President's Medal: ರಾಜ್ಯದ 20 ಪೊಲೀಸ್‌ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪದಕ ಘೋಷಣೆ - Vistara News

ಪ್ರಮುಖ ಸುದ್ದಿ

President’s Medal: ರಾಜ್ಯದ 20 ಪೊಲೀಸ್‌ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪದಕ ಘೋಷಣೆ

President’s Medal: ರಾಜ್ಯದ 20 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ರಾಷ್ಟ್ರಪತಿಗಳ ಪದಕ ಒಲಿದಿದೆ. ಇಬ್ಬರು ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಅತ್ಯುತ್ತಮ ಸೇವಾ ಪದಕ ಘೋಷಣೆಯಾಗಿದೆ. ಐಎಸ್‌ಡಿ, ಎಡಿಜಿಪಿ ಎಂ. ಚಂದ್ರಶೇಖರ್ ಹಾಗೂ ಅಗ್ನಿಶಾಮಕ ದಳದ ಸೀನಿಯರ್ ಕಮಾಂಡರ್ ಬಸವಲಿಂಗಪ್ಪ ಅವರಿಗೆ ಅತ್ಯುತ್ತಮ ಸೇವಾ ಪದಕ ಘೋಷಿಸಲಾಗಿದೆ.

VISTARANEWS.COM


on

president's medal 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ಸ್ವಾತಂತ್ರ್ಯ ದಿನಾಚರಣೆ (Independence Day 2024) ಪ್ರಯುಕ್ತ ರಾಜ್ಯದ ಹಲವು ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿಗಳ ಪದಕ (President’s Medal) ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರ (India Govt) ಈ ಘೋಷಣೆ ಹೊರಡಿಸಿದ್ದು, ನಾಳೆ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಇವರಿಗೆ ಗೌರವ ಸಮರ್ಪಣೆ ಮಾಡಲಾಗುತ್ತದೆ.

ರಾಜ್ಯದ 20 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ರಾಷ್ಟ್ರಪತಿಗಳ ಪದಕ ಒಲಿದಿದೆ. ಇಬ್ಬರು ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಅತ್ಯುತ್ತಮ ಸೇವಾ ಪದಕ ಘೋಷಣೆಯಾಗಿದೆ. ಐಎಸ್‌ಡಿ, ಎಡಿಜಿಪಿ ಎಂ. ಚಂದ್ರಶೇಖರ್ ಹಾಗೂ ಅಗ್ನಿಶಾಮಕ ದಳದ ಸೀನಿಯರ್ ಕಮಾಂಡರ್ ಬಸವಲಿಂಗಪ್ಪ ಅವರಿಗೆ ಅತ್ಯುತ್ತಮ ಸೇವಾ ಪದಕ ಘೋಷಿಸಲಾಗಿದೆ.

ಇನ್ನುಳಿದ 18 ಮಂದಿ ಅಧಿಕಾರಿ ಸಿಬ್ಬಂದಿಗೆ ಅರ್ಹ ಸೇವಾ ಪದಕಗಳನ್ನು ಕೇಂದ್ರ ಗೃಹ ಇಲಾಖೆ ಘೋಷಣೆ ಮಾಡಿದೆ. ಅವರ ಹೆಸರುಗಳು ಇಲ್ಲಿವೆ:

ಶ್ರೀನಾಥ್ ಎಂ ಜೋಷಿ, ಎಸ್‌ಪಿ ಲೋಕಾಯುಕ್ತ
ಸಿ.ಕೆ ಬಾಬಾ, ಎಸ್‌ಪಿ ಬೆಂಗಳೂರು ಗ್ರಾಮಾಂತರ ಜಿಲ್ಲೆ
ರಾಮಗೊಂಡ ಬೈರಪ್ಪ, ಎಎಸ್‌ಪಿ ಕರ್ನಾಟಕ
ಗಿರಿ ಕೃಷ್ಣಮೂರ್ತಿ, ಡಿಎಸ್‌ಪಿ
ಪಿ ಮುರಳೀಧರ್, ಡಿಎಸ್‌ಪಿ
ಬಸವೇಶ್ವರ, ಅಸಿಸ್ಟೆಂಟ್ ಡೈರೆಕ್ಟರ್
ಬಸವರಾಜು ಕಮ್ತಾನೆ, ಡಿಎಸ್‌ಪಿ
ರವೀಶ್ ನಾಯಕ್, ಎಸಿಪಿ
ಶರತ್ ದಾಸನಗೌಡ, ಎಸ್‌ಪಿ
ಪ್ರಭಾಕರ್ ಗೋವಿಂದಪ್ಪ, ಎಸಿಪಿ
ಗೋಪಾಲ್ ರೆಡ್ಡಿ, ಡಿಸಿಪಿ
ಬಿ. ವಿಜಯ್ ಕುಮಾರ್, ಹೆಡ್ ಕಾನ್ಸ್‌ಟೇಬಲ್
ಮಂಜುನಾಥ ಶೇಕಪ್ಪ ಕಲ್ಲೆದೇವರ್, ಸಬ್ ಇನ್ಸ್‌ಪೆಕ್ಟರ್
ಹರೀಶ್ ಎಚ್.ಆರ್, ಅಸಿಸ್ಟೆಂಟ್ ಕಮಾಂಡೆಂಟ್
ಎಸ್ ಮಂಜುನಾಥ, ಇನ್ಸ್‌ಪೆಕ್ಟರ್
ಗೌರಮ್ಮ ಜಿ., ಎಎಸ್ಐ

ವಿಜಯ್ ಪ್ರಕಾಶ್‌ ಹೊಸ ಸಾಂಗ್‌ ಔಟ್‌; ಭಾರತೀಯ ಸೇನೆಗೆ ಹಾಡನ್ನು ಅರ್ಪಿಸಿದ ಹೊಸಬರ ತಂಡ!

ಬೆಂಗಳೂರು: ಆಗಸ್ಟ್ 15 ರಂದು ದೇಶಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆ (Independence day 2024) ನಡೆಯಲಿದೆ. ಈ ದಿನ ಇಡೀ ದೇಶ ತ್ರಿವರ್ಣ ಧ್ವಜಗಳಿಂದ ರಾರಾಜಿಸುತ್ತಿರುತ್ತದೆ.  ಸ್ವಾತಂತ್ರ್ಯದಿನದ ಸಂಭ್ರಮ ಎಲ್ಲಡೆ ಮನೆ ಮಾಡಿದೆ.  ಇನ್ನು ಆಗಸ್ಟ್​ 15ರಂದು ಕೆಂಪು ಕೋಟೆ ಜನರಿಂದ ತುಂಬಿ ತುಳುಕುತ್ತಿರುತ್ತದೆ.  ಇದೀಗ ಹೊಸ ಚಿತ್ರ ತಯಾರಕರ ತಂಡವು ‘ನನ್ನ ದೇಶವು’ (Nanna Deshavu) ಎಂಬ ಕನ್ನಡ ದೇಶಭಕ್ತಿಯ ಗೀತೆಯನ್ನು ಬಿಡುಗಡೆ ಮಾಡಿದೆ. ಈ ಹಾಡಿನಲ್ಲಿ ಭಾರತದ ವೈವಿಧ್ಯಮಯ ಸಂಸ್ಕೃತಿ, ಭವ್ಯವಾದ ಭೂದೃಶ್ಯಗಳು, ಇತಿಹಾಸ ಮತ್ತು ಭಾರತದ ಹಿರಿಮೆಯನ್ನು ಎತ್ತಿ ತೋರಿಸುವಂತಿದೆ. ‘ನನ್ನ ದೇಶವು’ ಹಾಡು ಕನ್ನಡ ಚಿತ್ರರಂಗದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿ ಬಂದಿದೆ.

Jungrus Studios ಯೂಟ್ಯೂಬ್ ಚಾನೆಲ್‌ನಲ್ಲಿ ಹಾಡನ್ನು ಬಿಡುಗಡೆ ಮಾಡಲಾಗಿದೆ. ವಿಜಯ್ ಪ್ರಕಾಶ್ ಅವರ ಸುಂದರ ಗಾಯನದೊಂದಿಗೆ ಭರತ್ ಕುಮಾರ್ ಜನಾರ್ದನ ಅವರು ಬರೆದು ನಿರ್ದೇಶಿಸಿರುವ ಈ ಹಾಡನ್ನು ಸತ್ಯ ರಾಧಾಕಿರ್ಷ್ಣ ಸಂಗೀತ ಸಂಯೋಜಿಸಿದ್ದಾರೆ. ಲೇಹ್ ಲಡಕ್, ಕಾಶ್ಮೀರ, ಹಂಪಿ, ಸಾಗರ, ಶಿವಮೊಗ್ಗ, ಬೆಂಗಳೂರು, ಶಿವನಸಮುದ್ರ ಮುಂತಾದ ಭಾರತದ ವಿವಿಧ ಸ್ಥಳಗಳಲ್ಲಿ ಹಾಡನ್ನು ಚಿತ್ರೀಕರಿಸಲಾಗಿದೆ. ದೇಶಕ್ಕಾಗಿ ಅವಿರತವಾಗಿ ದುಡಿಯುವ ಮತ್ತು ತ್ಯಾಗ ಮಾಡುವ ಭಾರತೀಯ ಸೇನೆಗೆ ಈ ಹಾಡನ್ನು ಅರ್ಪಿಸಲಾಗಿದೆ.

ಇದನ್ನೂ ಓದಿ: Independence Day 2024: ಬ್ರಿಟಿಷ್‌ ಕಾಲದ ಚಿನ್ನದ ನಾಣ್ಯದಿಂದ ಹಿಡಿದು ಸ್ವತಂತ್ರ ಭಾರತದ ರೂಪಾಯಿವರೆಗಿನ ಇತಿಹಾಸ ಕುತೂಹಲಕರ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Bank Irregularities: ಪದೇಪದೆ ಅಕ್ರಮ; 2 ಬ್ಯಾಂಕ್‌ಗಳ ಎಲ್ಲ ಸರ್ಕಾರಿ ಅಕೌಂಟ್ ಕ್ಲೋಸ್ ಮಾಡಲು ಸರ್ಕಾರ ಸೂಚನೆ

Bank Irregularities: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಎಲ್ಲ ಶಾಖೆಗಳಲ್ಲಿ ಅಕೌಂಟ್ ಕ್ಲೋಸ್‌ ಮಾಡಲು ರಾಜ್ಯ ಸರ್ಕಾರ ಸೂಚನೆ ನೀಡಿದೆ.

VISTARANEWS.COM


on

Bank Irregularities
Koo

ಬೆಂಗಳೂರು: ಬ್ಯಾಂಕ್‌ಗಳಲ್ಲಿ ಪದೇಪದೆ ಹಣ ಅಕ್ರಮ ವರ್ಗಾವಣೆ (Bank Irregularities) ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ ಮಾಡಿದೆ. ಎರಡು ರಾಷ್ಟ್ರೀಕೃತ ಬ್ಯಾಂಕ್‌ಗಳ ಎಲ್ಲ ಸರ್ಕಾರಿ ಅಕೌಂಟ್ ಕ್ಲೋಸ್ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಈ ಬಗ್ಗೆ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ಪಿ.ಸಿ. ಜಾಫರ್‌ ಸುತ್ತೋಲೆ ಹೊರಡಿಸಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಎಲ್ಲ ಶಾಖೆಗಳಲ್ಲಿ ಅಕೌಂಟ್ ಕ್ಲೋಸ್‌ಗೆ ಸೂಚನೆ ನೀಡಿದ್ದಾರೆ. ಈ ಎರಡು ಬ್ಯಾಂಕ್‌ಗಳ ಎಲ್ಲ ಬ್ರ್ಯಾಂಚ್‌ಗಳಿಂದ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ನಿಗಮಗಳು, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು, ಯುನಿವರ್ಸಿಟಿ ಮತ್ತಿತರ ಸಂಸ್ಥೆಗಳು ಠೇವಣಿ, ಹೂಡಿಕೆಗಳನ್ನು ತಕ್ಷಣದಿಂದ ಹಿಂಪಡೆಯಲು ಸೂಚಿಸಿದ್ದಾರೆ. ಇನ್ನು ಮುಂದೆ ಈ ಎರಡು ಬ್ಯಾಂಕ್‌ಗಳಲ್ಲಿ ಯಾವುದೇ ರೀತಿಯ ಠೇವಣಿ ಹೂಡಿಕೆ ಇಡಬಾರದು. ಎಲ್ಲ ಇಲಾಖೆಗಳು ಅಕೌಂಟ್ ಕ್ಲೋಷರ್ ವರದಿಯನ್ನು ಸೆ.20ರ ಒಳಗೆ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

ಸರ್ಕಾರದ ಈ ನಿರ್ಧಾರಕ್ಕೆ ಕಾರಣವೇನು?

ಸರ್ಕಾರದ ನಿರ್ಧಾರಕ್ಕೆ ಪ್ರಮುಖವಾಗಿ ಎರಡು ಘಟನೆಗಳು ಕಾರಣವಾಗಿವೆ. ಕೆಐಎಡಿಬಿ 2011ರಲ್ಲಿ ರಾಜಾಜಿನಗರದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ 25 ರೂ.ಗಳನ್ನು ಒಂದು ವರ್ಷದ ನಿಶ್ಚಿತ ಠೇವಣಿ ಹೂಡಿಕೆ ಇಟ್ಟಿತ್ತು. ಇದಕ್ಕೆ ಪ್ರತಿಯಾಗಿ ಇದೇ ಬ್ಯಾಂಕಿನ ಮತ್ತೊಂದು ಶಾಖೆಯಿಂದ 12 ಕೋಟಿಗಳ ಒಂದು ರಸೀದಿ ಹಾಗೂ 13 ಕೋಟಿಗಳ ಮತ್ತೊಂದು ರಸೀದಿ ನೀಡಲಾಗಿತ್ತು. ಅವಧಿ ಮುಕ್ತಾಯವಾದ ನಂತರ 13 ಕೋಟಿಗಳ ಠೇವಣಿ ನಗದೀಕರಿಸಲಾಗಿದೆ. ಆದರೆ ಎರಡನೇ ರಸೀದಿಗೆ 10 ವರ್ಷ ಕಳೆದರೂ ಹಣ ನಗದೀಕರಣವಾಗಿಲ್ಲ. ಅಕ್ರಮವಾಗಿ ಬ್ಯಾಂಕ್ ಅಧಿಕಾರಿಗಳು 14 ಕೋಟಿ ವರ್ಗಾವಣೆ ಮಾಡಿ ವಂಚನೆ ಎಸಗಿರುವ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

ಇದುವರೆಗೂ ಅದೆಷ್ಟೇ ಮೀಟಿಂಗ್, ಪತ್ರ ವ್ಯವಹಾರ ನಡೆದರೂ ಹಣ ವಾಪಸ್ ಆಗಿಲ್ಲ. ಇನ್ನೊಂದು ಪ್ರಕರಣ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಡೆದಿದೆ ಎಂದು ವರದಿಯಾಗಿದೆ. 2013ರಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯು ಅವೆನ್ಯೂ ರೋಡ್‌ನ ಎಸ್‌ಬಿಐ ಬ್ರ್ಯಾಂಚ್‌ನಲ್ಲಿ 10 ಕೋಟಿ ನಿಶ್ಚಿತ ಠೇವಣಿ ಇಟ್ಟಿತ್ತು. ಅವಧಿ ಮುಕ್ತಾಯವಾಗುವ ಮೊದಲೇ ಬ್ಯಾಂಕ್ ಅಧಿಕಾರಿಗಳಿಂದ ಅಕ್ರಮ ಎಸಗಲಾಗಿದೆ. ಖಾಸಗಿ ಕಂಪನಿಯ ಸಾಲಕ್ಕೆ ಸರ್ಕಾರದ ಹಣವನ್ನು ನಕಲಿ ದಾಖಲೆ ಸೃಷ್ಟಿಸಿ ಹೊಂದಾಣಿಕೆ ಮಾಡಲಾಗಿದೆ. ಇದುವರೆಗೂ 10 ಕೋಟಿ ಹಣ ಸರ್ಕಾರಕ್ಕೆ ವಾಪಸ್ ಆಗಿಲ್ಲ.

ಇದನ್ನೂ ಓದಿ | Ram Path: ಬೀದಿ ದೀಪಗಳನ್ನೂ ಬಿಡದ ಕಳ್ಳರು; ಅಯೋಧ್ಯೆಯ ರಾಮಪಥ, ಭಕ್ತಿಪಥದಲ್ಲಿದ್ದ 50 ಲಕ್ಷ ರೂ. ಮೌಲ್ಯದ ಲೈಟ್ಸ್‌ ನಾಪತ್ತೆ

ಈ ಎರಡು ಪ್ರಕರಣಗಳ ಬಗ್ಗೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯಲ್ಲಿ ಚರ್ಚೆಯಾಗಿ ನಡಾವಳಿ ಸಲ್ಲಿಕೆಯಾಗಿದೆ. ಇದೇ ಮಾದರಿಯಲ್ಲಿ ಹತ್ತಾರು ಬ್ಯಾಂಕ್ ಅಕೌಂಟ್‌ಗಳಲ್ಲಿ ಅಕ್ರಮ ನಡೆದಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಸ್ಟೇಟ್ ಬ್ಯಾಂಕ್ ಇಂಡಿಯಾ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಕೌಂಟ್ ಗಳ ಕ್ಲೋಸ್ ಮಾಡಲು ಸರ್ಕಾರದ ನಿರ್ಧಾರ ಮಾಡಿದೆ.

Continue Reading

Latest

Viral News: ರೈಲು ಬೋಗಿಯಲ್ಲಿ ನಮಾಜ್: ಮುಸ್ಲಿಂ ಪ್ರಯಾಣಿಕರನ್ನು ತರಾಟೆಗೆ ತೆಗೆದುಕೊಂಡ ಟಿಟಿಇ; ವಿಡಿಯೊ ಇಲ್ಲಿದೆ

Viral Video ರೈಲಿನಲ್ಲಿ ನಮಾಜ್ ವಿಚಾರಕ್ಕೆ ಪ್ರಯಾಣಿಕರಿಗೆ ನಡೆದಾಡಲು ಅಡ್ಡಿಯುಂಟಾದಾಗ ಕಾರಣ ಮುಸ್ಲಿಂ ಪ್ರಯಾಣಿಕರನ್ನು ಟಿಟಿಇ ತರಾಟೆ ತೆಗೆದುಕೊಂಡ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು ಇದು ಸಖತ್ ವೈರಲ್ ಆಗಿದೆ. ರೈಲಿನಲ್ಲಿದ್ದ ಮುಸ್ಲಿಂ ಸಮುದಾಯದವರುರು ರೈಲು ಬೋಗಿಯ ಮಧ್ಯದಲ್ಲಿ ನಡೆದಾಡುವ ಸ್ಥಳದಲ್ಲಿ ನಮಾಜ್ ಮಾಡಲು ತಯಾರಿ ನಡೆಸುತ್ತಿದ್ದಾಗ ಈ ಸಮಯದಲ್ಲಿ ಅಲ್ಲಿಗೆ ಬಂದ ಟಿಟಿಇ ಕೋಪಗೊಂಡು ಅವರಿಗೆ ತಮ್ಮ ಕುಳಿತುಕೊಳ್ಳುವ ಸೀಟಿನಲ್ಲಿ ನಮಾಜ್ ಮಾಡುವಂತೆ ಮತ್ತು ದಾರಿಯಿಂದ ಎದ್ದೇಳುವಂತೆ ತಿಳಿಸಿದ್ದಾರೆ.

VISTARANEWS.COM


on

Viral News
Koo


ಮುಂಬೈ: ಮುಸ್ಲಿಂ ಸಮುದಾಯದವರು ತಮ್ಮ ನಮಾಜ್‌ನ ಸಮಯವಾದಾಗ ನಮಾಜ್ ಮಾಡಲು ಶುರು ಮಾಡುತ್ತಾರೆ. ಅವರಿಗೆ ಆ ಸಮಯದಲ್ಲಿ ನಮಾಜ್ ಮಾಡುವುದೊಂದೆ ಮುಖ್ಯವಾಗಿರುತ್ತದೆ. ಹಾಗಾಗಿ ರೈಲಿನಲ್ಲಿ ನಮಾಜ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಪ್ರಯಾಣಿಕರಿಗೆ ನಡೆದಾಡಲು ಅಡ್ಡಿಯುಂಟಾದ ಕಾರಣ ಮುಸ್ಲಿಂ ಪ್ರಯಾಣಿಕರನ್ನು ಟಿಟಿಇ ತರಾಟೆ ತೆಗೆದುಕೊಂಡ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು ಇದು ಸಖತ್ ವೈರಲ್ (Viral News) ಆಗಿದೆ.

ಹಂಚಿಕೊಳ್ಳಲಾದ ಈ ವಿಡಿಯೊದಲ್ಲಿ, ರೈಲ್ವೆ ಟಿಟಿಇ ಬೋಗಿಯಲ್ಲಿ ನಡೆದಾಡುವ ಸ್ಥಳದಲ್ಲಿ ನಮಾಜ್ ಮಾಡಲು ಮುಂದಾದ ಮುಸ್ಲಿಂ ಪ್ರಯಾಣಿಕರನ್ನು ಬೈಯುತ್ತಿರುವುದನ್ನು ಗಮನಿಸಬಹುದು. ರೈಲಿನಲ್ಲಿದ್ದ ಮುಸ್ಲಿಂ ಸಮುದಾಯದವರು ಬೋಗಿಯ ಮಧ್ಯದಲ್ಲಿ ನಡೆದಾಡುವ ಸ್ಥಳದಲ್ಲಿ ನಮಾಜ್ ಮಾಡಲು ತಯಾರಿ ನಡೆಸುತ್ತಿದ್ದಾರೆ. ಅದಕ್ಕಾಗಿ ಕುಳಿತುಕೊಳ್ಳಲು ಅವರು ದಾರಿಯಲ್ಲಿ ಪ್ಲಾಸ್ಟಿಕ್ ಅನ್ನು ಹಾಸುತ್ತಿದ್ದರು. ಈ ಸಮಯದಲ್ಲಿ ಅಲ್ಲಿಗೆ ಬಂದ ಟಿಟಿಇ ಕೋಪಗೊಂಡು ಅವರಿಗೆ ತಮ್ಮ ಕುಳಿತುಕೊಳ್ಳುವ ಸೀಟಿನಲ್ಲಿ ನಮಾಜ್ ಮಾಡುವಂತೆ ಮತ್ತು ದಾರಿಯಿಂದ ಎದ್ದೇಳುವಂತೆ ತಿಳಿಸಿದ್ದಾರೆ. ಇದು ವಿಡಿಯೊದಲ್ಲಿ ಕಂಡು ಬಂದಿದೆ.

“ಈ ರೈಲಿನಲ್ಲಿ ತಮಾಷೆಯಾಗಿ ವರ್ತಿಸಬೇಡಿ. ಈ ಮಾರ್ಗ ಇರುವುದು ನಡೆದಾಡಲು. ನಿಮಗೆ ನಮಾಜ್ ಮಾಡಲು ಅಲ್ಲ. ಇದರಲ್ಲಿ ನಮಾಜ್ ಮಾಡುವ ನಿಮ್ಮ ಮನಸ್ಥಿತಿಗೆ ಏನಾಗಿದೆ? ನಿಮ್ಮ ಈ ಆಲೋಚನೆಯನ್ನು ಬಿಟ್ಟುಬಿಡಿ. ನನ್ನ ರೈಲಿನಲ್ಲಿ ಇದು ಸಂಭವಿಸಲು ನಾನು ಅನುಮತಿಸುವುದಿಲ್ಲʼʼ ಎಂದು ಹೇಳಿದ್ದಾರೆ. ಅಲ್ಲದೇ ತಮ್ಮ ಕಾರ್ಯಗಳಿಂದಾಗಿ ಇತರ ಪ್ರಯಾಣಿಕರಿಗೆ ಯಾವುದೇ ಅನಾನುಕೂಲತೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಮುಸ್ಲಿಂ ಪ್ರಯಾಣಿಕರಿಗೆ ತಿಳಿಸಿದ್ದಾರೆ. ಪ್ರಯಾಣಿಸುವ ರೈಲುಗಳಲ್ಲಿ ನಮಾಜ್ ಮಾಡಲು ಅನುಮತಿ ಇಲ್ಲ. ಒಂದು ವೇಳೆ ಪ್ರಯಾಣಿಕರು ಅವರು ಹೇಳುವುದನ್ನು ಅನುಸರಿಸದಿದ್ದರೆ, ರೈಲ್ವೆ ಪೊಲೀಸರಿಗೆ ಕರೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಹಸ್ತಮೈಥುನ ಮಾಡಿಕೊಳ್ಳಲು 6 ವರ್ಷದ ಬಾಲಕಿ ಮೇಲೆ ದೌರ್ಜನ್ಯ; ಆಕೆ ತಪ್ಪಿಸಿಕೊಂಡಾಗ ಮೇಕೆ ಮೇಲೆ ಅತ್ಯಾಚಾರ!

ಹಾಗಾಗಿ ಮುಸ್ಲಿಂ ಪ್ರಯಾಣಿಕರು ತಮ್ಮ ಸೀಟಿನ ಬಳಿ ಹೋಗಿರುವುದು ವಿಡಿಯೊದ ಕೊನೆಯಲ್ಲಿ ಕಂಡು ಬಂದಿದೆ. ಕೆಲವರು ಟಿಟಿಇ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಎಲ್ಲರಿಗೂ ಕಾನೂನು ಒಂದೇ ಎಂದು ಇನ್ನು ಹಲವರು ತಿಳಿಸಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರೂ, ರೆಕಾರ್ಡ್ ಮಾಡಿದ ದಿನಾಂಕ ಮತ್ತು ರೈಲಿನ ನಿಖರವಾದ ವಿವರಗಳು ಸ್ಪಷ್ಟವಾಗಿಲ್ಲ. ಹಾಗಾಗಿ ಹಲವರು ಈ ವಿಡಿಯೊದ ಸತ್ಯಾತೆಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

Continue Reading

Latest

Viral Video: ರೀಲ್ಸ್ ಅವಾಂತರ; 6ನೇ ಮಹಡಿಯಿಂದ ಬಿದ್ದ ಬಾಲಕಿ; ಅಪ್ಪನನ್ನು ಕರೆ ಎಂದು ಅಮ್ಮನ ಬಳಿ ಅಂಗಲಾಚಿದ್ದು ಯಾಕೆ?

Viral Video ಗಾಜಿಯಾಬಾದ್‌ನಲ್ಲಿ ಇನ್ಸ್ಟಾಗ್ರಾಮ್ ರೀಲ್ ಮಾಡುವಾಗ ಬಾಲಕಿಯೊಬ್ಬಳು ಕಟ್ಟಡದ ಆರನೇ ಮಹಡಿಯಿಂದ ಬಿದ್ದಿದ್ದಾಳೆ. ಅವಳು ತನ್ನ ಮನೆಯ ಬಾಲ್ಕನಿಯಲ್ಲಿ ನಿಂತು ರೀಲ್ಸ್ ಮಾಡುವಾಗ ಅವಳ ಮೊಬೈಲ್ ಅವಳ ಕೈಯಿಂದ ಜಾರಿದೆ. ಫೋನ್ ಹಿಡಿಯಲು ಪ್ರಯತ್ನಿಸುವಾಗ ಅವಳು ಬಾಲ್ಕನಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ಬಾಲಕಿ ನೋವಿನಿಂದ ಅಳುತ್ತಿರುವ ಮತ್ತು ಅವಳ ತಾಯಿ ಅವಳನ್ನು ಬೈಯುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

VISTARANEWS.COM


on

Viral Video
Koo


ಲಖನೌ: ರೀಲ್‍ಗಳನ್ನು ಮಾಡುವ ಕ್ರೇಜ್ ಅನೇಕ ಯುವ ಜನರನ್ನು ಆವರಿಸಿದೆ. ಇವರು ಲೈಕ್‍ಗಳನ್ನು ಪಡೆಯಲು ಮತ್ತು ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಯಾವುದೇ ಮಟ್ಟಕ್ಕೆ ಹೋಗಲು ಸಿದ್ಧರಿದ್ದಾರೆ. ಅದಕ್ಕಾಗಿ ತಮ್ಮ ಜೀವವನ್ನು ಪಣಕ್ಕಿಡುತ್ತಿದ್ದಾರೆ. ಇದೀಗ ಈ ರೀಲ್ಸ್ ಅವಾಂತರಕ್ಕೆ ಸಂಬಂಧಿಸಿದಂತಹ ಮತ್ತೊಂದು ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ. ಇನ್‌ಸ್ಟಾಗ್ರಾಮ್‌ ರೀಲ್ಸ್ ಮಾಡುವಾಗ ಬಾಲಕಿಯೊಬ್ಬಳು ಕಟ್ಟಡದ ಆರನೇ ಮಹಡಿಯಿಂದ ಬಿದ್ದಿದ್ದಾಳೆ. ಅವಳು ತನ್ನ ಮನೆಯ ಬಾಲ್ಕನಿಯಲ್ಲಿ ನಿಂತು ರೀಲ್ಸ್ ಮಾಡುವಾಗ ಮೊಬೈಲ್ ಕೈಯಿಂದ ಜಾರಿದೆ. ಫೋನ್ ಹಿಡಿಯಲು ಪ್ರಯತ್ನಿಸುವಾಗ ಅವಳು ಬಾಲ್ಕನಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ಬಾಲಕಿ ನೋವಿನಿಂದ ಅಳುತ್ತಿರುವ ಮತ್ತು ಅವಳ ತಾಯಿ ಅವಳನ್ನು ಬೈಯುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ಆಘಾತಕ್ಕೊಳಗಾದ ಬಾಲಕಿಯನ್ನು ಗಾಜಿಯಾಬಾದ್‍ನ ಇಂದಿರಾಪುರಂ ಪ್ರದೇಶದಲ್ಲಿರುವ ಕ್ಲೌಡ್ -9 ಸೊಸೈಟಿಯಲ್ಲಿ ವಾಸಿಸುತ್ತಿದ್ದ ಮೋನಿಷಾ (16) ಎಂದು ಗುರುತಿಸಲಾಗಿದೆ. ಆರನೇ ಮಹಡಿಯಿಂದ ಬಿದ್ದ ನಂತರ ಆಕೆಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಬಾಲಕಿ ನೆಲದ ಮೇಲೆ ಬಿದ್ದಿದ್ದಾಳೆ. ಜನರು ಅವಳ ಸುತ್ತ ಸುತ್ತುವರಿದು, ಅವಳನ್ನು ಆಸ್ಪತ್ರೆಗೆ ಕರೆದೊಯ್ಯುಲು ಗಾಬರಿಯಿಂದ ಓಡಾಡುತ್ತಿದ್ದಾರೆ. ಆ ವೇಳೆ ಅವರು ಅವಳನ್ನು ಎತ್ತುತ್ತಿದ್ದಂತೆ, ಅವಳು ನೋವಿನಿಂದ ಕೂಗಿದಳು, “ಅಮ್ಮಾ, ಪಾಪಾ ಕೋ ಬುಲಾ ದೋ”(ಅಮ್ಮಾ, ದಯವಿಟ್ಟು ಅಪ್ಪನನ್ನು ಕರೆಯಿರಿ) ಎಂದು ತನ್ನ ತಂದೆಯನ್ನು ಕರೆಯುವಂತೆ ತನ್ನ ತಾಯಿಯನ್ನು ಪದೇ ಪದೆ ಕೇಳಿಕೊಳ್ಳುತ್ತಿದ್ದಾಳೆ.

ವಿಡಿಯೊದಲ್ಲಿ, ಹುಡುಗಿಯ ತಾಯಿ ಮಗಳ ರೀಲ್ಸ್ ಮಾಡುವ ಹುಚ್ಚಿಗೆ ಹಿಗ್ಗಾಮುಗ್ಗಾ ಬೈದಿದ್ದಾಳೆ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಈಗ ಆಕೆ ಅಪಾಯದಿಂದ ಪಾರಾಗಿದ್ದಾಳೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ಒಂದು ಹಾವು, ಮೂರು ಮುಂಗುಸಿ; ಏರ್‌ಪೋರ್ಟ್‌ ರನ್‌ವೇಯಲ್ಲೇ ಫೈಟ್‌! ಸೋತಿದ್ಯಾರು? ವಿಡಿಯೊ ನೋಡಿ

ಬಾಲಕಿಯ ಸ್ಥಿತಿಯನ್ನು ನೋಡಿ ಅಲ್ಲಿದ್ದವರು ಆಘಾತಕ್ಕೊಳಗಾಗಿದ್ದಾರೆ. ಕೆಲವರು ಅವಳ ಗಂಭೀರ ಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಿ, ಮೇಲಿಂದ ಬಿದ್ದಿದ್ದರಿಂದ ಅವಳ ಕಾಲು ಮುರಿದಂತೆ ಕಾಣುತ್ತದೆ ಎಂದಿದ್ದಾರೆ. ಈ ರೀತಿಯ ರೀಲ್ಸ್ ಅವಾಂತರದ ಹಲವಾರು ಘಟನೆಗಳು ಸಂಭವಿಸಿವೆ. ಜನರು ರೀಲ್ಸ್ ಮಾಡುವ ವೇಳೆ ಹಲವು ಬಾರಿ ಅಪಾಯಕ್ಕೆ ಸಿಲುಕಿದ್ದಾರೆ ಮತ್ತು ಕೆಲವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾಗಳಿಗಾಗಿ ರೀಲ್ಸ್ ವಿಡಿಯೊಗಳನ್ನು ಮಾಡುವಾಗ ಯುವಕರು ಜಾಗರೂಕರಾಗಿರಬೇಕು ಮತ್ತು ಕೇವಲ ಲೈಕ್‍ಗಳು ಮತ್ತು ಫಾಲೋವರ್ಸ್‍ಗಳಿಗಾಗಿ ತಮ್ಮ ಜೀವವನ್ನು ಅಪಾಯಕ್ಕೆ ತಳ್ಳಬಾರದು ಎಂದು ಅಧಿಕಾರಿಗಳು ಎಚ್ಚರಿಸಲುತ್ತಲೇ ಇದ್ದರೂ ಇಂತಹ ಪ್ರವೃತ್ತಿ ನಿಂತಿಲ್ಲ.

Continue Reading

ಕ್ರೀಡೆ

Dodda Ganesh: ಕೀನ್ಯಾ ಕ್ರಿಕೆಟ್​ ತಂಡಕ್ಕೆ ಕನ್ನಡಿಗ ದೊಡ್ಡ ಗಣೇಶ್ ನೂತನ ಕೋಚ್

Dodda Ganesh: 50 ವರ್ಷದ ದೊಡ್ಡ ಗಣೇಶ್ ನೇರ ನುಡಿಗಳಿಂದಲೇ ಹೆಸರುವಾಸಿ. 1997ರಲ್ಲಿ ಭಾರತ ಪರ 4 ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 104 ಪಂದ್ಯಗಳಿಂದ 365 ವಿಕೆಟ್​ ಪಡೆದಿದ್ದಾರೆ.

VISTARANEWS.COM


on

Dodda Ganesh
Koo

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಕನ್ನಡಿಗ ದೊಡ್ಡ ಗಣೇಶ್(Dodda Ganesh) ಅವರು ಕೀನ್ಯಾ ತಂಡದ(Dodda Ganesh Kenya Head Coach) ಮುಖ್ಯ ಕೋಚ್​ ಆಗಿ ನೇಕಮಗೊಂಡಿದ್ದಾರೆ. 90ರ ದಶಕದಲ್ಲಿ ಭಾರತ ಮತ್ತು ಕರ್ನಾಟಕ ರಣಜಿ ತಂಡದಲ್ಲಿ ಉತ್ತಮ ಪ್ರದರ್ಶನ ತೋರಿದ ಹೆಗ್ಗಳಿಕೆ ಇವರದ್ದು. ದೊಡ್ಡ ಗಣೇಶ್ ಅವರ ನೇತೃತ್ವದಲ್ಲಿ ಕೀನ್ಯಾ ತಂಡವು ಮುಂಬರುವ ಐಸಿಸಿ ಡಿವಿಷನ್ 2 ಚಾಲೆಂಜ್ ಲೀಗ್​​ನಲ್ಲಿ ಕಣಕ್ಕಿಳಿಯಲಿದೆ.

50 ವರ್ಷದ ದೊಡ್ಡ ಗಣೇಶ್ ನೇರ ನುಡಿಗಳಿಂದಲೇ ಹೆಸರುವಾಸಿ. 1997ರಲ್ಲಿ ಭಾರತ ಪರ 4 ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 104 ಪಂದ್ಯಗಳಿಂದ 365 ವಿಕೆಟ್​ ಪಡೆದಿದ್ದಾರೆ. ಭಾರತ ತಂಡದ ಪರ 6 ವಿಕೆಟ್​ ಕಿತ್ತಿದ್ದಾರೆ. ಲಿಸ್ಟ್​ ‘ಎ’ ಕ್ರಿಕೆಟ್​ನಲ್ಲಿ 89 ಪಂದ್ಯಗಳನ್ನಾಡಿ 128 ವಿಕೆಟ್​ ಪಡೆದಿದ್ದಾರೆ. ಬ್ಯಾಟಿಂಗ್​ನಲ್ಲಿಯೂ ಉತ್ತಮ ದಾಖಲೆ ಹೊಂದಿರುವ ಇವರು ಲಿಸ್ಟ್​ ‘ಎ’ ಮತ್ತು ಪ್ರಥಮ ದರ್ಜೆ ಕ್ರಿಕೆಟ್​ ಸೇರಿ ಒಟ್ಟು 2,548 ರನ್​ ಬಾರಿಸಿದ್ದಾರೆ. 6 ಬಾರಿ 10 ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ.

ಇದನ್ನೂ ಓದಿ Dodda Ganesh: ಬಿಜೆಪಿ ಸೇರಿದ ನೇರ ನುಡಿಯ ಕ್ರಿಕೆಟಿಗ ದೊಡ್ಡ ಗಣೇಶ್

4 ತಿಂಗಳ ಹಿಂದಷ್ಟೇ ದೊಡ್ಡ ಗಣೇಶ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(B. S. Yediyurappa) ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು. ದೊಡ್ಡ ಗಣೇಶ್ ಮೊದಲು ವಿಕೆಟ್ ಕೀಪರ್ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಆಗಿ ವೃತ್ತಿಜೀವನ ಪ್ರಾರಂಭಿಸಿದರು. ಭಾರತದ 1983ರ ವಿಶ್ವಕಪ್ ವಿಜೇತ ವಿಕೆಟ್-ಕೀಪರ್ ಸೈಯದ್ ಕಿರ್ಮಾನಿ ಅವರನ್ನು ಆರಾಧ್ಯ ಕ್ರಿಕೆಟಿಗನಾಗಿ ಕಂಡುಕೊಂಡಿದ್ದರು. ಗುಂಡಪ್ಪ ವಿಶ್ವನಾಥ್ ಅವರು ದೊಡ್ಡ ಗಣೇಶ್ ಬೌಲಿಂಗ್ ಪ್ರತಿಭೆಯನ್ನು ಗುರುತಿಸಿ ಅವರಿಗೆ ಹಲವು ಕ್ಲಬ್​ಗಳ ಪರ ಆಡುವ ಅವಕಾಶ ಕಲ್ಪಿಸಿದ್ದರು ಎನ್ನಲಾಗಿದೆ.

ಕೀನ್ಯಾ ತಂಡದ ಕೋಚ್​ ಆಗಿ ನೇಮಕಗೊಂಡ ವಿಚಾರವನ್ನು ದೊಡ್ಡ ಗಣೇಶ್ ತಮ್ಮ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಕೀನ್ಯಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ತನ್ನ ಎಲ್ಲ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ತಂಡದ ಏಳಿಗೆಗೆ ಶ್ರಮಿಸಲಿದ್ದೇನೆ” ಎಂದು ಹೇಳಿದ್ದಾರೆ.

Continue Reading
Advertisement
PR Sreejesh
ಕ್ರೀಡೆ3 mins ago

PR Sreejesh: ಶ್ರೀಜೇಶ್​ ಜೆರ್ಸಿ ಸಂಖ್ಯೆ 16ಕ್ಕೆ ವಿದಾಯ ಹೇಳಿದ ಹಾಕಿ ಇಂಡಿಯಾ

Terror Attacks
ದೇಶ8 mins ago

Terror Attacks: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್‌: ಕ್ಯಾಪ್ಟನ್ ಹುತಾತ್ಮ

Bank Irregularities
ಕರ್ನಾಟಕ16 mins ago

Bank Irregularities: ಪದೇಪದೆ ಅಕ್ರಮ; 2 ಬ್ಯಾಂಕ್‌ಗಳ ಎಲ್ಲ ಸರ್ಕಾರಿ ಅಕೌಂಟ್ ಕ್ಲೋಸ್ ಮಾಡಲು ಸರ್ಕಾರ ಸೂಚನೆ

Hardik Pandya
ಕ್ರೀಡೆ1 hour ago

Hardik Pandya: ಬ್ರಿಟಿಷ್​ ಸಿಂಗರ್​ ಜತೆ ಡೇಟಿಂಗ್​​ ಆರಂಭಿಸಿದರೇ ಹಾರ್ದಿಕ್​ ಪಾಂಡ್ಯ?; ಅನುಮಾನ ಮೂಡಿಸಿದ ಇನ್​ಸ್ಟಾಗ್ರಾಮ್​ ಹಸಿ ಬಿಸಿ ಪೋಸ್ಟ್​

Bigg Boss Telugu 8 Confirmed Contestants nagarjuna akkineni host
ಬಿಗ್ ಬಾಸ್2 hours ago

Bigg Boss Telugu 8: ಬಿಗ್​ಬಾಸ್ ತೆಲುಗು ಸೀಸನ್‌ 8ರ ಪ್ರೋಮೊ ಔಟ್‌; ಸಂಭಾವ್ಯರ ಪಟ್ಟಿಯಲ್ಲಿ ಇಬ್ಬರು ಕನ್ನಡತಿಯರು!

Arvind Kejriwal
ದೇಶ2 hours ago

Arvind Kejriwal: ಅರವಿಂದ್‌ ಕೇಜ್ರಿವಾಲ್‌ಗೆ ಮತ್ತೊಮ್ಮೆ ಹಿನ್ನಡೆ; ಮಧ್ಯಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್‌ ನಕಾರ

Viral News
Latest2 hours ago

Viral News: ರೈಲು ಬೋಗಿಯಲ್ಲಿ ನಮಾಜ್: ಮುಸ್ಲಿಂ ಪ್ರಯಾಣಿಕರನ್ನು ತರಾಟೆಗೆ ತೆಗೆದುಕೊಂಡ ಟಿಟಿಇ; ವಿಡಿಯೊ ಇಲ್ಲಿದೆ

Viral Video
Latest2 hours ago

Viral Video: ರೀಲ್ಸ್ ಅವಾಂತರ; 6ನೇ ಮಹಡಿಯಿಂದ ಬಿದ್ದ ಬಾಲಕಿ; ಅಪ್ಪನನ್ನು ಕರೆ ಎಂದು ಅಮ್ಮನ ಬಳಿ ಅಂಗಲಾಚಿದ್ದು ಯಾಕೆ?

ramanagara murder case
ಕ್ರೈಂ2 hours ago

Murder Case: ಪೂಜೆಗೆಂದು ಕರೆದೊಯ್ದು ಹೆಂಡತಿಯ ಕೊಂದ ಗಂಡ; ಕೊಲೆಯಾದಳೇಕೆ ಚಿಟ್ಟೆ ಟ್ಯಾಟೂ ಚೆಲುವೆ?

Dodda Ganesh
ಕ್ರೀಡೆ2 hours ago

Dodda Ganesh: ಕೀನ್ಯಾ ಕ್ರಿಕೆಟ್​ ತಂಡಕ್ಕೆ ಕನ್ನಡಿಗ ದೊಡ್ಡ ಗಣೇಶ್ ನೂತನ ಕೋಚ್

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ6 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ6 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ6 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌