Site icon Vistara News

Suraj Revanna Case: ತಮ್ಮನಿಗೆ ಮೂರು ಸಲ; ಈಗ ಅಣ್ಣನಿಗೂ ಪುರುಷತ್ವ ಪರೀಕ್ಷೆ! ಇದೇ ಬೇರೆ ಥರ!

Suraj Revanna Case

ಬೆಂಗಳೂರು: ಲೈಂಗಿಕ ದೌರ್ಜನ್ಯ (physical abuse) ಪ್ರಕರಣಗಳಲ್ಲಿ ತಮ್ಮ ಪ್ರಜ್ವಲ್‌ ರೇವಣ್ಣಗೆ (Prajwal Revanna Case) ಮಾಡಲಾಗಿದ್ದ ಪುರುಷತ್ವ ಪರೀಕ್ಷೆಯನ್ನು (Medical Test) ಇದೀಗ ಅಣ್ಣ ಸೂರಜ್‌ ರೇವಣ್ಣಗೂ (Suraj Revanna Case) ಮಾಡಲು ತನಿಖಾ ತಂಡ ಮುಂದಾಗಿದೆ. ಬೆದರಿಕೆಯೊಡ್ಡಿ ಸಲಿಂಗಕಾಮ, ಅಸಹಜ ಲೈಂಗಿಕ ಕ್ರಿಯೆಯ ಆರೋಪ ಸೂರಜ್‌ ರೇವಣ್ಣ ಮೇಲಿದೆ.

ಸೂರಜ್ ರೇವಣ್ಣ ವಿರುದ್ಧ ದಾಖಲಾಗಿರುವ ಅಸಹಜ ಲೈಂಗಿಕ‌ ದೌರ್ಜನ್ಯ ಪ್ರಕರಣದಲ್ಲಿ, ಸೂರಜ್ ರೇವಣ್ಣಗೆ ಇಂದು ವೈದ್ಯಕೀಯ ಪರೀಕ್ಷೆ ಮಾಡಿಸುವ ಸಾಧ್ಯತೆ ಇದೆ. ಬೌರಿಂಗ್ ಆಸ್ಪತ್ರೆಯಲ್ಲಿ ಇಂದು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸೂರಜ್‌ ಪ್ರಕರಣದಲ್ಲಿ ಈಗಾಗಲೇ ಸಂತ್ರಸ್ತನ ವಿಚಾರಣೆ ಹಾಗೂ ವೈದ್ಯಕೀಯ ಪರೀಕ್ಷೆಯನ್ನು ಪೊಲೀಸರು ನಡೆಸಿದ್ದಾರೆ. ಮುಂದುವರಿದ ಭಾಗವಾಗಿ, ಇಂದು ಸೂರಜ್ ರೇವಣ್ಣ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸಂತ್ರಸ್ತನ ಮೇಲೆ ಲೈಂಗಿಕ ಆಕ್ರಮಣ ನಡೆಸಿರುವ ಸಾಧ್ಯತೆಗಳನ್ನು ಶೋಧಿಸಲಾಗುತ್ತದೆ.

ಈ ಪ್ರಕರಣ ಸ್ವಲ್ಪ ಭಿನ್ನವಾಗಿದ್ದು, ಆರೋಪಿ ಪುರುಷರ ಜೊತೆಗೆ ಲೈಂಗಿಕ ಕ್ರಿಯೆ ನಡೆಸಬಲ್ಲನೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಸೂರಜ್‌ ಮೇಲೆ ಬಂದಿರುವ ಆರೋಪ ಬೆದರಿಕೆ ಹಾಕಿ ಸಲಿಂಗಕಾಮ ಎಸಗಿದ್ದಾಗಿರುವುದರಿಂದ, ಆರೋಪಿಗೆ ಸಲಿಂಗಕಾಮ ಸಹಜವಾದುದೇ ಎಂದು ಪರೀಕ್ಷಿಸಲು ಕೆಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಹೀಗಾಗಿ ಇದು ಅಣ್ಣ ಪ್ರಜ್ವಲ್‌ಗೆ ನಡೆಸಿದ ಪರೀಕ್ಷೆಗಳಿಗಿಂತ ಸ್ವಲ್ಪ ಭಿನ್ನ. ಪ್ರಜ್ವಲ್‌ ಪ್ರಕರಣದಲ್ಲಿ ಸಂತ್ರಸ್ತರು ಮಹಿಳೆಯರಾಗಿದ್ದರು.

ಐಪಿಸಿ ಸೆಕ್ಷನ್ 377 ಹಾಕಿರುವ ಪ್ರಕರಣದಲ್ಲಿ ವೈದ್ಯಕೀಯ ಪರೀಕ್ಷೆ ಬಹಳ ಮುಖ್ಯವಾಗಿದೆ. ಇಲ್ಲಿ ಸಂತ್ರಸ್ತ ಹಾಗೂ ಆರೋಪಿ ಇಬ್ಬರ ವೈದ್ಯಕೀಯ ಪರೀಕ್ಷೆಯೂ ಮುಖ್ಯವಾಗಿದೆ. ಸಂತ್ರಸ್ತ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾನೆ. ಆರೋಪಿ ಸೂರಜ್ ರೇವಣ್ಣ ಸದ್ಯ ಸಿಐಡಿ ಕಸ್ಟಡಿಯಲ್ಲಿ ಇದ್ದಾರೆ.

ತಮ್ಮ ಪ್ರಜ್ವಲ್‌ ರೇವಣ್ಣಗೆ ಮೂರು ಸಲ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಮೂರು ಬೇರೆ ಬೇರೆ ಪ್ರಕರಣಗಳಲ್ಲಿ ಈ ಪರೀಕ್ಷೆ ನಡೆಸಲಾಗಿದ್ದು, “ಪದೇ ಪದೆ ಖಾಸಗಿ ಅಂಗವನ್ನು ತೋರಿಸಲು ಮುಜುಗರವಾಗುತ್ತದೆ” ಎಂದು ನ್ಯಾಯಾಧೀಶರ ಮುಂದೆ ಪ್ರಜ್ವಲ್‌ ಅಲವತ್ತುಕೊಂಡಿದ್ದರು. ಇದೀಗ ಅಣ್ಣನೂ ಈ ಪರೀಕ್ಷೆಗೆ ಗುರಿಯಾಗಬೇಕಿದೆ. ಸೂರಜ್‌ ಎಷ್ಟು ಬಾರಿ ಪರೀಕ್ಷೆಗೊಳಗಾಗಲಿದ್ದಾನೆ ಎಂದು ನೋಡಬೇಕಿದೆ.

ನಾಪತ್ತೆಯಾದ ಸೂರಜ್‌ ಆಪ್ತನ ವಿರುದ್ಧವೂ ದೂರು ನೀಡಿರುವ ಸಂತ್ರಸ್ತ!

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಡಾ.ಸೂರಜ್‌ ರೇವಣ್ಣ (Suraj Revanna Case) ಆಪ್ತ, ನಾಪತ್ತೆಯಾಗಿರುವ ಶಿವಕುಮಾರ್‌ ವಿರುದ್ಧವೂ ಸಂತ್ರಸ್ತ ದೂರು ದಾಖಲಿಸಿದ್ದಾರೆ. ನನಗೆ ಆಗಿರುವ ಅನ್ಯಾಯದ ಬಗ್ಗೆ ಶಿವಕುಮಾರ್ ಬಳಿ ಹೇಳಿದ್ದೆ, ನನಗೆ ದೈಹಿಕ ಹಿಂಸೆ ಆಗಿದ್ದರೂ ಶಿವಕುಮಾರ್ ಆಸ್ಪತ್ರೆಗೆ ಹೋಗಲು ಬಿಟ್ಟಿರಲಿಲ್ಲ ಎಂದು ಸಂತ್ರಸ್ತ ಆರೋಪಿಸಿದ್ದಾರೆ.

ಪ್ರಕರಣದಲ್ಲಿ ಎರಡನೇ ಆರೋಪಿಯಾಗಿ ಸೂರಜ್‌ ಆಪ್ತ ಶಿವಕುಮಾರ್ ಹೆಸರು ಸೇರ್ಪಡೆ ಮಾಡಲಾಗಿದೆ. ಶಿವಕುಮಾರ್ ಹೊಳೆನರಸೀಪುರ ತಾಲೂಕಿನ ಹನುಮನಹಳ್ಳಿ ಗ್ರಾಮದವನು. ಸೂರಜ್‌ ರೇವಣ್ಣ ವಿರುದ್ಧ ಸಂತ್ರಸ್ತ ದೂರು ನೀಡಿದ ಬಳಿಕ, ಸಂತ್ರಸ್ತನ ವಿರುದ್ಧ ದೂರು ಶಿವಕುಮಾರ್ ನಾಪತ್ತೆಯಾಗಿದ್ದಾನೆ.

ಸೂರಜ್‌ಗೆ 5 ಕೋಟಿ ರೂ. ನೀಡುವಂತೆ ಬ್ಲ್ಯಾಕ್‌ ಮೇಲ್‌ ಮಾಡಿದ್ದಾರೆ ಎಂದು ಸಂತ್ರಸ್ತನ ವಿರುದ್ಧ ಶಿವಕುಮಾರ್ ದೂರು ನೀಡಿದ್ದ. ಬಳಿಕ ಶಿವಕುಮಾರ್‌ ಹಾಗೂ ಸಂತ್ರಸ್ತ ಇಬ್ಬರೂ ಸೇರಿ ಬ್ಲ್ಯಾಕ್‌ ಮೇಲ್‌ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದವು. ಇದಾದ ನಂತರ ಶಿವಕುಮಾರ್‌ ನಾಪತ್ತೆಯಾಗಿದ್ದಾನೆ.

ಇದನ್ನೂ ಓದಿ: Suraj Revanna Case: ಸೂರಜ್‌ ರೇವಣ್ಣಗೇ ʼಹಿಂದಿನಿಂದ ಇರಿದವರುʼ ಯಾರು?

Exit mobile version