Site icon Vistara News

Srinivasa Prasad passes away‌: 7 ಬಾರಿ ಸಂಸದರಾಗಿದ್ದ ಸ್ವಾಭಿಮಾನಿ, ದಕ್ಷಿಣ ಕರ್ನಾಟಕದ ʼದಲಿತ ಸೂರ್ಯʼ

srinivasa prasad

ಬೆಂಗಳೂರು: 7 ಬಾರಿ ಸಂಸದರಾಗಿದ್ದ, ದಕ್ಷಿಣ ಕರ್ನಾಟಕದ ʼದಲಿತ ಸೂರ್ಯʼ ಎಂದೇ ಖ್ಯಾತರಾಗಿದ್ದ ಹಿರಿಯ ರಾಜಕಾರಣಿ, ಮುತ್ಸದ್ಧಿ ವಿ.ಶ್ರೀನಿವಾಸ್ ಪ್ರಸಾದ್ (Srinivasa Prasad) ಇಂದು ಮುಂಜಾನೆ ನಿಧನರಾಗಿದ್ದಾರೆ (Srinivasa Prasad). ಚಾಮರಾಜನಗರ ಸಂಸದರಾಗಿ (Chamarajanagar MP) ಬಹು ದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿದ್ದ ಪ್ರಸಾದ್ ಮಾರ್ಚ್ 17ರಂದು ರಾಜಕೀಯ ನಿವೃತ್ತಿ ಘೋಷಿಸಿದ್ದರು.

ಈ ಹಿರಿಯ ನಾಯಕ, ಸಂಸದ ಅನಾರೋಗ್ಯದಿಂದ ಬಳಲುತ್ತಿದ್ದು, ಬೆಂಗಳೂರಿನ‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಳೇ ಮೈಸೂರು ಭಾಗದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಪ್ರಸಾದ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ 50 ವರ್ಷಗಳ ಕಾಲ ನಿರಂತರ ಜನಸೇವೆ ಅವರದಾಗಿತ್ತು.

ಕಾಲೇಜು ದಿನಗಳಲ್ಲಿ ಫುಟ್ಬಾಲ್ ಆಟಗಾರನಾಗಿದ್ದ ಶ್ರೀನಿವಾಸ ಪ್ರಸಾದ್‌, ಶಾರದಾ ವಿಲಾಸ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದವರು. ಯೌವನದಲ್ಲೇ ಮುಂಚೂಣಿ ನಾಯಕನಾಗಿದ್ದು ಫುಟ್ಬಾಲ್ ಟೀಮ್​ ಜತೆಗೆ ಏರಿಯಾ ಹುಡುಗರ ಕ್ಯಾಪ್ಟನ್ ಆಗಿದ್ದರು. ಬಲ್ಲಾಳ್ ಸರ್ಕಲ್‌ ನಲ್ಲಿ ಪಡ್ಡೆ ಹುಡುಗರ ಜತೆ ಇರುತ್ತಿದ್ದ ಪ್ರಸಾದ್ ಆಜಾನುಬಾಹುವಾಗಿದ್ದರಲ್ಲದೆ, ಹುಡುಗಿಯರ ಗಮನ ಸೆಳೆಯುತ್ತಿದ್ದರು.

ಅವರ ಪೂರ್ತಿ ಹೆಸರು ವೆಂಕಟಯ್ಯ ಶ್ರೀನಿವಾಸ ಪ್ರಸಾದ್. ಮೈಸೂರಿನ ಅಶೋಕಪುರಂನಲ್ಲಿ 1947ರ ಆಗಸ್ಟ್‌ 6ರಂದು ಜನಿಸಿದ ಇವರ ತಂದೆ ವೆಂಕಟಯ್ಯ, ಪತ್ನಿ ಭಾಗ್ಯಲಕ್ಷ್ಮಿ. ಮೂವರು ಮಕ್ಕಳಿದ್ದಾರೆ. ಮಗಳು ಪ್ರತಿಮಾ ಪ್ರಸಾದ್ ಐ.ಆರ್​.ಎಸ್. ಅಧಿಕಾರಿ, ಪೂರ್ಣಿಮಾ ಪ್ರಸಾದ್ ಮಾಜಿ ಶಾಸಕ ಹರ್ಷವರ್ಧನ್ ಪತ್ನಿ ಹಾಗೂ ಪೂನಂ ಪ್ರಸಾದ್ ಬಿಜೆಪಿ ಮುಖಂಡ ಡಾ.ಮೋಹನ್ ಪತ್ನಿ.

ಅವರು ಜನಪ್ರತಿನಿಧಿಯಾಗಿದ್ದ ಅವಧಿಗಳು:

ಬಿಜೆಪಿ: 2019- 2024
ಕಾಂಗ್ರೆಸ್​: 1983-1996, 1997-1998, 2006-2017
ಜೆಡಿಎಸ್​: 2004-2006
ಜೆಡಿಯು: 1999-2004
ಸಂಯುಕ್ತ ಪಾರ್ಟಿ: 1998-1999
ಪಕ್ಷೇತರ: 1996-1997
ಕಾಂಗ್ರೆಸ್: 1979-1983
ಜನತಾ ಪಾರ್ಟಿ: 1977-1979

ದಲಿತರ ದನಿ

ಶ್ರೀನಿವಾಸ ಪ್ರಸಾದ್ ರಾಜ್ಯದ ಅಗ್ರಮಾನ್ಯ ದಲಿತ ನಾಯಕರಾಗಿದ್ದರಲ್ಲದೆ, ಎಲ್ಲಿಯೇ ದಲಿತರ ಮೇಲೆ ದೌರ್ಜನ್ಯ ನಡೆದರೂ ಮೊದಲು ಖಂಡಿಸುತ್ತಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆಗಳ ಪ್ರಖರ ವಾಗ್ಮಿಯಾಗಿದ್ದು, ವಿದ್ಯಾರ್ಥಿಗಳಲ್ಲಿ ದಲಿತ ಪ್ರಜ್ಞೆ ಮೂಡಿಸಿದ ನಾಯಕ. ಸಂವಿಧಾನ ಬದಲಾವಣೆ ಸಂಬಂಧ ಅನಂತಕುಮಾರ್ ಹೆಗಡೆ ಮಾತನಾಡಿದ್ದ ಬಗ್ಗೆ ವೇದಿಕೆ ಮೇಲೆಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಪ್ರಶ್ನಿಸಿದ್ದರು.

Srinivasa Prasad

ಸ್ವಾಭಿಮಾನಿ ಶ್ರೀನಿವಾಸ ಪ್ರಸಾದ್

2013ರಿಂದ 2018ರ ಅವಧಿಗೆ ನಂಜನಗೂಡು ಶಾಸಕರಾಗಿದ್ದ ಪ್ರಸಾದ್ ಅವರನ್ನು 2017ರ ಸಂಪುಟ ಪುನಾರಚನೆ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಕೈಬಿಟ್ಟಿದ್ದರು. ಇದರಿಂದ ಸಿಟ್ಟಿಗೆದ್ದ ಶ್ರೀನಿವಾಸ ಪ್ರಸಾದ್ ಸಿಎಂ ಸಿದ್ದರಾಮಯ್ಯ ವಿರುದ್ಧ ಸಮರ ಸಾರಿದ್ದರು. ಸ್ವಾಭಿಮಾನಿ ಸಮಾವೇಶ ಹೆಸರಿನಲ್ಲಿ ಬೃಹತ್ ಕಾರ್ಯಕ್ರಮ ಸಂಘಟಿಸಿ ನಂಜನಗೂಡು, ವರುಣ, ತಿ.ನರಸೀಪುರ, ಚಾಮರಾಜನಗರದಲ್ಲಿ ಸಮಾವೇಶ ಮಾಡಿದ್ದರು.

ಬೂಸಾ ಚಳವಳಿಯಲ್ಲಿ ಮೂಡಿದ ಬಂಡಾಯ ನಾಯಕ

1974ನೇ ಇಸವಿಯಲ್ಲಿ ಆಗ ಸಚಿವರಾಗಿದ್ದ ಬಿ.ಬಸವಲಿಂಗಪ್ಪ ಹೇಳಿಕೆಯಿಂದ ಬೂಸಾ ಚಳವಳಿಯೇ ನಡೆದು ಹೋಯ್ತು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಬಿ.ಬಸವಲಿಂಗಪ್ಪ ರಾಜೀನಾಮೆ ಪಡೆದಿದ್ದರು. ನೇರ, ನಿಷ್ಠುರ ನಡೆ-ನುಡಿಗೆ, ದಕ್ಷ ಆಡಳಿತಕ್ಕೆ ಹೆಸರಾಗಿದ್ದ ಸ್ವಾಭಿಮಾನಿ ನಾಯಕ ಬಿ.ಬಸವಲಿಂಗಪ್ಪ ಅವರಿಂದ ರಾಜೀನಾಮೆ ಪಡೆದದ್ದು ದಲಿತರನ್ನು ರೊಚ್ಚಿಗೆಬ್ಬಿಸಿತ್ತು. ಆಗ ಫುಟ್ಬಾಲ್ ಆಡಿಕೊಂಡಿದ್ದ ಅಶೋಕಪುರಂನ 26ರ ಹರೆಯದ ಯುವಕನ ರಕ್ತವೂ ಕುದಿಯಿತು. ಆ ಕುದಿಯ ಕಾರಣಕ್ಕೆ ರಾಜಕೀಯಕ್ಕೆ ಎಂಟ್ರಿಯಾದವರು ಶ್ರೀನಿವಾಸ ಪ್ರಸಾದ್.

ಕೃಷ್ಣರಾಜ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿದ್ದ ಯುವಕ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿ ಆ ಮೂಲಕ ಜಿಲ್ಲೆಯ ನಾಯಕ ದೇವರಾಜ ಅರಸುಗೆ ಮುಖಭಂಗ ಮಾಡಿದ್ದ. ರಾಜಕೀಯವಾಗಿ ಗಮನ ಸೆಳೆದಿದ್ದ. 1978ರ ವಿಧಾನಸಭೆ ಚುನಾವಣೆಗೆ ತಿ.ನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡರು. 1980ರಲ್ಲಿ ಚಾಮರಾಜನಗರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿ, 33 ಹರೆಯದಲ್ಲೇ ಸಂಸತ್ ಪ್ರವೇಶ ಮಾಡಿದರು. 9 ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ, 7 ಸಲ ಗೆಲುವು ಕಂಡರು.

ರಾಜಕೀಯದ ಏಳುಬೀಳು

Exit mobile version