Site icon Vistara News

Shootout: ಎನ್‌ಕೌಂಟರ್‌ನಲ್ಲಿ ದರೋಡೆಕೋರನನ್ನು ಕೊಂದು ಪೊಲೀಸ್‌ ಅಧಿಕಾರಿ ಹುತಾತ್ಮ

shootout jammu kashmir

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕಥುವಾದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ (Shootout) ದರೋಡೆಕೋರನೊಬ್ಬ ಗುಂಡೇಟಿಗೆ (Encounter) ಬಲಿಯಾಗಿದ್ದು, ಓರ್ವ ಪೊಲೀಸ್ ಅಧಿಕಾರಿ (Police Officer) ಗಾಯಗೊಂಡು ಸಾವನ್ನಪ್ಪಿದ್ದಾರೆ (Martyr) ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಸಂಜೆ ವೈದ್ಯಕೀಯ ಕಾಲೇಜು ಆವರಣದಲ್ಲಿ ದರೋಡೆಕೋರರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್ ದೀಪಕ್ ಶರ್ಮಾ ತೀವ್ರವಾಗಿ ಗಾಯಗೊಂಡಿದ್ದರು. ಎನ್‌ಕೌಂಟರ್‌ನಲ್ಲಿ ಇನ್ನೊಬ್ಬ ವಿಶೇಷ ಪೊಲೀಸ್ ಅಧಿಕಾರಿಯೂ ಗಾಯಗೊಂಡಿದ್ದಾರೆ.

ವರದಿಗಳ ಪ್ರಕಾರ, ವಾಸುದೇವ್ ನೇತೃತ್ವದ ಶುನೂ ಗ್ರೂಪ್ ಎಂದು ಕರೆಯಲ್ಪಡುವ ಗ್ಯಾಂಗ್‌ನ ಸದಸ್ಯರನ್ನು ಪೊಲೀಸ್ ತಂಡವು ಬೆನ್ನಟ್ಟಿದೆ. ದರೋಡೆಕೋರರು ತಮ್ಮ ಕಾರನ್ನು ವೈದ್ಯಕೀಯ ಕಾಲೇಜು ಕ್ಯಾಂಪಸ್‌ನೊಳಗೆ ಓಡಿಸಿದ್ದರು. ಅಲ್ಲಿ ಪೊಲೀಸರು ಅವರನ್ನು ಸುತ್ತುವರಿದಿದ್ದರು.

ನಂತರ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ದರೋಡೆಕೋರನನ್ನು ಗುಂಡಿಕ್ಕಿ ಕೊಲ್ಲಲಾಯಿತು. ಆಗ ತಲೆಗೆ ಗುಂಡು ತಗುಲಿ ಸಬ್ ಇನ್‌ಸ್ಪೆಪೆಕ್ಟರ್ ಶರ್ಮಾ ತೀವ್ರವಾಗಿ ಗಾಯಗೊಂಡಿದ್ದರು. ಕಥುವಾದಲ್ಲಿ ಪ್ರಾಥಮಿಕ ಆರೈಕೆಯ ನಂತರ, ಗಾಯಗೊಂಡ ಅಧಿಕಾರಿಯನ್ನು ಪಂಜಾಬ್‌ನ ಪಠಾಣ್‌ಕೋಟ್‌ಗೆ ಸ್ಥಳಾಂತರಿಸಲಾಯಿತು. ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮೃತ ಅಧಿಕಾರಿಗೆ ಗೌರವ ಸಲ್ಲಿಸಿದ್ದಾರೆ. “ಕಥುವಾದಲ್ಲಿ ಮೋಸ್ಟ್ ವಾಂಟೆಡ್ ದರೋಡೆಕೋರರ ಎದುರು ವೀರಾವೇಶದಿಂದ ಹೋರಾಡುವ ಸಂದರ್ಭದಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ಪಿಎಸ್ಐ ದೀಪಕ್ ಶರ್ಮಾ ಅವರ ಶೌರ್ಯ ಮತ್ತು ಅದಮ್ಯ ಧೈರ್ಯವನ್ನು ನಾನು ವಂದಿಸುತ್ತೇನೆ. ಅವರ ಅತ್ಯುನ್ನತ ತ್ಯಾಗ ನಮ್ಮ ಹೃದಯದಲ್ಲಿ ಉಳಿಯುತ್ತದೆ. ಹುತಾತ್ಮ ದೀಪಕ್ ಶರ್ಮಾ ಅವರ ಕುಟುಂಬಕ್ಕೆ ಆಳವಾದ ಸಂತಾಪ,” ಎಂದಿದ್ದಾರೆ.

ಬಿದ್ದ ಅಧಿಕಾರಿಯ ಪ್ರತಿ ರಕ್ತದ ಹನಿಗೂ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಸಿನ್ಹಾ ಹೇಳಿದ್ದಾರೆ. “ರಾಷ್ಟ್ರವು ಹುತಾತ್ಮರ ಕುಟುಂಬ ಮತ್ತು @JmuKmrPolice ಜೊತೆ ಒಗ್ಗಟ್ಟಿನಿಂದ ನಿಂತಿದೆ, ಅವರ ಸಮರ್ಪಣೆ, ಸ್ಥೈರ್ಯ ಮತ್ತು ಎದುರಾಳಿಗಳ ವಿರುದ್ಧ ಹೋರಾಡುವ ಧೈರ್ಯವು ನಮಗೆ ಸ್ಫೂರ್ತಿ ನೀಡುತ್ತಲೇ ಇದೆ. ನಮ್ಮ ಹುತಾತ್ಮರ ಪ್ರತಿ ಹನಿ ರಕ್ತಕ್ಕೂ ಪ್ರತೀಕಾರವನ್ನು ಪಡೆಯಲಾಗುವುದು,” ಎಂದು ಅವರು ಹೇಳಿದರು.

ಇದನ್ನೂ ಓದಿ: Martand Sun temple : ಜಮ್ಮು-ಕಾಶ್ಮೀರದಲ್ಲಿರುವ ಅತ್ಯಂತ ಪುರಾತನ ಸೂರ್ಯ ದೇವಸ್ಥಾನಕ್ಕೆ ನೀವು ಹೋಗಬಹುದು? ಹೇಗೆ ಗೊತ್ತಾ?

Exit mobile version