ಹೊಸದಿಲ್ಲಿ: ವಿಶ್ವ ನಾಯಕರು ಮಕ್ಕಳಾಗಿ (World leaders as babies) ಹೇಗೆ ಕಾಣಬಹುದು ಎಂಬ ಕಲ್ಪನೆಯನ್ನು ಕೃತಕ ಬುದ್ಧಿಮತ್ತೆ (AI) ಮೂಲಕ ಸಾಕಾರಗೊಳಿಸಿಕೊಂಡು ನೋಡಿದ ಒಂದು ಪ್ರಯತ್ನ ಇದೀಗ ವೈರಲ್ (viral video) ಆಗಿದೆ. ಎಐ ಮೂಲಕ ರಚಿಸಲಾದ ನಾಯಕರ ಚಿತ್ರಗಳ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಫೋಟೋ ಸಹಿತ ಇದೆ.
World leaders as babies, according to AI
— Massimo (@Rainmaker1973) April 21, 2024
[📹 Planet AI]pic.twitter.com/jT6Gbk9Z4y
ಪಿಎಂ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬಿಡನ್, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ರಷ್ಯನ್ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅನೇಕರು ಇದರಲ್ಲಿ ಕಂಡುಬರುತ್ತಾರೆ. ವೀಡಿಯೊ ಈ ಚಿತ್ರಗಳನ್ನು ಒಂದೊಂದಾಗಿ ತೋರಿಸುತ್ತದೆ. ಶೀರ್ಷಿಕೆಯಲ್ಲಿ ನಾಯಕನ ಹೆಸರನ್ನು ಕೊಡಲಾಗಿದೆ. ಶೀರ್ಷಿಕೆ ಕೊಡದಿದ್ದರೂ ಆಯಾ ನಾಯಕರ ಮುಖ ನೋಡಿಯೇ ನಾವು ಊಹಿಸಬಹುದಾಗಿದೆ.
ಈ ವೀಡಿಯೊವನ್ನು “ಆಸ್ಕಿಂಗ್ AI ಟು ಡ್ರಾ ವರ್ಲ್ಡ್ ಲೀಡರ್ಸ್ ಆಸ್ ಬೇಬೀಸ್” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಪ್ಲಾನೆಟ್ AI ಇದನ್ನು ಹಂಚಿದೆ. ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್, ಫ್ರೆಂಚ್ ಅಧ್ಯಕ್ಷರನ್ನೂ ವೀಡಿಯೊ ತೋರಿಸುತ್ತದೆ. ಇಮ್ಯಾನುಯೆಲ್ ಮ್ಯಾಕ್ರನ್, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಪೋಪ್ ಫ್ರಾನ್ಸಿಸ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಇನ್ನಷ್ಟು ನಾಯಕರು ಇದರಲ್ಲಿ ಇದ್ದಾರೆ. ತೀರಿಹೋದ ನಾಯಕ ಜಾನ್ ಕೆನೆಡಿ, ಪೋಪ್ ಥರವದರೂ ಇದ್ದಾರೆ.
ಮಾಸ್ಸಿಮೊ ಎಂಬ ಬಳಕೆದಾರರಿಂದ ಈ ವೀಡಿಯೊವನ್ನು ಇತ್ತೀಚೆಗೆ Xನಲ್ಲಿ ಹಂಚಿಕೊಳ್ಳಲಾಗಿದೆ. ವೀಡಿಯೊವನ್ನು ಹಂಚಿಕೊಂಡ ಖಾತೆಯ ಬಳಕೆದಾರ ಹೆಸರು @Rainmaker1973. ಶೀರ್ಷಿಕೆಯಲ್ಲಿ ಬಳಕೆದಾರರು ಹೀಗೆ ಬರೆದಿದ್ದಾರೆ: “AI ಪ್ರಕಾರ ಶಿಶುಗಳಾಗಿ ವಿಶ್ವ ನಾಯಕರು”. ಪೋಸ್ಟ್ Xನಲ್ಲಿ ವೈರಲ್ ಆಗಿದೆ. 1.45 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ಖಾತೆಯೇ 19 ಕೋಟಿಗಿಂತ ಅಧಿಕ ಫಾಲೋವರ್ಸ್ ಹೊಂದಿದೆ.
ಇದನ್ನೂ ಓದಿ: Video Viral: ಜಲ ತರಂಗ್‌ನಲ್ಲಿ ಮಹಿಳೆ ನುಡಿಸಿದ ಐಗಿರಿ ನಂದಿನಿ ವಿಡಿಯೋ ವೈರಲ್