ಚೆನ್ನೈ: ತಮಿಳುನಾಡಿನಲ್ಲಿ ನಕಲಿ ಎನ್‌ಸಿಸಿ ಕ್ಯಾಂಪ್(Fake NCC camp) ಆಯೋಜಿಸಿ ಬಾಲಕಿ ಮೇಲೆ ಅತ್ಯಾಚಾರ(Sexual assault) ಮತ್ತು ಇತರ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ಎಸಗುತ್ತಿದ್ದ ಪ್ರಕರಣದ ಪ್ರಮುಖ ಆರೋಪಿಯೊಬ್ಬ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮಿಳುನಾಡಿನ ಬಾರ್ಗರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಶಿವರಾಮನ್ ಎಂಬಾತ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇನ್ನು ಸ್ಥಳೀಯ ರಾಜಕೀಯ ಪಕ್ಷವಾಗಿರುವ ನಾಮ್ ತಮಿಳರ್ ಕಚ್ಚಿಯ ಜಿಲ್ಲಾ ಕಾರ್ಯದರ್ಶಿಯಾಗಿದ್ದ ಶಿವರಾಮನ್ ವಿರುದ್ಧ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ದಾಖಲಾಗಿತ್ತು. ದೂರಿನಾಧಾರದಲ್ಲಿ ಆತನನ್ನು ಅರೆಸ್ಟ್ ಮಾಡಲು ಮುಂದಾಗಿದ್ದರು. ಈವೇಳೆ ಆತ ತಪ್ಪಿಸಿಕೊಂಡು ಹೋಗಲೂ ಯತ್ನಿಸಿದ್ದ. ಆದರೆ ಆ.19ರಂದು ಪೊಲೀಸರು ಅರೆಸ್ಟ್ ಮಾಡಿದ್ದರು. ಆದರೆ ಅದಕ್ಕೂ ಮುನ್ನ ಆತ ಇಲಿ ಪಾಷಾಣ ಸೇವಿಸಿದ್ದ. ಹೀಗಾಗಿ ಅತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡಿರಲಿಲ್ಲ. ಇಂದು ಆತ ಕೊನೆಯುಸಿರೆಳೆದಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 11ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಏನಿದು ಘಟನೆ?
ಕೃಷ್ಣಗಿರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ರಾಜಕೀಯ ಪಕ್ಷವಾಗಿರುವ ನಾಮ್ ತಮಿಳರ್ ಕಚ್ಚಿಯ ಜಿಲ್ಲಾ ಕಾರ್ಯದರ್ಶಿ ಶಿವರಾಮನ್ ಖಾಸಗಿ ಶಾಲೆಯೊಂದಕ್ಕೆ ಭೇಟಿ ಕೊಟ್ಟು ಎನ್‌ಸಿಸಿ ಕ್ಯಾಂಪ್ ಆಯೋಜಿಸುವ ಬಗ್ಗೆ ಚರ್ಚೆ ನಡೆಸಿದ್ದಾನೆ. ಆತನೇ ಸ್ವಯಂ ಆಸಕ್ತಿಯಿಂದ ಎನ್‌ಸಿಸಿ ಕ್ಯಾಂಪ್ ಆಯೋಜಿಸಿದ್ದ. ಆತನ ಜೊತೆಗಿದ್ದ ತಂಡವನ್ನು ಮತ್ತು ಆತನ ಹಿನ್ನೆಲೆ ಬಗ್ಗೆ ಸರಿಯಾಗಿ ಪರಿಶೀಲನೆ ನಡೆಸದೇ ಶಾಲಾ ಪ್ರಾಂಶುಪಾಲರು ಇದಕ್ಕೆ ಒಪ್ಪಿದರು.
STORY | Prime suspect in school girl sexual assault in fake NCC camp case dies by suicide
— Press Trust of India (@PTI_News) August 23, 2024
READ: https://t.co/qHkAwc1RLe
VIDEO: The prime suspect in the sexual assault of a school girl at a fake NCC camp at Bargur in the district died allegedly by suicide. Sivaraman reportedly… pic.twitter.com/8sEfXivy59
ಶಿಬಿರವು ಆಗಸ್ಟ್ 5 ರಿಂದ ಆಗಸ್ಟ್ 9 ರವರೆಗೆ ನಡೆದಿದ್ದು, 17 ಹುಡುಗಿಯರು ಸೇರಿದಂತೆ 41 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಬಿರದ ಸಮಯದಲ್ಲಿ, ಹುಡುಗರನ್ನು ನೆಲ ಮಹಡಿಯಲ್ಲಿ ಮತ್ತು ಹುಡುಗಿಯರನ್ನು ಮೇಲಿನ ಮಹಡಿಯಲ್ಲಿ ಇರಿಸಲಾಗಿತ್ತು. ಅಲ್ಲಿ ಮಿಲಿಟರಿ ತರಹದ ತರಬೇತಿ ನೀಡಲಾಗಿತ್ತು. ಅಲ್ಲದೇ ರಾತ್ರಿಯಲ್ಲಿ ನಾಲ್ಕು ಗಂಟೆಗಳ ಪಾಳಿಗಳವರೆಗೆ ಶಾಲೆಯ ಕಾಂಪೌಂಡ್ ಅನ್ನು ಕಾವಲು ಕಾಯಲು ವಿದ್ಯಾರ್ಥಿಗಳನ್ನು ಗುಂಪುಗಳಲ್ಲಿ ನಿಯೋಜಿಸಲಾಯಿತು. ಈ ರಾತ್ರಿ ಪಾಳಿಯಲ್ಲಿ ಶಿವರಾಮನ್ 13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ
ಸಂತ್ರಸ್ತೆ ಶಾಲೆಯ ಪ್ರಾಂಶುಪಾಲರಾದ ಸತೀಶ್ ಕುಮಾರ್ ಅವರಿಗೆ ಈ ಹೀನ ಕೃತ್ಯದ ಬಗ್ಗೆ ದೂರು ನೀಡಿದ್ದಳು. ಆದರೆ ಕ್ರಮ ತೆಗೆದುಕೊಳ್ಳುವ ಬದಲು, ಪ್ರಾಂಶುಪಾಲರು, ಶಾಲೆಯ ಇಬ್ಬರು ಶಿಕ್ಷಕರೊಂದಿಗೆ ಸೇರಿ ಈ ಕೃತ್ಯವನ್ನು ಮುಚ್ಚಿಡಲು ನಿರ್ಧರಿಸಿದರು. ಹುಡುಗಿ ಅಂತಿಮವಾಗಿ ತನ್ನ ತಾಯಿಗೆ ತಿಳಿಸಿದಳು, ಆಕೆಯ ತಂದೆ ಶುಕ್ರವಾರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ಪ್ರಕಾರ, ಲೈಂಗಿಕ ದೌರ್ಜನ್ಯಕ್ಕೊಳಗಾದ ಹುಡುಗಿಯನ್ನು ಹೊರತುಪಡಿಸಿ, ಕನಿಷ್ಠ ನಾಲ್ವರು ವಿದ್ಯಾರ್ಥಿನಿಯರಿಗೆ ಶಿವರಾಮನ್ ಮತ್ತು ಅವರ ಸಹಚರರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಶಿವರಾಮನ್ ಮತ್ತು ಆತನ ಸಹಚರರು ಕೃಷ್ಣಗಿರಿಯ ಇತರ ಮೂರು ಶಾಲೆಗಳಲ್ಲಿ ಇದೇ ರೀತಿಯ ಅನಧಿಕೃತ ಎನ್‌ಸಿಸಿ ಕ್ಯಾಂಪ್ ನಡೆಸಿದೆ ಎನ್ನಲಾಗಿದೆ. ಅವರು ಈ ಹಿಂದಿನ ಅವಧಿಗಳ ಫೋಟೋಗಳು ಮತ್ತು ವೀಡಿಯೊಗಳನ್ನು ತೋರಿಸುವ ಮೂಲಕ ಪ್ರಸ್ತುತ ಶಾಲೆಯ ಆಡಳಿತವನ್ನು ಮನವೊಲಿಸಿದರು.
ಇದನ್ನೂ ಓದಿ: Sexual Abuse: ಮಹಿಳೆ ಮೇಲೆ ಅತ್ಯಾಚಾರ ಎಸಗಿ ಜನನಾಂಗದೊಳಗೆ ಗನ್ ತೂರಿಸಿದ ತೃಣಮೂಲ ಕಾರ್ಯಕರ್ತ!