Road Accident: ಜಮ್ಮು ಕಾಶ್ಮೀರದಲ್ಲಿ ಕಾರು ಅಪಘಾತ, ಬೆಂಗಳೂರಿನ ಮೂವರ ಸಾವು - Vistara News

ಪ್ರಮುಖ ಸುದ್ದಿ

Road Accident: ಜಮ್ಮು ಕಾಶ್ಮೀರದಲ್ಲಿ ಕಾರು ಅಪಘಾತ, ಬೆಂಗಳೂರಿನ ಮೂವರ ಸಾವು

Road Accident: ಜಮ್ಮು ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗಿದ್ದ ಕುಟುಂಬ ಅಲ್ಲಿನ ಬಾಡಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿತ್ತು. ಹಾದಿಯಲ್ಲಿ ಎದುರಿದ್ದ ಕಾರೊಂದು ಕೆಟ್ಟು ನಿಂತಿದ್ದು, ಅದೇನೆಂದು ನೋಡಲು ಈ ಕಾರು ಚಾಲಕ ಇಳಿದಿದ್ದ. ಇಳಿಯುವಾಗ ಕಾರಿನ ಹ್ಯಾಂಡ್ ಬ್ರೇಕ್ ಹಾಕಿರಲಿಲ್ಲ.

VISTARANEWS.COM


on

road accident jammu kashmir
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ (Jammu Kashmir) ಪ್ರವಾಸಕ್ಕೆ (tour) ತೆರಳಿದ್ದ ಒಂದೇ ಕುಟುಂಬದ ಮೂವರು ಕಾರು ಅಪಘಾತವೊಂದರಲ್ಲಿ (Car Accident) ಮೃತಪಟ್ಟಿದ್ದಾರೆ. ಅಮರನಾಥ ಯಾತ್ರಾ (Amaranath yatra) ಹಾದಿ ಸಮೀಪದ ಝೋಜಿಲಾ ಪಾಸ್ ಬಳಿ ದುರಂತ ಘಟನೆ (Road Accident) ನಡೆದಿದೆ. ಕಾರು ಚಾಲಕ (Driver) ಹ್ಯಾಂಡ್‌ಬ್ರೇಕ್‌ (Hand Brake) ಹಾಕಲು ಮರೆತದ್ದೇ ದುರ್ಘಟನೆಗೆ ಕಾರಣವಾಗಿದೆ.

ಬೆಂಗಳೂರು ನಿವಾಸಿಗಳಾದ ತಂದ್ರಾ ದಾಸ್(67) ಮೊನಾಲಿಸಾ ದಾಸ್(41) ಹಾಗೂ ಮತ್ತೊಬ್ಬ ಪುರುಷ ಸಾವಿಗೀಡಾಗಿದ್ದಾರೆ. ಬಾಲಕಿ ಅದ್ರಿತಾ ಖಾನ್(9) ಎಂಬಾಕೆಗೆ ಗಾಯಗಳಾಗಿವೆ. ಇವರು ಬೆಳ್ಳಂದೂರಿನ ಗ್ರೀನ್ ಗ್ಲೆನ್ ಲೇಔಟ್ ನಿವಾಸಿಗಳಾಗಿದ್ದರು.

ಜಮ್ಮು ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗಿದ್ದ ಕುಟುಂಬ ಅಲ್ಲಿನ ಬಾಡಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿತ್ತು. ಹಾದಿಯಲ್ಲಿ ಎದುರಿದ್ದ ಕಾರೊಂದು ಕೆಟ್ಟು ನಿಂತಿದ್ದು, ಅದೇನೆಂದು ನೋಡಲು ಈ ಕಾರು ಚಾಲಕ ಇಳಿದಿದ್ದ. ಇಳಿಯುವಾಗ ಕಾರಿನ ಹ್ಯಾಂಡ್ ಬ್ರೇಕ್ ಹಾಕಿರಲಿಲ್ಲ. ಹೀಗಾಗಿ ಜಾರಿ ಹೋದ ಕಾರು ಪ್ರಪಾತಕ್ಕೆ ಉರುಳಿದೆ. ಮೃತದೇಹಗಳನ್ನು ಸಿಆರ್‌ಪಿಎಫ್ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಹೊರತೆಗೆದಿದ್ದಾರೆ.

ಕೊಡಗಿನ ಸುಂಟಿಕೊಪ್ಪ ಬಳಿ ಟಿಪ್ಪರ್-ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರ ದುರ್ಮರಣ

ಕೊಡಗು: ಬೈಕ್ ಹಾಗೂ‌ ಟಿಪ್ಪರ್ ನಡುವೆ ಭೀಕರ ಅಪಘಾತ ನಡೆದು, ಇಬ್ಬರು ಸವಾರರು ದುರ್ಮರಣ ಹೊಂದಿರುವ ಘಟನೆ (Road Accident) ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಕೊಡಗರ ಹಳ್ಳಿಯಲ್ಲಿ ನಡೆದಿದೆ. ಮಂಜು (25) ಹಾಗೂ ರಕ್ಷಿತ್ (24) ಮೃತರು.

ಸುಂಟಿಕೊಪ್ಪದಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಬೈಕ್ ಹಾಗೂ ಕುಶಾಲನಗರದಿಂದ ಮಡಿಕೇರಿ ಕಡೆ ಬರುತ್ತಿದ್ದ ಟಿಪ್ಪರ್ ಡಿಕ್ಕಿಯಾಗಿವೆ, ಇದರಿಂದ ಗಂಭೀರವಾಗಿ ಗಾಯಗೊಂಡ ಇಬ್ಬರು ಸವಾರರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಓವರ್ ಟೇಕ್ ಮಾಡಲು ಹೋಗಿ ರಸ್ತೆ ಪಕ್ಕದ ತಗ್ಗಿಗೆ ಬಿದ್ದ ಬೈಕ್; ಇಬ್ಬರಿಗೆ ಗಾಯ

ಬಾಗಲಕೋಟೆ: ಓವರ್ ಟೇಕ್ ಮಾಡಲು ಹೋಗಿ ರಸ್ತೆ ಪಕ್ಕದ ತಗ್ಗಿಗೆ ಬೈಕ್ ಬಿದ್ದ ಹಿನ್ನೆಲೆಯಲ್ಲಿ ಪಿಯುಸಿ ಓದುವ ಇಬ್ಬರು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಬೈಕ್‌ನಿಂದ ಬಿದ್ದು ಕೈ ಮುರಿದು ಏಳೋಕಾಗದೇ ಸ್ಥಳದಲ್ಲೇ ಓರ್ವ ವಿದ್ಯಾರ್ಥಿ ನರಳಾಡುತ್ತಿದ್ದ. ಮತ್ತೋರ್ವನ ಮುಖ, ಹಣೆ, ತಲೆ, ಮೂಗಿಗೆ ಗಾಯಗಳಾಗಿ ರಕ್ತಸ್ರಾವವಾಗುತ್ತಿತ್ತು.

ಬಾದಾಮಿ ತಾಲೂಕಿನ ಹಾಲಿಗೇರಿ ಗ್ರಾಮದ ಬಳಿ ಘಟನೆ ನಡೆದಿದೆ. ಅಪಘಾತದಲ್ಲಿ ಬಸಯ್ಯ ಸೂಳಿಕೇರಿ (17), ಪ್ರಶಾಂತ್ (17) ಎಂಬ ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಕಾಲೇಜು ಮುಗಿಸಿ ಕೆರೂರು ಪಟ್ಟಣದಿಂದ ಮನೆಗೆ ಹೋಗುವ ವೇಳೆ ಅಪಘಾತ ನಡೆದಿದೆ.

ಇದನ್ನೂ ಓದಿ | Sexual Abuse: ಮಧ್ಯವಯಸ್ಕ ಮಹಿಳೆಯ ಮೇಲೆ ಮಗನ ಸ್ನೇಹಿತನಿಂದಲೇ ಅತ್ಯಾಚಾರ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

ರಾಜಮಾರ್ಗ ಅಂಕಣ: ಈ ಚಿತ್ರಾಕ್ಷರಗಳಿಗೆ ಇಂದು 25 ವರ್ಷ ತುಂಬಿತು!

ರಾಜಮಾರ್ಗ ಅಂಕಣ: 11 ವರ್ಷಗಳ ಹಿಂದೆ ಇದೇ ದಿನ ಒಂದು ಕಂಪೆನಿಯು ಎಮೋಜಿಗಳನ್ನು ಒಳಗೊಂಡ ಒಂದು ಕ್ಯಾಲೆಂಡರ್ ಪಬ್ಲಿಷ್ ಮಾಡಿತ್ತು. ಅಂದಿನಿಂದ ಈ ದಿನವನ್ನು ವಿಶ್ವ ಎಮೋಜಿ ದಿನವಾಗಿ ( World Emoji Day) ಆಚರಣೆ ಮಾಡಲಾಗುತ್ತಿದೆ. ಇಂದು ಜಗತ್ತಿನ ಎಲ್ಲ ಭಾಷೆಗಳನ್ನೂ ಮೀರಿ ಬೆಳೆಯುತ್ತಿರುವ ಈ ಚಿತ್ರಾಕ್ಷರಗಳಿಗೆ ನಮ್ಮ ಒಂದು ಮೆಚ್ಚುಗೆಯ ಎಮೋಜಿ ಇರಲಿ.

VISTARANEWS.COM


on

world emoji day ರಾಜಮಾರ್ಗ ಅಂಕಣ
Koo

ಜುಲೈ 17 ವಿಶ್ವ ಇಮೋಜಿ ದಿನ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ʻಒಂದು ಚಿತ್ರವು ಸಾವಿರ ಶಬ್ದಗಳಿಗೆ ಸಮ’ ಎನ್ನುತ್ತದೆ ಚೈನೀಸ್ (Chinese) ಭಾಷೆ. ನಾವು, ನೀವೆಲ್ಲ ವಾಟ್ಸ್ಯಾಪ್ (WhatsApp), ಫೇಸ್ ಬುಕ್ (Facebook), ಟ್ವಿಟರ್ (Twitter) ಎಲ್ಲ ಕಡೆಗಳಲ್ಲಿ ಮೆಸೇಜ್ (Message) ರವಾನೆ ಮಾಡುವಾಗ, ಸ್ವೀಕಾರ ಮಾಡುವಾಗ ಈ ಚಂದ ಚಂದವಾದ ಎಮೋಜಿಗಳನ್ನು (Emojis) ಬಳಕೆ ಮಾಡಿಯೇ ಮಾಡಿರುತ್ತೇವೆ. ಉದ್ದುದ್ದ ಮೆಸೇಜ್ ಟೈಪಿಸಲು ಆಸಕ್ತಿ ಇಲ್ಲದೆ ಹೋದಾಗ, ಸಮಯದ ಕೊರತೆ ಇದ್ದಾಗ ಒಂದು ಎಮೋಜಿ ಹಾಕಿ ಭಾವನೆಗಳನ್ನು ವ್ಯಕ್ತಪಡಿಸಿದ್ದು ಇದೆ. ಈ ಎಮೋಜಿಗಳು ಉಂಟುಮಾಡುತ್ತಿರುವ ಮೂಡ್ ಇದೆಯಲ್ಲ ಅದು ವರ್ಣನಾತೀತ ಮತ್ತು ಭಾವನಾತೀತ.

ಈ ಎಮೋಜಿಗಳು ಇಂದು ಜಾಗತಿಕ ಭಾಷೆಯೇ ಆಗಿಬಿಟ್ಟಿವೆ!

ಈ ಎಮೋಜಿಗಳಿಗೂ ಒಂದು ಇತಿಹಾಸ ಇದೆ ಎಂದರೆ ನಮಗೆ ನಂಬುವುದು ಕಷ್ಟ ಆಗಬಹುದು. ಜಪಾನ್ ಭಾಷೆಯಲ್ಲಿ ಎ ಅಂದರೆ ಚಿತ್ರ. ಮೋಜಿ ಅಂದರೆ ಅಕ್ಷರ. ಒಟ್ಟಿನಲ್ಲಿ ಎಮೋಜಿ ಅಂದರೆ ಚಿತ್ರಾಕ್ಷರ ಎಂದರ್ಥ.

ಈ ಎಮೋಜಿಗಳು ಜನಿಸಿದ್ದು ಜಪಾನನಲ್ಲಿ. 1999ರಲ್ಲಿ ಜಪಾನ್ ದೇಶದ ಒಬ್ಬ ಸಾಮಾನ್ಯ ತಂತ್ರಜ್ಞ, ಆತನ ಹೆಸರು ಶಿಗೆತರ ಕುರಿತ, ಡೊಕೊಮೊ ಮೊಬೈಲ್ ಕಂಪೆನಿಗಾಗಿ ಈ ರೀತಿಯ 176 ಎಮೋಜಿಗಳನ್ನು ಡಿಸೈನ್ ಮಾಡಿ ಕೊಟ್ಟರು. ಅದರಲ್ಲಿ ನಗುವ, ಅಳುವ, ಸಿಟ್ಟು ತೋರುವ, ಕೊಂಕು ನುಡಿಯುವ, ಬೇಸರ ವ್ಯಕ್ತಪಡಿಸುವ, ಆನಂದ ಬಾಷ್ಪ ಸುರಿಸುವ, ಕೆಣಕುವ, ಸಿಡಿಯುವ….ಹೀಗೆ ನವರಸಗಳನ್ನು ಸ್ಫುರಿಸುವ ಎಮೋಜಿಗಳೂ ಇದ್ದವು. ಅವುಗಳು ಬಹುಬೇಗ ಜನಪ್ರಿಯ ಆದವು.

ಮುಂದೆ ಎಲ್ಲ ಮೊಬೈಲ್ ಕಂಪೆನಿಗಳು ಮುಗಿಬಿದ್ದು ಸಾವಿರಾರು ಎಮೋಜಿಗಳನ್ನು ತಮ್ಮ ಸಾಫ್ಟ್ ವೇರಗಳಲ್ಲಿ ಸಂಗ್ರಹ ಮಾಡಿ ಮಾರ್ಕೆಟ್ ಮಾಡಿದವು.

ಅದರಲ್ಲೂ ಆನಂದ ಭಾಷ್ಪ ಸುರಿಸುವ ಒಂದು ಎಮೋಜಿಯನ್ನು ನಾವು ಹೆಚ್ಚು ಬಳಕೆ ಮಾಡುತ್ತೇವೆ. ಅದನ್ನು 2015ರಲ್ಲಿ ಆಕ್ಸ್ಫರ್ಡ್ ವಿವಿಯು ‘ ವರ್ಷದ ಪದ’ ( ವರ್ಡ್ ಆಫ್ ದ ಇಯರ್) ಎಂದು ಪ್ರಶಸ್ತಿ ಕೊಟ್ಟು ಗೌರವಿಸಿತು. ಹಲವು ಮೊಬೈಲ್ ಕಂಪೆನಿಗಳು ಎಮೋಜಿಗಳನ್ನು ಜನಪ್ರಿಯ ಮಾಡಲು ಕೇವಲ ಅವುಗಳನ್ನು ಬಳಸಿ ಪ್ರೇಮಪತ್ರಗಳನ್ನು ಬರೆಯುವ ಸ್ಪರ್ಧೆಗಳನ್ನು ಏರ್ಪಡಿಸಿದವು! ಚಿತ್ರಕಲಾ ಸ್ಪರ್ಧೆಗಳೂ ಹಲವೆಡೆ ನಡೆದವು.

emoji1

ಆಪಲ್ ಮೊಬೈಲ್ ಕಂಪೆನಿ ಇನ್ನಷ್ಟು ಮುಂದೆ ಹೋಗಿ ಜೆನ್ ಮೋಜಿ ಎಂಬ ಹೆಸರಿನ ಅಪಡೆಟೆಡ್ ವರ್ಷನನ್ನು ಡೆವಲಪ್ ಮಾಡಿತು. ಈ ಚಿತ್ರಾಕ್ಷರದ ಸಂಕೇತಗಳು ಬಹುಬೇಗ ಜನಪ್ರಿಯ ಆದವು ಮತ್ತು ಜಗತ್ತಿನಾದ್ಯಂತ ತಲುಪಿದವು. ಒಂದರ್ಥದಲ್ಲಿ ಈ ಎಮೋಜಿಗಳು ಭಾಷೆಗಳ ಹಂಗನ್ನು ಮೀರಿ ಬೆಳೆದವು. ಇನ್ನೂ ಕೆಲವು ಮೊಬೈಲ್ ಕಂಪೆನಿಗಳು ತಮ್ಮ ಆಯ್ಕೆಯ ಎಮೋಜಿಗಳನ್ನು ಡಿಸೈನ್ ಮಾಡುವ ಸ್ವಾತಂತ್ರ್ಯವನ್ನು ಗ್ರಾಹಕರಿಗೆ ನೀಡಿ ಉದಾರತೆ ಮೆರೆದವು.

ಜುಲೈ 17 ಎಮೋಜಿ ದಿನ ಯಾಕೆ?

11 ವರ್ಷಗಳ ಹಿಂದೆ ಇದೇ ದಿನ ಒಂದು ಕಂಪೆನಿಯು ಎಮೋಜಿಗಳನ್ನು ಒಳಗೊಂಡ ಒಂದು ಕ್ಯಾಲೆಂಡರ್ ಪಬ್ಲಿಷ್ ಮಾಡಿತ್ತು. ಅಂದಿನಿಂದ ಈ ದಿನವನ್ನು ವಿಶ್ವ ಎಮೋಜಿ ದಿನವಾಗಿ ( World Emoji Day) ಆಚರಣೆ ಮಾಡಲಾಗುತ್ತಿದೆ. ಈಗ ಜನಪ್ರಿಯವಾಗುತ್ತಿರುವ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್)ನ ಭಾಗವಾಗಿ ಕೂಡ ಈ ಎಮೋಜಿಗಳು ಉಂಟುಮಾಡುತ್ತಿರುವ ಪ್ರಭಾವವನ್ನು ಮತ್ತು ಸಂತೋಷವನ್ನು ನಾನು ಮತ್ತೆ ಬರೆಯುವ ಅಗತ್ಯವೇ ಇಲ್ಲ.

ಇಂದು ಜಗತ್ತಿನ ಎಲ್ಲ ಭಾಷೆಗಳನ್ನೂ ಮೀರಿ ಬೆಳೆಯುತ್ತಿರುವ ಈ ಚಿತ್ರಾಕ್ಷರಗಳಿಗೆ ನಮ್ಮ ಒಂದು ಮೆಚ್ಚುಗೆಯ ಎಮೋಜಿ ಇರಲಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಅಪರ್ಣಾ ಅಕ್ಕ, ಹೋಗಿ ಬನ್ನಿ…

Continue Reading

ಭವಿಷ್ಯ

Dina Bhavishya : ಆತುರದಲ್ಲಿ ಆಡಿದ ಮಾತು ಅಪಾಯ ತಂದಿತು ಎಚ್ಚರ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷದ ಏಕಾದಶಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

dina Bhavishya
Koo

ಚಂದ್ರನು ಬುಧವಾರವು ಧನಸ್ಸು ರಾಶಿಯಲ್ಲೆ ನೆಲಸಲಿದ್ದಾನೆ. ಇದರಿಂದಾಗಿ ವೃಷಭ, ಮಿಥುನ, ಕನ್ಯಾ, ವೃಶ್ಚಿಕ, ಮಕರ, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ಭಾವನಾತ್ಮಕವಾಗಿ ನೀವಿಂದು ಸ್ಥಿರವಾಗಿರುವುದಿಲ್ಲ. ಆತುರದಲ್ಲಿ ಆಡಿದ ಮಾತು ಅಪಾಯ ತಂದಿತು ಎಚ್ಚರಿಕೆ ಇರಲಿದೆ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರತಿಫಲ ಸಿಗುವುದರ ಜತೆಗೆ ಪುರಸ್ಕಾರ ಸಿಗುವ ಸಾಧ್ಯತೆ ಇದೆ. ಮಿಥುನ ರಾಶಿಯವರು ಸಕಾರಾತ್ಮಕ ಆಲೋಚನೆಗಳು ಪುಷ್ಠಿ ನೀಡುವಂತೆ ಮಾಡುವುದು. ಆತುರದ ತೀರ್ಮಾನ, ಮಾತುಗಳು ಅಪಾಯ ತಂದಿತು ಎಚ್ಚರಿಕೆ ಇರಲಿದೆ. ಆರೋಗ್ಯ ಕೊಂಚ ಮಟ್ಟಿಗೆ ಹದಗೆಡುವ ಸಾಧ್ಯತೆ ಇದೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿಯಾಗಲಿದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (17-07-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ.
ತಿಥಿ: ಏಕಾದಶಿ 21:02 ವಾರ: ಬುಧವಾರ
ನಕ್ಷತ್ರ: ಅನುರಾಧ 27:11 ಯೋಗ: ಶುಭ 07:02
ಕರಣ: ವಣಿಜ 08:53 ಅಮೃತಕಾಲ: ಸಂಜೆ 04:23 ರಿಂದ 06:03
ದಿನದ ವಿಶೇಷ: ಮೊಹರಂ ಕಡೆ ದಿನ

ಸೂರ್ಯೋದಯ : 06:01   ಸೂರ್ಯಾಸ್ತ : 06:50

ರಾಹುಕಾಲ: ಮಧ್ಯಾಹ್ನ 12.00 ರಿಂದ 1.30
ಗುಳಿಕಕಾಲ: ಬೆಳಗ್ಗೆ 10.30 ರಿಂದ 12.00
ಯಮಗಂಡಕಾಲ: ಬೆಳಗ್ಗೆ 7.30 ರಿಂದ 9.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಭಾವನಾತ್ಮಕವಾಗಿ ನೀವಿಂದು ಸ್ಥಿರವಾಗಿರುವುದಿಲ್ಲ. ಆತುರದಲ್ಲಿ ಆಡಿದ ಮಾತು ಅಪಾಯ ತಂದಿತು ಎಚ್ಚರಿಕೆ ಇರಲಿದೆ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರತಿಫಲ ಸಿಗುವುದರ ಜತೆಗೆ ಪುರಸ್ಕಾರ ಸಿಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 1

Horoscope Today

ವೃಷಭ: ಕುಟುಂಬದ ಸದಸ್ಯರಿಗೆ ಸಂಬಂಧಿಗಳಿಂದ ಶುಭ ಸುದ್ದಿ ಬರುವುದು. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ. ಮನೆಯಲ್ಲಿ ಶುಭ ಕಾರ್ಯಗಳ ಕುರಿತು ಚರ್ಚೆ ಮಾಡುವಿರಿ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 9

Horoscope Today

ಮಿಥುನ: ಸಕಾರಾತ್ಮಕ ಆಲೋಚನೆಗಳು ಪುಷ್ಠಿ ನೀಡುವಂತೆ ಮಾಡುವುದು. ಆತುರದ ತೀರ್ಮಾನ, ಮಾತುಗಳು ಅಪಾಯ ತಂದಿತು ಎಚ್ಚರಿಕೆ ಇರಲಿದೆ. ಆರೋಗ್ಯ ಕೊಂಚ ಮಟ್ಟಿಗೆ ಹದಗೆಡುವ ಸಾಧ್ಯತೆ ಇದೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿಯಾಗಲಿದೆ. ಮನೆಯವರ ಧೈರ್ಯದ ಮಾತುಗಳು ಮನಸ್ಸಿಗೆ ಸಂತೋಷ ನೆಮ್ಮದಿ ತರುವುದು. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

Horoscope Today

ಕಟಕ: ಅತಿಯಾದ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಸೂಕ್ತ ವ್ಯಕ್ತಿಗಳ ಬೆಂಬಲದಿಂದ ಹೂಡಿಕೆ ವ್ಯವಹಾರದಲ್ಲಿ ತೊಡುಗುವ ಸಾಧ್ಯತೆ ಇದೆ. ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವಿರಿ. ಸಂಗಾತಿ ನಿಮ್ಮ ಮನಸ್ಸಿಗೆ ಮುದ ನೀಡುವಳು. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

Horoscope Today

ಸಿಂಹ: ನಿಮ್ಮ ವರ್ತನೆಯಲ್ಲಿ ಬದಲಾವಣೆಯಾಗುವುದು. ಹಿರಿಯರ ಆಶೀರ್ವಾದದ ಬಲದಿಂದ ಯಶಸ್ಸು ಸಿಗಲಿದೆ. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಭೇಟಿ ಮಾಡಿ ಸ್ವಾಂತನ ಹೇಳಬಹುದು. ದಿಢೀರ್ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 9

Horoscope Today

ಕನ್ಯಾ: ಒತ್ತಡದ ಕಾರ್ಯ ಆಯಾಸವನ್ನುಂಟು ಮಾಡುವುದು. ಕುಟುಂಬ ಸದಸ್ಯರ ಅವಶ್ಯಕತೆಗಾಗಿ ಅನಗತ್ಯ ಖರ್ಚು ಮಾಡುವಿರಿ. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಇದರ ಮಧ್ಯೆ ಕುಟುಂಬದ ಸದಸ್ಯರು ನಿಮ್ಮ ಮುಂದೆ ಸಮಸ್ಯೆ ಹಂಚಿಕೊಳ್ಳುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಕೈಗೊಂಡ ಧಾರ್ಮಿಕ ಕಾರ್ಯಗಳು ಮನಸ್ಸಿಗೆ ಸಮಾಧಾನ ತರುವುದು. ಅಗತ್ಯಕ್ಕೆ ತಕ್ಕಂತೆ ಖರ್ಚು ಇರಲಿದೆ. ಕುಟುಂಬ ಸದಸ್ಯರಿಂದ ರಹಸ್ಯ ಸುದ್ದಿಯೊಂದು ಅಚ್ಚರಿ ತರುವುದು. ಕೋಪದಲ್ಲಿ ಮಾತಿಗೆ ಇಳಿಯುವುದರಿಂದ ಕಠಿಣ ಪರಿಸ್ಥಿತಿ ನಿರ್ಮಾಣ ಮಾಡುವುದು. ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ವೃಶ್ಚಿಕ : ಕಠಿಣ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗುವಿರಿ. ಭಾವನಾತ್ಮಕ ನಿರ್ಧಾರ ಕೈಗೊಳ್ಳುವ ಭರದಲ್ಲಿ ಮನಸ್ಸಿನ ಸ್ಥಿಮಿತ ಕಳೆದುಕೊಳ್ಳುವುದು ಬೇಡ. ಅಜಾಗೃತ ಕಾರ್ಯ ನಿಮಗೆ ಆರ್ಥಿಕ ನಷ್ಟ ಉಂಟು ಮಾಡಬಹುದು. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಧನಸ್ಸು: ಉದ್ಯೋಗದ ಸ್ಥಳದಲ್ಲಿ ಹೊಸ ಭರವಸೆಗಳು ಮೂಡಲಿವೆ. ಕುಟುಂಬ ಸದಸ್ಯರ ವರ್ತನೆಯಿಂದ ಕೋಪಗೊಳ್ಳುವ ಸಾಧ್ಯತೆ ಇದೆ. ಸಂಬಂಧಿಕರಿಂದ ವ್ಯಾಜ್ಯ ಉಂಟಾಗುವ ಸಾಧ್ಯತೆ ಇದೆ. ಆತುರದ ಮಾತುಗಳು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಮಕರ: ಜೀವನದಲ್ಲಿ ಹೊಸ ಪಾಠ ಕಲಿಯುವಿರಿ. ಕೌಟುಂಬಿಕ ಒತ್ತಡ ನಿಮ್ಮ ಮನಸ್ಸಿಗೆ ನೋವುಂಟು ಮಾಡುವ ಸಾಧ್ಯತೆ ಇದೆ. ಕೋಪದಲ್ಲಿ ಆಡಿದ ಮಾತುಗಳ ಮನವರಿಕೆ ಆಗುವುದು. ಆರೋಗ್ಯದ ಕಡೆಗೆ ಗಮನ ಹರಿಸಿ. ವೈದ್ಯರ ಸಲಹೆ ಪಡೆಯುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 8

Horoscope Today

ಕುಂಭ: ಆತ್ಮವಿಶ್ವಾಸದಿಂದ ಕಾರ್ಯದಲ್ಲಿ ಯಶಸ್ಸು ,ಕೀರ್ತಿ ಸಿಗುವುದು. ದಿನದ ಮಟ್ಟಿಗೆ ಅನಗತ್ಯವಾಗಿ ಖರ್ಚು ಮಾಡುವ ಸಾಧ್ಯತೆ ಇದೆ. ಗೌಪ್ಯ ವಿಷಯಗಳನ್ನು ಹಂಚಿಕೊಂಡು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ. ಕುಟುಂಬದ ಕಲಹದಲ್ಲಿ ಧ್ವನಿ ಸೇರಿಸುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 6

Horoscope Today

ಮೀನ: ಒತ್ತಡದ ಜೀವನಕ್ಕೆ ಕೊಂಚ ಮಟ್ಟಿಗೆ ಸಮಾಧಾನದ ಮಾತುಗಳು ಸೂಕ್ತ ವ್ಯಕ್ತಿಗಳಿಂದ ಸಿಗಲಿವೆ. ನಿಮ್ಮ ವರ್ತನೆಯಿಂದ ಕುಟುಂಬದ ಸದಸ್ಯರು ಕೋಪಗೊಳ್ಳವ ಸಾಧ್ಯತೆ ಇದೆ. ಹಣಕಾಸು ಪ್ರಗತಿ ಸಾಧಾರಣವಾಗಿರಲಿದೆ. ಆರೋಗ್ಯದ ಕಡೆಗೆ ಕಾಳಜಿ ವಹಿಸುವುದು ಅವಶ್ಯಕ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 4

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಪ್ರಮುಖ ಸುದ್ದಿ

Team India : ಶ್ರೀಲಂಕಾ ಪ್ರವಾಸದ ಟಿ20 ಸರಣಿಗೆ ಹಾರ್ದಿಕ್ ಬದಲಿಗೆ ಸೂರ್ಯಕುಮಾರ್ ನಾಯಕ

Team India: ಹಾರ್ದಿಕ್ ಪಾಂಡ್ಯ ವಿಶ್ವಕಪ್ ಸಮಯದಲ್ಲಿ ​​ ರೋಹಿತ್ ಅವರ ಉಪನಾಯಕರಾಗಿದ್ದರು. ಅವರು ಹೆಚ್ಚು ಅನುಭವ ಹೊಂದಿದ್ದಾರೆ. ಮೂರು ಏಕದಿನ ಮತ್ತು 16 ಟಿ 20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಜೊತೆಗೆ ಐಪಿಎಲ್​​ನ ಎರಡು ಋತುಗಳಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದಾರೆ.

VISTARANEWS.COM


on

Team India
Koo

ನವದೆಹಲಿ: ಸೀಮಿತ ಓವರ್​ಗಳ ಪಂದ್ಯಗಳ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಿರುವ ಭಾರತ ತಂಡಕ್ಕೆ (Team India) ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಯಾದವ್ ತಂಡದ ನಾಯಕರನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ. ಅವರು ಟಿ20 ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ತಿಂಗಳು ಟಿ 20 ವಿಶ್ವಕಪ್​ನಲ್ಲಿ ಭಾರತವನ್ನು ಪ್ರಶಸ್ತಿಗೆ ಮುನ್ನಡೆಸಿದ ರೋಹಿತ್ ಶರ್ಮಾ ಅವರಿಂದ ಸೂರ್ಯಕುಮಾರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಬಾರ್ಬಡೋಸ್​ನಲ್ಲಿ ನಡೆದ ಫೈನಲ್ ನಂತರ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರೊಂದಿಗೆ ರೋಹಿತ್​​ ನಿವೃತ್ತಿ ಹೊಂದಿದ್ದಾರೆ.

ಹಾರ್ದಿಕ್ ಪಾಂಡ್ಯ ವಿಶ್ವಕಪ್ ಸಮಯದಲ್ಲಿ ​​ ರೋಹಿತ್ ಅವರ ಉಪನಾಯಕರಾಗಿದ್ದರು. ಅವರು ಹೆಚ್ಚು ಅನುಭವ ಹೊಂದಿದ್ದಾರೆ. ಮೂರು ಏಕದಿನ ಮತ್ತು 16 ಟಿ 20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಜೊತೆಗೆ ಐಪಿಎಲ್​​ನ ಎರಡು ಋತುಗಳಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಗಾಯಗಳು ಹಾರ್ದಿಕ್ ಅವರನ್ನು ಕಾಡುತ್ತಿವೆ. ಇತ್ತೀಚೆಗೆ, ಅಕ್ಟೋಬರ್ 19, 2023 ರಂದು ಏಕದಿನ ವಿಶ್ವಕಪ್​ನಲ್ಲಿ ಬಾಂಗ್ಲಾದೇಶ ವಿರುದ್ಧದ ಭಾರತದ ಪಂದ್ಯದ ಸಮಯದಲ್ಲಿ ಅವರಿಗೆ ಆದ ಪಾದದ ಗಾಯವು ಅವರನ್ನು ಐಪಿಎಲ್ 2024 ರವರೆಗೆ ತಂಡದಿಂದ ಹೊರಕ್ಕೆ ಇರುವಂತೆ ಮಾಡಿತು. ಬಳಿಕ ಅವರು ರೋಹಿತ್ ಬದಲಿಗೆ ಮುಂಬೈ ಇಂಡಿಯನ್ಸ್ ನಾಯಕನಾಗಿ ಆಡಿದರು. ಅವರು ಟಿ 20 ವಿಶ್ವಕಪ್​​ನಲ್ಲಿ ರಾಷ್ಟ್ರೀಯ ಕರ್ತವ್ಯಕ್ಕೆ ಮರಳಿದರು. ವಾಸ್ತವವಾಗಿ, 2022 ರ ಆರಂಭದಿಂದ ಭಾರತ ಆಡಿದ 79 ಟಿ 20 ಪಂದ್ಯಗಳಲ್ಲಿ, ಹಾರ್ದಿಕ್ ಕೇವಲ 46 ರಲ್ಲಿ ಮಾತ್ರ ಭಾಗಿಯಾಗಿದ್ದಾರೆ.

ಸೂರ್ಯಕುಮಾರ್ ಈ ಹಿಂದೆ ದೇಶೀಯ ಕ್ರಿಕೆಟ್ನಲ್ಲಿ ಮುಂಬೈ ತಂಡವನ್ನು ಮುನ್ನಡೆಸಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಐದು ಟಿ 20 ಐ ಸರಣಿಯಲ್ಲಿ ಮತ್ತು ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೂರು ಟಿ 20 ಐ ಸರಣಿಯಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಅವರು ನಾಯಕತ್ವದ ಸಾಲಿನಲ್ಲಿ ಬಲವಾಗಿದ್ದಾರೆ ಮತ್ತು ಸಮಕಾಲೀನ ಟಿ 20 ಕ್ರಿಕೆಟ್​ಗೆ ಸೂಕ್ತ ವೇಗದಲ್ಲಿ ಬ್ಯಾಟಿಂಗ್ ಮಾಡುತ್ತಾರೆ.

ಇದನ್ನೂ ಓದಿ: Yuvraj Singh : ಅಂಗವಿಕಲರಂತೆ ರೀಲ್ಸ್​ ಮಾಡಿದ ಯುವರಾಜ್​, ಹರ್ಭಜನ್​ ಸಿಂಗ್ ವಿರುದ್ಧ ದೂರು ದಾಖಲು

ಟಿ 20 ವಿಶ್ವಕಪ್ ನಂತರ ರಾಹುಲ್ ದ್ರಾವಿಡ್ ಅವರಿಂದ ಅಧಿಕಾರ ವಹಿಸಿಕೊಂಡ ಹೊಸ ಕೋಚ್ ಗೌತಮ್ ಗಂಭೀರ್ ಅವರ ಅಡಿಯಲ್ಲಿ ಶ್ರೀಲಂಕಾದಲ್ಲಿ ಟಿ 20 ಪಂದ್ಯಗಳಲ್ಲಿ ಭಾರತ ಪಾಲ್ಗೊಳ್ಳಬೇಕಾಗಿದೆ. 2026 ರಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಮುಂದಿನ ಟಿ 20 ವಿಶ್ವಕಪ್​ಗೆ ತಂಡವನ್ನು ನಿರ್ಮಿಸುವ ನಿಟ್ಟಿನಲ್ಲಿ ಎಲ್ಲಾ ಮೊದಲ ಆಯ್ಕೆಯ ಆಟಗಾರರೊಂದಿಗೆ ತಂಡ ಸಿದ್ಧಗೊಳ್ಳಲಿದೆ. ಟಿ 20 ವಿಶ್ವಕಪ್ ನಂತರ ಭಾರತವು ಜಿಂಬಾಬ್ವೆಯಲ್ಲಿ ಐದು ಪಂದ್ಯಗಳ ಟಿ 20 ಐ ಸರಣಿಯನ್ನು ಆಡಿತು. ಆದರೆ ಆ ತಂಡದಲ್ಲಿ ವಿಶ್ವಕಪ್ ಗೆದ್ದ ತಂಡದಿಂದ ಕೇವಲ ಮೂವರು ಆಟಗಾರರು ಇದ್ದರು. ಅವರು ಕೊನೆಯ ಮೂರು ಪಂದ್ಯಗಳಿಗೆ ಮಾತ್ರ ಲಭ್ಯವಿದ್ದರು.

ಪ್ರವಾಸ ತಂಡವನ್ನು ಅಂತಿಮಗೊಳಿಸಲು ಆಯ್ಕೆದಾರರು ಬುಧವಾರ ಸಭೆ ಸೇರಲಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರವಾಸದಲ್ಲಿ ಮೂರು ಟಿ20 ಪಂದ್ಯಗಳ ಜೊತೆಗೆ ಮೂರು ಏಕದಿನ ಪಂದ್ಯಗಳು ನಡೆಯಲಿವೆ.

Continue Reading

ಕ್ರೀಡೆ

Yuvraj Singh : ಅಂಗವಿಕಲರಂತೆ ರೀಲ್ಸ್​ ಮಾಡಿದ ಯುವರಾಜ್​, ಹರ್ಭಜನ್​ ಸಿಂಗ್ ವಿರುದ್ಧ ದೂರು ದಾಖಲು

Yuvraj Singh: ಅಂಗವಿಕಲರ ಉದ್ಯೋಗ ಉತ್ತೇಜನದ ರಾಷ್ಟ್ರೀಯ ಕೇಂದ್ರದ (ಎನ್​ಸಿಪಿಇಡಿಪಿ) ಕಾರ್ಯನಿರ್ವಾಹಕ ನಿರ್ದೇಶಕ ಅರ್ಮಾನ್ ಅಲಿ ಅವರು ಅಮರ್ ಕಾಲೋನಿ ಪೊಲೀಸ್ ಠಾಣೆಯ ಎಸ್ಎಚ್ಒಗೆ ಕ್ರಿಕೆಟಿಗರ ವಿರುದ್ಧ ದೂರು ದಾಖಲಿಸಿರುವುದರಿಂದ ಈ ವಿಷಯ ಮತ್ತಷ್ಟು ಬೆಳೆದಿದೆ.

VISTARANEWS.COM


on

Yuvraj Singh
Koo

ನವದೆಹಲಿ: ಲೆಜೆಂಡ್ಸ್ ವಿಶ್ವ ಕಪ್​ನ ಉದ್ಘಾಟನಾ ಆವೃತ್ತಿಯಲ್ಲಿ ಗೆಲುವು ಸಾಧಿಸಿದ ಖುಷಿಯಲ್ಲಿ ಮಾಡಿದ ವಿಡಿಯೊ ಭಾರತದ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್ (Yuvraj Singh), ಹರ್ಭಜನ್ ಸಿಂಗ್, ಸುರೇಶ್ ರೈನಾ ಮತ್ತು ಗುರ್ಕೀರತ್ ಮಾನ್ ಗೆ ಸಮಸ್ಯೆಯಾಗಿ ಮಾರ್ಪಟ್ಟಿದೆ. ಎಲ್ಲರ ವಿರುದ್ಧ ಅಂಗವಿಕಲರನ್ನು ಅಪಹಾಸ್ಯ ಮಾಡಿದ ಆರೋಪದ ಮೇಲೆ ಪೊಲೀಸ್ ದೂರು ದಾಖಲಿಸಲಾಗಿದೆ. ವಿಶೇಷವೆಂದರೆ, ಮಾಜಿ ಕ್ರಿಕೆಟಿಗರು ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್​ನಲ್ಲಿ ರೀಲ್ ಅನ್ನು ಪೋಸ್ಟ್ ಮಾಡಿದ್ದರು. ಅಲ್ಲಿ ಅವರು ನಟ ವಿಕ್ಕಿ ಕೌಶಲ್ ಅವರ ಮುಂಬರುವ ಚಿತ್ರ ಬ್ಯಾಡ್ ನ್ಯೂಸ್​ನ ವೈರಲ್ ಹಾಡಿನ ‘ತೌಬಾ-ತೌಬಾ’ ಹಾಡಿಗೆ ಹೆಜ್ಜೆ ಹಾಕಿದ್ದರು.

ವಿಶ್ವ ಚಾಂಪಿಯನ್​ಶಿಪ್​ ಆಫ್ ಲೆಜೆಂಡ್ಸ್ ಫೈನಲ್​​ನಲ್ಲಿ ಭಾಗವಹಿಸಿದ ನಂತರ ಕ್ರಿಕೆಟಿಗರು ತಮ್ಮ ದೇಹದ ಸ್ಥಿತಿಯನ್ನು ಹಾಸ್ಯಮಯ ರೀತಿಯಲ್ಲಿ ತೋರಿಸಿದ್ದರು. ಈ ಕಿರು ಕ್ಲಿಪ್ ವಿಕ್ಕಿ ಕೌಶಲ್ ಅವರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಅವರು ಪೋಸ್ಟ್​ಗೆ ನಗುವ ಎಮೋಜಿಗಳೊಂದಿಗೆ ಕಾಮೆಂಟ್ ಮಾಡಿದ್ದರು. ಆದಾಗ್ಯೂ, ಭಾರತದ ಪ್ಯಾರಾ-ಬ್ಯಾಡ್ಮಿಂಟನ್ ತಾರೆ ಮಾನಸಿ ಜೋಶಿ ಅವರು ಕ್ರಿಕೆಟಿಗರು ವಿಕಲಚೇತನರನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಟೀಕಿಸಿದ್ದರು. ಅವರ ಆಕ್ರೋಶದ ನಂತರ, ಹರ್ಭಜನ್. ರೀಲ್ ಅನ್ನು ತೆಗೆದು ತಮ್ಮ ಇನ್ಸ್ಟಾಗ್ರಾಮ್ ಮೂಲಕ ಕ್ಷಮೆ ಯಾಚಿಸಿದ್ದರು.

ಅಂಗವಿಕಲರ ಉದ್ಯೋಗ ಉತ್ತೇಜನದ ರಾಷ್ಟ್ರೀಯ ಕೇಂದ್ರದ (ಎನ್​ಸಿಪಿಇಡಿಪಿ) ಕಾರ್ಯನಿರ್ವಾಹಕ ನಿರ್ದೇಶಕ ಅರ್ಮಾನ್ ಅಲಿ ಅವರು ಅಮರ್ ಕಾಲೋನಿ ಪೊಲೀಸ್ ಠಾಣೆಯ ಎಸ್ಎಚ್ಒಗೆ ಕ್ರಿಕೆಟಿಗರ ವಿರುದ್ಧ ದೂರು ದಾಖಲಿಸಿರುವುದರಿಂದ ಈ ವಿಷಯ ಮತ್ತಷ್ಟು ಬೆಳೆದಿದೆ.

ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅರ್ಮಾನ್ ಸೂಚನೆ

ಕ್ರಿಕೆಟಿಗರಲ್ಲದೆ, ಮೆಟಾ ಇಂಡಿಯಾದ ಉಪಾಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಸಂಧ್ಯಾ ದೇವನಾಥನ್ ಕೂಡ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ಅನ್ನು ಉಲ್ಲಂಘಿಸಿದ್ದಾರೆ ಎಂದು ದೂರು ನೀಡಲಾಗಿದೆ. “ಈ ವೀಡಿಯೊ ಭಾರತದ ಸಂವಿಧಾನದ 21 ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ, ಇದು ಪ್ರತಿಯೊಬ್ಬ ವ್ಯಕ್ತಿಗೆ ಘನತೆಯಿಂದ ಬದುಕುವ ಹಕ್ಕನ್ನು ಖಾತರಿಪಡಿಸುತ್ತದೆ. ಇದು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ, 2016 ರ ಸೆಕ್ಷನ್ 92 ಅನ್ನು ಉಲ್ಲಂಘಿಸುತ್ತದೆ ಮತ್ತು ನಿಪುನ್ ಮಲ್ಹೋತ್ರಾ ವಿರುದ್ಧ ಸೋನಿ ಪಿಕ್ಚರ್ಸ್ ಫಿಲ್ಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (2004 ಎಸ್ಸಿಸಿ ಆನ್ಲೈನ್ ಎಸ್ಸಿ 1639) ಪ್ರಕರಣದಲ್ಲಿ ಸ್ಥಾಪಿಸಲಾದ ಸುಪ್ರೀಂ ಕೋರ್ಟ್​ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತದೆ ” ಎಂದು ಅರ್ಮಾನ್ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Chennai Super King : ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್​

ಕ್ರಿಕೆಟಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅರ್ಮಾನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. “ಅವರ ಕೃತ್ಯಗಳಿಗಾಗಿ ಅವರಿಗೆ ದಂಡ ವಿಧಿಸಬೇಕು” ಎಂದು ಅರ್ಮಾನ್ ಅಭಿಪ್ರಾಯಪಟ್ಟಿದ್ದಾರೆ.

Continue Reading
Advertisement
landslide Karnataka Rain
ಉತ್ತರ ಕನ್ನಡ2 mins ago

Landslide: ಶಿರೂರಿನಲ್ಲಿ ಕುಸಿದ ಗುಡ್ಡದಡಿ 5 ಶವ ಪತ್ತೆ, ಇನ್ನುಳಿದವರಿಗೆ ಹುಡುಕಾಟ; ಗೋಕರ್ಣದಲ್ಲೂ ಭೂಕುಸಿತ

CV Ananda Bose
ರಾಜಕೀಯ22 mins ago

CV Ananda Bose: ಉಪಚುನಾವಣೆ ವೇಳೆ ವೋಟಿಂಗ್‌ ಹಕ್ಕು ಕಸಿದ ಟಿಎಂಸಿ ಕಾರ್ಯಕರ್ತರು; ಬಂಗಾಳ ರಾಜ್ಯಪಾಲರನ್ನು ಭೇಟಿಯಾದ ಮತದಾರರು

Anant Radhika Wedding
ವಾಣಿಜ್ಯ28 mins ago

Anant Radhika Wedding: ಅನಂತ್ ಅಂಬಾನಿ ಟರ್ಬನ್‌ನಲ್ಲಿದ್ದ ಡೈಮಂಡ್ ಬ್ರೋಚ್‌ ಮೌಲ್ಯ 150 ಫ್ಲಾಟ್‌ಗಳ ಬೆಲೆಗೆ ಸಮಾನ!

Tulsi Tea Benefits
ಆರೋಗ್ಯ43 mins ago

Tulsi Tea Benefits: ನಿತ್ಯವೂ ತುಳಸಿ ಚಹಾ ಕುಡಿಯುವುದರಿಂದ ಏನೆಲ್ಲ ಲಾಭಗಳಿವೆ ಗೊತ್ತೇ?

world emoji day ರಾಜಮಾರ್ಗ ಅಂಕಣ
ಪ್ರಮುಖ ಸುದ್ದಿ48 mins ago

ರಾಜಮಾರ್ಗ ಅಂಕಣ: ಈ ಚಿತ್ರಾಕ್ಷರಗಳಿಗೆ ಇಂದು 25 ವರ್ಷ ತುಂಬಿತು!

road accident jammu kashmir
ಪ್ರಮುಖ ಸುದ್ದಿ1 hour ago

Road Accident: ಜಮ್ಮು ಕಾಶ್ಮೀರದಲ್ಲಿ ಕಾರು ಅಪಘಾತ, ಬೆಂಗಳೂರಿನ ಮೂವರ ಸಾವು

Anant Radhika Wedding
Latest1 hour ago

Anant Radhika Wedding: ಅಂಬಾನಿ ಮದುವೆಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ಸ್ಟಾರ್ ಯಾರು?

karnataka Weather Forecast
ಮಳೆ2 hours ago

Karnataka Weather : ಬಿರುಗಾಳಿ ಜತೆಗೆ ಅಬ್ಬರಿಸಲಿದ್ದಾನೆ ವರುಣ; ಈ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Warangal Tour
ಪ್ರವಾಸ2 hours ago

Warangal Tour: ಪ್ರವಾಸಿಗರಿಗೆ ಮೋಡಿ ಮಾಡುವ ವಾರಂಗಲ್; ಅಲ್ಲಿ ನೋಡಲೇಬೇಕಾದ ಸ್ಥಳಗಳ ಚಿತ್ರಣ ಇಲ್ಲಿದೆ

Vastu Tips
Latest2 hours ago

Vastu Tips: ಈ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಅಪಾಯ ಗ್ಯಾರಂಟಿ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ19 hours ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ21 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ2 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ2 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ2 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ3 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ3 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ3 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ4 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌