Site icon Vistara News

Karnataka Weather : ಕರಾವಳಿ ಸೇರಿದಂತೆ ಒಳನಾಡಿನಲ್ಲಿ ಬಿಸಿ ಗಾಳಿ ಎಚ್ಚರಿಕೆ

Karnataka Weather Forecast

ಬೆಂಗಳೂರು: ಶುಕ್ರವಾರ ರಾಜ್ಯದ ವಿವಿಧೆಡೆ ಮಳೆಯಾಗುವ (Rain News) ಸಂಭವವಿದೆ. ಮುಖ್ಯವಾಗಿ ಚಾಮರಾಜನಗರ, ಕೊಡಗು ಮತ್ತು ರಾಮನಗರ ಜಿಲ್ಲೆಗಳಲ್ಲಿ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಭಾಗಗಳಲ್ಲಿ ಒಣ ಹವೆ (Dry Weather) ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ಏಪ್ರಿಲ್‌ 6ರವರೆಗೆ ಬಳ್ಳಾರಿ, ಬಾಗಲಕೋಟೆ, ಕಲಬುರಗಿ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆ ಇದೆ. ರಾಯಚೂರು, ಬಾಗಲಕೋಟೆ, ಕೊಪ್ಪಳ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ರಾತ್ರಿ ಸಮಯ ಬೆಚ್ಚಗಿನ ವಾತಾವರಣ ಇರಲಿದೆ. ಮುಂದಿನ 3 ದಿನಗಳಲ್ಲಿ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ

ಪ್ರತ್ಯೇಕ ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಕ್ರಮೇಣ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಹಾಸನ, ಮಂಡ್ಯ ಮತ್ತು ಮೈಸೂರಿನಲ್ಲಿ ತಾಪಮಾನ ಏರಿಕೆ ಆಗಲಿದೆ.

ಮುಂದಿನ 5 ದಿನಗಳು ಬೆಳಗಾವಿ, ಧಾರವಾಡ, ವಿಜಯಪುರ, ರಾಯಚೂರು ಮತ್ತು ಹಾವೇರಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಕ್ರಮೇಣ 2 ರಿಂದ 4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ.

ಯೆಲ್ಲೋ ಅಲರ್ಟ್

ಬಾಗಲಕೋಟೆ, ಗದಗ, ಕಲಬುರಗಿ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಿಗೆ ಐಎಂಡಿ ಯೆಲ್ಲೋ ಅಲರ್ಟ್ ಘೋಷಿಸಿದೆ.

ಇದನ್ನೂ ಓದಿ: Havana syndrome: ಏನಿದು ಹವಾನಾ ಸಿಂಡ್ರೋಮ್‌? ನಿಮಗೆ ಎಂದಾದರೂ ಈ ವಿಚಿತ್ರ ಅನುಭವ ಆಗಿದೆಯಾ?

ಬೇಸಿಗೆ ಫ್ಯಾಷನ್‌ಗೆ ಲಗ್ಗೆ ಇಟ್ಟ ಕಿಡ್ಸ್ ಫಂಕಿ ಫ್ಯಾಷನ್‌ವೇರ್ಸ್

ಬೇಸಿಗೆ ಫ್ಯಾಷನ್‌ನಲ್ಲಿ (Summer kids Fashion) ಚಿಣ್ಣರ ವೈವಿಧ್ಯಮಯ ಫಂಕಿ ಫ್ಯಾಷನ್‌ವೇರ್ಸ್ ಲಗ್ಗೆ ಇಟ್ಟಿವೆ. ಮಕ್ಕಳು ಧರಿಸಿದಾಗ ನೋಡಲು ಆಕರ್ಷಕವಾಗಿ ಕಾಣುವ ಈ ಡ್ರೆಸ್‌ಗಳು ಲೆಕ್ಕವಿಲ್ಲದಷ್ಟು ಬಗೆಯಲ್ಲಿ, ವಿನ್ಯಾಸದಲ್ಲಿ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. “ಮಕ್ಕಳ ಕಿಡ್ಸ್‌ವೇರ್‌ ಫ್ಯಾಷನ್‌ನಲ್ಲಿ ಇದೀಗ ಸಮ್ಮರ್‌ ಕಾನ್ಸೆಪ್ಟ್‌ಗೆ ಮ್ಯಾಚ್‌ ಆಗುವಂತಹ ಬಗೆಬಗೆಯ ಡ್ರೆಸ್‌ಗಳು ಹಾಗೂ ಔಟ್‌ಫಿಟ್‌ಗಳು ಎಂಟ್ರಿ ನೀಡಿವೆ. ಇವು ಮಕ್ಕಳು ಧರಿಸಿದಾಗ ಮುದ್ದು ಮುದ್ದಾಗಿ ಕಾಣಿಸುವುದರೊಂದಿಗೆ ಫಂಕಿ ಲುಕ್‌ ನೀಡುತ್ತವೆ. ಗಂಡು ಹಾಗೂ ಹೆಣ್ಣು ಮಕ್ಕಳು ಇಬ್ಬರಿಗೂ ಈ ಶೈಲಿಯ ಬೇಸಿಗೆ ಡ್ರೆಸ್‌ಗಳು ಬಂದಿದ್ದು, ಅದರಲ್ಲೂ ಹಾಲಿಡೇ ಲುಕ್‌ ನೀಡುವಂತಹ ಮಿನಿ ಡ್ರೆಸ್‌ಗಳು ಹೆಚ್ಚು ಬೇಡಿಕೆ ಸೃಷ್ಠಿಸಿಕೊಂಡಿವೆ” ಎನ್ನುತ್ತಾರೆ ಮಾರಾಟಗಾರರು. ಅವರ ಪ್ರಕಾರ, ಕ್ಯೂಟ್ ಲುಕ್‌ ನೀಡುವಂತಹ ಉಡುಪುಗಳು ಹೆಚ್ಚು ಮಾರಾಟವಾಗುತ್ತಿವೆ ಎನ್ನುತ್ತಾರೆ.

ಟ್ರೆಂಡ್‌ನಲ್ಲಿರುವ ಕಿಡ್ಸ್‌ವೇರ್‌

ಗಂಡು ಮಕ್ಕಳ ಡ್ರೆಸ್‌ಗಳ ವಿಷಯಕ್ಕೆ ಬಂದರೇ, ಮಿನಿ ಬರ್ಮಡಾ, ಚಡ್ಡಿ, ಶಾರ್ಟ್ಸ್‌, ತ್ರಿ ಫೋರ್ತ್ ಪ್ಯಾಂಟ್‌ ಸ್ಲಿವ್‌ಲೆಸ್‌ ಟೀ ಶರ್ಟ್, ಬನಿಯನ್‌ ಶೈಲಿಯ ಟೀ ಶರ್ಟ್, ರೈನ್ಬೋ ಕಲರ್ಸ್ನ ಟೀ ಶಟ್ರ್ಸ್, ಸ್ಟ್ರೈಪ್ಸ್ ಶರ್ಟ್, ಚೆಕ್ಸ್ –ಗಿಂಗ್ನಂ ಪ್ರಿಂಟೆಡ್‌ ಶರ್ಟ್, ಸಿಕ್ಸ್ ಪಾಕೆಟ್‌ ಮಿನಿ ಕಾರ್ಗೋ ಪ್ಯಾಂಟ್ಸ್ ಸೇರಿದಂತೆ ನಾನಾ ಬಗೆಯವು ಕಾರ್ಟೂನ್‌ ಪ್ರಿಂಟ್‌ ಆವೆಂಜರ್‌ ಪ್ರಿಂಟ್‌ನವು ಆಗಮಿಸಿವೆ. ಹೆಣ್ಣು ಮಕ್ಕಳ ಫ್ಯಾಷನ್‌ವೇರ್ಸ್‌ನಲ್ಲಂತೂ ಲೆಕ್ಕವಿಲ್ಲದಷ್ಟು ಆಪ್ಷನ್‌ಗಳಿವೆ. ಒಂದಕ್ಕಿಂತ ಒಂದು ಹೊಸ ಡಿಸೈನ್‌ನವು ಮಕ್ಕಳನ್ನು ಆಕರ್ಷಿಸುತ್ತಿವೆ. ಸ್ಲಿವ್‌ಲೆಸ್‌ ಟಾಪ್‌ ಹಾಗೂ ಡಿಸ್ಕೋ ಸ್ಕರ್ಟ್ ಹಾಗೂ ಬರ್ಮಡಾಗಳಿಂದಿಡಿದು ಆಫ್‌ ಶೋಲ್ಡರ್‌, ಕೋಲ್ಡ್‌ ಶೋಲ್ಡರ್‌, ಸಿಂಗಲ್‌ ಶೋಲ್ಡರ್‌, ಟ್ಯಾಂಕ್‌ ಟಾಪ್ಸ್, ಕ್ರಾಪ್‌ ಟಾಪ್‌, ಮಿಡಿ, ಮಿನಿ, ಪಾಕೆಟ್‌ ಸ್ಕಟ್ರ್ಸ್, ಬೀಡೆಡ್‌ ಸ್ಟ್ರಾಪ್‌ ಫ್ರಾಕ್ಸ್, ಸ್ಪೆಗೆಟಿ ಮಲ್ಟಿ ಕಲರ್‌ ಫ್ಲೋರಲ್‌ ಮಿಡಿ ಸ್ಕಟ್ರ್ಸ್ ಸೇರಿದಂತೆ ಊಹೆಗೂ ಮೀರಿದ ಡಿಸೈನ್‌ನವು ಈ ಬೇಸಿಗೆ ಫ್ಯಾಷನ್‌ನಲ್ಲಿ ಎಂಟ್ರಿ ನೀಡಿವೆ.

ಯೂನಿಸೆಕ್ಸ್ ಫ್ಯಾಷನ್‌ವೆರ್ಸ್

ಇನ್ನು, ಗಂಡು ಹಾಗೂ ಹೆಣ್ಣು ಮಕ್ಕಳು ಇಬ್ಬರೂ ಧರಿಸಬಹುದಾದ ಒಂದೇ ಬಗೆಯ ಯೂನಿಸೆಕ್ಸ್ ಡಿಸೈನರ್‌ವೇರ್‌ಗಳು ಕೂಡ ಹೆಚ್ಚು ಪ್ರಚಲಿದಲ್ಲಿವೆ. ಸಿಂಪಲ್ ಟೀ ಶರ್ಟ್, ಪ್ರಿಂಟೆಡ್‌ ಕ್ರಾಫ್‌ ಟಾಪ್ಸ್ ಹಾಗೂ ಮಿನಿ ಪ್ಯಾಂಟ್‌ಗಳು ಡೈಲಿ ಫ್ಯಾಷನ್‌ ಲಿಸ್ಟ್‌ನಲ್ಲಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಬೇಸಿಗೆಯಲ್ಲಿ ಕಿಡ್ಸ್ ಫ್ಯಾಷನ್‌ವೇರ್ಸ್ ಖರೀದಿಸುವ ಮುನ್ನ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version