Site icon Vistara News

Karnataka Weather : ನಾಳೆಯಿಂದ ಏ.11ರವರೆಗೆ ಅಬ್ಬರಿಸಲಿದ್ಯಾ ಮಳೆ; ಏನಂತಾರೆ ಹವಾಮಾನ ತಜ್ಞರು

Karnataka Weather

ಬೆಂಗಳೂರು: ಶುಕ್ರವಾರ ಸಂಜೆ ಕೊಡಗು, ಚಿಕ್ಕಮಗಳೂರು, ಹಾಸನದ ಒಂದೆರಡು ಕಡೆಗಳಲ್ಲಿ ಹಗುರದಿಂದ ಮಳೆಯಾಗುವ (Rain News) ಸೂಚನೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ. ಇದರ ನಡುವೆ ರಾಜ್ಯಾದ್ಯಂತ ನಾಳೆ ಏ.6 ರಿಂದ 11ರವರೆಗೆ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಮಳೆ ಇದ್ದರೂ ಕೆಲವಡೆ ಸೆಕೆ ವಾತಾವರಣ (Temperature forecast) ಇರಲಿದೆ.

ಏಪ್ರಿಲ್‌ 6ರಂದು ಕೊಡಗಿನ ಒಂದೆರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಜತೆಗೆ ಉತ್ತರ ಒಳನಾಡಿನ ಬಾಗಲಕೋಟೆ, ಕಲಬುರಗಿ, ಹಾವೇರಿ, ಧಾರವಾಡ, ಕೊಪ್ಪಳ, ಬಳ್ಳಾರಿ ಮತ್ತು ಗದಗ ಜಿಲ್ಲೆಗಳಲ್ಲಿ ಹೀಟ್‌ ವೇವ್‌ ಇರಲಿದೆ. ದಕ್ಷಿಣ ಕನ್ನಡ, ಉಡುಪಿ, ವಿಜಯಪುರ, ಗದಗ, ಕೊಪ್ಪಳ, ಕಲಬುರಗಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಗಾಳಿ ಬೀಸಲಿದೆ. ಜತೆಗೆ ಕರಾವಳಿ ಭಾಗವು ಸೇರಿದಂತೆ ರಾಯಚೂರು, ಬಾಗಲಕೋಟೆ, ಕೊಪ್ಪಳ ಮತ್ತು ಕಲಬುರಗಿಯಲ್ಲಿ ರಾತ್ರಿ ಸಮಯ ಬಿಸಿಯೊಂದಿಗೆ ಬೆಚ್ಚನೆಯ ವಾತಾವರಣ ಇರಲಿದೆ.

ಇದನ್ನೂ ಓದಿ: Hanuman Chalisa: ಹನುಮಾನ್‌ ಚಾಲೀಸಾ ಗಲಾಟೆ; ಹಲ್ಲೆಗೊಳಗಾದ ಮುಕೇಶ್‌ ವಿರುದ್ಧವೇ ಎಫ್‌ಐಆರ್‌, ಬಿಜೆಪಿ ಆಕ್ರೋಶ

ತಾಪಮಾನ ಮುನ್ಸೂಚನೆ

ಗರಿಷ್ಠ ತಾಪಮಾನವು ಮುಂದಿನ 5 ದಿನಗಳಲ್ಲಿ ಬೆಳಗಾವಿ, ವಿಜಯಪುರ, ಬೀದರ್, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೋಲಾರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಕ್ರಮೇಣ 2-4 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆಯಿದೆ. ಇದರಿಂದಾಗಿ ಬಿಸಿಲ ಧಗೆಯು ವಿಪರೀತವಾಗಿ ಇರಲಿದೆ.

ಬೆಂಗಳೂರಲ್ಲಿ ಮಳೆ ಮಾಯ

ಬೆಂಗಳೂರು ನಗರಕ್ಕೆ ಯಾವುದೇ ಮಳೆ ಸೂಚನೆ ಇಲ್ಲ. ಬದಲಾಗಿ ಬೆಳಗ್ಗೆ ಭಾಗಶಃ ಮೋಡವಿರಲಿದ್ದು, ಮಧ್ಯಾಹ್ನ/ಸಂಜೆಯ ಹೊತ್ತಿಗೆ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಗರಿಷ್ಠ ಉಷ್ಣಾಂಶ 38 ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಬಿಸಿಲಿಗೆ ಕಲಬುರಗಿ ಕಂಗಾಲು

ಗುರುವಾರದಂದು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದ್ದು, ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣ ಹವೆ ಒತ್ತು. ಕಲಬುರಗಿಯಲ್ಲಿ ತಾಪಮಾನ ಏರಿಕೆ ಆಗುತ್ತಲೇ ಇದ್ದು, ನಿನ್ನೆ ಗರಿಷ್ಠ ಉಷ್ಣಾಂಶ 42.8 ಡಿ.ಸೆ ದಾಖಲಾಗಿತ್ತು.

ಇದನ್ನೂ ಓದಿ: DK Shivakumar: ಡಿಕೆಶಿಗೆ ಸಂಕಷ್ಟ; ಅಕ್ರಮ ಆಸ್ತಿ ಕೇಸ್‌ ವಿಚಾರಣೆ ಆರಂಭಿಸಿದ ಹೈಕೋರ್ಟ್!

ಸಮ್ಮರ್‌ ಫ್ಯಾಷನ್‌ನಲ್ಲಿ ವನ್‌ ಶೋಲ್ಡರ್ ಡ್ರೆಸ್ ಕ್ರೇಜ್!

ಸಿಂಗಲ್‌ ಶೋಲ್ಡರ್‌ ಔಟ್‌ಫಿಟ್‌ಗಳು ಬೇಸಿಗೆ ಫ್ಯಾಷನ್‌ನ (Summer fashion) ಗ್ಲಾಮರ್‌ ಲುಕ್‌ಗೆ ಎಂಟ್ರಿ ನೀಡಿವೆ. ನಾನಾ ವಿನ್ಯಾಸದ ನೆಕ್‌ಲೈನ್‌ಗಳಲ್ಲಿ ಲಭ್ಯವಿರುವ ಸಿಂಗಲ್‌ ಅಥವಾ ವನ್‌ ಶೋಲ್ಡರ್‌ ಡ್ರೆಸ್‌ಗಳು, ಈ ಸಮ್ಮರ್‌ನಲ್ಲಿ, ವೆರೈಟಿ ವಿನ್ಯಾಸದಲ್ಲಿ ರೀ ಎಂಟ್ರಿ ನೀಡಿದ್ದು, ಸಾಮಾನ್ಯ ಯುವತಿಯರಿಗೆ ಸೆಲೆಬ್ರೆಟಿ ಲುಕ್‌ ನೀಡಲು ಮುಂದಾಗಿವೆ. ಗ್ಲಾಮರಸ್‌ ಡಿಸೈನ್‌ನಲ್ಲಿ ಬಂದಿವೆ.

ಮಾದಕ ಲುಕ್‌ಗಾಗಿ ಸಿಂಗಲ್‌ ಶೋಲ್ಡರ್ ಡ್ರೆಸ್

ಇತ್ತೀಚೆಗೆ ಗ್ಲಾಮರಸ್‌ ಲುಕ್‌ ಮತ್ತು ಮಾದಕ ಲುಕ್‌ಗಾಗಿ ಸಿಂಗಲ್‌ ಶೋಲ್ಡರ್‌ ಡ್ರೆಸ್‌ ಧರಿಸುವವರು ಹೆಚ್ಚಾಗಿದ್ದಾರೆ. ಪಾರ್ಟಿ ಪ್ರಿಯರು ಹಾಗೂ ಔಟಿಂಗ್‌ ಪ್ರಿಯರು ಈ ಡ್ರೆಸ್‌ಗಳ ಆಯ್ಕೆ ಮಾಡತೊಡಗಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್ ಜಿಯಾ.

ಸಿಂಗಲ್‌ ಶೋಲ್ಡರ್ ಪಾರ್ಟಿ ಡ್ರೆಸ್

ಪಾರ್ಟಿವೇರ್‌ಗಳಲ್ಲಿ ಇದೀಗ ಸಿಂಗಲ್‌ ಶೋಲ್ಡರ್‌ ಡ್ರೆಸ್‌ಗಳು ಸೇರಿವೆ. ಗೌನ್‌ಗಳು ಈ ವಿನ್ಯಾಸದಲ್ಲಿ ಬಂದಿವೆ. ಅಷ್ಟೇಕೆ, ಫ್ರಾಕ್‌ ಹಾಗೂ ಬಾಡಿಕಾನ್‌ ಡ್ರೆಸ್‌ಗಳು ಪಾಪುಲರ್‌ ಆಗಿವೆ. ಅದರಲ್ಲೂ ಬಾಲಿವುಡ್‌ ಸೆಲೆಬ್ರೆಟಿಗಳ ಫೇವರೇಟ್‌ ಪಾರ್ಟಿವೇರ್‌ಗಳಲ್ಲಿ ಇವು ಸೇರಿವೆ. ಶಿಮ್ಮರ್ ಹಾಗೂ ಶೈನಿಂಗ್‌ ಫ್ಯಾಬ್ರಿಕ್‌ನವು ಹೆಚ್ಚು ಚಾಲ್ತಿಯಲ್ಲಿವೆ ಎನ್ನುತ್ತಾರೆ ಬಾಲಿವುಡ್‌ ಡಿಸೈನರ್‌ ಲಕ್ಷ್ಮಿ ಕೃಷ್ಣ. ಅವರ ಪ್ರಕಾರ, ಇವು ಸೆಲೆಬ್ರೆಟಿಗಳ ಆಲ್‌ಟೈಮ್‌ ಫೇವರೇಟ್‌ ಲಿಸ್ಟ್‌ನಲ್ಲಿವೆ ಎನ್ನುತ್ತಾರೆ.

ಹಾಲಿಡೇ ಲುಕ್‌ನಲ್ಲೂ ಎಂಟ್ರಿ

ವೀಕೆಂಡ್‌ ಹಾಗೂ ಹಾಲಿ ಡೇ ಲುಕ್‌ಗೆ ಸಾಥ್‌ ನೀಡುವ ಔಟ್‌ಫಿಟ್‌ಗಳಲ್ಲೂ ಈ ಸಿಂಗಲ್‌ ಶೋಲ್ಡರ್ ಡ್ರೆಸ್‌ಗಳು ಬಂದಿವೆ. ಫೋಟೋಶೂಟ್‌ಗಳಲ್ಲಿ ಆಕರ್ಷಕವಾಗಿ ಕಾಣಿಸುತ್ತವೆ ಎನ್ನುವ ಕಾರಣಕ್ಕೆ ಸಾಕಷ್ಟು ಯುವತಿಯರು ಈ ಶೈಲಿಯ ಉಡುಪುಗಳನ್ನು ಧರಿಸಲಾರಂಭಿಸಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ. ಅವರ ಪ್ರಕಾರ, ಸಿಂಗಲ್‌ ಶೋಲ್ಡರ್‌ ಡ್ರೆಸ್‌ಗಳು ಈ ಜನರೇಷನ್‌ ಹುಡುಗಿಯರನ್ನು ಸವಾರಿ ಮಾಡತೊಡಗಿವೆ.

ಜೆನ್‌ ಜಿ ಹುಡುಗಿಯರ ಕ್ರೇಝ್‌

ಟೀನೇಜ್‌ ಹುಡುಗಿಯರ ಕ್ರೇಝ್‌ನಲ್ಲಿ ಈ ಸಿಂಗಲ್‌ ಶೋಲ್ಡರ್‌ ಟಾಪ್‌, ಫ್ರಾಕ್‌, ಮಿನಿ, ಮಿಡಿ, ಮ್ಯಾಕ್ಸಿ, ಬಾಡಿಕಾನ್‌ ಔಟ್‌ಫಿಟ್‌ಗಳು ಸೇರಿವೆ. ಮಿನಿಮಲ್‌ ಆಕ್ಸೆಸರೀಸ್‌ ಜೊತೆ ಸ್ಟೈಲಿಂಗ್ ಮಾಡುವುದು ಇತ್ತೀಚೆಗೆ ಕಾಮನ್‌ ಆಗಿದೆ. ಬೇಸಿಗೆಯ ಫ್ಯಾಷನ್‌ಗೂ ಇವು ಸಾಥ್‌ ನೀಡುತ್ತಿವೆ.

ಸಿಂಗಲ್‌ ಶೋಲ್ಡರ್ ಕ್ರಾಪ್‌ ಟಾಪ್ಸ್

ಇನ್ನು, ಸಿಂಗಲ್‌ ಶೋಲ್ಡರ್‌ ಕ್ರಾಪ್‌ ಟಾಪ್‌ಗಳು ಜೀನ್ಸ್ ಹಾಗೂ ಸಿಕ್ಸ್ ಪಾಕೆಟ್‌ ಪ್ಯಾಂಟ್‌ ಜೊತೆಗೆ ಧರಿಸುವುದು ಟ್ರೆಂಡ್‌ನಲ್ಲಿದೆ. ಸ್ಕರ್ಟ್ ಜೊತೆಗೂ ಇವನ್ನು ಮಿಕ್ಸ್ ಮ್ಯಾಚ್‌ ಮಾಡಬಹುದು ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version