ 5ಜಿ ಆರಂಭಿಸುವುದಕ್ಕೆ ನಾವು ಹೆಮ್ಮೆಪಡುತ್ತೇವೆ ಮತ್ತು ನಾವು ಟ್ರೂ 5ಜಿ ಸೇವೆಗಳನ್ನು ಹೊರತರಲು ಪ್ರಾರಂಭಿಸಿದಾಗಿನಿಂದ ನಮ್ಮ ಅತಿದೊಡ್ಡ ಆರಂಭದಲ್ಲಿ ಇದು ಒಂದಾಗಿದೆ. ಜಿಯೋ ಟ್ರೂ 5ಜಿ ತಂತ್ರಜ್ಞಾನದ ವೇರಿಯಂಟ್‌ ಪ್ರಯೋಜನಗಳನ್ನು ಆನಂದಿಸುವ ಮೂಲಕ ಈಗ 2023ರಿಂದ ಪ್ರಾರಂಭ ಆಗುವುದರೊಂದಿಗೆ ಲಕ್ಷಾಂತರ ಜಿಯೋ ಬಳಕೆದಾರರಿಗೆ ಇದು ಗೌರವವಾಗಿದೆ.

“ಮೈಸೂರು ನಮ್ಮ ದೇಶದ ಪ್ರಮುಖ ಪ್ರವಾಸೋದ್ಯಮ ಕೇಂದ್ರ ಮತ್ತು ಪ್ರಮುಖ ಶಿಕ್ಷಣ ಕೇಂದ್ರವಾಗಿದೆ. ಜಿಯೋದ ಟ್ರೂ 5ಜಿ ಸೇವೆಗಳ ಪ್ರಾರಂಭದೊಂದಿಗೆ ಈ ಪ್ರದೇಶದ ಗ್ರಾಹಕರು ಕೇವಲ ಉತ್ತಮ ದೂರಸಂಪರ್ಕ ಜಾಲವನ್ನು ಮಾತ್ರವಲ್ಲ, ಜತೆಗೆ ಇ-ಆಡಳಿತ, ಶಿಕ್ಷಣ, ಆಟೋಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್, ಆರೋಗ್ಯ, ಕೃಷಿ, ಐಟಿ ಕ್ಷೇತ್ರಗಳಲ್ಲಿ ಮತ್ತು ಸಣ್ಣ ಮತ್ತು ಮಧ್ಯಮ ಸಂಸ್ಥೆಗಳು ಅಮೋಘ ಬೆಳವಣಿಗೆಯ ಅವಕಾಶಗಳನ್ನು ಪಡೆಯುತ್ತಾರೆ. “ಈ ಪ್ರದೇಶವನ್ನು ಡಿಜಿಟಲೈಸ್ ಮಾಡುವ ನಮ್ಮ ಪ್ರಯತ್ನದಲ್ಲಿ ನಿರಂತರ ಬೆಂಬಲ ನೀಡುತ್ತಿರುವ ಕರ್ನಾಟಕ ಸರ್ಕಾರಕ್ಕೆ ನಾವು ಆಭಾರಿಯಾಗಿದ್ದೇವೆ” ಎಂದು ಅವರು ಹೇಳಿದರು.

ಇದನ್ನೂ ಓದಿ | Jio True 5G | ಮಹಾಕಾಲ ಮಹಾಲೋಕ, ಮಹಾಕಾಲೇಶ್ವರ ದೇವಸ್ಥಾನದಲ್ಲಿ ಜಿಯೋ ಟ್ರೂ 5ಜಿ ಸೇವೆ

Continue Reading
Advertisement
PARIS OLYMPICS
ಕ್ರೀಡೆ20 seconds ago

Paris Olympics: ಶರತ್ ಕಮಲ್​ಗೆ ಮೊದಲ ಪಂದ್ಯದಲ್ಲಿ ಸ್ಲೊವೆನಿಯಾದ ಡೆನಿ ಕೊಜುಲ್ ಎದುರಾಳಿ

Viral Video
ವೈರಲ್ ನ್ಯೂಸ್53 seconds ago

Viral Video: ಅಪಘಾತವಾದ ಲಾರಿಯಿಂದ ಜ್ಯೂಸ್‌ ಪ್ಯಾಕ್‌ ಎತ್ತಿಕೊಂಡ ಐಫೋನ್‌ಧಾರಿ! ದೊಡ್ಡವರ ಸಣ್ಣತನ ಎಂದ ನೆಟ್ಟಿಗರು

Ajith Kumar Neel not collaborating for a film
ಕಾಲಿವುಡ್2 mins ago

Ajith Kumar: ಪ್ರಶಾಂತ್ ನೀಲ್- ಅಜಿತ್ ಭೇಟಿಯಾಗಿದ್ದು ನಿಜ; ಸಿನಿಮಾ ಬಗ್ಗೆ ಮ್ಯಾನೇಜರ್ ಹೇಳಿದ್ದೇನು?

shiradi ghat train karnataka rian news
ಪ್ರಮುಖ ಸುದ್ದಿ23 mins ago

Karnataka Rain News: ಎಡಕುಮೇರಿಯಲ್ಲಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ, ಬೆಂಗಳೂರು- ಮಂಗಳೂರು ರೈಲ್ವೆ ಸಂಚಾರ ಬಂದ್‌

UGCET 2024 seat allotment process begins Only a few days left for the option to enter
ಬೆಂಗಳೂರು28 mins ago

UGCET 2024 : ಯುಜಿಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆ ಆರಂಭ; ಆಪ್ಶನ್ ಎಂಟ್ರಿ ಮಾಡಲು ಕೆಲವೇ ದಿನಗಳು ಬಾಕಿ!

Actor Darshan Lata Jaiprakash says that since Darshan is a devotee of God,
ಸಿನಿಮಾ42 mins ago

Actor Darshan: ದರ್ಶನ್ ದೈವ ಭಕ್ತ, ಜೈಲಿಗೆ ಸೇರಿದ್ದಾಗಿನಿಂದ ವಿಜಯಲಕ್ಷ್ಮಿ ಅತ್ತಿಗೆ ಹೋರಾಟ ಜಾಸ್ತಿ ಆಗಿದೆ ಎಂದ ಲತಾ ಜೈಪ್ರಕಾಶ್!

Paris Olympics
ಕ್ರೀಡೆ46 mins ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಮೊದಲ ಡೋಪಿಂಗ್‌ ಪ್ರಕರಣ ಪತ್ತೆ; ಜೂಡೊಪಟು ತಾತ್ಕಾಲಿಕ ಅಮಾನತು

illicit relationship raichur siravara
ಕ್ರೈಂ56 mins ago

Illicit Relationship: ವಿಚ್ಛೇದಿತ ನರ್ಸ್‌ ಜೊತೆ ಲವ್ವಿ ಡವ್ವಿ; ಪೊಲೀಸಪ್ಪನಿಗೇ ಕಾನೂನು ರುಚಿ ತೋರಿಸಿದ ಪತ್ನಿ

Gold Rate Today
ಚಿನ್ನದ ದರ56 mins ago

Gold Rate Today: ಬಜೆಟ್‌ ಬಳಿಕ ಇದೇ ಮೊದಲ ಬಾರಿ ಏರಿಕೆ ಕಂಡ ಚಿನ್ನದ ದರ; ಇಂದು ಇಷ್ಟು ದುಬಾರಿ

Actor Darshan Astrologer Chanda Pandey Said Facing Problems Because Of His vig
ಕ್ರೈಂ1 hour ago

Actor Darshan: ವಿಗ್‌ ಹಾಕಿದ್ದರಿಂದಲೇ ದರ್ಶನ್‌ಗೆ ಕಂಟಕ ಆಯ್ತು ಎಂದ ಕಾಳಿ ಉಪಾಸಕಿ ಚಂದಾ ಪಾಂಡೇ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ17 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ18 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ19 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ20 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ4 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌