Site icon Vistara News

Viral Video: ಮನೆಗೆಲಸದವನಿಗೆ ಬೂಟಿನಿಂದ ಹಲ್ಲೆ ನಡೆಸಿದ ಗಾಯಕ ಅಲಿ ಖಾನ್;‌ ಇಲ್ಲಿದೆ ವಿಡಿಯೊ

rahat fateh ali khan

Video of singer Rahat Fateh Ali Khan thrashing man over bottle goes viral

ಇಸ್ಲಾಮಾಬಾದ್:‌ ಪಾಕಿಸ್ತಾನದ ಖ್ಯಾತ ಗಾಯಕ ರಾಹತ್‌ ಫತೇಹ್‌ ಅಲಿ ಖಾನ್‌ (Rahat Fateh Ali Khan) ಅವರು ಹಾಡಿದ ಹಾಡುಗಳನ್ನು ಕೇಳಿದರೆ ಎಂತಹವರೂ ತಲೆದೂಗುತ್ತಾರೆ. ಅವರ ಖವ್ವಾಲಿ ಹಾಡುಗಳನ್ನು ಕೇಳಿದರೆ ಮನಸ್ಸು ಉಲ್ಲಸಿತಗೊಳ್ಳುತ್ತದೆ. ಅವರ ಧ್ವನಿಯಲ್ಲಿ ಅಂತಹ ಮಾಧುರ್ಯ ಅಡಗಿದೆ. ಆದರೆ, ಇದೇ ರಾಹತ್‌ ಫತೇಹ್‌ ಅಲಿ ಖಾನ್‌ ಅವರು ತಮ್ಮ ಮನೆಗೆಲಸದ ವ್ಯಕ್ತಿ ಮೇಲೆ ಬೂಟಿನಿಂದ ಹಲ್ಲೆ ಮಾಡಿದ್ದು, ಆ ವಿಡಿಯೊ (Viral Video) ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ಮನೆಯಲ್ಲಿ ಕೆಲಸ ಮಾಡುವ ವ್ಯಕ್ತಿಗೆ ರಾಹತ್‌ ಫತೇಹ್‌ ಅಲಿ ಖಾನ್‌ ಅವರು ಬೂಟಿನಿಂದ ಹಲ್ಲೆ ನಡೆಸಿದ್ದಾರೆ. “ನನ್ನ ಬಾಟಲಿ ಎಲ್ಲಿ, ಅದು ಎಲ್ಲಿ ಹೋಯಿತು” ಎಂದು ಗದರುವ, ಪದೇಪದೆ ಆ ವ್ಯಕ್ತಿಗೆ ಬೂಟಿನಿಂದ ಹೊಡೆಯುವುದು ವೈರಲ್‌ ಆಗಿರುವ ವಿಡಿಯೊದಿಂದ ಬಯಲಾಗಿದೆ. ವಿಡಿಯೊ ವೈರಲ್‌ ಆಗುತ್ತಲೇ ರಾಹತ್‌ ಫತೇಹ್‌ ಅಲಿ ಖಾನ್‌ ಅವರ ಅಭಿಮಾನಿಗಳು ಕೂಡ ಕೃತ್ಯವನ್ನು ಖಂಡಿಸಿದ್ದಾರೆ. ಒಬ್ಬ ಸೆಲೆಬ್ರಿಟಿ ಗಾಯಕರಾಗಿ ಹೀಗೆ ವರ್ತಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರಿಂದ ತೀವ್ರ ಆಕ್ರೋಶ

“ಖ್ಯಾತಿ, ಯಶಸ್ಸಿನ ಮದದಿಂದ ರಾಹತ್‌ ಫತೇಹ್‌ ಅಲಿ ಖಾನ್‌ ಅವರು ಇಂತಹ ದುರ್ವರ್ತನೆ ತೋರಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ಕೂಡ ಕಮೆಂಟ್‌ ಮಾಡಿ, “ಇಂತಹ ವ್ಯಕ್ತಿ ಮನೆಯಲ್ಲಿ ಕೆಲಸ ಮಾಡುವುದಕ್ಕಿಂತ ಕೂಲಿ ಮಾಡಿಕೊಂಡು ಬದುಕು ಸಾಗಿಸುವುದು ಉತ್ತಮ. ಅಹಂಕಾರಿ ಗಾಯಕನನ್ನು ಜೈಲಿಗೆ ಕಳುಹಿಸಿ” ಎಂದು ಆಗ್ರಹಿಸಿದ್ದಾರೆ. ಹೀಗೆ, ಸಾವಿರಾರು ಜನ ರಾಹತ್‌ ಫತೇಹ್‌ ಅಲಿ ಖಾನ್‌ ವಿರುದ್ಧ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Tamannaah Bhatia : ಪಾಕ್​ ಕ್ರಿಕೆಟಿಗ ರಜಾಕ್ ಜತೆ ಚಿನ್ನದ ಮಳಿಗೆಗೆ ಹೋದ ಕಹಿ ಘಟನೆ ನೆನೆದ ತಮನ್ನಾ

ವೈರಲ್‌ ಆಗುತ್ತಲೇ ಸ್ಪಷ್ಟನೆ ನೀಡಿದ ಖಾನ್‌

ಮನೆಗೆಲಸದವನ ಮೇಲೆ ಬೂಟಿನಿಂದ ಹಲ್ಲೆ ಮಾಡಿದ ವಿಡಿಯೊ ವೈರಲ್‌ ಆಗುತ್ತಲೇ ವಿಡಿಯೊ ಮೂಲಕ ರಾಹತ್‌ ಫತೇಹ್‌ ಅಲಿ ಖಾನ್‌ ಸ್ಪಷ್ಟನೆ ನೀಡಿದ್ದಾರೆ. “ಇದು ಉಸ್ತಾದ್‌ ಹಾಗೂ ಶಗಿರ್ದ್‌ ಅವರ ವೈಯಕ್ತಿಕ ವಿಚಾರವಾಗಿದೆ. ಏಟು ತಿಂದಾತ ನನ್ನ ಮಗ ಇದ್ದಂತೆ. ಇದು ಗುರು ಹಾಗೂ ಶಿಷ್ಯನ ಸಂಬಂಧ ಇದ್ದಂತೆ. ಶಿಷ್ಯನಾದವನು ಒಳ್ಳೆಯ ಕೆಲಸ ಮಾಡಿದರೆ, ನಾನು ಆತನಿಗೆ ತುಂಬ ಪ್ರೀತಿ ತೋರುತ್ತೇನೆ. ಹಾಗೆಯೇ, ತಪ್ಪು ಮಾಡಿದಾಗ ಶಿಕ್ಷೆಯನ್ನೂ ನೀಡುತ್ತೇನೆ” ಎಂದು ಸಂಬಂಧಿಕರ ಜತೆ ನಿಂತು ಸ್ಪಷ್ಟನೆ ನೀಡಿದ ವಿಡಿಯೊ ಬಿಡುಗಡೆ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version