Site icon Vistara News

Karnataka Weather : ರಭಸವಾದ ಗಾಳಿಯೊಂದಿಗೆ ಗುಡುಗು ಸಹಿತ ಭಾರಿ ಮಳೆ; ಇನ್ನೊಂದು ವಾರ ಈ ಜಿಲ್ಲೆಗಳಿಗೆ ಅಲರ್ಟ್‌

karnataka Weather Forecast

ಬೆಂಗಳೂರು: ಉತ್ತರ ಒಳನಾಡು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಹಗುರ ಮಳೆಯಾಗುವ (Rain News) ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ಉತ್ತರ ಒಳನಾಡಿನ ಬೀದರ್, ಕಲಬುರಗಿ, ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಲಿದೆ. ಈ ಪ್ರದೇಶದ ಉಳಿದ ಭಾಗಗಳಲ್ಲಿ ಒಣ ಹವೆ ಮೇಲುಗೈ ಸಾಧಿಸುವ ಸಾಧ್ಯತೆಯಿದೆ.

ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗುವ ನಿರೀಕ್ಷೆ ಇದೆ. ಉಳಿದೆಡೆ ಶುಷ್ಕ ವಾತಾವರಣ ಇರಲಿದೆ. ಇತ್ತ ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದ ಅಲ್ಲಲ್ಲಿ ಸಣ್ಣ ಮಳೆಯಾಗಬಹುದು.

ಬೆಂಗಳೂರು ಸೇರಿ ಹಲವೆಡೆ ಒಣ ಹವೆ

ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆಯಿದೆ. ಬೆಂಗಳೂರಿನಲ್ಲೂ ಆಕಾಶವು ನಿರ್ಮಲವಾಗಿರಲಿದೆ. ಯಾವುದೇ ಮಳೆಯಾಗುವ ಮುನ್ಸೂಚನೆ ಇಲ್ಲ.

ಹೀಟ್‌ ವೇವ್‌ ಅಲರ್ಟ್‌

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಹವಾಮಾನದ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮುಖ್ಯವಾಗಿ ಏಪ್ರಿಲ್ 18 ರಿಂದ 20 ರವರೆಗೆ ಇದೇ ಹವಾಮಾನ ಇರಲಿದೆ.

ಬಿರುಗಾಳಿ ಎಚ್ಚರಿಕೆ

ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕರಾವಳಿ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಇನ್ನು ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯೂ ಇದೆ.

ಇದನ್ನೂ ಓದಿ: Oil Pulling: ಆಯಿಲ್‌ ಪುಲ್ಲಿಂಗ್‌; ನಿಮ್ಮ ಬಾಯಿಯೊಳಗಿನ ಎಲ್ಲ ಸಮಸ್ಯೆಗಳಿಗೂ ಉತ್ತರ ಇಲ್ಲಿದೆ!

Summer Fashion: ಸಮ್ಮರ್‌ ಫ್ಯಾಷನ್‌ನಲ್ಲಿ ಬಂತು ತಂಪೆರೆಯುವ ವಾಟರ್‌ಫಾಲ್‌ ಇಯರಿಂಗ್ಸ್‌


ಈ ಸೀಸನ್‌ನ ಸಮ್ಮರ್‌ ಫ್ಯಾಷನ್‌ನಲ್ಲಿ (Summer Fashion) ಇದೀಗ ತಂಪೆರೆಯುವ ವಾಟರ್‌ ಫಾಲ್‌ ಇಯರಿಂಗ್‌ಗಳು ಟ್ರೆಂಡಿಯಾಗಿವೆ. ಮೇಲಿನಿಂದ ಕೆಳಗೆ ಇಳಿಯುವ ಜಲಧಾರೆಯಂತೆ ಕಾಣಿಸುವ ಕ್ರಿಸ್ಟಲ್‌ ಅಥವಾ ಅಮೆರಿಕನ್‌ ಡೈಮಂಡ್‌ ಹೊಂದಿರುವ ಈ ಇಯರಿಂಗ್ಸ್‌ ಸದ್ಯ ಹುಡುಗಿಯರ ಫೇವರೇಟ್‌ ಆಕ್ಸೆಸರೀಸ್‌ ಲಿಸ್ಟ್‌ಗೆ ಸೇರಿವೆ.

ಏನಿದು ವಾಟರ್ಫಾಲ್‌ ಇಯರಿಂಗ್ಸ್‌ ?

ನೋಡಲು ಥೇಟ್‌ ಜಲಪಾತದಂತೆ ಕಾಣಿಸುವ ಈ ಹ್ಯಾಂಗಿಂಗ್ಸ್‌ನಂತಹ ಕಿವಿಯೊಲೆಗಳು ನೋಡಲು ವಾಟರ್‌ಫಾಲ್‌ನಂತೆ ಕಾಣುತ್ತವೆ. ಹಾಗಾಗಿ ಇವನ್ನು ವಾಟರ್‌ಫಾಲ್‌ ಇಯರಿಂಗ್ಸ್‌ ಎನ್ನಲಾಗುತ್ತದೆ. ಕಿವಿಗೆ ಧರಿಸಿದಾಗ ಇಳೆ ಬೀಳುವ ಲೇಯರ್‌ನಂತಹ ಕ್ರಿಸ್ಟಲ್‌ ಸರಪಳಿಗಳು ವಾಟರ್‌ಫಾಲ್‌ನಂತೆ ಕಾಣಿಸುತ್ತವೆ. ಈ ವಿನ್ಯಾಸದಲ್ಲೆ ಇದೀಗ ಸಾಕಷ್ಟು ಡಿಸೈನ್‌ನವು ಆಕ್ಸೆಸರೀಸ್‌ ಲೋಕಕ್ಕೆ ಬಂದಿವೆ. ಮೈಕ್ರೋ ಕ್ರಿಸ್ಟಲ್ಸ್‌ ಅಂದರೇ, ಅಮೆರಿಕನ್‌ ಡೈಮಂಡ್‌ ಅಥವಾ ಆರ್ಟಿಫಿಷಿಯಲ್‌ ಅಮೆರಿಕನ್‌ ಡೈಮಂಡ್‌ ಹೊಂದಿರುವ ನಾಲ್ಕೈದು ಲೇಯರ್‌ ಹೊಂದಿರುವಂತಹ ಇಳೆ ಬೀಳುವಂತಹ ಇಯರಿಂಗ್‌ಗಳು ವೈಟ್‌ ಶೇಡ್‌ನಲ್ಲಿ ಲಭ್ಯ. ಇದೀಗ ಪಾಸ್ಟೆಲ್‌ ಶೇಡ್‌ಗಳಲ್ಲೂ ದೊರಕುತ್ತಿವೆ. ಲೈಟ್‌ ಪಿಂಕ್‌, ಪೀಚ್‌, ಬೀಚ್‌ ಬ್ಲ್ಯೂ, ಸ್ಕೈ ಬ್ಲ್ಯೂ, ಪಿಸ್ತಾ ಗ್ರೀನ್‌ ಶೇಡ್‌ನವು ಹೆಚ್ಚು ಪಾಪುಲರ್‌ ಆಗಿವೆ. ಹುಡುಗಿಯರನ್ನು ಸೆಳೆದಿವೆ.

ಪಾರ್ಟಿವೇರ್‌ ಆಕ್ಸೆಸರೀಸ್‌

ಪಾರ್ಟಿವೇರ್‌ ಆಕ್ಸೆಸರೀಸ್‌ ಕೆಟಗರಿಗೆ ಸೇರುವ ಈ ವಾಟರ್‌ ಫಾಲ್‌ ಇಯರಿಂಗ್‌ಗಳು ಕೆಲವು ಮೇಲ್ಭಾಗದಲ್ಲಿ ಬಿಗ್‌ ಸ್ಟೋನ್‌ ಅಥವಾ ಕಲರ್‌ಫುಲ್‌ ಇಮಿಟೇಡ್‌ ಸ್ಟೋನ್ಸ್‌ ಹೊಂದಿರುತ್ತವೆ. ಇಲ್ಲವೇ ಬೀಡ್ಸ್‌ ಅಥವಾ ಪರ್ಲ್‌ ಹೊಂದಿರುತ್ತವೆ. ಅದರ ಕೆಳಗೆ ಸುಮಾರು ನಾಲ್ಕೈದು ಇಂಚಿನಷ್ಟು ಉದ್ದದ ಹ್ಯಾಂಗಿಂಗ್‌ ಡಿಸೈನ್‌ ಹೊಂದಿರುತ್ತವೆ. ಕೆಲವು ಒಂದೇ ಸಮನಾಗಿ ಇದ್ದರೇ, ಇನ್ನು ಕೆಲವು ಆಸೆಮ್ಮಿಟ್ರಿಕಲ್‌ ಲೆಂಥ್‌ ಹೊಂದಿರುತ್ತವೆ. ಇವು ಇದೀಗ ಪಾರ್ಟಿವೇರ್‌ ಆಕ್ಸೆಸರೀಸ್‌ ಕೆಟಗರಿಯಲ್ಲಿ ಟಾಪ್‌ ಲಿಸ್ಟ್‌ನಲ್ಲಿವೆ. ಇವುಗಳ ವಿಶೇಷತೆಯೇಂದರೇ, ಯಾವುದೇ ಬಗೆಯ ಶಿಮ್ಮರ್‌ ಅಥವಾ ಶೈನಿಂಗ್‌ ಫ್ಯಾಬ್ರಿಕ್‌ನ ಪಾರ್ಟಿವೇರ್‌ ಔಟ್‌ಫಿಟ್‌ನೊಂದಿಗೆ ಇವನ್ನು ಧರಿಸಬಹುದು. ಎಲ್ಲವಕ್ಕೂ ಇವು ಮ್ಯಾಚ್‌ ಆಗುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಇಡೀ ಮುಖವನ್ನು ಹೈ ಲೈಟ್‌ ಮಾಡುತ್ತವೆ. ಮಿರುಗುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ವಾಟರ್‌ ಫಾಲ್‌ ಕ್ಲಾಸಿ ಲುಕ್‌

“ಶಿಮ್ಮರ್‌ ಔಟ್‌ಫಿಟ್‌ಗಳಿಗೆ ಈ ವಾಟರ್‌ಫಾಲ್‌ ಇಯರಿಂಗ್‌ಗಳು ಹೇಳಿ ಮಾಡಿಸಿದಂತಿರುತ್ತವೆ. ಕಿವಿ ಮಾತ್ರವಲ್ಲ, ಇಡೀ ಲುಕ್‌ಗೆ ಇವು ಸಾಥ್‌ ನೀಡುತ್ತವೆ. ಆಕರ್ಷಕವಾಗಿ ಕಾಣಿಸುತ್ತವೆ. ಕ್ಲಾಸಿ ಲುಕ್‌ ನೀಡುವುದರೊಂದಿಗೆ ಸೆಲೆಬ್ರೆಟಿ ಇಮೇಜ್‌ ನೀಡುತ್ತವೆ” ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ರೀಟಾ. ಅವರ ಪ್ರಕಾರ, ಯುವತಿಯರು ಮಾತ್ರವಲ್ಲ, ಎಲ್ಲಾ ವಯಸ್ಸಿನ ಮಹಿಳೆಯರು ಧರಿಸುವುದು ಹೆಚ್ಚಾಗಿದೆ.

ವಾಟರ್‌ ಫಾಲ್‌ ಇಯರಿಂಗ್‌ ಆಯ್ಕೆ ಹೀಗಿರಲಿ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version