Site icon Vistara News

Karnataka Weather : ಕರಾವಳಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಎಚ್ಚರಿಕೆ; ಬೆಂಗಳೂರಲ್ಲಿ ಹೇಗೆ?

karnataka weather Forecast

ಬೆಂಗಳೂರು: ರಾಜ್ಯಾದ್ಯಂತ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ (Rain News) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು, ಮಿಂಚು ಸಹಿತ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ.

ದಕ್ಷಿಣ ಒಳನಾಡಿನ ಚಿತ್ರದುರ್ಗ ಜಿಲ್ಲೆಯಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದರೆ, ಉಳಿದ ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ. ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.

ಮಲೆನಾಡಿನ ಕೊಡಗು ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗಲಿದ್ದು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರಿನಲ್ಲಿ ಹಗುರದಿಂದ ಕೂಡಿದ ಮಳೆಯಾಗಬಹುದು. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಮಧ್ಯಮ ಮಳೆಯಾಗಲಿದೆ.

ಇದನ್ನೂ ಓದಿ: Liquor ban : ಐದು ದಿನ ಮದ್ಯ ಮಾರಾಟಕ್ಕೆ ಬ್ರೇಕ್! ಜೂನ್‌ 1ರಿಂದ ಸಿಗಲ್ಲ ಎಣ್ಣೆ

ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ರಾಜಧಾನಿ ಬೆಂಗಳೂರಿನ ಸುತ್ತಮುತ್ತ ಮುಂಜಾನೆ ಮೋಡ ಕವಿದ ವಾತಾವರಣ ಇರಲಿದೆ. ಕೆಲವೊಮ್ಮೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31 ಮತ್ತು 22 ಡಿ.ಸೆ ಇರಲಿದೆ.

ಕರಾವಳಿಗೆ ಯೆಲ್ಲೋ ಅಲರ್ಟ್‌

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಭಾರಿ ಮಳೆಯೊಂದಿಗೆ ಗುಡುಗು ಸಹಿತ ಮಿಂಚಿನೊಂದಿಗೆ ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ ಗಾಳಿ ಬೀಸಲಿದೆ. ಹೀಗಾಗಿ ಎರಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ.

ಇದನ್ನೂ ಓದಿ: Raichur News : ಸಾಲದ ಸುಳಿಗೆ ಸಿಲುಕಿದ ಸ್ನೇಹಿತೆಗೆ ಕೊಟ್ಟಳು 10 ತೊಲೆ ಬಂಗಾರ! ‘ಕಳ್ಳತನ’ ನಾಟಕವಾಡಿದ ಗೆಳತಿಯರು ಲಾಕ್‌

Rainfall Expect: ನಕ್ಷತ್ರಗಳ ಪ್ರಕಾರ ಈ ವರ್ಷ ಯಾವಾಗ ಮಳೆ ಬರಬಹುದು? ಇಲ್ಲಿದೆ ಪಕ್ಕಾ ಲೆಕ್ಕಾಚಾರ!

ಬಿಸಿಲಿನ ತಾಪ ದಿನೇದಿನೇ ಹೆಚ್ಚಾಗುತ್ತಿದ್ದು, ದಿನಕ್ಕೊಮ್ಮೆಯಾದರೂ ತಲೆ ಎತ್ತಿ ಆಕಾಶದತ್ತ (sky) ನೋಡಿ ಒಂದೆರಡು ಹನಿ ಮಳೆ (Rainfall Expect) ಇವತ್ತಾದರೂ ಸುರಿಯಬಾರದೇ ಎನ್ನುವಂತಾಗಿದೆ. ಈ ನಡುವೆ ಅಗತ್ಯ ಕೆಲಸಗಳಿಗೆ ಮಾತ್ರವಲ್ಲ ಕೆಲವೆಡೆ ಕುಡಿಯಲೂ ನೀರಿಲ್ಲ. ಇನ್ನು ತೋಟ, ಗದ್ದೆಗಳಲ್ಲಿನ ಫಸಲು ಬಿಸಿಲಿನ ಬೇಗೆಯಿಂದ ಸುಟ್ಟು ಹೋದಂತಾಗಿದೆ. ಈ ಬಾರಿ ಏಪ್ರಿಲ್ (april) ಮತ್ತು ಮೇ (may) ತಿಂಗಳ ತೀವ್ರವಾದ ಶಾಖವನ್ನು ಗಮನಿಸಿದರೆ ಈಗಲೇ ಹೀಗೆ ಇನ್ನು ಭವಿಷ್ಯದಲ್ಲಿ ಹೇಗಿರಬಹುದು ಎನ್ನುವ ಚಿಂತೆ ಎಂಥವರನ್ನೂ ಕಾಡದೇ ಇರಲಾರದು.

ಮಳೆ (rain) ಯಾವಾಗ ಬರುತ್ತದೆ ಎನ್ನುವುದನ್ನು ಈಗ ವಿಜ್ಞಾನಿಗಳು (Scientist) ನಿಖರವಾಗಿ ಹೇಳುತ್ತಾರೆ. ಆದರೆ ಹಿಂದಿನ ಕಾಲದಲ್ಲಿ ನಕ್ಷತ್ರಗಳ (star) ಚಲನೆಯನ್ನು ಆಧರಿಸಿ ಮಳೆ ಯಾವಾಗ ಬರಬಹುದು ಎನ್ನುವುದನ್ನು ನಮ್ಮ ಹಿರಿಯರು ಅಂದಾಜು ಮಾಡುತ್ತಿದ್ದರು.

ಮಳೆಯ ಮುನ್ಸೂಚನೆ

ಆಕಾಶದಲ್ಲಿ ಆಗಾಗ ಕಾಣಿಸುವ ಮೋಡಗಳು ಮಳೆಯ ಮುನ್ಸೂಚನೆ ನೀಡಿದರೂ ಕೆಲವೇ ಕ್ಷಣಗಳಲ್ಲಿ ಮೋಡ ಮರೆಯಾಗಿ ಬೇಸರ ಮೂಡುವಂತೆ ಮಾಡುತ್ತದೆ. ಆದರೆ ನಕ್ಷತ್ರಗಳು ನಿಖರವಾಗಿ ಮಳೆಯ ಮುನ್ಸೂಚನೆಯನ್ನು ನೀಡುತ್ತವೆ. ಹಿಂದೆ ನಮ್ಮ ಹಿರಿಯರು ಈ ನಕ್ಷತ್ರಗಳನ್ನೇ ನೋಡಿ ಮಳೆ ಯಾವಾಗ ಬರುತ್ತದೆ ಎಂಬುದನ್ನು ನಿಖರವಾಗಿ ಹೇಳುತ್ತಿದ್ದರು.

ಯಾವ ನಕ್ಷತ್ರಗಳು?

ಅಶ್ವಿನಿಯಿಂದ ವಿಶಾಖ ನಕ್ಷತ್ರದವರೆಗೆ ಗುರುತಿಸಲಾದ ಮಳೆ ನಕ್ಷತ್ರಗಳು ಸಾಂಪ್ರದಾಯಿಕವಾಗಿ ಜಾನಪದ ಮತ್ತು ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಮಳೆಯನ್ನು ಸೂಚಿಸುತ್ತವೆ ಎಂದೇ ನಂಬಲಾಗಿದೆ. ಅನಾದಿ ಕಾಲದಿಂದಲೂ ಈ ನಕ್ಷತ್ರಗಳು ರೈತರಿಗೆ ಮಳೆಯ ಮಾಹಿತಿ ನೀಡುತ್ತಿದ್ದವು.

ಈಗ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದರೆ ಶತಮಾನಗಳಿಗಿಂತಲೂ ಹಿಂದೆ ನಕ್ಷತ್ರ ನೋಡಿಯೇ ಮಳೆಯ ಸೂಚನೆ ಪಡೆಯುತ್ತಿದ್ದರು, ಈ ಬಾರಿ ಮಳೆಯ ನಕ್ಷತ್ರಗಳು ಏನು ಹೇಳುತ್ತವೆ ಎಂಬುದರ ಕುರಿತಾದ ಒಂದು ಕಿರು ಮಾಹಿತಿ ಇಲ್ಲಿದೆ.

ಏಪ್ರಿಲ್‌ನಲ್ಲಿ ಮಳೆ ಸಾಧ್ಯತೆ ಕಡಿಮೆ

ಏಪ್ರಿಲ್ 13ರಂದು ಪ್ರಾರಂಭವಾಗುವ ಅಶ್ವಿನಿ ನಕ್ಷತ್ರವು ಆಗಾಗ ಸಾಮಾನ್ಯ ಮತ್ತು ಸಣ್ಣ ಮಳೆಯನ್ನು ತರುವ ನಿರೀಕ್ಷೆಯಿದೆ. ಏಪ್ರಿಲ್ 27ರಂದು ಪ್ರಾರಂಭವಾಗುವ ಭರಣಿ ನಕ್ಷತ್ರವು ಸಾಮಾನ್ಯ ಮಳೆಯನ್ನು ತರುತ್ತದೆ. ಆದರೂ ಈ ಬಾರಿ ಏಪ್ರಿಲ್ ನಲ್ಲಿ ಈ ಮಳೆ ನಕ್ಷತ್ರಗಳು ಮಳೆಯಾಗುವ ಸೂಚನೆಯನ್ನು ಖಾತ್ರಿಪಡಿಸಿಲ್ಲ. ಹೀಗಾಗಿ ಏಪ್ರಿಲ್ ನಲ್ಲಿ ಮಳೆ ಕಾಣಿಸಿಕೊಳ್ಳುವುದು ಬಹುತೇಕ ಅನುಮಾನ.

ಮೇ 11ರ ಬಳಿಕ ಮಳೆ ಸಾಧ್ಯತೆ

ಮೇ 11ರ ಬಳಿಕ ಕೃತ್ತಿಕಾ ನಕ್ಷತ್ರವು ಮಳೆ ಸೂಚನೆ ನೀಡಿದೆ. ಮೇ 24ರಿಂದ ರೋಹಿಣಿ ನಕ್ಷತ್ರವು ಸಾಮಾನ್ಯ ಮಳೆ ತರುವ ನಿರೀಕ್ಷೆಯಿದೆ. ಆದರೂ ಇದು ಧರೆಯ ಬಿಸಿಲಿನ ತಾಪವನ್ನು ಸಂಪೂರ್ಣ ಕಡಿಮೆ ಮಾಡುತ್ತದೆ ಎಂದು ಹೇಳಲಾಗದು.

ಜೂನ್ 21ರಿಂದ ಪುನರ್ವಸು, ಜುಲೈ 5ರಿಂದ ಆರ್ಧ್ರ, ಜುಲೈ 19 ರಿಂದ ಪುಷ್ಯ, ಆಗಸ್ಟ್ 2ರಿಂದ ಆಶ್ಲೇಷ, ಜುಲೈ 16 ರಿಂದ ಮಾಘ ಮತ್ತು ಜುಲೈ 30 ರಿಂದ ಹಸ್ತ ನಕ್ಷತ್ರಗಳು ಉತ್ತಮ ಮಳೆಯಾಗುವ ಸೂಚನೆ ನೀಡಿದೆ. ಇದರ ಭವಿಷ್ಯವನ್ನು ಆಧರಿಸಿ ಸೆಪ್ಟೆಂಬರ್ 13 ರಿಂದ ಉತ್ತರ ಮಳೆ ನಿರೀಕ್ಷಿಸಲಾಗಿದೆ, ಹಸ್ತ ಸೆಪ್ಟೆಂಬರ್ 26 ರಿಂದ, ಅಕ್ಟೋಬರ್ 10 ರಿಂದ ಚಿತ್ರ ಮಳೆ, ಅಕ್ಟೋಬರ್ 23 ರಿಂದ ಸ್ವಾತಿ ಮಳೆ ಮತ್ತು ನವೆಂಬರ್ 1 ರಿಂದ ವಿಶಾಖ ಮಳೆಯಾಗುವ ನಿರೀಕ್ಷೆ ಇದೆ.

ಹಿಂದೂ ಜ್ಯೋತಿಷ್ಯದಲ್ಲಿ ಬಳಸಲಾಗುವ ಒಟ್ಟು 27 ನಕ್ಷತ್ರಗಳಿವೆ. ಇದು ಒಂದು ವರ್ಷದಲ್ಲಿ ಆಕಾಶಗೋಳದಾದ್ಯಂತ ಸೂರ್ಯನ ದಾರಿಯನ್ನು ನಿರ್ಧರಿಸತ್ತದೆ. ಹಿಂದೂ ಸಂಸ್ಕೃತಿಯಲ್ಲಿ ಜ್ಯೋತಿಷ್ಯ, ಜಾತಕ ಹೊಂದಾಣಿಕೆ, ಆಚರಣೆಗಳು ಮತ್ತು ಶುಭ ಸಮಾರಂಭಗಳ ಸಮಯದಲ್ಲಿ ನಕ್ಷತ್ರಗಳ ಪಾತ್ರ ಮಹತ್ವದ್ದಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version