ಬೆಂಗಳೂರು: ತಾಪಮಾನದ ಬಿಸಿಯಲ್ಲೂ ಹಲವೆಡೆ ಮಳೆಯ (Rain News) ಸಿಂಚನವಾಗುತ್ತಿದೆ. ಭಾನುವಾರದಂದು ಉತ್ತರ ಒಳನಾಡಿನ ಬೀದರ್ ಜಿಲ್ಲೆಯಲ್ಲಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಭಾಗಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲವೆಡೆ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಗರಿಷ್ಠ ಉಷ್ಣಾಂಶ 35 ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಬಹುದು.
ಗರಿಷ್ಠ ತಾಪಮಾನ ಏರಿಕೆ
ಒಳನಾಡಿನ ಕೆಲವು ಕಡೆಗಳಲ್ಲಿ ತಾಪಮಾನ ಏರಿಕೆ ಆಗಲಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ.
ಮೈಸೂರಲ್ಲಿ ಸಣ್ಣ ಮಳೆ
ರಾಜ್ಯದಲ್ಲಿ ಶುಕ್ರವಾರದಂದು ಒಣ ಹವೆ ಇತ್ತು. ಇದರ ನಡುವೆಯೂ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಿರುವ ವರದಿ ಆಗಿದೆ. ಮೈಸೂರಿನ ನಂಜನಗೂಡು ತಾಲೂಕಿನ ಹಲ್ಲಾರೆಯಲ್ಲಿ 27 ಮಿ.ಮೀ, ಹೆಗ್ಗಡಹಳ್ಳಿಯಲ್ಲಿ 9.5 ಮಿ.ಮೀ ಹಾಗೂ ಹಾಡ್ಯದಲ್ಲಿ 3.5 ಮಿ.ಮೀ ಮಳೆಯಾಗಿದೆ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಗರಿಷ್ಠ ಉಷ್ಣಾಂಶ 40.2 ಡಿ.ಸೆ ಕಲಬುರಗಿಯಲ್ಲಿ ದಾಖಲಾಗಿದ್ದರೆ, ಅತೀ ಕನಿಷ್ಠ ಉಷ್ಣಾಂಶ 19.0 ಡಿ.ಸೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ದಾಖಲಾಗಿದೆ. ಹಾವೇರಿಯಲ್ಲಿ ಸರಾಸರಿ ಕನಿಷ್ಠ ಉಷ್ಣಾಂಶ 21.3 ಡಿಗ್ರಿ ಸೆಲ್ಸಿಯಸ್ ಹಾಗೂ ರಾಯಚೂರಲ್ಲಿ ಗರಿಷ್ಠ ಉಷ್ಣಾಂಶ 40.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಬೆಳಗಾವಿ, ಕೊಡಗು, ಉತ್ತರ ಕನ್ನಡ, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್‌ನಿಂದ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇನ್ನೂ ಹಾವೇರಿ, ಕೊಪ್ಪಳ, ರಾಯಚೂರು ಮತ್ತು ಹಾವೇರಿ, ಕಲಬುರಗಿಯಲ್ಲಿ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್‌ನಿಂದ 43 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಇದನ್ನೂ ಓದಿ: Road Accident : ಸಿಲಿಂಡರ್ ಹೊತ್ತೊಯ್ಯುತ್ತಿದ್ದ ವಾಹನ ಪಲ್ಟಿ; ಸಪ್ಲೈಯರ್ ಸ್ಥಳದಲ್ಲೇ ಸಾವು
ಸಮ್ಮರ್ ಬಿಂದಾಸ್ ಫ್ಯಾಷನ್‌ಗೆ ರೀ ಎಂಟ್ರಿ ನೀಡಿದ ಗ್ಲಾಮರಸ್ ಆಫ್ ಶೋಲ್ಡರ್ ಡ್ರೆಸ್!
ಸಮ್ಮರ್ ಬಿಂದಾಸ್ ಫ್ಯಾಷನ್‌ನಲ್ಲಿ (Summer Fashion) ಇದೀಗ ಗ್ಲಾಮರಸ್ ಆಫ್ ಶೋಲ್ಡರ್ ಡ್ರೆಸ್‌ಗಳು ಮರು ಎಂಟ್ರಿ ನೀಡಿವೆ. ಈ ಬಿಸಿಲು ಕಾಲದಲ್ಲಿ ನೋಡಲು ಗ್ಲಾಮರಸ್ ಲುಕ್‌ಗೆ ಸಾಥ್ ನೀಡುತ್ತಿವೆ. ಬಹುತೇಕ ಮಹಿಳೆಯರು ಹಾಗೂ ಯುವತಿಯರು, ಆಫ್ ಶೋಲ್ಡರ್ ಡ್ರೆಸ್ ಎಂದಾಕ್ಷಣ ಹೆಚ್ಚು ಗ್ಲಾಮರ್ ಹಾಗೂ ಸೆಕ್ಸಿ ಲುಕ್ ನೀಡುವ ಉಡುಪು ಎಂದು ಕೊಳ್ಳಬಹುದು. ಕೇವಲ ಪೇಜ್ ತ್ರೀ ಹಾಗೂ ಸಿನಿಮಾ ತಾರೆಯರು ಧರಿಸುವ ಉಡುಗೆಗಳು ಎಂದುಕೊಳ್ಳಬಹುದು. ಆದರೆ, ಈಗ ಜನರೇಷನ್ ಡ್ರೆಸ್ ಸೆನ್ಸ್ ಬದಲಾಗಿದೆ. ಪರಿಣಾಮ, ಸಾಮಾನ್ಯ ಯುವತಿಯರು ಈ ಔಟ್‌ಫಿಟ್‌ಗಳನ್ನು ಧರಿಸತೊಡಗಿದ್ದಾರೆ. ಹಾಗಾಗಿ ಈ ಉಡುಪುಗಳು ನಾನಾ ಡಿಸೈನ್‌ನಲ್ಲಿ ಮಾರುಕಟ್ಟೆಗೆ ರೀ ಎಂಟ್ರಿ ನೀಡಿವೆ.
ಆಫ್ ಶೋಲ್ಡರ್ ಡ್ರೆಸ್ ಡಿಟೇಲ್ಸ್
ಅಂದ ಹಾಗೆ, ಆಫ್ ಶೋಲ್ಡರ್ ಅಥವಾ ಶೋಲ್ಡರ್ ಲೆಸ್ ಡ್ರೆಸ್‌ಗಳ ಟ್ರೆಂಡ್, ನಿನ್ನೆ ಮೊನ್ನೆಯದಲ್ಲ! ವಿಂಟರ್ ಸೀಸನ್ ಮುಗಿಯುತ್ತಿದ್ದಂತೆ, ಪ್ರತಿಬಾರಿಯೂ ಒಂದಲ್ಲ ಒಂದು ರೀತಿಯಲ್ಲಿ ವಿನೂತನ ಡಿಸೈನ್‌ನಲ್ಲಿ, ಇವು ಫ್ಯಾಷನ್ ಲೋಕದಲ್ಲಿಎಂಟ್ರಿ ನೀಡುತ್ತಿರುತ್ತಿವೆ. ಈ ಡ್ರೆಸ್‌ಗಳಲ್ಲಿ ಶೋಲ್ಡರ್ ಭಾಗ ಓಪನ್ ಆಗಿರುತ್ತದೆ. ನೆಕ್‌ಲೈನ್ ಇರುವುದಿಲ್ಲ. ಭುಜದ ಭಾಗ ಎಕ್ಸ್‌ಪೋಸ್ ಆಗಿರುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಆಫ್ ಶೋಲ್ಡರ್ ಡ್ರೆಸ್‌ಗಳು ನೋಡಲು ಒಂದೇ ರೀತಿಯಾಗಿ ಕಾಣಬಹುದು. ಆದರೆ, ಸ್ಟಿಚ್ಚಿಂಗ್ ಹಾಗೂ ಡಿಸೈನ್ ವಿಭಿನ್ನವಾಗಿರುತ್ತವೆ. ಆಯಾ ಉಡುಪುಗಳಿಗೆ ತಕ್ಕಂತೆ ಹೊಸ ರೂಪ ಪಡೆದುಕೊಂಡಿರುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.
ಮಿಕ್ಸ್ ಮ್ಯಾಚ್ ಚಾಯ್ಸ್
ಆಫ್ ಶೋಲ್ಡರ್ ಟಾಪ್ಸ್, ಇಂದು ವೆಸ್ಟರ್ನ್ ಸಮ್ಮರ್ ಔಟ್‌ಫಿಟ್‌ನಲ್ಲಿ ಟೀನೇಜ್ ಹುಡುಗಿಯರನ್ನು, ಯುವತಿಯರನ್ನು ಸವಾರಿ ಮಾಡತೊಡಗಿವೆ. ಸೋ, ವೀಕೆಂಡ್ ಪ್ರಿಯ ಬಿಂದಾಸ್ ಫ್ಯಾಷನ್ ಪ್ರೇಮಿಗಳ ಫೇವರಿಟ್ ಲಿಸ್ಟ್‌ಗೆ ಸೇರಿವೆ. ಅದರಲ್ಲೂ ಲೈಟ್ ಶೇಡ್‌ಗಳಲ್ಲಿಹಾಗೂ ಫ್ಲೋರಲ್ ಪ್ರಿಂಟ್ಸ್‌ನಲ್ಲಿಹೊಸ ಹೊಸ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ. ಇನ್ನು, ಆಫ್ ಶೋಲ್ಡರ್ ಕ್ರಾಪ್ ಟಾಪ್‌ಗಳು ಬೀಚ್ ಸೈಡ್ ಫ್ಯಾಷನ್‌ನಲ್ಲಿ ಚಾಲ್ತಿಯಲ್ಲಿವೆ.
ಆಫ್ ಶೋಲ್ಡರ್ ಪ್ರಿಯರಿಗೆ ಒಂದಿಷ್ಟು ಟಿಪ್ಸ್
- ಈ ಔಟ್ಫಿಟ್ ಎಲ್ಲರಿಗೂ ಸೂಟ್ ಆಗುವುದಿಲ್ಲ. ಪರ್ಸನಾಲಿಟಿಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳುವುದು ಉತ್ತಮ.
- ಕಾಲೇಜು ಹಾಗೂ ವರ್ಕ್ ಸ್ಪೇಸ್ ಮಹಿಳೆಯರಿಗೆ ಸೂಟ್ ಆಗದು.
- ಇದು ವೀಕೆಂಡ್ ಔಟ್ಫಿಟ್ ಕೆಟಗರಿಗೆ ಸೇರುತ್ತವೆ.
- ಹಾಲಿಡೇ ಫ್ಯಾಷನ್ಗೂ ಧರಿಸಬಹುದು.
- ಫಂಕಿ ಲುಕ್ ಇದಕ್ಕೆ ಪರ್ಫೆಕ್ಟ್.
- ಸ್ಟ್ರಾಪ್ಲೆಸ್ ಇನ್ನರ್ವೇರ್ ಧರಿಸುವುದು ಉತ್ತಮ.
- ಬಿಗ್ ಜಂಕ್ ಜುವೆಲ್ಸ್ ಧರಿಸಬಹುದು.
- ಟ್ರೆಡಿಷನಲ್ ಲುಕ್ ಮಿಕ್ಸ್ ಮಾಡಬೇಡಿ.
- ಸಮ್ಮರ್ ಹೇರ್ಸ್ಟೈಲ್ ಮ್ಯಾಚ್ ಮಾಡಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ