Site icon Vistara News

Karnataka Weather : ವಾರಾಂತ್ಯದಲ್ಲಿ ಬೆಂಗಳೂರು ಸೇರಿ ಈ 10 ಜಿಲ್ಲೆಗಳಿಗೆ ತಾಪಮಾನದ ಮುನ್ಸೂಚನೆ

Stylish girls walking in a summer park

ಬೆಂಗಳೂರು: ವೀಕೆಂಡ್‌ನಲ್ಲಿ ಔಟಿಂಗ್‌ ಹೋಗಬೇಕು ಎಂದು ಪ್ಲ್ಯಾನ್‌ ಮಾಡಿಕೊಂಡಿದ್ದರೆ, ಚೇಂಜ್‌ ಮಾಡಿಕೊಳ್ಳಿ.. ಯಾಕೆಂದರೆ ಗರಿಷ್ಠ ತಾಪಮಾನ ಏರಿಕೆಯಾಗುವ (temperatures high) ಮುನ್ಸೂಚನೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ. ಈಗಾಗಲೇ ಬಿಸಿಲ ತಾಪಕ್ಕೆ ಜನ-ಸಾಮಾನ್ಯರು ಕಂಗಲಾಗಿದ್ದಾರೆ.

ಮುಂದಿನ 48 ಗಂಟೆಯಲ್ಲಿ ರಾಜ್ಯದಲ್ಲಿ ಒಣ ಹವೆ (Dry Weather) ಮುಂದುವರಿಯಲಿದೆ. ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಹಲವು ಭಾಗಗಳಲ್ಲಿ ಗರಿಷ್ಠ ಉಷ್ಣಾಂಶ ಹೆಚ್ಚಾಗಲಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ ಹಾಗೂ ದಕ್ಷಿಣ ಒಳನಾಡಿ ಬೆಂಗಳೂರು, ಹಾಸನ, ಕೋಲಾರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆಯಿದೆ.

ಬೆಂಗಳೂರಿನ ಕೆಲವೆಡೆ ಮೋಡ ಕವಿದ ವಾತಾವರಣ

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾರಾಂತ್ಯದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದರೂ, ಧಗೆ ವಾತಾವರಣ ಹೆಚ್ಚಾಗಿ ಇರಲಿದೆ. ಗರಿಷ್ಠ ಉಷ್ಣಾಂಶ 35 ಇದ್ದರೆ ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕೆಲವೊಮ್ಮೆ ಬಿಸಿ ಗಾಳಿಯು ಬೀಸಲಿದೆ.

ಬೇಸಿಗೆಯಲ್ಲಿ ಟ್ರೆಂಡಿಯಾದ ಡಿಸೈನರ್‌ ಕಾಟನ್‌ ಬ್ಲೌಸ್‌


ಇದೀಗ ಡಿಸೈನರ್‌ ಕಾಟನ್‌ ಬ್ಲೌಸ್‌ಗಳ ಕಾಲ! ಹೌದು, ಬೇಸಿಗೆ ಕಾಲಿಡುತ್ತಿದ್ದಂತೆ, ವೈವಿಧ್ಯಮಯ ಡಿಸೈನರ್‌ ಬ್ಲೌಸ್‌ಗಳು (Summer Fashion) ಟ್ರೆಂಡಿಯಾಗಿದ್ದು, ಮಾನಿನಿಯರನ್ನು ಸವಾರಿ ಮಾಡತೊಡಗಿವೆ. ರೇಷ್ಮೆ ಫ್ಯಾಬ್ರಿಕ್‌ನಲ್ಲಿರುವ ಡಿಸೈನಿಂಗ್‌ಗೆ ಸರಿಸಾಟಿ ಎಂಬಂತೆ, ಲೆಕ್ಕವಿಲ್ಲದಷ್ಟು ಬಗೆಯವು, ಊಹೆಗೂ ಮೀರಿದ ಡಿಸೈನ್‌ನವು ಕಾಟನ್‌ ಫ್ಯಾಬ್ರಿಕ್‌ನಲ್ಲಿ ಎಂಟ್ರಿ ನೀಡಿವೆ. ಇನ್ನು, ಧರಿಸಿದಾಗ ಈ ಸೀಸನ್‌ಗೆ ಹೊಂದುತ್ತವೆ, ಮಾತ್ರವಲ್ಲದೇ, ನೋಡಲು ಆಕರ್ಷಕವಾಗಿ ಕಾಣಿಸುತ್ತವೆ.

ಬೇಸಿಗೆಗೆ ತಕ್ಕ ಡಿಸೈನರ್‌ ಕಾಟನ್‌ ಬ್ಲೌಸ್‌ಗಳು

ಬೇಸಿಗೆಯ ಬಿಸಿಲಿನಲ್ಲಿ ಸೀರೆಯೊಂದಿಗೆ ಇವನ್ನು ಧರಿಸಿದಾಗ ಇವು ನೋಡಲು ಚೆನ್ನಾಗಿ ಕಾಣಿಸುವುದು ಮಾತ್ರವಲ್ಲ, ಆರಾಮ ಎಂದೆನಿಸುತ್ತವೆ. ಯಾಕೆಂದರೇ, ಧರಿಸಿದಾಗ ಇವು ಗಾಳಿಯಾಡುತ್ತವೆ. ಸಿಂಥೆಟಿಕ್‌ ಫ್ಯಾಬ್ರಿಕ್‌ನಂತೆ ಉಸಿರುಗಟ್ಟಿಸುವುದಿಲ್ಲ! ಅಲ್ಲದೇ, ಬೆವರು ಕೂಡ ಇಳಿಯುವುದಿಲ್ಲ! ಬ್ರಿಥೆಬಲ್‌ ಕಾಟನ್‌ ಆಗಿರುವುದರಿಂದ ಕಂಫರ್ಟಬಲ್‌ ಎಂದೆನಿಸುತ್ತದೆ ಎನ್ನುತ್ತಾರೆ ಡಿಸೈನರ್‌ ಕಾಟನ್‌ ಬ್ಲೌಸ್‌ ಎಕ್ಸ್‌ಫರ್ಟ್ ಮಧು ಸದಾಶಿವ್. ಅವರ ಪ್ರಕಾರ, ಇತ್ತೀಚೆಗೆ ಮಹಿಳೆಯರು ಬೇಸಿಗೆಯಲ್ಲಿ ಡಿಸೈನ್‌ಗಳಿಗೆ ಆದ್ಯತೆ ನೀಡುವುದರೊಂದಿಗೆ ಕಂಫರ್ಟಬಲ್‌ ಬ್ಲೌಸ್‌ಗಳಿಗೂ ಮಾನ್ಯತೆ ನೀಡುತ್ತಾರೆ. ಹಾಗಾಗಿ ಕಾಟನ್‌ ಡಿಸೈನರ್‌ ಬ್ಲೌಸ್‌ಗಳ ಡಿಮ್ಯಾಂಡ್‌ ಮೊದಲಿಗಿಂತಲೂ ಹೆಚ್ಚಾಗಿದೆ ಎನ್ನುತ್ತಾರೆ.

ಗ್ರ್ಯಾಂಡ್‌ ಲುಕ್‌ ನೀಡುವ ಗ್ಲೇಝ್‌ ಕಾಟನ್‌ ಬ್ಲೌಸ್‌

ಸಿಂಥೆಟಿಕ್‌ ಡಿಸೈನರ್‌ ಬ್ಲೌಸ್‌ನಂತೆಯೇ ಕಾಣಿಸುವ ಗ್ಲೇಝ್‌ ಕಾಟನ್‌ ಫ್ಯಾಬ್ರಿಕ್‌ನ ಡಿಸೈನರ್‌ ಬ್ಲೌಸ್‌ಗಳು ಇಂದು ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಇವು ನೋಡಲು ಗ್ರ್ಯಾಂಡ್‌ ಲುಕ್‌ ನೀಡುತ್ತವೆ. ಇನ್ನು ತಂಜಾವೂರು ಪೇಂಟಿಂಗ್‌ ಮಾಡಿದಂತಹ ಹ್ಯಾಂಡ್‌ ವರ್ಕ್ ಇರುವಂತಹ ಬ್ಲೌಸ್‌ಗಳು ಹೆಚ್ಚು ಚಾಲ್ತಿಯಲ್ಲಿವೆ. ಅಲ್ಲದೇ, ಹ್ಯಾಂಡ್‌ ಎಂಬ್ರಾಯ್ಡರಿ ಇರುವಂತವು, ಮೈಕಾ-ಮಿರರ್ ಶೈಲಿಯವು ಯುವತಿಯರ ಮನ ಗೆದ್ದಿವೆ ಎಂದು ವಿವರಿಸುತ್ತಾರೆ ಮಧು.

ಕಾಂಟ್ರಾಸ್ಟ್ ಮ್ಯಾಚಿಂಗ್‌ ಬ್ಲೌಸ್‌ಗಳಿವು

“ಡಿಸೈನರ್‌ ಕಾಟನ್‌ ಬ್ಲೌಸ್‌ಗಳ ಮತ್ತೊಂದು ಹೆಗ್ಗಳಿಕೆ. ಇವನ್ನು ಕಾಂಟ್ರಾಸ್ಟ್ ಶೇಡ್‌ಗೆ ಮ್ಯಾಚ್‌ ಮಾಡಬಹುದು ಹಾಗೂ ಮಿಸ್‌ ಮ್ಯಾಚ್‌ ಮಾಡಿಯೂ ಧರಿಸಬಹುದು. ಈ ಟ್ರೆಂಡ್‌ ಇದೀಗ ಪ್ರಚಲಿತದಲ್ಲಿದೆ. ಇದು ಈ ಜನರೇಷನ್‌ ಯುವತಿಯರ ಸೀರೆ-ಬ್ಲೌಸ್‌ ಫ್ಯಾಷನ್‌ನಲ್ಲಿದೆ” ಎನ್ನುತ್ತಾರೆ ವಸ್ತ್ರ ಬೋಟಿಕ್‌ನ ಭಾಗ್ಯ ಕೊಟ್ರೇಶ್‌.

ಕಾಟನ್‌ ಡಿಸೈನರ್‌ ಬ್ಲೌಸ್‌ಗಳ ಬಗ್ಗೆ ತಿಳಿದರಬೇಕಾದ ಅಂಶಗಳು

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version