Site icon Vistara News

Karnataka Weather : ಮೋಡ ಕವಿದ ವಾತಾವರಣ; ಇಂದು, ನಾಳೆ ‌ಮುಕ್ಕಾಲು ಕರ್ನಾಟಕದಲ್ಲಿ ಭರ್ಜರಿ ಮಳೆ

Karnataka Weather Forecast Heavy rain alert

ಬೆಂಗಳೂರು: ವಾರಾಂತ್ಯದಲ್ಲಿ ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆಯಾಗುವ (Rain News) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಲ್ಲಿ ಒಣಹವೆ ಇದ್ದರೂ, ಕೆಲವೆಡೆ ಚದುರಿದಂತೆ ಹಗುರದಿಂದ ಕೂಡಿದ ಮಳೆಯಾಗುವ ನಿರೀಕ್ಷೆ ಇದೆ.

ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ತುಮಕೂರಿನಲ್ಲಿ ಸಾಧಾರಣ ಮಳೆಯಾಗಬಹುದು. ಉಳಿದಂತೆ ದಾವಣಗೆರೆ ಮತ್ತು ರಾಮನಗರದಲ್ಲಿ ಹಗುರವಾದ ಮಳೆಯಾಗಲಿದೆ. ಮಿಕ್ಕುಳಿದ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ.

ಇದನ್ನೂ ಓದಿ: Public Exam : ಮತ್ತೆ ಸುಪ್ರೀಂ ಮೆಟ್ಟಿಲು ಹತ್ತಲಿರುವ ರುಪ್ಸಾ; 5,8,9ನೇ ಕ್ಲಾಸ್‌ ಪರೀಕ್ಷೆಗೆ ಮತ್ತೆ ಕಂಟಕ?

ಉತ್ತರ ಒಳನಾಡಿನ ಹಾವೇರಿ, ಧಾರವಾಡ ಮತ್ತು ಬೆಳಗಾವಿಯಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ. ಗದಗ, ಕೊಪ್ಪಳ, ಬಾಗಲಕೋಟೆ, ಬೀದರ್, ವಿಜಯನಗರ ಮತ್ತು ವಿಜಯಪುರದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಕೆಲವೊಮ್ಮೆ ಹಗುರವಾದ ಮಳೆ ಸುರಿಯಬಹುದು. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ.

ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಹಾಗೂ ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿಗಿಲ್ಲ ಮಳೆ ಸೂಚನೆ

ಬೆಂಗಳೂರು ಸುತ್ತಮುತ್ತ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ. ಯಾವುದೇ ಮಳೆಯಾಗುವ ಮುನ್ಸೂಚನೆ ಇಲ್ಲ. ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: Hair Care Tips: ಕೂದಲಿನ ಆರೈಕೆಗೆ ಸರಳ ಮನೆಮದ್ದುಗಳಿವು

Summer Fashion: ಸಮ್ಮರ್‌ ಸೀರೆಯಲ್ಲಿ ನಟಿ ನಿಮಿಕಾರಂತೆ ಆಕರ್ಷಕವಾಗಿ ಕಾಣಲು 5 ಟಿಪ್ಸ್ !

ಸ್ಯಾಂಡಲ್‌ವುಡ್‌ ನಟಿ ನಿಮಿಕಾ ರತ್ನಾಕರ್‌, ಸಮ್ಮರ್‌ ಸೀರೆ (Summer fashion) ಟ್ರೆಂಡ್‌ಗೆ ಸೈ ಎಂದಿದ್ದಾರೆ. ರೈನ್ಬೋ ಶೇಡ್‌ನ ಕಲರ್‌ಫುಲ್‌ ಜಾರ್ಜೆಟ್ ಸೀರೆಯಲ್ಲಿ ಮನಮೋಹಕವಾಗಿ ಕಾಣಿಸಿಕೊಂಡಿರುವ ಅವರು ಬೇಸಿಗೆ ಸೀಸನ್‌ಗೆ ಪರ್ಫೆಕ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರಂತೆಯೇ ಸುಂದರವಾಗಿ ಯಾರಿಗೆ ಕಾಣಿಸಲು ಇಷ್ಟವಿಲ್ಲ ಹೇಳಿ! ಇದಕ್ಕಾಗಿ ನೀವು ಮಾಡಬೇಕಾದ್ದಿಷ್ಟೇ! ಒಂದಿಷ್ಟು ಸಿಂಪಲ್‌ ಟಿಪ್ಸ್ ಫಾಲೋ ಮಾಡಿ ಎನ್ನುತ್ತಾರೆ ಸೀರೆ ಎಕ್ಸ್‌ಫಟ್ರ್ಸ್.

ರೈನ್ಬೋ ಶೇಡ್ ಸೀರೆ ಆಯ್ಕೆ

ಇಂದು ರೈನ್ಬೋ ಶೇಡ್‌ ಸೀರೆಗಳು ಸಖತ್‌ ಟ್ರೆಂಡಿಯಾಗಿವೆ. ಅದರಲ್ಲೂ ಬೇಸಿಗೆ ಕಾಲದಲ್ಲಿ ಇವು ಅತಿ ಹೆಚ್ಚು ಬೇಡಿಕೆ ಹೆಚ್ಚಿಸಿಕೊಂಡಿವೆ. ಉಟ್ಟಾಗ ಮನಮೋಹಕವಾಗಿ ಕಾಣುವ ಇವು ಪಾಸಿಟಿವ್‌ ವೈಬ್ಸ್ ತುಂಬಿಸುತ್ತವೆ. ಅಲ್ಲದೇ, ಮನಸ್ಸನ್ನು ಉಲ್ಲಾಸಿತಗೊಳಿಸುತ್ತವೆ. ಆ ಮಟ್ಟಿಗೆ ಈ ವರ್ಣಮಯವಾಗಿರುವ ಸೀರೆಗಳು ಸುತ್ತಮುತ್ತಲ ಪರಿಸರವನ್ನು ಅಹ್ಲಾದಕರವಾಗಿಸುತ್ತವೆ. ಹಾಗಾಗಿ ಈ ಶೇಡ್‌ ಆಯ್ಕೆ ಮಾಡಿ.

ಜಾರ್ಜೆಟ್ ಸೀರೆ ಸೆಲೆಕ್ಷನ್‌

ಈ ಬೇಸಿಗೆಯಲ್ಲಿ ದಪ್ಪನೆಯ ಫ್ಯಾಬ್ರಿಕ್‌ನ ಸೀರೆ ಉಟ್ಟರೇ ಸೆಕೆಯಾಗಬಹುದು. ಹಾಗಾಗಿ ಆದಷ್ಟೂ ತೆಳುವಾದ ಫ್ಯಾಬ್ರಿಕ್‌ ಹೊಂದಿರುವಂತದ್ದನ್ನು ಸೆಲೆಕ್ಟ್ ಮಾಡಿ. ಜಾರ್ಜೆಟ್ ಸೀರೆ ನೋಡಲು ಆಕರ್ಷಕವಾಗಿ ಕಾಣುತ್ತಲ್ಲದೇ, ಉಸಿರುಗಟ್ಟಿಸುವುದಿಲ್ಲ. ಉಟ್ಟಾಗ ಭಾರ ಎನಿಸುವುದಿಲ್ಲ!

ಸಿಂಪಲ್‌ ಬ್ಲೌಸ್‌ ಧರಿಸಿ

ಜಾರ್ಜೆಟ್ ಸೀರೆಗಳಿಗೆ ಹೆವ್ವಿ ಡಿಸೈನ್‌ನ ಬ್ಲೌಸ್‌ ಧರಿಸುವುದು ಬೇಡ! ಅದರಲ್ಲೂ ಕಚೇರಿಗೆ ಸೀರೆ ಉಡುವವರು ಸದಾ ಡಿಸೈನರ್‌ ಬ್ಲೌಸ್‌ ಧರಿಸಕೂಡದು. ಆದಷ್ಟೂ ಸಿಂಪಲ್‌ ಬ್ಲೌಸ್‌ ಧರಿಸುವುದನ್ನು ರೂಢಿಸಿಕೊಳ್ಳಿ. ಇದು ಪ್ರೊಫೆಷನಲ್‌ ಲುಕ್‌ ನೀಡುತ್ತದೆ.

ಸಿಂಪಲ್‌ ನ್ಯಾಚುರಲ್‌ ಮೇಕಪ್‌

ಬೇಸಿಗೆಯಲ್ಲಿ ಜಾರ್ಜೆಟ್ ಸೀರೆ ಉಟ್ಟಾಗ ಮುಖಕ್ಕೆ ಹೆವ್ವಿ ಮೇಕಪ್‌ ಬೇಡ! ಬೆವರಿಗೆ ಮಿಕ್ಸ್ ಆಗಬಹುದು. ಸಿಂಪಲ್‌ ನ್ಯೂಡ್‌ ಮೇಕಪ್‌ ಅಥವಾ ನ್ಯಾಚುರಲ್‌ ಮೇಕಪ್‌ ಮಾಡಿ. ಇದು ನೈಜ ಲುಕ್‌ ನೀಡುತ್ತದೆ.

ಆಕ್ಸೆಸರೀಸ್‌ ಮಿನಿಮಲ್‌ ಆಗಿರಲಿ

ರೈನ್ಬೋ ಶೇಡ್‌ ಸೀರೆಗಳಿಗೆ ಆದಷ್ಟೂ ಕಡಿಮೆ ಆಕ್ಸೆಸರೀಸ್‌ ಧರಿಸಿ. ಕಲರ್‌ಗಳು ಹೆಚ್ಚಿರುವಾಗ ಆಕ್ಸೆಸರೀಸ್‌ ಹೆಚ್ಚು ಬೇಡ. ಸೀರೆ ಹೈಲೈಟಾಗದು. ಇದರೊಂದಿಗೆ ಹೇರ್‌ಸ್ಟೈಲ್‌ ಕೂಡ ಸಿಂಪಾಲ್ಲಾಗಿರಲಿ. ನೋಡಲು ಮನಮೋಹಕವಾಗಿ ಕಾಣಿಸುವುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version