ಬೆಂಗಳೂರು: ಹಾಸನ ಸಂಸದ (Hassan PM) ಪ್ರಜ್ವಲ್ ರೇವಣ್ಣ (Prajwal Revanna Case) ಹಾಗೂ ಮಾಜಿ ಸಚಿವ ಎಚ್.ಡಿ ರೇವಣ್ಣ (HD Revanna) ಅವರ ಲೈಂಗಿಕ ಹಗರಣದಲ್ಲಿ, ಇದುವರೆಗೂ ಹತಾಶವಾಗಿದ್ದ ಬಿಜೆಪಿ (BJP) ಹಾಗೂ ಜೆಡಿಎಸ್‌ಗೆ (JDS) ಈಗ ಆಡಿಯೋ ಅಸ್ತ್ರ ದೊರೆತಿದೆ. ವಕೀಲ ದೇವರಾಜೇಗೌಡ ಪತ್ರಿಕಾಗೋಷ್ಠಿಯ ಬಳಿಕ ತುಸು ಚೇತರಿಕೆ ಬಂದಿದೆ. ಇದರ ನಡುವೆ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ವಿರುದ್ಧ ಪೋಸ್ಟರ್‌ಗಳು ನಗರದ ಹಲವು ಭಾಗಗಳಲ್ಲಿ ಕಾಣಿಸಿಕೊಂಡಿವೆ.
ಪೆನ್ ಡ್ರೈವ್ ವೀಡಿಯೋ (Pen Drive Case) ಲೀಕ್ ಹಿಂದೆ ಡಿಸಿಎಂ ಡಿಕೆಶಿ ಕೈವಾಡವಿದೆ ಎಂದು ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ ಆರೋಪ ಬೆನ್ನಲ್ಲೇ ಪೋಸ್ಟರ್‌ಗಳು ರಾರಾಜಿಸುತ್ತಿದ್ದು, ಅನಾಮಿಕರು ಅಂಟಿಸಿರುವ ಪೋಸ್ಟರ್‌ಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ. “ಹೆಣ್ಣು ಮಕ್ಕಳ ವೀಡಿಯೋ ಬಳಸಿಕೊಂಡು ರಾಜಕೀಯ ಮಾಡುವ ವ್ಯಕ್ತಿ” ಎಂದು ಇವುಗಳಲ್ಲಿ ಆರೋಪಿಸಲಾಗಿದೆ. ಜೊತೆಗೆ ಹಲವು ಅವಹೇಳನಕಾರಿ ಒಕ್ಕಣೆಗಳೂ ಈ ಪೋಸ್ಟರ್‌ಗಳಲ್ಲಿ ಕಂಡುಬಂದಿವೆ.
ಕೆಪಿಸಿಸಿ ಕಚೇರಿ, ಡಿಕೆ ಶಿವಕುಮಾರ್ ಪಾಲುದಾರಿಕೆ ಹೊಂದಿರುವ ಲುಲು ಮಾಲ್ ಸೇರಿದಂತೆ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಪೋಸ್ಟರ್ ಕಂಡುಬಂದಿವೆ. ರಾತ್ರೋರಾತ್ರಿ ಪೋಸ್ಟರ್‌ಗಳು ಪ್ರತ್ಯಕ್ಷವಾಗಿದ್ದು, ಪೊಲೀಸರು ಇದರ ಹಿಂದಿರುವವರ ಹುಡುಕಾಟದಲ್ಲಿ ತೊಡಗಿದ್ದಾರೆ.
ಡಿಕೆಶಿ ಆಡಿಯೋ ಕಾಂಗ್ರೆಸ್‌ಗೆ ತಲೆನೋವು
ಕಳೆದ ಹದಿನೈದು ದಿನಗಳಿಂದ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಇಟ್ಟುಕೊಂಡು ಚೆನ್ನಾಗಿಯೇ ಆಟವಾಡಿದ್ದ ಕಾಂಗ್ರೆಸ್, ಮತದಾನದ ಮುನ್ನಾದಿನವಾದ ಭಾನುವಾರ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಚುನಾವಣೆಯ ಹಿಂದಿನ ದಿನವೇ ಬಿಜೆಪಿ ಮಾಸ್ಟರ್ ಸ್ಟ್ರೋಕ್ ನೀಡಿದೆ. ಡಿಕೆ ಶಿವಕುಮಾರ್ ಆಡಿಯೋ ಅನ್ನು ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ ಬಿಡುಗಡೆ ಮಾಡಿದ್ದು, ಪ್ರಕರಣದ ಹಿಂದಿನ ಸತ್ಯಾಸತ್ಯತೆ ಬಗ್ಗೆ ಸಾರ್ವಜನಿಕರು ಇನ್ನೊಂದು ಕೋನದಿಂದ ಯೋಚಿಸುವಂತಾಗಿದೆ.
ದೇವರಾಜೇಗೌಡ ಜತೆ ಡಿಕೆ ಶಿವಕುಮಾರ್ ನಡೆಸಿರುವ ಮಾತುಕತೆಯ ಆಡಿಯೋದಲ್ಲಿ ಡಿಕೆಶಿ ಧ್ವನಿ ಸ್ಪಷ್ಟವಾಗಿದೆ ಎನ್ನಲಾಗಿದೆ. ಪೆನ್ ಡ್ರೈವ್ ಮಾಡಿಸಿದ್ದೇ ಡಿಕೆಶಿ ಎಂದು ಆರೋಪಿಸಲಾಗಿದೆ. ರಾಜಕೀಯ ಲಾಭಕ್ಕಾಗಿ ವ್ಯವಸ್ಥೆಯನ್ನು ಬಳಸಿಕೊಂಡಿದ್ದು, ಕಾಂಗ್ರೆಸ್ ಸರ್ಕಾರ ಎಸ್ಐಟಿ ಅಧಿಕಾರಿಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದೆ. ಸಿಬಿಐ ಇಲ್ಲವೇ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ.
ಈ ಬಗ್ಗೆ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆಯುವ ಬಗ್ಗೆ ಹಾಗೂ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ವಿಸ್ತಾರ ನ್ಯೂಸ್‌ಗೆ ಬಿಜೆಪಿ ವಕ್ತಾರ ವಿವೇಕರೆಡ್ಡಿ ಹೇಳಿದ್ದಾರೆ. ಎಸ್ಐಟಿ ತನಿಖೆ ಮೇಲೆ ಅನುಮಾನ ಬರುತ್ತಿದೆ. ಹೀಗಾಗಿ ಸಿಬಿಐ ಇಲ್ಲವೇ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಈ ಬಗ್ಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ. ಸಿಎಂಗೆ ಮನವಿ ಬಳಿಕ ಹೈಕೋರ್ಟ್ ಮೊರೆ ಹೋಗಲಾಗುತ್ತದೆ. ಈ ನಡುವೆ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆಯುತ್ತೇವೆ ಎಂದು ವಿವೇಕರೆಡ್ಡಿ ಹೇಳಿದ್ದಾರೆ.
ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊ ಇದ್ದರೆ ಡಿಲೀಟ್ ಮಾಡಿ
ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿದೆಯೇ? ಇದ್ದರೆ ಅದು ದೊಡ್ಡ ಅಪರಾಧವಾಗಿದೆ. ಈಗಲೇ ಅದನ್ನು ಡಿಲೀಟ್ ಮಾಡಿಬಿಡಿ. ಒಂದು ವೇಳೆ ನೀವು ಡಿಲೀಟ್ ಮಾಡದೇ ಇದ್ದರೆ ಕಾನೂನು ಕ್ರಮಗಳನ್ನು ಎದುರಿಸಬೇಕಾದೀತು ಎಂದು ಎಸ್ಐಟಿಯ ಮುಖ್ಯಸ್ಥ ಬಿ.ಕೆ. ಸಿಂಗ್ ಅಧಿಕೃತ ಪ್ರಕಟಣೆ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಈಗ ದೇಶಾದ್ಯಂತ ವೈರಲ್ ಆಗಿದೆ. ಈಗಾಗಲೇ ಈ ಪ್ರಕರಣ ಸಂಬಂಧ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್‌ಐಟಿಯನ್ನು ರಚನೆ ಮಾಡಿದೆ. ಇನ್ನು ವಿಡಿಯೊದಲ್ಲಿ ಹಾಸನ ಸೇರಿದಂತೆ ಹಲವು ಕಡೆಯ ಮಹಿಳೆಯರು ಇದ್ದಾರೆನ್ನಲಾಗಿದ್ದು, ಅವರ ಮುಖವನ್ನು ಬ್ಲರ್ ಮಾಡಲಾಗಿಲ್ಲ. ಹೀಗಾಗಿ ಈ ಕೇಸ್ ಮತ್ತಷ್ಟು ಜಟಿಲವಾಗಿದೆ.
ಈ ಸಂಬಂಧ ಎಸ್ಐಟಿಯ ಮುಖ್ಯಸ್ಥ ಬಿ.ಕೆ. ಸಿಂಗ್ ಪ್ರಕಟಣೆ ನೀಡಿದ್ದು, ಅಶ್ಲೀಲ ವಿಡಿಯೊವನ್ನು ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಇಟ್ಟುಕೊಳ್ಳುವುದು ಸಹ ಅಪರಾಧ. ಯಾವುದೇ ವ್ಯಕ್ತಿ ಸಂದೇಶಗಳನ್ನು ರೂಪಿಸುವ, ಇಟ್ಟುಕೊಳ್ಳುವ ಹಾಗೂ ಪ್ರಸಾರ ಮಾಡುವ ಕೆಲಸವನ್ನು ಮಾಡಿದರೆ, ಅಂಥ ವ್ಯಕ್ತಿಗಳನ್ನು ಸಂದೇಶ ರಚನೆಕಾರರು ಎಂದು ಪರಿಗಣಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಡಿಲೀಟ್ ಮಾಡಿ ಕಾನೂನು ಕ್ರಮದಿಂದ ಪಾರಾಗಿ
ಅಶ್ಲೀಲ ವಿಡಿಯೊ ಹಾಗೂ ಧ್ವನಿ ಮುದ್ರಣವನ್ನು ಇಟ್ಟುಕೊಂಡಿದ್ದರೆ ಅದು ಅಪರಾಧವಾಗುವುದರಿಂದ ಜನರು ತಮ್ಮ ಮೊಬೈಲ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಇಟ್ಟುಕೊಳ್ಳಬಾರದು. ಒಂದು ವೇಳೆ ಇಟ್ಟುಕೊಂಡಿದ್ದರೆ ಕೂಡಲೇ ಡಿಲೀಟ್ ಮಾಡಿಬಿಡಿ. ಹೀಗೆ ಡಿಲೀಟ್ ಮಾಡುವುದರಿಂದ ಕಾನೂನು ಕ್ರಮಗಳಿಂದ ಪಾರಾಗುವ ಸಾಧ್ಯತೆ ಇರುತ್ತದೆ ಎಂದು ಬಿ.ಕೆ. ಸಿಂಗ್ ಪ್ರಕಟಣೆಯಲ್ಲಿ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Prajwal Revanna Case: ಪ್ರಜ್ವಲ್ ಕೇಸ್‌ನ ಸಂತ್ರಸ್ತೆಯರಿಗಾಗಿ ಆರಂಭಿಸಿದ ಹೆಲ್ಪ್‌ಲೈನ್‌ಗೆ ಬರ್ತಿವೆ ಹಲವು ಕರೆಗಳು