Site icon Vistara News

Karnataka Weather : ಮಾರ್ಚ್‌ ಮೊದಲ ವಾರದಿಂದ ಜನರಿಗೆ ಶಾಕ್‌ ಕೊಡಲಿದೆ ಬಿಸಿಲಿನ ಶಾಖ!

Heat wave rises in March

ಬೆಂಗಳೂರು: ದಿನದಿಂದ ದಿನಕ್ಕೆ ಬಿಸಿಲಿನ ಝಳಕ್ಕೆ ಜನರು ಪರಿತಪಿಸುತ್ತಿದ್ದಾರೆ. ಮಾರ್ಚ್‌ ಮೊದಲ ವಾರದಿಂದ ಬಿಸಿಲ ಧಗೆ ಮತ್ತಷ್ಟು ಹೆಚ್ಚಲಿದೆ. ಇದರಿಂದಾಗಿ ಅಯ್ಯಯ್ಯೋ ಬಿಸಿಲು ತಡೆಯಲು ಆಗುತ್ತಿಲ್ಲ ಎಂದು ಜನರು ಗೊಣಗುವಂತಾಗಿದೆ. ರಾಜ್ಯಾದ್ಯಂತ ಶುಷ್ಕ ವಾತಾವರಣ (Dry Weather) ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ಮಾರ್ಚ್‌ ತಿಂಗಳು ಬರುತ್ತಿದ್ದಂತೆ ಎಲ್ಲಿ ನೋಡಿದರೂ ಬಿಸಿಲಿನದ್ದೇ ಮಾತು. ಪ್ರತಿಯೊಬ್ಬರು ಏನ್‌ ಸೆಖೆ ಇದು ಹೇಳುವವರ ಸಂಖ್ಯೆಯೇ ಜಾಸ್ತಿ. ಮಾರ್ಚ್‌ ಮೊದಲ ವಾರದಲ್ಲೇ ಬಿಸಿಲ ಬೇಗೆಗೆ ಜನರು ಬೆಂದು ಬಸವಳಿದಿದ್ದಾರೆ. ಉಷ್ಣಾಂಶ ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಮುಂದಿನ 48 ಗಂಟೆಯಲ್ಲಿ ರಾಜ್ಯಾದ್ಯಂತ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಜತೆಗೆ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ಕರಾವಳಿಯ ಒಂದೆರಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿ ಇರಲಿದೆ. ಇದರಿಂದ ಬಿಸಿಲಿನ ಧಗೆ ಮತ್ತಷ್ಟು ಕಾಡಲಿದೆ. ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಕನಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 2 ಡಿ.ಸೆ ಕಡಿಮೆ ಆಗಲಿದೆ.

ಇದನ್ನೂ ಓದಿ: Assault Case : ಮಗು ಅಳುತ್ತಿದ್ದಕ್ಕೆ ಸಿಟ್ಟಾಗಿ ಗೋಡೆಗೆ ಎಸೆದು ಬಿಸಾಡಿದ ಪಾಪಿ ತಂದೆ!

ಬೆಂಗಳೂರಲ್ಲಿ ಮಂಜು ಮುಸುಕುವ ವಾತಾವರಣ

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಆದರೆ ಬೆಂಗಳೂರು ವಿಮಾನ ನಿಲ್ದಾಣ ಸೇರಿ ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಸಾಧ್ಯತೆ ಇದೆ. ಬೆಳಗ್ಗೆ ಹಾಗೂ ಸಂಜೆ ಹೊತ್ತಿಗೆ ಗಾಳಿ ಜೋರಾಗಿ ಬೀಸಲಿದೆ. ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ‌

Exit mobile version