Site icon Vistara News

Prajwal Revanna case: ತಲೆಮರೆಸಿಕೊಂಡ ಪ್ರಜ್ವಲ್‌ ರೇವಣ್ಣಗೆ ಲುಕೌಟ್‌ ನೋಟಿಸ್‌ ಜಾರಿ, ಬಂದ ಕೂಡಲೇ ಬಂಧನ!

prajwal revanna case look out notice

ಬೆಂಗಳೂರು: ಹಾಸನದ ಅಶ್ಲೀಲ ವೀಡಿಯೋ (Obscene video) ಪ್ರಕರಣ ಸಂಬಂಧ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna case) ಅವರಿಗೆ ಕರ್ನಾಟಕ ಸರ್ಕಾರದಿಂದ ಲುಕ್ಔಟ್‌ ನೋಟಿಸ್ (Lookout notice) ಜಾರಿ ಮಾಡಲಾಗಿದೆ.

ಲೈಂಗಿಕ ದೌರ್ಜನ್ಯ (Physical abuse) ಹಗರಣದಲ್ಲಿ ಎಸ್‌ಐಟಿ (SIT) A2 ಆಗಿರುವ ಪ್ರಜ್ವಲ್‌ ರೇವಣ್ಣ ಅವರನ್ನು ತನಿಖೆಗೊಳಪಡಿಸುವುದು ಅಗತ್ಯವಾಗಿದ್ದು, ಅವರನ್ನು ಜರ್ಮನಿಯಿಂದ ಕರೆತರಬೇಕಿದೆ. ವಿಮಾನ ನಿಲ್ದಾಣದ ಇಮಿಗ್ರೇಷನ್‌ ವಿಭಾಗಕ್ಕೆ ಲುಕೌಟ್‌ ನೋಟೀಸ್‌ ಸರ್ವ್‌ ಮಾಡಲಾಗಿದೆ. ಎಲ್ಲಾ ವಿಮಾನ ನಿಲ್ದಾಣಗಳ ಇಮಿಗ್ರೇಷನ್‍ಗೆ ಎಸ್‍ಐಟಿ ಅಧಿಕಾರಿಗಳು ಲುಕೌಟ್‌ ನೋಟಿಸ್ ನೀಡಿದ್ದಾರೆ ಎನ್ನಲಾಗಿದ್ದು, ಆ ಮೂಲಕ ಪ್ರಜ್ವಲ್‌ ರೇವಣ್ಣ ಕಾಣಿಸಿಕೊಂಡ ಕೂಡಲೇ ವಶಕ್ಕೆ ಪಡೆಯಲು ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಈ ನಡುವೆ ವಿಚಾರಣೆಗೆ ಹಾಜರಾಗಲು 7 ದಿನ ಅವಕಾಶ ನೀಡುವಂತೆ ಕೋರಿ ಪ್ರಜ್ವಲ್ ರೇವಣ್ಣ ವಿಶೇಷ ತನಿಖಾ ತಂಡಕ್ಕೆ ಮನವಿ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ಜಿ. ಅವರು ಎಸ್‍ಐಟಿ ಮುಖ್ಯಸ್ಥ ರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ. ಇದರಲ್ಲಿ ಪ್ರಜ್ವಲ್ ಅವರು ಮೇ 15ರಂದು ಭಾರತಕ್ಕೆ ವಾಪಸ್ಸು ಬರುವ ಬಗ್ಗೆ ಮಾಹಿತಿ ದೊರಕಿದೆ. ಆದರೆ ಲುಫ್ತಾನ್ಸಾ ಏರ್ಲೈನ್ಸ್‌ನಲ್ಲಿ ಜರ್ಮನಿಯ ಫ್ರಾಂಕ್‌ಫರ್ಟ್‌ನಿಂದ ಬೆಂಗಳೂರಿಗೆ ಪ್ರಜ್ವಲ್‌ ಬುಕ್‌ ಮಾಡಿದ ಟಿಕೆಟ್‌ನ ಪ್ರತಿ ಲಭ್ಯವಾಗಿದ್ದು, ಮೇ 15ರಂದು ಬುಕ್‌ ಮಾಡಿದ್ದಾರೆ.

ಏನಿದು ಲುಕ್ಔಟ್‌ ನೋಟಿಸ್?

ತಲೆಮರೆಸಿಕೊಂಡಿರುವ ಅಥವಾ ಕಾನೂನು ಜಾರಿ ಸಂಸ್ಥೆಗಳಿಗೆ ಬೇಕಾಗಿರುವ ವ್ಯಕ್ತಿಯು ದೇಶವನ್ನು ತೊರೆಯಲು ಸಾಧ್ಯವಾಗಂತೆ ಖಚಿತಪಡಿಸಿಕೊಳ್ಳಲು ಎಲ್ಒಸಿ ನೀಡಲಾಗುತ್ತದೆ. ಇದನ್ನು ಹೆಚ್ಚಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿನ ವಲಸೆ ತಪಾಸಣಾ ಕೇಂದ್ರಗಳಲ್ಲಿ ತಪಾಸಣೆಗೆ ಬಳಸಲಾಗುತ್ತದೆ. ಆದರೆ ಪ್ರಜ್ವಲ್‌ ಈಗಾಗಲೇ ಜರ್ಮನಿಯಲ್ಲಿದ್ದು, ವಿಮಾನ ನಿಲ್ದಾಣದಲ್ಲಿ ಮರಳುವ ಹೊತ್ತಿಗೆ ಬಂಧಿಸಲು ಚಿಂತಿಸಲಾಗಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ಈ ಮೂಲಕ ಜೆಡಿಎಸ್‌ ಹಾಗೂ ಬಿಜೆಪಿಗೆ ಮುಜುಗರ ಸೃಷ್ಟಿಸುವ ತಂತ್ರ ಇದೆಂದು ಹೇಳಲಾಗುತ್ತಿದೆ.

ಪ್ರಜ್ವಲ್ ರೇವಣ್ಣ ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ಏಪ್ರಿಲ್ 27-28ರಂದು ರಾತ್ರೋರಾತ್ರಿ ಬೆಂಗಳೂರಿನಿಂದ ಜರ್ಮನಿಗೆ ತೆರಳಿದ್ದಾರೆ. ಆಪಾದಿತ ಲೈಂಗಿಕ ಹಗರಣದ ತನಿಖೆಗೆ ಎಸ್‌ಐಟಿಯನ್ನು ಸ್ಥಾಪಿಸುವ ಕೆಲವೇ ಗಂಟೆಗಳ ಮೊದಲು ಅವರು ಪರಾರಿಯಾಗಿದ್ದಾರೆ. ಮೇ 1ರಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸಲು ಮಧ್ಯಪ್ರವೇಶಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಕೇಂದ್ರ ಸರ್ಕಾರದ ಕಚೇರಿಗಳನ್ನು ಬಳಸಿಕೊಂಡು ಪರಾರಿಯಾದ ಸಂಸದರನ್ನು ಭಾರತಕ್ಕೆ ಕರೆತರಲು ಖಚಿತಪಡಿಸಿಕೊಳ್ಳುವಂತೆ ಕೋರಿದ್ದರು.

ತನಿಖೆಗೆ ಅಗತ್ಯವಾದಾಗ ಪ್ರಜ್ವಲ್‌ ಭಾರತಕ್ಕೆ ಮರಳಲಿದ್ದಾನೆ ಎಂದು ಎಚ್‌ ಡಿ ರೇವಣ್ಣ ಹೇಳಿದ್ದಾರೆ. A1 ಆಗಿರುವ ರೇವಣ್ಣ ಅವರೂ ಎಸ್‌ಐಟಿ ಮುಂದೆ ತನಿಖೆಗೆ ಒಳಗಾಗಬೇಕಿದೆ. ಅವರಿಗೂ ನೋಟೀಸ್‌ ಜಾರಿ ಮಾಡಲಾಗಿದೆ. ಇಂದು ಅಥವಾ ನಾಳೆ ಅವರು ತನಿಖೆಗೆ ಹಾಜರಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: Hassan Pen Drive Case: ಮೋದಿಯ ʼರಾಜಕೀಯ ಕುಟುಂಬʼದ ಅಪರಾಧಿಗಳಿಗೆ ರಕ್ಷಣೆ ಖಾತ್ರಿಯಾ? ರಾಹುಲ್‌ ಗಾಂಧಿ ಕಿಡಿ

Exit mobile version