Site icon Vistara News

Blast in Bengaluru: ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಇದೆಯಾ ಮಂಗಳೂರು ಸ್ಫೋಟದ ಲಿಂಕ್?‌

Blast in Bengaluru rameshwaram cafe

ಬೆಂಗಳೂರು: ರಾಮೇಶ್ವರಂ‌‌ ಕೆಫೆಯಲ್ಲಿ (rameshwaram cafe) ನಡೆದ ಸ್ಫೋಟ (Blast in Bengaluru) ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದಲ್ಲಿ ಈ ಹಿಂದೆ ನಡೆದಿದ್ದ ಸ್ಫೋಟಗಳಿಗೆ (bomb blast) ಇರುವ ಸಾಮ್ಯತೆಯನ್ನು, ಅದರಲ್ಲೂ ಮಂಗಳೂರು ಕುಕ್ಕರ್‌ (mangalore blast) ಬಾಂಬ್‌ ಸ್ಫೋಟಕ್ಕೆ ಇರುವ ಸಂಬಂಧವನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಪರಿಶೀಲನೆ ವೇಳೆ ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಬಳಸಿದ್ದ ಸ್ಫೋಟಕ ಸಾಮಗ್ರಿಗಳು ಹಾಗೂ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಾಮ್ಯತೆ ಕಂಡುಬಂದಿವೆ. ಎರಡೂ ಕಡೆ ಬ್ಲಾಸ್ಟ್ ನಡೆದ ಸಂದರ್ಭದಲ್ಲಿ ಹೊರಸೂಸಿರುವ ಹೊಗೆ ಒಂದೇ ಮಾದರಿಯಲ್ಲಿದೆ. ಎರಡೂ ಕಡೆ ಬ್ಯಾಟರಿ, ಡಿಟೋನೇಟರ್‌ಗಳು, ನಟ್ಟು, ಬೋಲ್ಟ್‌ಗಳನ್ನು ಸ್ಫೋಟಕ್ಕೆ ಬಳಸಲಾಗಿದೆ.

ಈ ಹಿನ್ನೆಲೆಯನ್ನು‌ ಪರಿಶೀಲನೆ ಮಾಡಲು ಮುಂದಾಗಿರುವ ಪೊಲೀಸ್‌ ಅಧಿಕಾರಿಗಳು, ಮಂಗಳೂರು ಸ್ಫೋಟದ ರೂವಾರಿ ಶಾರಿಕ್‌ ಹಾಗೂ ಸಂಗಡಿಗರನ್ನು ವಿಚಾರಣೆಗೆ ಮುಂದಾಗಿದ್ದಾರೆ. ಸದ್ಯಕ್ಕೆ ಶಾರಿಕ್ ಆಂಡ್ ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿದೆ.

ಸಿಸಿಟಿವಿಯಲ್ಲಿ ಚಲನವಲನ

ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಆರೋಪಿಯ ಜಾಡು ಹಿಡಿದು ಹೊರಟ ರಾಜ್ಯ ಮತ್ತು ರಾಷ್ಟ್ರೀಯ ತನಿಖೆ ದಳಗಳು ಸಿಸಿಟಿವಿ ಜಾಡು ಹಿಡಿದಿವೆ. ಆರೋಪಿ ಕೆಫೆಯ ಒಳ ಪ್ರವೇಶ ಮಾಡಿ ಸುಮಾರು ಒಂದು ಗಂಟೆ ಕಾಲ ಒಳಗೆ ಓಡಾಡಿದ್ದಾನೆ. 11:15 ಗಂಟೆಗೆ ಒಳ ಪ್ರವೇಶ ಮಾಡಿ 12:10ರ ತನಕ ಒಳಗೆ ಇದ್ದ.

ಸೈಡ್ ಬ್ಯಾಗ್ ಹಾಕಿಕೊಂಡು ಬ್ಯಾಗ್‌ ಒಳಗೆ ಮತ್ತೊಂದು ಬ್ಯಾಗ್‌ನಲ್ಲಿ ಸ್ಫೋಟಕ ತಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜನರ ಕಣ್ಣಿಗೆ ಮತ್ತು ಸಿಸಿ ಕ್ಯಾಮರದಲ್ಲಿ ಸೆರೆಯಾಗದ ಜಾಗಕ್ಕೆ ಈತ ಹುಡುಕಾಟ ನಡೆಸಿದ್ದು, ಕೊನೆಗೆ ಕೈ ತೊಳೆಯುವ ಜಾಗದಲ್ಲಿದ್ದ ಡೆಸ್ಟ್ ಬಿನ್‌ನಲ್ಲಿ ಬ್ಯಾಗ್ ಬಿಸಾಡಿ ಎಸ್ಕೇಪ್ ಆಗಿದ್ದಾನೆ.

ಹೋಗುವಾಗ ಮೊಬೈಲ್ ಕೈಯಲ್ಲಿ ಹಿಡಿದು ಪರಾರಿಯಾಗಿದ್ದಾನೆ. ಆರೋಪಿ ಬಳಿ ಮೊಬೈಲ್ ಇರುವುದು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಸದ್ಯ ಆರೋಪಿ ಬಳಿ ಇರುವ ಮೊಬೈಲ್ ಜಾಡು ಹಿಡಿದು ಹೊರಟಿರುವ ಪೊಲೀಸರು ಟವರ್ ಡಂಪ್ ಮಾಡಿ ಮೊಬೈಲ್ ಡಿಟೈಲ್ಸ್ ಕಲೆ ಹಾಕಿ ಆರೋಪಿಗೆ ಬಲೆ ಬೀಸಿದ್ದಾರೆ.

ಸ್ಪೋಟದ ಹಿಂದೆ ಒಂದು‌ ತಂಡವೇ ಇರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸ್ಪೋಟಕ ತಯಾರು ಮಾಡುವುದು ಹಾಗೂ ಅದಕ್ಕೆ ಬೇಕಾಗಿರುವ ‌ವಸ್ತುಗಳನ್ನು ಪಡೆಯಲು ವ್ಯವಸ್ಥಿತ ಸಂಚು ನಡೆದಿದ್ದು, ಮೇಲ್ನೋಟಕ್ಕೇ ಈ‌ ತಂಡದಲ್ಲಿ ವೆಲ್ ಟ್ರೈನ್ಡ್ ಆರೋಪಿಗಳು‌ ಭಾಗಿಯಾಗಿರುವ ಶಂಕೆ ಮೂಡಿದೆ.

ಸುಧಾರಿತ ಸ್ಫೋಟಕ, ಸ್ಥಳೀಯ ಸಾಮಗ್ರಿ

ಸ್ಫೋಟದಲ್ಲಿ IED ಇಂಪ್ರೂವೈಸ್ ಎಕ್ಸಪೋಸೀವ್ ಡಿವೈಸ್ ಬಳಕೆ ಮಾಡಲಾಗಿದೆ. ಈ ಬಾಂಬನ್ನು ಸ್ಥಳೀಯವಾಗಿ ಸಿಗುವ ಕಚ್ಚಾ ವಸ್ತುಗಳನ್ನ ಬಳಸಿ ಸಿದ್ಧಪಡಿಸಲಾಗುತ್ತದೆ. ಮೊಳೆಗಳು, ಗಾಜಿನ ಚೂರು, ಗನ್ ಪೌಡರ್ ಅಥವಾ ಬೆಂಕಿ ಕಡ್ಡಿಯ ಮದ್ದುಗಳನ್ನೂ ಬಳಸಿ ಇವನ್ನು ತಯಾರಿಸಬಹುದು. ಪ್ರೆಷರ್ ಆಗುವಂತೆ ಡಿವೈಸ್‌ನ್ನು ಸೃಷ್ಟಿಸಿ ಸ್ಫೋಟಿಸಬಹುದು. ಇದು ಎಷ್ಟು ಕಚ್ಚಾ ವಸ್ತುಗಳನ್ನು ಹಾಕಬಹುದೋ ಅಷ್ಟೂ ತೀವ್ರತೆಯನ್ನು ಪಡೆದುಕೊಳ್ಳುತ್ತದೆ.

Plastic explosive ಕೂಡ ಬಳಸಿರುವ ಸಾಧ್ಯತೆ ಇದೆ. ಇದನ್ನ putty explosive ಎಂದು ಕರೆಯಲಾಗುತ್ತದೆ. ಜಿಲೇಟಿನ್‌ಗಳನ್ನು ಬಳಸಿ ಈ ಪ್ಲಾಸ್ಟಿಕ್ ಎಕ್ಸ್‌ಪ್ಲೋಸಿವ್ ತಯಾರಿಕೆ ಮಾಡಲಾಗುತ್ತದೆ. ಈ ಸಾಧನವನ್ನು ಯಾವುದೇ ಮೆಟಲ್ ಡಿಟೆಕ್ಟರ್ ಕಂಡು ಹಿಡಿಯುವುದಿಲ್ಲ. ಇದನ್ನ ಎಲ್ಲಿ ಬೇಕಾದರೂ ಭದ್ರತಾ ಸಿಬ್ಬಂದಿಗಳ ಕಣ್ಣು ತಪ್ಪಿಸಿ ತೆಗೆದುಕೊಂಡು ಹೋಗಬಹುದು ಎನ್ನಲಾಗಿದೆ.

ಆದರೆ ಸ್ಲೀಪರ್ ಸೆಲ್‌ಗಳಿಲ್ಲದೆ ಬಾಂಬ್ ತಯಾರು ಸುಲಭವಲ್ಲ. ಕಚ್ಚಾ ವಸ್ತುಗಳಿಗೆ ಸ್ಲೀಪರ್ ಸೆಲ್‌ಗಳ ಅವಶ್ಯಕತೆ ಇದೆ. ಸ್ಲೀಪರ್ ಸೆಲ್‌ಗಳು ಸಪ್ಲೈ ಮಾಡುವ ಬಿಡಿ ಬಿಡಿ ವಸ್ತುಗಳಿಂದಲೇ ಬಾಂಬ್ ತಯಾರಿಕೆ ನಡೆದಿದ್ದು, ರಾಮೇಶ್ವರಂ ಬಾಂಬ್ ಬ್ಲಾಸ್ಟ್ ಕೇಸಲ್ಲಿ ಸಾಕಷ್ಟು ದೊಡ್ಡ ಕ್ರಿಮಿನಲ್ ಸಂಚು ಇರಲೇಬೇಕಿದೆ.

ಏಕಾಏಕಿ ಬಾಂಬ್ ಇಟ್ಟು ಉಡಾಯಿಸಲು ಸಾಧ್ಯವಿಲ್ಲ. ಸಾಕಷ್ಟು ದಿನಗಳಿಂದ ಪ್ಲಾನಿಂಗ್ ಮಾಡಿರಬೇಕು. ಯಾವ ಸಮಯದಲ್ಲಿ ಜನ ಇರ್ತಾರೆ, ಯಾವ ಸ್ಥಳದಲ್ಲಿ ಹೆಚ್ಚಿನ ಗುಂಪು ಇರುತ್ತದೆ, ಎಂಬುದನ್ನು ಪರಿಶೀಲಿಸಿ ಉಗ್ರ ಕೃತ್ಯ ಎಸಗಲಾಗಿದೆ. ಜನಜಂಗುಳಿ ಇರುವ ಸ್ಥಳದಲ್ಲಿ ಬಾಂಬ್ ಇಡಲು ಪೂರ್ವ ತಯಾರಿ ಮಾಡಿಕೊಂಡಿರುವುದು ಗೊತ್ತಾಗುತ್ತಿದೆ.

ಇದನ್ನೂ ಓದಿ: Blast in Bengaluru : ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಅಂಬಾನಿ ಪುತ್ರನ ಮದುವೆಗೂ ಕನೆಕ್ಷನ್‌?

Exit mobile version