Site icon Vistara News

Karnataka Weather : ರಾಜ್ಯದಲ್ಲಿ ಮುಂದುವರಿಯಲಿದೆ ಶಾಖದ ಹೊಡೆತ; ಕೋಲಾರದಲ್ಲಿ ಮೊದಲ ಮಳೆಯ ಸಿಂಚನ

Karnataka Weather Forecast

ಬೆಂಗಳೂರು: ರಾಜ್ಯದಲ್ಲಿ ಒಣ ಹವೆ (Dry Weather) ಮುಂದುವರಿಯಲಿದ್ದು, ತಾಪಮಾನ ಏರಿಕೆ ಆಗಲಿದೆ. ಶಾಖದ ಹೊಡೆತಕ್ಕೆ ಈಗಾಗಲೇ ಜನರು ತತ್ತರಿಸಿ ಹೋಗಿದ್ದಾರೆ. ಹವಾಮಾನ ಇಲಾಖೆಯು ವಿವಿಧ ಜಿಲ್ಲೆಗಳಿಗೆ ರೆಡ್‌, ಆರೆಂಜ್‌, ಯೆಲ್ಲೊ ಅಲರ್ಟ್‌ ನೀಡಿದೆ. ಇದರೊಟ್ಟಿಗೆ ಆರೋಗ್ಯ ಕಾಳಜಿ ವಹಿಸುವಂತೆ ಜನರಿಗೆ ಸಲಹೆ ಸೂಚನೆಗಳನ್ನು ನೀಡಲಾಗಿದೆ.

ಬಿಸಿಗಾಳಿ ಎಚ್ಚರಿಕೆ

ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ತೀವ್ರ ಬಿಸಿಗಾಳಿ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಬಳ್ಳಾರಿ, ಕಲಬುರಗಿ, ವಿಜಯಪುರ, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶಾಖದ ಅಲೆಯ ವಾತಾವರಣವು ಹೆಚ್ಚಾಗಿರುತ್ತದೆ. ಉತ್ತರ ಒಳನಾಡು ಭಾಗದಲ್ಲಿ ರಾತ್ರಿ ಹೊತ್ತು ಬೆಚ್ಚಗೆ ಇದ್ದರೆ, ಕರಾವಳಿಯ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಗಾಳಿ ಬೀಸಲಿದೆ.

ಇದನ್ನೂ ಓದಿ: Summer Tips: ಬಿಸಿಲಿನ ಆಘಾತದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ…

ರೆಡ್ ಮತ್ತು ಆರೆಂಜ್‌, ಯೆಲ್ಲೋ ಅಲರ್ಟ್ ಇರುವ ಪ್ರದೇಶಗಳಿವು

ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಹೀಗಾಗಿ ಈ ಸಮಯದಲ್ಲಿ ಎಲ್ಲ ವಯೋಮಾನದವರಲ್ಲೂ ಅನಾರೋಗ್ಯ ಸಮಸ್ಯೆ ಕಾಡಬಹುದು. ಶಾಖದ ಹೊಡೆತವನ್ನು ತಪ್ಪಿಸಲು ಜನರು ಕಾಳಜಿ ವಹಿಸುವುದು ಅಗತ್ಯವಿದೆ.

ಕಲಬುರಗಿ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು ಮತ್ತು ಯಾದಗಿರಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಹೀಗಾಗಿ ಈ ಪ್ರದೇಶದ ಜನರು ದೀರ್ಘಾವಧಿಯವರೆಗೆ ಸೂರ್ಯನಿಗೆ ಒಡ್ಡಿಕೊಳ್ಳುವ ಅಥವಾ ಭಾರವಾದ ಕೆಲಸವನ್ನು ಮಾಡಬಾರದು.

ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರಿಗೆ ಹಳದಿ ಎಚ್ಚರಿಕೆ ನೀಡಲಾಗಿದೆ. ಮಧ್ಯಮ ತಾಪಮಾನ ಮತ್ತು ಶಾಖವನ್ನು ಸಾಮಾನ್ಯ ಜನರು ಸಹಿಸಿಕೊಳ್ಳಬಹುದು. ಆದರೆ ಶಿಶುಗಳು, ವೃದ್ಧರು, ದೀರ್ಘಕಾಲದ ಕಾಯಿಲೆ ಇರುವವರು ಆರೋಗ್ಯ ಕಾಳಜಿ ವಹಿಸುವುದು ಸೂಕ್ತ.

ಬೆಂಗಳೂರಲ್ಲಿ ತಾಪಮಾನ ಹೆಚ್ಚಳ

ಬೆಂಗಳೂರು ನಗರದಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 39 ಮತ್ತು 24 ಡಿ.ಸೆ ಇರಲಿದೆ. ತಾಪಮಾನ ಏರಿಕೆಯು ಜನರನ್ನು ಕಂಗಾಲು ಮಾಡಿದೆ. ಇದೇ ವಾತಾವರಣವು ಈ ಪೂರ್ತಿ ಮುಂದುವರಿಯಲಿದೆ.

ಕೋಲಾರದಲ್ಲಿ ಮಳೆಯ ಸಿಂಚನ

ಕೋಲಾರ ಜಿಲ್ಲೆಯಲ್ಲಿ ವರ್ಷದ ಮೊದಲ ಮಳೆಯ ಸಿಂಚನವಾಗಿದೆ. ಗುರುವಾರ ಸತತ ಒಂದು ಗಂಟೆಯಿಂದ ಮಳೆ ಸುರಿಯುತ್ತಿದೆ. ಮೂರ್ನಾಲ್ಕು ತಿಂಗಳಿಂದ ಬೇಸಿಗೆ ಬಿಸಿಯಿಂದ ಬಸವಳಿದ ಜನರಿಗೆ ಮಳೆಯು ತಂಪೆರೆದಿದೆ. ಭರಣಿ ನಕ್ಷತ್ರದ ಮೊದಲ ಮಳೆ ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿ ಸುರಿಯುತ್ತಿದೆ. ಬಿಸಿಲಿನ ತಾಪ, ಬಿಸಿ ಗಾಳಿಗೆ, ಪರದಾಡುತ್ತಿದ್ದ ಜನರಿಗೆ ಮಳೆಯ ಸಿಂಚನದಿಂದ ಬಿಸಿಯಿಂದ ಮುಕ್ತರಾಗಿದ್ದಾರೆ

ಇದನ್ನೂ ಓದಿ: Viral News: ದೂರದ ಇಂಗ್ಲೆಂಡ್‌ನಲ್ಲಿಯೂ ಕೇರಳ ಕಲರವ; ನೆಟ್ಟಿಗರ ಗಮನ ಸೆಳೆದ ವಿಡಿಯೊ ಇಲ್ಲಿದೆ

ಬೆಂಕಿ ಇಲ್ಲದೆ ರಣ ಬಿಸಿಲಲ್ಲೇ ಮೊಟ್ಟೆ ಬೇಯಿಸಿ ಆಮ್ಲೇಟ್ ತಿಂದ ರಾಯಚೂರು ಮಂದಿ

ರಾಯಚೂರು: ಬಿಸಿಲಿನ ತಾಪ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ. ಬಿಸಿಲು ಈಗಲೇ ಸಹಿಸುವುದಕ್ಕೆ ಅಸಾಧ್ಯವಾಗಿದೆ. ಇದು ಜಸ್ಟ್‌ ಸ್ಯಾಂಪಲ್‌ ಇನ್ನೂ ತಾಪಮಾನ (Temperature Warning ) ಹೆಚ್ಚಾಗಲಿದೆ ಎಂಬ ಮುನ್ಸೂಚನೆ ಹವಾಮಾನ ತಜ್ಞರಿಂದ ದೊರೆತಿದೆ. ಮನೆಯಲ್ಲಿ, ಆಫೀಸ್‌ನಲ್ಲಿ ಎಸಿ ಹಾಕಿಕೊಂಡು ಕುಳಿತುಕೊಳ್ಳುವವರೂ ಕೂಡ ಈ ಬಿಸಿಲಿನ ಝಳಕ್ಕೆ ತತ್ತರಿಸಿದ್ದಾರೆ. ಉರಿಯುತ್ತಿರುವ ಸೂರ್ಯನ ಶಾಖಕ್ಕೆ (Heat wave) ಸ್ವಲ್ಪ ಹೊತ್ತು ಮೈಒಡ್ಡಿದ್ರೆ ಸಾಕು ಸುಟ್ಟು ಹೋಗುವಷ್ಟು ತೀವ್ರತೆ ಇದೆ. ಸದ್ಯ ಈ ಉರಿ ಬಿಸಿಲಿನಲ್ಲೇ ರಾಯಚೂರು ಮಂದಿ ಪ್ರಯೋಗವನ್ನು ಮಾಡಿದ್ದಾರೆ. ಬೆಂಕಿ ಇಲ್ಲದೆ ಬಿಸಿಲಲ್ಲೇ ಮೊಟ್ಟೆ ಬೇಯಿಸಿ ತಿಂದಿದ್ದಾರೆ.

ಜನರು ಈಗಾಗಲೇ ಬಿಸಿಲಿನ ಶಾಖದಿಂದ ತತ್ತರಿಸಿ ಹೋಗಿದ್ದು, ಮನೆಯಿಂದ ಹೊರಗೆ ಬರಲು ಆಗದಷ್ಟು ತಾಪಮಾನ ಹೆಚ್ಚಿದೆ. ಆದರೆ ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ಯುವಕರು ಪ್ರಯೋಗ ಮಾಡಿದ್ದಾರೆ. ಬಿಸಿಲಿನಿಂದಲೇ ಮೊಟ್ಟೆಯ ಆಮ್ಲೆಟ್ ಮಾಡಿದ್ದಾರೆ.

ಬಿಸಿಲು ಅದ್ಯಾವ ಪರಿ ಇದೆ ಎಂಬ ಕುತೂಹಲಕ್ಕಾಗಿ ಬೆಂಕಿ ಇಲ್ಲದೆ ಬಿಸಿಲಿನಲ್ಲಿ ಒಂದೂವರೆ ಗಂಟೆವರೆಗೆ ಕಬ್ಬಿಣದ ತವಾ ಇಟ್ಟಿದ್ದಾರೆ. ಅದು ಕಾದ ನಂತರ ಮೊಟ್ಟೆ ಒಡೆದು ಆಮ್ಲೆಟ್ ತಯಾರಿಸಿ ತಿಂದಿದ್ದಾರೆ. ರಾಯಚೂರು ಜಿಲ್ಲೆಯಾದ್ಯಂತ ಒಂದು ವಾರದಿಂದ ಪ್ರತಿ ದಿನ 44 ರಿಂದ 45 ಡಿಗ್ರಿ ಸೆಲ್ಸಿಯಸ್‍ ಗರಿಷ್ಠ ಉಷ್ಠಾಂಶ ದಾಖಲಾಗುತ್ತಿದೆ.

ಇದನ್ನೂ ಓದಿ: Yakshagana Artist: ವೇಷ ಕಳಚುತ್ತಿರುವಾಗಲೇ ಹೃದಯ ಸ್ತಬ್ಧ ; ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

ವಿದ್ಯುತ್‌ ಕಂಬದ ಲೈನ್‌ಗಳಲ್ಲಿ ಶಾರ್ಟ್‌ ಸರ್ಕ್ಯೂಟ್‌

ಇತ್ತ ರಾಯಚೂರಿನಲ್ಲಿ ದಿನೇದಿನೆ ಬಿಸಿಲು ಹೆಚ್ಚಳವಾಗುತ್ತಿದ್ದು, ಏರ್ ಕೂಲರ್ ಮತ್ತು ಎಸಿ ಬಳಕೆ ಅಧಿಕವಾಗಿದೆ. ರಾಯಚೂರು ನಗರದ ಗಾಂಧಿ ಚೌಕ್ ಬಳಿಯ ಖಾಸಗಿ ಆಸ್ಪತ್ರೆ ಪಕ್ಕದಲ್ಲಿ ವಿದ್ಯುತ್ ಲೋಡ್ ಹೆಚ್ಚಾಗಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಕೂದಲೆಳೆ ಅಂತರದಲ್ಲಿ ಅನಾಹುತ ತಪ್ಪಿದೆ.

ವಿದ್ಯುತ್ ಕಂಬದಲ್ಲಿದ್ದ ಲೈನ್‌ಗಳಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಸಿನಿಮಾ ಸ್ಟೈಲ್‌ನಲ್ಲಿ ಸ್ಪಾರ್ಕ್ ಉಂಟಾಗಿತ್ತು. ಕೆಲ ಹೊತ್ತು ಸ್ಪಾರ್ಕ್ ನೋಡಿದ ಜನರು ಗಾಬರಿ ಆದರು. ಸದರ್ ಬಜಾರ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version