ಹೊಸದಿಲ್ಲಿ: ಸ್ವಾತಂತ್ರ್ಯ ದಿನಾಚರಣೆ (Independence Day 2024) ಪ್ರಯುಕ್ತ ರಾಜ್ಯದ ಹಲವು ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿಗಳ ಪದಕ (President’s Medal) ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರ (India Govt) ಈ ಘೋಷಣೆ ಹೊರಡಿಸಿದ್ದು, ನಾಳೆ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಇವರಿಗೆ ಗೌರವ ಸಮರ್ಪಣೆ ಮಾಡಲಾಗುತ್ತದೆ.
ರಾಜ್ಯದ 20 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ರಾಷ್ಟ್ರಪತಿಗಳ ಪದಕ ಒಲಿದಿದೆ. ಇಬ್ಬರು ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಅತ್ಯುತ್ತಮ ಸೇವಾ ಪದಕ ಘೋಷಣೆಯಾಗಿದೆ. ಐಎಸ್‌ಡಿ, ಎಡಿಜಿಪಿ ಎಂ. ಚಂದ್ರಶೇಖರ್ ಹಾಗೂ ಅಗ್ನಿಶಾಮಕ ದಳದ ಸೀನಿಯರ್ ಕಮಾಂಡರ್ ಬಸವಲಿಂಗಪ್ಪ ಅವರಿಗೆ ಅತ್ಯುತ್ತಮ ಸೇವಾ ಪದಕ ಘೋಷಿಸಲಾಗಿದೆ.
ಇನ್ನುಳಿದ 18 ಮಂದಿ ಅಧಿಕಾರಿ ಸಿಬ್ಬಂದಿಗೆ ಅರ್ಹ ಸೇವಾ ಪದಕಗಳನ್ನು ಕೇಂದ್ರ ಗೃಹ ಇಲಾಖೆ ಘೋಷಣೆ ಮಾಡಿದೆ. ಅವರ ಹೆಸರುಗಳು ಇಲ್ಲಿವೆ:
ಶ್ರೀನಾಥ್ ಎಂ ಜೋಷಿ, ಎಸ್‌ಪಿ ಲೋಕಾಯುಕ್ತ
ಸಿ.ಕೆ ಬಾಬಾ, ಎಸ್‌ಪಿ ಬೆಂಗಳೂರು ಗ್ರಾಮಾಂತರ ಜಿಲ್ಲೆ
ರಾಮಗೊಂಡ ಬೈರಪ್ಪ, ಎಎಸ್‌ಪಿ ಕರ್ನಾಟಕ
ಗಿರಿ ಕೃಷ್ಣಮೂರ್ತಿ, ಡಿಎಸ್‌ಪಿ
ಪಿ ಮುರಳೀಧರ್, ಡಿಎಸ್‌ಪಿ
ಬಸವೇಶ್ವರ, ಅಸಿಸ್ಟೆಂಟ್ ಡೈರೆಕ್ಟರ್
ಬಸವರಾಜು ಕಮ್ತಾನೆ, ಡಿಎಸ್‌ಪಿ
ರವೀಶ್ ನಾಯಕ್, ಎಸಿಪಿ
ಶರತ್ ದಾಸನಗೌಡ, ಎಸ್‌ಪಿ
ಪ್ರಭಾಕರ್ ಗೋವಿಂದಪ್ಪ, ಎಸಿಪಿ
ಗೋಪಾಲ್ ರೆಡ್ಡಿ, ಡಿಸಿಪಿ
ಬಿ. ವಿಜಯ್ ಕುಮಾರ್, ಹೆಡ್ ಕಾನ್ಸ್‌ಟೇಬಲ್
ಮಂಜುನಾಥ ಶೇಕಪ್ಪ ಕಲ್ಲೆದೇವರ್, ಸಬ್ ಇನ್ಸ್‌ಪೆಕ್ಟರ್
ಹರೀಶ್ ಎಚ್.ಆರ್, ಅಸಿಸ್ಟೆಂಟ್ ಕಮಾಂಡೆಂಟ್
ಎಸ್ ಮಂಜುನಾಥ, ಇನ್ಸ್‌ಪೆಕ್ಟರ್
ಗೌರಮ್ಮ ಜಿ., ಎಎಸ್ಐ
ವಿಜಯ್ ಪ್ರಕಾಶ್ ಹೊಸ ಸಾಂಗ್ ಔಟ್; ಭಾರತೀಯ ಸೇನೆಗೆ ಹಾಡನ್ನು ಅರ್ಪಿಸಿದ ಹೊಸಬರ ತಂಡ!
ಬೆಂಗಳೂರು: ಆಗಸ್ಟ್ 15 ರಂದು ದೇಶಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆ (Independence day 2024) ನಡೆಯಲಿದೆ. ಈ ದಿನ ಇಡೀ ದೇಶ ತ್ರಿವರ್ಣ ಧ್ವಜಗಳಿಂದ ರಾರಾಜಿಸುತ್ತಿರುತ್ತದೆ. ಸ್ವಾತಂತ್ರ್ಯದಿನದ ಸಂಭ್ರಮ ಎಲ್ಲಡೆ ಮನೆ ಮಾಡಿದೆ. ಇನ್ನು ಆಗಸ್ಟ್ 15ರಂದು ಕೆಂಪು ಕೋಟೆ ಜನರಿಂದ ತುಂಬಿ ತುಳುಕುತ್ತಿರುತ್ತದೆ. ಇದೀಗ ಹೊಸ ಚಿತ್ರ ತಯಾರಕರ ತಂಡವು ‘ನನ್ನ ದೇಶವು’ (Nanna Deshavu) ಎಂಬ ಕನ್ನಡ ದೇಶಭಕ್ತಿಯ ಗೀತೆಯನ್ನು ಬಿಡುಗಡೆ ಮಾಡಿದೆ. ಈ ಹಾಡಿನಲ್ಲಿ ಭಾರತದ ವೈವಿಧ್ಯಮಯ ಸಂಸ್ಕೃತಿ, ಭವ್ಯವಾದ ಭೂದೃಶ್ಯಗಳು, ಇತಿಹಾಸ ಮತ್ತು ಭಾರತದ ಹಿರಿಮೆಯನ್ನು ಎತ್ತಿ ತೋರಿಸುವಂತಿದೆ. ‘ನನ್ನ ದೇಶವು’ ಹಾಡು ಕನ್ನಡ ಚಿತ್ರರಂಗದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿ ಬಂದಿದೆ.
Jungrus Studios ಯೂಟ್ಯೂಬ್ ಚಾನೆಲ್‌ನಲ್ಲಿ ಹಾಡನ್ನು ಬಿಡುಗಡೆ ಮಾಡಲಾಗಿದೆ. ವಿಜಯ್ ಪ್ರಕಾಶ್ ಅವರ ಸುಂದರ ಗಾಯನದೊಂದಿಗೆ ಭರತ್ ಕುಮಾರ್ ಜನಾರ್ದನ ಅವರು ಬರೆದು ನಿರ್ದೇಶಿಸಿರುವ ಈ ಹಾಡನ್ನು ಸತ್ಯ ರಾಧಾಕಿರ್ಷ್ಣ ಸಂಗೀತ ಸಂಯೋಜಿಸಿದ್ದಾರೆ. ಲೇಹ್ ಲಡಕ್, ಕಾಶ್ಮೀರ, ಹಂಪಿ, ಸಾಗರ, ಶಿವಮೊಗ್ಗ, ಬೆಂಗಳೂರು, ಶಿವನಸಮುದ್ರ ಮುಂತಾದ ಭಾರತದ ವಿವಿಧ ಸ್ಥಳಗಳಲ್ಲಿ ಹಾಡನ್ನು ಚಿತ್ರೀಕರಿಸಲಾಗಿದೆ. ದೇಶಕ್ಕಾಗಿ ಅವಿರತವಾಗಿ ದುಡಿಯುವ ಮತ್ತು ತ್ಯಾಗ ಮಾಡುವ ಭಾರತೀಯ ಸೇನೆಗೆ ಈ ಹಾಡನ್ನು ಅರ್ಪಿಸಲಾಗಿದೆ.
ಇದನ್ನೂ ಓದಿ: Independence Day 2024: ಬ್ರಿಟಿಷ್ ಕಾಲದ ಚಿನ್ನದ ನಾಣ್ಯದಿಂದ ಹಿಡಿದು ಸ್ವತಂತ್ರ ಭಾರತದ ರೂಪಾಯಿವರೆಗಿನ ಇತಿಹಾಸ ಕುತೂಹಲಕರ!