ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ (Jammu Kashmir) ಪ್ರವಾಸಕ್ಕೆ (tour) ತೆರಳಿದ್ದ ಒಂದೇ ಕುಟುಂಬದ ಮೂವರು ಕಾರು ಅಪಘಾತವೊಂದರಲ್ಲಿ (Car Accident) ಮೃತಪಟ್ಟಿದ್ದಾರೆ. ಅಮರನಾಥ ಯಾತ್ರಾ (Amaranath yatra) ಹಾದಿ ಸಮೀಪದ ಝೋಜಿಲಾ ಪಾಸ್ ಬಳಿ ದುರಂತ ಘಟನೆ (Road Accident) ನಡೆದಿದೆ. ಕಾರು ಚಾಲಕ (Driver) ಹ್ಯಾಂಡ್‌ಬ್ರೇಕ್ (Hand Brake) ಹಾಕಲು ಮರೆತದ್ದೇ ದುರ್ಘಟನೆಗೆ ಕಾರಣವಾಗಿದೆ.
ಬೆಂಗಳೂರು ನಿವಾಸಿಗಳಾದ ತಂದ್ರಾ ದಾಸ್(67) ಮೊನಾಲಿಸಾ ದಾಸ್(41) ಹಾಗೂ ಮತ್ತೊಬ್ಬ ಪುರುಷ ಸಾವಿಗೀಡಾಗಿದ್ದಾರೆ. ಬಾಲಕಿ ಅದ್ರಿತಾ ಖಾನ್(9) ಎಂಬಾಕೆಗೆ ಗಾಯಗಳಾಗಿವೆ. ಇವರು ಬೆಳ್ಳಂದೂರಿನ ಗ್ರೀನ್ ಗ್ಲೆನ್ ಲೇಔಟ್ ನಿವಾಸಿಗಳಾಗಿದ್ದರು.
ಜಮ್ಮು ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗಿದ್ದ ಕುಟುಂಬ ಅಲ್ಲಿನ ಬಾಡಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿತ್ತು. ಹಾದಿಯಲ್ಲಿ ಎದುರಿದ್ದ ಕಾರೊಂದು ಕೆಟ್ಟು ನಿಂತಿದ್ದು, ಅದೇನೆಂದು ನೋಡಲು ಈ ಕಾರು ಚಾಲಕ ಇಳಿದಿದ್ದ. ಇಳಿಯುವಾಗ ಕಾರಿನ ಹ್ಯಾಂಡ್ ಬ್ರೇಕ್ ಹಾಕಿರಲಿಲ್ಲ. ಹೀಗಾಗಿ ಜಾರಿ ಹೋದ ಕಾರು ಪ್ರಪಾತಕ್ಕೆ ಉರುಳಿದೆ. ಮೃತದೇಹಗಳನ್ನು ಸಿಆರ್‌ಪಿಎಫ್ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಹೊರತೆಗೆದಿದ್ದಾರೆ.
ಕೊಡಗಿನ ಸುಂಟಿಕೊಪ್ಪ ಬಳಿ ಟಿಪ್ಪರ್-ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರ ದುರ್ಮರಣ
ಕೊಡಗು: ಬೈಕ್ ಹಾಗೂ ಟಿಪ್ಪರ್ ನಡುವೆ ಭೀಕರ ಅಪಘಾತ ನಡೆದು, ಇಬ್ಬರು ಸವಾರರು ದುರ್ಮರಣ ಹೊಂದಿರುವ ಘಟನೆ (Road Accident) ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಕೊಡಗರ ಹಳ್ಳಿಯಲ್ಲಿ ನಡೆದಿದೆ. ಮಂಜು (25) ಹಾಗೂ ರಕ್ಷಿತ್ (24) ಮೃತರು.
ಸುಂಟಿಕೊಪ್ಪದಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಬೈಕ್ ಹಾಗೂ ಕುಶಾಲನಗರದಿಂದ ಮಡಿಕೇರಿ ಕಡೆ ಬರುತ್ತಿದ್ದ ಟಿಪ್ಪರ್ ಡಿಕ್ಕಿಯಾಗಿವೆ, ಇದರಿಂದ ಗಂಭೀರವಾಗಿ ಗಾಯಗೊಂಡ ಇಬ್ಬರು ಸವಾರರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಓವರ್ ಟೇಕ್ ಮಾಡಲು ಹೋಗಿ ರಸ್ತೆ ಪಕ್ಕದ ತಗ್ಗಿಗೆ ಬಿದ್ದ ಬೈಕ್; ಇಬ್ಬರಿಗೆ ಗಾಯ
ಬಾಗಲಕೋಟೆ: ಓವರ್ ಟೇಕ್ ಮಾಡಲು ಹೋಗಿ ರಸ್ತೆ ಪಕ್ಕದ ತಗ್ಗಿಗೆ ಬೈಕ್ ಬಿದ್ದ ಹಿನ್ನೆಲೆಯಲ್ಲಿ ಪಿಯುಸಿ ಓದುವ ಇಬ್ಬರು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಬೈಕ್‌ನಿಂದ ಬಿದ್ದು ಕೈ ಮುರಿದು ಏಳೋಕಾಗದೇ ಸ್ಥಳದಲ್ಲೇ ಓರ್ವ ವಿದ್ಯಾರ್ಥಿ ನರಳಾಡುತ್ತಿದ್ದ. ಮತ್ತೋರ್ವನ ಮುಖ, ಹಣೆ, ತಲೆ, ಮೂಗಿಗೆ ಗಾಯಗಳಾಗಿ ರಕ್ತಸ್ರಾವವಾಗುತ್ತಿತ್ತು.
ಬಾದಾಮಿ ತಾಲೂಕಿನ ಹಾಲಿಗೇರಿ ಗ್ರಾಮದ ಬಳಿ ಘಟನೆ ನಡೆದಿದೆ. ಅಪಘಾತದಲ್ಲಿ ಬಸಯ್ಯ ಸೂಳಿಕೇರಿ (17), ಪ್ರಶಾಂತ್ (17) ಎಂಬ ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಕಾಲೇಜು ಮುಗಿಸಿ ಕೆರೂರು ಪಟ್ಟಣದಿಂದ ಮನೆಗೆ ಹೋಗುವ ವೇಳೆ ಅಪಘಾತ ನಡೆದಿದೆ.
ಇದನ್ನೂ ಓದಿ | Sexual Abuse: ಮಧ್ಯವಯಸ್ಕ ಮಹಿಳೆಯ ಮೇಲೆ ಮಗನ ಸ್ನೇಹಿತನಿಂದಲೇ ಅತ್ಯಾಚಾರ!