ಬೆಂಗಳೂರು: ರಾಜ್ಯದಲ್ಲಿ ಉರಿ ಬಿಸಿಲು (Dry Weather) ಹೆಚ್ಚಾಗಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳು ಕಾದ ಕಾವಲಿಯಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಲ್ಲಿ ಗರಿಷ್ಠ ಉಷ್ಣಾಂಶವು 39 ಡಿ.ಸೆ ಗಡಿ ದಾಟುತ್ತಿದೆ. ಜನರು ಹೊರ ಬಂದರೆ ಸುಡುವ ಸೂರ್ಯನಿಂದಾಗಿ ಬೆಂದು (karnataka Weather Forecast) ಹೋಗುತ್ತಿದ್ದಾರೆ.
ಮಾರ್ಚ್ 16ರವರೆಗೆ ರಾಜ್ಯಾದ್ಯಂತ ಒಣ ಹವೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಕರಾವಳಿಯ ಕೆಲವೆಡೆ ಗರಿಷ್ಠ ತಾಪಮಾನವು ಮಾಮೂಲಿಗಿಂತ ಎರಡು ಪಟ್ಟು ಹೆಚ್ಚಾಗಲಿದೆ. ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಲ್ಲಿ ಗರಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 2-3 ಡಿ.ಸೆ ಹೆಚ್ಚಾಗುವ ಸಾಧ್ಯತೆ ಇದೆ.
ರಾಜಧಾನಿ ಬೆಂಗಳೂರು ಸುತ್ತಮುತ್ತ ತಾಪಮಾನವು 35ರ ಗಡಿ ದಾಟುತ್ತಿದ್ದು, ಜನರು ಕಂಗಲಾಗಿದ್ದಾರೆ. ಗರಿಷ್ಠ ಉಷ್ಣಾಂಶ 34 ಮತ್ತು ಕನಿಷ್ಠ ಉಷ್ಣಾಂಶ 21 ಡಿ.ಸೆ ಹೆಚ್ಚಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: Water Crisis : ನೀರಿಲ್ಲ ನೀರಿಲ್ಲ.. ಬೆಂಗಳೂರು ಐಟಿ ಉದ್ಯೋಗಿಗೆ ಹುಡುಗಿ ಕೊಡ್ತಿಲ್ಲ! ತಡ್ಕೊಳ್ಯಯ್ಯ ಅಂದ್ರು ನೆಟ್ಟಿಗರು
ಬಾಗಲಕೋಟೆ, ಬಳ್ಳಾರಿ ಜಿಲ್ಲೆ ಧಗಧಗ
ರಾಜ್ಯಾದ್ಯಂತ ಭಾನುವಾರದಂದು ಶುಷ್ಕ ವಾತಾವರಣವೇ ಇತ್ತು. ಬಾಗಲಕೋಟೆಯಲ್ಲಿ ಗರಿಷ್ಠ ತಾಪಮಾನ 38.2 ಡಿ.ಸೆ ಹಾಗೂ ಬಳ್ಳಾರಿಯಲ್ಲಿ 39.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಕನಿಷ್ಠ ಉಷ್ಣಾಂಶವು ದಾವಣಗೆರೆಯಲ್ಲಿ 19.5 ಡಿ.ಸೆ ಹಾಗೂ ಕೋಲಾರದಲ್ಲಿ 19 ಡಿ.ಸೆ ದಾಖಲಾಗಿತ್ತು.
ಹಾವೇರಿ, ಬೆಳಗಾವಿ, ರಾಯಚೂರು ಮತ್ತು ವಿಜಯಪುರದ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ನಿಂದ 42 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ದಾಖಲಾಗಿತ್ತು. ಚಿಕ್ಕಬಳ್ಳಾಪುರ, ಚಾಮರಾಜನಗರ, ಉತ್ತರ ಕನ್ನಡ, ಧಾರವಾಡ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಸೇರಿದಂತೆ ಹಾವೇರಿ ಬೆಳಗಾವಿ, ಕೋಲಾರ, ಹಾಸನ, ಕೊಡಗು, ರಾಮನಗರದಲ್ಲಿ ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ನಿಂದ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ