Site icon Vistara News

PM Narendra Modi: ವಿಡಿಯೋ ಸಂದೇಶ ಮೂಲಕ ಬಸವೇಶ್ವರ ಜಯಂತಿಗೆ ಶುಭ ಕೋರಿದ ಪಿಎಂ

pm narendra modi basava jayanti 2024

ಹೊಸದಿಲ್ಲಿ: ಭಕ್ತಿ ಭಂಡಾರಿ, ಸಮಾಜ ಸುಧಾರಕ, ವಚನ ಚಳವಳಿಯ ಆದ್ಯ ಪೂಜ್ಯ ಶ್ರೀ ಬಸವೇಶ್ವರ ಜಯಂತಿ (Basava Jayanti 2024) ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ತಮ್ಮ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸೋಶಿಯಲ್‌ ಮೀಡಿಯಾ (Social media) ಎಕ್ಸ್‌ನಲ್ಲಿ ಪಠ್ಯ ಸಂದೇಶ ಹಾಗೂ ವಿಡಿಯೋ ಸಂದೇಶಗಳೆರಡನ್ನೂ ಅವರು ನೀಡಿದ್ದಾರೆ.

“ಬಸವ ಜಯಂತಿಯ ಸಂದರ್ಭದಲ್ಲಿ ನಾನು, ಜಗದ್ಗುರು ಬಸವೇಶ್ವರರಿಗೆ ಗೌರವ ನಮನ ಸಲ್ಲಿಸುತ್ತೇನೆ. ಅವರ ಆದರ್ಶಗಳು ಕೋಟ್ಯಂತರ ಜನರ ಬದುಕಿಗೆ ಬೆಳಕು ನೀಡಿವೆ. ನ್ಯಾಯಯುತ ಮತ್ತು ಸಮೃದ್ಧ ಸಮಾಜದ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

“ಭಗವಾನ್‌ ಬಸವೇಶ್ವರರ ಸಂದೇಶ ಹಾಗೂ ಅವರ ವಚನಗಳು ನನಗೆ ಹೊಸಹೊಸದಾಗಿ ಕಲಿಸುತ್ತಲೇ ಇರುತ್ತವೆ. ನಾವು ಅವರಿಂದ ಅವರ ದೈವೀಯ ಗುಣವನ್ನೂ ಕಲಿಯಬಹುದು; ಜೊತೆಗೆ ಅವರು ಉತ್ತಮ ಆಡಳಿತಗಾರ, ಸುಧಾರಕನೂ ಹೌದು. ಸಮಾಜ ಸುಧಾರಣೆಯ ಅವರ ಬದುಕು ನಮಗೆ ಪ್ರೇರಣೆಯಾಗುವಂಥದು. ಬಸವಣ್ಣನವರ ವಚನಗಳು ಹಾಗೂ ಸಂದೇಶಗಳು ಆಧ್ಯಾತ್ಮಿಕವೂ ಹೌದು, ಬದುಕಿನ ಪ್ರಾಯೋಗಿಕ ಮಾರ್ಗದರ್ಶಕ ಸೂತ್ರಗಳೂ ಹೌದು” ಎಂದು ಅವರು ಕೊಂಡಾಡಿದ್ದಾರೆ.

“ಅವರ ಉಪದೇಶಗಳು ನಮಗೆ ಉತ್ತಮ ಮಾನವರಾಗುವುದನ್ನು ಕಲಿಸುತ್ತವೆ. ಇನ್ನಷ್ಟು ದಯಾಳು, ಅಧಿಕ ಉದಾರಿ, ಹೆಚ್ಚಿನ ಮಾನವೀಯ ಸಂವೇದನೆಗಳನ್ನು ನಮ್ಮಲ್ಲಿ ತುಂಬುತ್ತದೆ. ಶತಮಾನಗಳಷ್ಟು ಮೊದಲೇ ಬಸವೇಶ್ವರರು ಸಾಮಾಜಿಕ ನ್ಯಾಯ, ಲಿಂಗ ಸಮಾನತೆಯಂಥ ಮಹತ್ವದ ಸಂಗತಿಗಳ ಬಗ್ಗೆ ಸಮಾಜಕ್ಕೆ ಬೋಧಿಸಿದ್ದರು. ನಾವು ಅವರ ವಚನಗಳು- ಆದರ್ಶಗಳನ್ನು ಜಾಗತಿಕವಾಗಿ ಪಸರಿಸಬೇಕು. ಜಗತ್ತನ್ನು ಆ ಮೂಲಕ ಇನ್ನಷ್ಟು ಸುಂದರಗೊಳಿಸೋಣ. ಈ ಶುಭಸಂದರ್ಭದಲ್ಲಿ ನಿಮಗೆಲ್ಲರಿಗೂ ಶುಭಕಾಮನೆಗಳು” ಎಂದು ಅವರು ಹಾರೈಸಿದ್ದಾರೆ.

ಇದನ್ನೂ ಓದಿ: Basava Jayanti 2024: ಬದುಕಿನ ಪಾಠ ಕಲಿಸುವ ಬಸವಣ್ಣನ 10 ವಚನಗಳಿವು

Exit mobile version