Site icon Vistara News

Valmiki Corporation Scam: ವಾಲ್ಮೀಕಿ ನಿಗಮ ಹಗರಣದಲ್ಲಿ ಮುಂದುವರಿದ ಮಾಜಿ ಸಚಿವರ ಪಿಎಸ್‌ ವಿಚಾರಣೆ; ನಾಗೇಂದ್ರಗೆ ಢವಢವ!

Valmiki Corporation Scam

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ (Valmiki Corporation Scam) ವಿಚಾರಣೆಗೆ ಸಂಬಂಧಿಸಿ ಮಾಜಿ ಸಚಿವ ನಾಗೇಂದ್ರಗೆ (Ex minister Nagendra) ಢವಢವ ಶುರುವಾಗಿದೆ. ನಾಗೇಂದ್ರ ಆಪ್ತ ಕಾರ್ಯದರ್ಶಿಯನ್ನು ಎಸ್ಐಟಿ ತನಿಖೆ (SIT Enquiry) ನಡೆಸುತ್ತಿದ್ದು, ಮುಂದಿನ ಹಂತದಲ್ಲಿ ನಾಗೇಂದ್ರ ಕೂಡ ತನಿಖೆಗೆ ಹಾಜರಾಗಬೇಕಿದೆ.

ಈಗಾಗಲೇ ವಾಲ್ಮೀಕಿ ನಿಗಮದ (Valmiki Development Corporation) ಎಂಡಿ ಪದ್ಮನಾಭ ಮತ್ತು ಅಕೌಟೆಂಟ್ ಪರಶುರಾಮ್ ಬಂಧನವಾಗಿದ್ದಾರೆ.‌ ಜೊತೆಗೆ ಪ್ರಕರಣದ ಕಿಂಗ್ ಪಿನ್ ಸತ್ಯನಾರಾಯಣ ವರ್ಮ, ಸಾಯಿ ತೇಜ ಕೂಡ ಆರೆಸ್ಟ್ ಆಗಿದ್ದಾರೆ. ಅಕ್ರಮವಾಗಿ ಆಂಧ್ರದ ಫಸ್ಟ್ ಬ್ಯಾಂಕ್‌ಗೆ ಹಣ ರವಾನಿಸಿದ ಎಂಡಿ ಹಾಗೂ ಸಚಿವ ನಾಗೇಂದ್ರರ ಪಿಎಸ್ ಆಗಿದ್ದ ದೇವಂದ್ರರನ್ನು ಎಸ್ಐಟಿ ವಿಚಾರಣೆ ನಡೆಸಿದೆ.

ಅಕ್ರಮವಾಗಿ ಕೋಟಿ ಕೋಟಿ ಹಣ ಪಡೆದಿರುವುದಾಗಿ ಸತ್ಯನಾರಾಯಣ ವರ್ಮ ಹೇಳಿದ್ದ. ಹೀಗಾಗಿ ಪಿಎಸ್ ದೇವೇಂದ್ರಪ್ಪಗೆ ಎಸ್ಐಟಿ ನೋಟೀಸ್ ನೀಡಿ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ, ದೇವೇಂದ್ರಪ್ಪಗೆ 4.4 ಕೋಟಿ ಹಣ ನೀಡಿರುವುದು ಬೆಳಕಿಗೆ ಬಂದಿದೆ. ಈ ಹಣದಲ್ಲಿ 4 ಕೋಟಿ ರಿಕವರಿಯಾಗಿದ್ದು, ಇನ್ನೂ ಸುಮಾರು 40 ಲಕ್ಷ ಹಣ ಮರಳಿ ಸಿಗಬೇಕಿದೆ.

ಆದರೆ ಪಿಎಸ್ ದೇವೇಂದ್ರಪ್ಪ ಸೇರಿದಂತೆ ಬಂಧಿತ ಆರೋಪಿಗಳು ಮಾಜಿ ಸಚಿವ ನಾಗೇಂದ್ರ ಹೆಸರನ್ನು ಎಲ್ಲೂ ಬಾಯಿ ಬಿಟ್ಟಿಲ್ಲ. ನಿನ್ನೆ ಸಿಐಡಿ ದೇವೇಂದ್ರಪ್ಪ ವಿಚಾರಣೆ ನಡೆಸಿದೆ. ಮತ್ತೆ ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ. ಇಂದು ನಿಗಮದ ಅಧ್ಯಕ್ಷ ಗದ್ದಲ್ ಪಿಎಸ್ ಹಂಪಣ್ಣಗೂ‌‌‌ ಎಸ್ಐಟಿ ಬುಲಾವ್‌ ಮಾಡಿದೆ. ನೋಟೀಸ್ ಹಿನ್ನಲೆ ಇಂದು ಹಂಪಣ್ಣ ವಿಚಾರಣೆಗೆ ಹಾಜರಾಗಬೇಕಿದೆ.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಳಿಕ ನಾಗೇಂದ್ರ ಎಲ್ಲೂ ಕಾಣಿಸಿಕೊಂಡಿಲ್ಲ. ಶಾಸಕರ ಸಭೆಯಲ್ಲಾಗಲೀ, ಕ್ಷೇತ್ರದ ಕಾರ್ಯಕ್ರಮಗಳಲ್ಲಾಗಲೀ ಭಾಗವಹಿಸಿಲ್ಲ. ನಾಗೇಂದ್ರ ನಡೆ ನಿಗೂಢವಾಗಿದ್ದು, ಈ ಪ್ರಕರಣದಿಂದ ಪಾರಾಗುವ ಕಾನೂನು ಸಾಧ್ಯತೆಗಳನ್ನು ವಕೀಲರ ಜತೆ ಸಮಾಲೋಚಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

28 ಕೋಟಿ ಹಣ ರಿಕವರಿ

ವಾಲ್ಮೀಕಿ ನಿಗಮ ಹಗರಣದಲ್ಲಿ ಎಸ್‌ಐಟಿ ಅಧಿಕಾರಿಗಳು ರಿಕವರಿ ಮಾಡಿರುವ ಹಣ ಕೋರ್ಟ್ ಅಕೌಂಟ್‌ಗೆ ಜಮೆ ಮಾಡಲಾಗುತ್ತಿದೆ. ದೊಡ್ಡ ಮೊತ್ತದ ಹಣವನ್ನು ಸಿಐಡಿ ಕಚೇರಿಯಲ್ಲಿಡುವುದು ಕಷ್ಟ. ಭದ್ರತಾ ದೃಷ್ಟಿಯಿಂದ ಅಧಿಕಾರಿಗಳು ಕೋರ್ಟ್ ಅನುಮತಿ ಪಡೆದು ಕೋರ್ಟ್ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು ಹಣ ಜಮಾ ಮಾಡಿದ್ದಾರೆ. ನೆನ್ನೆಯಿಂದ ದಿನಕ್ಕೆ ನಾಲ್ಕು ಕೋಟಿಯಂತೆ ಹಣ ಜಮೆ ಮಾಡಲಾಗುತ್ತಿದೆ. ಇದುವರೆಗೂ ಸುಮಾರು 28 ಕೋಟಿ ಹಣ ರಿಕವರಿ ಆಗಿದೆ.

28 ಕೋಟಿ ಹಣವಮ್ನ ಒಟ್ಟಿಗೆ ಜಮೆ ಮಾಡೋದು ಕಷ್ಟ. ಹೀಗಾಗಿ ಅಷ್ಟು ಹಣ ಎಣಿಕೆ ಮಾಡಲು ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ದಿನಕ್ಕೆ ನಾಲ್ಕು ಕೋಟಿ ಹಣವನ್ನು ಮಾತ್ರ ಬ್ಯಾಂಕ್‌ಗೆ ಜಮೆ ಮಾಡಲಾಗುತ್ತಿದೆ.

ಮಾರ್ಚ್ 30ರಂದು ನವೀನ್ ಜಿ ಮಾಲೀಕತ್ವದ ಜಿ.ಎನ್ ಇಂಡಸ್ಟ್ರೀಸ್ ಕಂಪನಿ ಹೆಸರಲ್ಲಿ 4.42 ಕೋಟಿ ವರ್ಗಾವಣೆ ಆಗಿತ್ತು. ವಿಜಯ್ ಕೃಷ್ಣ ಆರ್ ಮಾಲೀಕತ್ವದ ರಾಮ್ ಎಂಟರ್ ಪ್ರೈಸಸ್ ಖಾತೆಗೆ 5.7 ಕೋಟಿ ಹಣ ವರ್ಗಾವಣೆ. ರಾಘವೇಂದ್ರ ಅವರ ನೋವೆಲ್ ಸೆಕ್ಯೂರಿಟಿ ಸರ್ವಿಸಸ್ ಪ್ರೈ.ಲಿ.ಕಂಪನಿ ಹೆಸರಿನ ಖಾತೆಗೆ 4 ಕೋಟಿ ಹಣ ವರ್ಗಾವಣೆ.
ರೇಖಾ ಎಂಬುವವರ ಮಾಲೀಕತ್ವದ ಸುಜಲ್ ಎಂಟರ್ ಪ್ರೈಸಸ್ ಹೆಸರಿನ ಖಾತೆಗೆ 5.63 ಕೋಟಿ ಹಣ ವರ್ಗಾವಣೆ.

ಎಲ್ಲಾ ಕಂಪನಿ ಹೆಸರಲ್ಲಿ ನಕಲಿ ಖಾತೆ ತೆಗೆದು ಹಣ ವರ್ಗಾವಣೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಖಾತೆ ಓಪನ್ ಮಾಡಿದ್ದ ಆಸಾಮಿಗಳು, ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಖಾತೆಗಳಿಗೆ ಹಣ ಜಮೆ ಮಾಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Valmiki Corporation Scam: ಬಿ ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಮೀರ್‌ ಅಹ್ಮದ್ ನೇಮಕ

Exit mobile version